ಬೇಸಿಗೆಯಲ್ಲಿ ಗೊಬ್ಬರಗಳನ್ನು ಕೊಡುವುದರಿಂದ ಭಾರೀ ಲಾಭವಿದೆ.
ಬೇಸಿಗೆ ಕಾಲದಲ್ಲಿ ಸಸ್ಯ ಬೆಳವಣಿಗೆ ಚುರುಕಾಗಿರುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ನೀರಾವರಿ ಇರುವ ಬೆಳೆಗಳಿಗೆ ಗೊಬ್ಬರ ಕೊಡುವುದು ಉತ್ತಮ. ಯಾವಾಗಲೂ ಹಸಿವಿದ್ದಾಗ ಉಣ್ಣಬೇಕು. ಬಾಯಾರಿದಾಗ ನೀರು ಕುಡಿಯಬೇಕು. ಇದೇ ಸಿದ್ದಾಂತದಲ್ಲಿ ಸಸ್ಯ ಪೋಷಣೆಯೂ ನಡೆಯಬೇಕು. ಸಸ್ಯಗಳು ಹೆಚ್ಚು ಬಾಯಾರಿಕೆ ಮತ್ತು ಹಸಿವಿನಿಂದ plant’s need ಇರುವುದು ಬೇಸಿಗೆಯ ಕಾಲದಲ್ಲಿ. ಈಗ ಅವುಗಳಿಗೆ ನೀರನ್ನೂ ಪೋಷಕಗಳನ್ನೂ ಕೊಡುವುದರಿಂದ ಅವುಗಳ ಬೆಳವಣಿಗೆಗೆ ತುಂಬಾ ಪ್ರಯೋಜನವಾಗುತ್ತದೆ. ಸಸ್ಯಗಳು ನಾವು ಕೊಡುವ ನೀರು, ಗೊಬ್ಬರಕ್ಕೆ ಚೆನ್ನಾಗಿ ಸ್ಪಂದಿಸಿ ಸ್ವೀಕರಿಸುತ್ತವೆ. ನಾವೆಲ್ಲಾ ಬೆಳೆಗಳಿಗೆ ಗೊಬ್ಬರ ಕೊಡಲು…