
ಮಣ್ಣಿನ ಬಣ್ಣ ಮತ್ತು ಅದರ ಫಲವತ್ತತೆ
ಮಣ್ಣಿನಲ್ಲಿ ಬೆಳೆ ಬೆಳೆಯುವ ಪ್ರತೀಯೊಬ್ಬ ರೈತನೂ ಮಣ್ಣಿನ ಬಣ್ಣದ ಮೇಲೆ ಅದರ ಉತ್ಪಾದನಾ ಶಕ್ತಿಯನ್ನು ತಿಳಿಯಬಹುದು. ಮಣ್ಣಿನ ಉತ್ಪಾದನಾ ಶಕ್ತಿ ( ಬೆಳೆ ಬೆಳೆದಾಗ ಅದರ ಬೆಳವಣಿಗೆ ಮತ್ತು ಅದರಲ್ಲಿ ಫಸಲು) ಅದರ ಭೌತಿಕ ಗುಣಧರ್ಮದ ಮೇಲೆ ಅವಲಂಭಿತವಾಗಿರುತ್ತದೆ. ಜಮೀನಿನ ಮಣ್ಣು ಜೇಡಿಯಿಂದ ಕೂಡಿದೆಯೇ, ಮರಳಿನಿಂದ ಕೂಡಿದೆಯೇ, ಬಣ್ಣ ಹೇಗಿದೆ ಎಂಬುದನ್ನು ಪರಿಶೀಲಿಸಿ ಅದರ ಉತ್ಪಾದಕತೆಯನ್ನು ನಿರ್ಧರಿಸಬಹುದು. ಕೆಲವರು ಮಣ್ಣು ನೋಡಿಯೇ ಈ ಮಣ್ಣಿನಲ್ಲಿ ಕೃಷಿ ಮಾಡುವಾಗ ಎಷ್ಟು ಹಾಕಿದರೂ ಸಾಲದು ಎನ್ನುತ್ತಾರೆ. ಇನ್ನು ಕೆಲವರು ಜಮೀನು…