ಭತ್ತದ ಗರಿ ಹುಳ – ಹೇಗೆ ಬರುತ್ತದೆ? ನಿವಾರಣೋಪಾಯ ಏನು?
ಭತ್ತದ ಬೆಳೆಯಲ್ಲಿ ಗರಿಯ ತುದಿಯ ಪತ್ರಹರಿತ್ತನ್ನು ತಿಂದು ಪೈರನ್ನೇ ಹಾಳುಗೆಡಹುವ ಒಂದು ಹುಳ ಇದೆ. ಅದನ್ನು ಭತ್ತದ ಗರಿ ತಿನ್ನುವ ಕೀಟ Paddy Leaf folder, leaf roller Cnaphalocrocis medinalis / marasmia patnalis ಎನ್ನುತ್ತಾರೆ. ಇದು ಎಳೆಯ ಸಸಿ ಹಂತದಿಂದ ಪೈರು ತೆನೆ ಕೂಡುವ ತನಕವೂ ಹಾನಿ ಮಾಡುತ್ತಿರುತ್ತದೆ. ಇದರಿಂದ ಬೆಳೆಯಲ್ಲಿ ಬಹಳಷ್ಟು ಹಾನಿ ಉಂಟಾಗುತ್ತದೆ. ಕೆಲವೊಮ್ಮೆ ಭತ್ತದ ಹೊಲದಲ್ಲಿ ಪೈರೇ ಇಲ್ಲದ ಸ್ಥಿತಿ ಉಂಟಾಗುವುದೂ ಇದೆ. ಇಲ್ಲಿ ಒಂದು ಗದ್ದೆಯನ್ನು ಗಮನಿಸಿ. ಇದರಲ್ಲಿ…