ಜೇನುತುಪ್ಪ ತಿನ್ನುವವರು ಇದನ್ನೊಮ್ಮೆ ಓದಿ.
ಪ್ರಕೃತಿಯಲ್ಲಿ ಮನುಷ್ಯವ ಹಸ್ತಕ್ಷೇಪ ಇಲ್ಲದೆ ಸಿದ್ಧವಾಗುವ ಪ್ರಾಕೃತಿಕ ವಸ್ತು ಜೇನು. ಇದು ಪುಷ್ಪಗಳಲ್ಲಿ ಉತ್ಪತ್ತಿಯಾಗಿ ಜೇನು ನೊಣಗಳಿಂದ ಸಂಗ್ರಹಿಸಲ್ಪಡುತ್ತದೆ. ಅವುಗಳೇ ಅದನ್ನು ಪರಿಷ್ಕರಿಸಿಯೂ ಕೊಡುತ್ತವೆ. ವಿಜ್ಞಾನ ಎಷ್ಟೇ ಮುಂದುವರಿದರೂ ಜೇನುತುಪ್ಪವನ್ನು ತಯಾರಿಸಲು ಯಾವ ವಿಜ್ಞಾನಿಗಳಿಗೂ ಇನ್ನೂ ಸಾಧ್ಯವಾಗಿಲ್ಲ. ಜೇನುತುಪ್ಪ ಮಾಡಲು ಜೇನ್ನೊಣಗಳಿಂದ ಮಾತ್ರ ಸಾಧ್ಯ. ಅದಕ್ಕೆ ಹೇಳುವುದು ಪ್ರಕೃತಿಗೆ ಪ್ರಕೃತಿಯೇ ಸಾಟಿ ಎಂದು. ಜೇನು ತಯಾರಾಗುವುದು ಹೀಗೆ: ಹೂವು ಅರಳುವುದರ ಸೂಚನೆ ಜೇನು ನೊಣಗಳ ಗಮನಕ್ಕೆ ಅದರ ಸುಪಾಸನೆ ಮೂಲಕ ದೊರೆಯುತ್ತದೆ. ಮಾನವನ ಮೂಗಿಗೆ ಗೊತ್ತಾಗುವ ಪರಿಮಳ…