ಶುಂಠಿ ಕೊಳೆ ರೋಗಕ್ಕೆ ಒಂದೇ ಪರಿಹಾರ.
ಶುಂಠಿಯ ಗಿಡ ಹಳದಿಯಾಗಿ ಕೊಳೆಯುವ Rhizome rot / Soft rot ರೋಗಕ್ಕೆ Pythium aphanidermatum ಶಿಲೀಂದ್ರ, ಕಾರಣ. ಶುಂಠಿ ಬೆಳೆಯಲ್ಲಿ ಇದರಿಂದಾಗಿ 80-90 % ತನಕ ಬೆಳೆ ನಷ್ಟವಾಗುತ್ತದೆ. ಇದನ್ನು ಬೇರೆ ಬೇರೆ ವಿಧಾನದಲ್ಲಿ ಟ್ರಯಲ್ ಎಂಡ್ ಎರರ್ ಮಾದರಿಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ಇದು ಬಂದ ನಂತರ ನಿಯಂತ್ರಣ ಅಷ್ಟಕ್ಕಷ್ಟೇ. ಮೊದಲೇ ನಿಯಂತ್ರಣ ಮಾಡಿದರೆ ಪರಿಣಾಮಕಾರಿ. ಶುಂಠಿ ರೋಗ ಹೇಗೆ ಬರುತ್ತದೆ: ಬಿತ್ತನೆ ಗಡ್ಡೆಗಳ ಮೂಲಕ ಈ ರೋಗಕಾರಕ ಶಿಲೀಂದ್ರದ ಪ್ರವೇಶವಾಗುತ್ತದೆ. ಗಡ್ಡೆಗಳಲ್ಲಿ…