
ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?
ಅಡಿಕೆ ತೋಟ ಮಾಡುವವರು ಹಿಂದೆ ಇಂತಹ ಸಸಿ ಒಳ್ಳೆಯಯದು, ಇದನ್ನು ಆಯ್ಕೆ ಮಾಡಬೇಕು ಎಂದೆಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಮನಿಸಬೇಕಾದದ್ದು ಗಿಡದ ತಳಿ, ಬೆಳವಣಿಗೆ ಲಕ್ಷಣ ಮಾತ್ರವಲ್ಲದೆ ಗಿಡದ ಆರೋಗ್ಯವೂ ಸಹ. ಎಳೆ ಗಿಡಗಳ ಆರೋಗ್ಯ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ನೋಡಿ ನಂತರ ಆಯ್ಕೆ ಮಾಡಿ ನೆಡಬೇಕು. ಬರೇ ಅಡಿಕೆ ಮಾತ್ರವಲ್ಲ ತೆಂಗಿನ ಸಸಿಯೂ ಹಾಗೆಯೇ. ಅಡಿಕೆ ಸಸಿ ನೆಡುವವರು ಅದು ಅವರೇ ಮಾಡಿದ ಗಿಡ ಇರಬಹುದು ಅಥವಾ ನರ್ಸರಿಯಿಂದ ಖರೀದಿ ಮಾಡಿ ನೆಡುವುದೇ…