ಅಡಿಕೆ ಮರದ ಆರೋಗ್ಯ –ಅದರ ಬೇರು ವ್ಯವಸ್ಥೆ.
ಯಾವುದೇ ಸಸ್ಯವಿರಲಿ, ಬೇರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಸಸ್ಯಕ್ಕೆ ಬೇರು ಮುಖ್ಯ ಆಧಾರ ಸ್ಥಂಭ. ಇದು ಮಣ್ಣು, ನೀರು, ಕೀಟಗಳು ಮತ್ತು ಪೋಷಕಗಳ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ. ಇದನ್ನು ಪ್ರತೀಯೊಬ್ಬ ರೈತರೂ ಗಮನಿಸಿ ಅದನ್ನು ಸರಿಪಡಿಸಿದರೆ ಮರ ಆರೋಗ್ಯವಾಗಿರುತ್ತದೆ. ಅಡಿಕೆ ಮರ, ತೆಂಗಿನ ಮರ ಮುಂತಾದ ಎಲ್ಲಾ ಏಕದಳ ಸಸ್ಯಗಳ ಬೇರುಗಳು ತಳಕ್ಕೆ ಇಳಿಯದೇ ಮೇಲ್ಭಾಗದಲ್ಲೇ ಪೋಷಕಗಳನ್ನು ಹುಡುಕುತ್ತಾ ಪಸರಿಸುತ್ತಿರುತ್ತವೆ. ಇವು ಸಸ್ಯದ ಕಾಂಡದಿಂದ ಹುಟ್ಟಿಕೊಂಡು ಬೆಳವಣಿಗೆಯಾಗುತ್ತದೆ. ಸಸ್ಯದ ಸುತ್ತಲೂ ಇದು ಪಸರಿಸಿರುತ್ತದೆ. Monocot roots are…