ಇವರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ

ಬೇಸಿಗೆಯಲ್ಲಿ ನೀರಿನ ಕೊರತೆಗೆ ಪರಿಹಾರ ಕಂಡುಕೊಂಡ ಕೃಷಿಕ.

ಬೇಸಿಗೆಯ ಕಾಲದಲ್ಲಿ ಎಲ್ಲರೂ ನೀರಿನ ಕೊರತೆ ಅನುಭವಿಸುತ್ತಾರೆ. ಆದರೆ ಇಲ್ಲೊಬ್ಬರು ರೈತರು ಮಳೆಗಾಲದಲ್ಲಿ ಮಳೆ ನೀರನ್ನು  ಒಂದೆಡೆ ಕೂಡಿಹಾಕಿದ್ದಾರೆ. ಅದನ್ನು ಮಣ್ಣು ಸ್ಪಂಜಿನಂತೆ ಹೀರಿಕೊಂಡು ಬೇಸಿಗೆಯ ಸಮಯದುದ್ದಕ್ಕೂ ತಗ್ಗು ಪ್ರದೇಶಕ್ಕೆ ಬಿಡುಗಡೆ ಮಾಡುತ್ತದೆ. ಹಾಗಾಗಿ ಇವರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಬೇಸಿಗೆಯಲ್ಲಿ  ಎಲ್ಲಾ ಕೃಷಿಕರಿಗೂ ನೀರಿನದ್ದೇ ಸಮಸ್ಯೆ. ಬೆಳೆಗಳು ನೀರನ್ನು ಹೆಚ್ಚು ಅಪೇಕ್ಷಿಸುತ್ತವೆ. ಮಣ್ಣು ಹೆಚ್ಚು ನೀರು ಕುಡಿಯುತ್ತದೆ. ಆದರೆ ಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುತ್ತದೆ. ಕೊಳವೆ ಬಾವಿಗಳೂ ಸಹ  ಕೈಕೊಡುವುದು ಇದೇ ಸಮಯದಲ್ಲಿ. ಇದಕ್ಕೆ…

Read more
Weed less arecanut garden

ಕಳೆ ಹೆಚ್ಚು ಇದ್ದಲ್ಲಿ ಬೆಳೆ ತುಂಬಾ ಕಡಿಮೆ.

ಬಹಳ ಜನ ಬೆಳೆಗಳಿಗೆ ನೀರು ಕೊಟ್ಟಷ್ಟೂ ಒಳ್ಳೆಯದು ಎಂಬು ಭಾವಿಸುತ್ತಾರೆ. ಮಳೆಗಾಲದ ಮಳೆಗೆ ನೆಲ ಮತ್ತು ಸಸ್ಯಗಳು ಹೇಗೆ ಇರುತ್ತವೆಯೋ ಅದೇ  ರೀತಿ ಬೇಸಿಗೆಯಲ್ಲಿಯೂ ಇರುವಂತೆ ನೋಡಿಕೊಳ್ಳುತ್ತಾರೆ.  ನಮ್ಮ ಈ ವಿಧಾನದಿಂದಾಗಿ ಭೂಮಿಯಲ್ಲಿ ವರ್ಷದಿಂದ ವರ್ಷಕ್ಕೆ ಫಲವತ್ತತೆ ಕ್ಷೀಣಿಸುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ಇದು ನಮ್ಮೆಲ್ಲರ ಸಮಸ್ಯೆ: ಸಾಮಾನ್ಯವಾಗಿ ನಿರಂತರ 3-4  ವರ್ಷ ಗೊಬ್ಬರ  ಕೊಡುತ್ತಿದ್ದರೆ , ಒಂದು ವರ್ಷ ಏನೂ ಗೊಬ್ಬರ ಕೊಡದಿದ್ದರೂ ಬೆಳೆಯಲ್ಲಿ ಇಳುವರಿ ಕಡಿಮೆಯಾಗಬಾರದು. ಆದರೆ ಆಗುತ್ತದೆ. ಕಾರಣ ನಾವು ವರ್ಷ ವರ್ಷ ಕೊಡುವ…

Read more
ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…

Read more
error: Content is protected !!