ತೆಂಗಿನ ಇಳುವರಿ ಹೆಚ್ಚಲು ಹಿಪ್ಪು ನೇರಳೆ ಬೆಳೆ ಸಹಾಯಕ.

ತೆಂಗಿನ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿದರೆ ತೆಂಗಿನಲ್ಲಿ ಇಳುವರಿ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಬಹುವಾರ್ಷಿಕ ಮಿಶ್ರ ಬೆಳೆಗಳಲ್ಲಿ ಹಿಪ್ಪು ನೇರಳೆ ಒಂದು. ಉಳಿದೆಲ್ಲಾ ಮಿಶ್ರ ಬೆಳೆಗಳು ಕೊಡುವ ಆದಾಯಕ್ಕೆ ಹೋಲಿಕೆ ಮಾಡಿದರೆ ಹಿಪ್ಪು ನೇರಳೆಯೇ ಶ್ರೇಷ್ಟ. ಇದು ನೆಟ್ಟು ಸಸಿ ಆಗುವ ತನಕ ಒಂದು ವರ್ಷ ಕಾಯಬೇಕಾಗಬಹುದು. ನಂತರ ಇದರಿಂದ ನಿರಂತರ ಆದಾಯ ಬರುತ್ತಲೇ ಇರುತ್ತದೆ. ತೆಂಗಿನ ಅಧಿಕ ಇಳುವರಿಗೂ ಇದು ಸಹಾಯಕವಾಗುತ್ತದೆ. ರೇಶ್ಮೆ ವ್ಯವಸಾಯ ಎಂಬುದು ಒಂದು ರೀತಿಯಲ್ಲಿ ಸರಕಾರಿ ನೌಕರಿ ಇದ್ದಂತೆ. ತಿಂಗಳಾಂತ್ಯಕ್ಕೆ ಬರುವ…

Read more
ಕೊಕ್ಕೋ ಕೋಡು

ಕೊಕ್ಕೋ ಬೆಳೆದರೆ ಹಸುರು ಸೊಪ್ಪಿಗೆ ಬರವಿಲ್ಲ.

ಇತ್ತೀಚಿನ ದಿನಗಳಲ್ಲಿ ನಮಗೆ ಹಿಂದಿನಂತೆ ತೋಟಕ್ಕೆ ಹಸಿ ಸೊಪ್ಪು ಸದೆ ಹಾಕಲು ಸಂಪನ್ಮೂಲಗಳಿಲ್ಲ. ಕಾಡು ಇಲ್ಲ. ತರುವ ಮಜೂರಿಯೂ ಅಧಿಕ. ಕೊಕ್ಕೋ ಬೆಳೆ ತೋಟದಲ್ಲಿದ್ದರೆ ವರ್ಷಕ್ಕೆ ಸಾಕಷ್ಟು ಹಸುರು ಸೊಪ್ಪು ದೊರೆಯುತ್ತದೆ. ಈ ಸೊಪ್ಪಿನಲ್ಲಿ ಪೋಷಕಾಂಶಗಳು ಹೆಚ್ಚು ಇರುತ್ತವೆ.  ರಾಸಾಯನಿಕ ಮೂಲದ ಸೂಕ್ಷ್ಮ ಪೋಷಕ, ಸುಣ್ಣ, ಮೆಗ್ನೀಶಿಯಂ ಬಳಸುವ ಖರ್ಚನ್ನು ಇದು ಉಳಿಸುತ್ತದೆ. ಹಸಿ ಸೊಪ್ಪು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಒಳ್ಳೆಯ ಆಹಾರ. ಅಡಿಕೆ ಮರಗಳ ಮಧ್ಯಂತರದಲ್ಲಿ ಕೊಕ್ಕೋ ಬೆಳೆದಾಗ  ಕೊಕ್ಕೋ ಸಸ್ಯವು ತನ್ನ ಪಾಲಿನ ಪೋಷಕಾಂಶವನ್ನು …

Read more
error: Content is protected !!