ಗ್ಲೆರಿಸೀಡಿಯಾ ಆಧಾರದಲ್ಲಿ ಕರಿಮೆಣಸಿನ ಬಳ್ಳಿ ಬೆಳೆಸಬಹುದು.

ಗ್ಲೆರಿಸೀಡಿಯಾ  ಆಧಾರದಲ್ಲಿ ಕರಿಮೆಣಸಿನ ಬಳ್ಳಿ ಬೆಳೆಸಬಹುದು.

ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಕರಿಮೆಣಸಿನ ಬಳ್ಳಿಯನ್ನು  ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಕೊಯಿಲು ಮಾಡಲು ಕಷ್ಟವಿಲ್ಲ. ಹಿಂದೆ ನಮ್ಮಲ್ಲಿ ಹಾಲುವಾಣ ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿಸುತ್ತಿದ್ದರು. ಕ್ರಮೇಣ ಅಡಿಕೆ, ತೆಂಗಿನ ಮರ ಹಾಗೆಯೇ ಇನ್ನಿತರ  ಕಾಡು ಮರಮಟ್ಟುಗಳಿಗೆ ಬಳ್ಳಿ ಹಬ್ಬಿಸುವುದು ಪ್ರಾರಂಭವಾಯಿತು. ಈ ಮರಮಟ್ಟುಗಳಲ್ಲಿ ಬಳ್ಳಿ  ಉತ್ತಮವಾಗಿ ಹಬ್ಬುತ್ತದೆಯಾದರೂ ಕೊಯಿಲು ಕೆಲಸ ಕಷ್ಟವಾಗಲಾರಂಭಿಸಿದೆ. ಅದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿವೆ. ಅವುಗಳಲ್ಲಿ ಒಂದು ಗ್ಲೆರಿಸೀಡಿಯಾ ಸಸ್ಯ. ಈ ಸಸ್ಯಕ್ಕೆ ಕರಿಮೆಣಸಿನ ಬಳ್ಳಿ ಹಬ್ಬಿಸುವುದರಿಂದ…

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
green leaf carrying

ತೋಟಕ್ಕೆ ಈಗ ಹಸಿ ಸೊಪ್ಪು ಹಾಕಿದರೆ ತುಂಬಾ ಅನುಕೂಲ. ಯಾಕೆ?

ತೋಟಕ್ಕೆ ಹಸಿ ಸೊಪ್ಪುಗಳನ್ನು ಬಳಸುವ ಸರಿಯಾದ ಸಮಯ ಮಳೆಗಾಲದ ಪ್ರಾರಂಭದ ದಿನಗಳು. ಈ ಸಮಯದಲ್ಲಿ ಹಸಿ ಸೊಪ್ಪು ಹಾಕಿದರೆ ಅದು ಕರಗಿಸಿಕೊಡುವ ಜೀವಿಗಳಿಂದ ಚೆನ್ನಾಗಿ ಕರಗುತ್ತದೆ.  ಮಳೆಗಾಲ ಪ್ರಾರಂಭದಿಂದ ಕೊನೆತನಕವೂ ಮಣ್ಣು ತೇವ ಭರಿತವಾಗಿರುತ್ತದೆ, ವಾತಾವರಣ ತಂಪಾಗಿರುತ್ತದೆ. ಇವೆಲ್ಲದರ ಅನುಕೂಲ ಬಳಸಿಕೊಂಡು ಮಣ್ಣಿನಲ್ಲಿ ಇರುವ ಬಹುತೇಕ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ಈಗ ನೀವು ಏನೇ ಸಾವಯವ ತ್ಯಾಜ್ಯ ಹಾಕಿದರೂ ಅದು ತ್ವರಿತವಾಗಿ ಕರಗಿ ಮಣ್ಣಾಗುತ್ತದೆ. ಈಗ ಸೊಪ್ಪು ಸದೆ ಹಾಕಿದರೆ ಮಳೆ ಹನಿಗಳಿಂದಾಗುವ ಮಣ್ಣು ಸವಕಳಿಯನ್ನೂ ತಡೆಯುತ್ತದೆ. ಕಳೆ ನಿಯಂತ್ರಣಕ್ಕೂ ಸಹಕಾರಿ….

Read more
ರಾಸಾಯನಿಕ + ಸಾವಯವ ಎರಡು ಬಳಸಿ ಇಳುವರಿ

ರಾಸಾಯನಿಕ + ಸಾವಯವ = ಇಳುವರಿ ಉತ್ತಮ.

ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ…

Read more
error: Content is protected !!