ಬೇಸಿಗೆಯಲ್ಲಿ ಗೊಬ್ಬರಗಳನ್ನು ಕೊಡುವುದರಿಂದ ಭಾರೀ ಲಾಭವಿದೆ.

ಬೇಸಿಗೆ ಕಾಲದಲ್ಲಿ ಸಸ್ಯ ಬೆಳವಣಿಗೆ ಚುರುಕಾಗಿರುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ನೀರಾವರಿ ಇರುವ ಬೆಳೆಗಳಿಗೆ ಗೊಬ್ಬರ ಕೊಡುವುದು ಉತ್ತಮ.
ಯಾವಾಗಲೂ ಹಸಿವಿದ್ದಾಗ ಉಣ್ಣಬೇಕು. ಬಾಯಾರಿದಾಗ ನೀರು ಕುಡಿಯಬೇಕು. ಇದೇ ಸಿದ್ದಾಂತದಲ್ಲಿ  ಸಸ್ಯ ಪೋಷಣೆಯೂ ನಡೆಯಬೇಕು. ಸಸ್ಯಗಳು ಹೆಚ್ಚು ಬಾಯಾರಿಕೆ ಮತ್ತು ಹಸಿವಿನಿಂದ plant’s need  ಇರುವುದು ಬೇಸಿಗೆಯ ಕಾಲದಲ್ಲಿ. ಈಗ ಅವುಗಳಿಗೆ ನೀರನ್ನೂ ಪೋಷಕಗಳನ್ನೂ ಕೊಡುವುದರಿಂದ ಅವುಗಳ ಬೆಳವಣಿಗೆಗೆ ತುಂಬಾ ಪ್ರಯೋಜನವಾಗುತ್ತದೆ. ಸಸ್ಯಗಳು ನಾವು ಕೊಡುವ ನೀರು, ಗೊಬ್ಬರಕ್ಕೆ ಚೆನ್ನಾಗಿ ಸ್ಪಂದಿಸಿ ಸ್ವೀಕರಿಸುತ್ತವೆ.

ನಾವೆಲ್ಲಾ ಬೆಳೆಗಳಿಗೆ ಗೊಬ್ಬರ ಕೊಡಲು ಮಳೆಗಾಲ ಒಳ್ಳೆಯದು ಎಂದು ತಿಳಿದಿದ್ದೇವೆ.  ಮಳೆಗಾಲದಲ್ಲಿ ಗೊಬ್ಬರ ಕೊಟ್ಟಾಗ ಮಳೆ ಎಡೆ ಬಿಡದೆ ಬರುತ್ತಿದ್ದರೆ ನಾವು ಹಾಕಿದ್ದರಲ್ಲಿ ಅರ್ಧಕ್ಕರ್ಧ ನಷ್ಟ. ಮಳೆ ಬಾರದೆ ಮಣ್ಣು ತೇವವಾಗಿದ್ದರೆ ಫಲ ಇದೆ. ಮಳೆಗಾಲದಲ್ಲಿ  ವಾತಾವರಣದ ಮೂಲಕ ಸಸ್ಯಗಳಿಗೆ ಪೊಷಕಾಂಶಗಳು ಲಭ್ಯವಾಗುತ್ತವೆ. ಜೊತೆಗೆ ಹೆಚ್ಚು ಬಿಸಿಲು ಇಲ್ಲದಿರುವ ಕಾರಣ ಶಕ್ತಿಯ ವ್ಯಯವೂ ಕಡಿಮೆ. ಅದರೆ ಬೇಸಿಗೆಯಲ್ಲಿ ಎಲ್ಲಾ ಕಡೆಯಲ್ಲೂ ಶಕ್ತಿಯ ವ್ಯಯ ಹೆಚ್ಚು. ಹಾಗಾಗಿ ಪೋಷಕಾಂಶಗಳ ಹಸಿವು ಹೆಚ್ಚು. ಈ ಕಾರಣದಿಂದ ಮಳೆಗಾಲದಲ್ಲಿ ಸ್ವಲ್ಪ ಪೊಷಕಾಂಶಗಳನ್ನು ಕೊಟ್ಟು ಬೇಸಿಗೆಯ ಮಾರ್ಚ್ ತಿಂಗಳಿನಿಂದ ಮೇ ಕೊನೆ ತನಕ ವಿಭಜಿತ ಕಂತುಗಳಲ್ಲಿ ಸ್ವಲ್ಪ ಸ್ವಲ್ಪ ಪೊಷಕಾಂಶಗಳನ್ನು ಕೊಡುತ್ತಾ ಇದ್ದರೆ ಅದರ ಪ್ರತಿಫಲ ಉತ್ತಮವಾಗಿರುತ್ತದೆ. right amount of nutrients applied to your field at the right time is a key factor to ensuring a good start to next season’s crops   

ಬೇಸಿಗೆಯಲ್ಲಿ ಗೊಬ್ಬರ ಕೊಟ್ಟ ಅಡಿಕೆ ಮರದ ಫಲ

 • ಸಸ್ಯಗಳು ಹೆಚ್ಚು ಚಟುವಟಿಕೆಯಲ್ಲಿರುವುದು ಶಿವರಾತ್ರೆ ಕಳೆದ ನಂತರ.
 • ಆಗ ಚಳಿ ಹೋಗಿ ಬೇಸಿಗೆ ಕಾಲ ಬರುತ್ತದೆ.
 • ನೆಲ ಮತ್ತು ಹವಾಮಾನ ಬೆಚ್ಚಗೆ ಇರುತ್ತದೆ.
 • ಆಗ  ಬಹುತೇಕ ಸಸ್ಯಗಳು ಚಿಗುರಿಕೊಳ್ಳುವುದು ಹೂ ಬಿಡುವುದು, ಕಾಯಿಯಾಗುವುದು, ಕಾಯಿ ಮಾಗುವುದು, ಹೀಗೆಲ್ಲಾ ಪೂರ್ತಿ ಚಟುವಟಿಕೆ ಇರುತ್ತದೆ.
 • ಈ ಸಮಯದಲ್ಲಿ  ಗೊಬ್ಬರಗಳನ್ನು ಕೊಡುವುದರಿಂದ ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳ ತೃಷೆಗೆ ಸ್ಪಂದಿಸಿದಂತಾಗುತ್ತದೆ.

ಉಷ್ಣತೆ ಮತ್ತು ಸಸ್ಯ ಬೆಳವಣಿಗೆ:

 • ಸಸ್ಯ ಬೆಳವಣಿಗೆ ಎಂಬುದು ವಾತಾವರಣದ ಅನುಕೂಲವನ್ನು ಅವಲಂಭಿಸಿ ಇರುತ್ತದೆ.
 • ಬೇಸಿಗೆಯ ದಿನಗಳಲ್ಲಿ ಸಸ್ಯಗಳಿಗೆ ಸಾಕಷ್ಟು ಸೂರ್ಯನ ಬೆಳಕು ಲಭ್ಯವಾಗುವ ಕಾರಣ ಅವುಗಳ ಬೆಳವಣಿಗೆಗೆ ತುಂಬಾ ಅನುಕೂಲವಾಗುತ್ತದೆ.
 • ಈ ಸಮಯದಲ್ಲಿ ಬರೇ ಸೂರ್ಯನ ಬಿಸಿಲು ಮಾತ್ರವಲ್ಲ. ವಾತಾವರಣದಲ್ಲಿ ಆರ್ಧ್ರತೆ ಹೆಚ್ಚಾಗುತ್ತಾ ಹೋಗುವ ಕಾರಣ ಸಸ್ಯಗಳಿಗೆ ದ್ಯುತಿ ಸಂಸ್ಲೇಶಣ ಕ್ರಿಯೆಗೆ ಅನುಕೂಲವಾಗುತ್ತದೆ.
 • ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದಿಲ್ಲ, ಒಣ ಹವೆ ಇರುವ ಕಾರಣ ಸಸ್ಯಗಳ ಆಹಾರ ತಯಾರಿಕೆ ಮತ್ತು ಪೋಷಕ  ಸ್ವೀಕರಿಸುವ ಕ್ರಿಯೆಗೆ ಹೆಚ್ಚು ಅನುಕೂಲ ಆಗುವುದಿಲ್ಲ.
 • ಮಳೆಗಾಲದಲ್ಲಿ ಅಧಿಕ ಮಳೆಯಾಗುವ ಸಮಯದಲ್ಲಿ ಸಸ್ಯಗಳಿಗೆ ಸೂರ್ಯನ ಬೆಳಕಿನ ಕೊರತೆ ಇರುವ ಕಾರಣ ಅವು ಹೆಚ್ಚು ಚಟುವಟಿಕೆಯಲ್ಲಿ ಇರುವುದಿಲ್ಲ.

ಉಷ್ಣ ವಾತಾವರಣ ಅಥವಾ ಬೇಸಿಗೆಯ ಕಾಲದಲ್ಲಿ ಸಸ್ಯಗಳ ಆಹಾರ ತಯಾರಿಕೆ photosynthesis ಹೆಚ್ಚಾಗುತ್ತದೆ. ಅದೇ ರೀತಿಯಲ್ಲಿ  ಭಾಷ್ಪೀಭವನ transpiration ಕ್ರಿಯೆಯೂ ಹೆಚ್ಚಾಗಿರುತ್ತದೆ.( ಎಲೆಗಳ ಮೂಲಕ ನೀರು ಹೊರ ಹೋಗುತ್ತದೆ, (ಆಗ ಬೇರುಗಳ ಮುಖಾಂತರ ಹೊರ ಹೋದಷ್ಟೇ ನೀರನ್ನು ಬಯಸುತ್ತವೆ.) ಉಸಿರಾಟ ಕ್ರಿಯೆ ಹೆಚ್ಚಾಗುತ್ತದೆ. (ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವಿಕೆ)  ಬೇಸಿಗೆಯಲ್ಲಿ ಮೊಳಕೆ ಒಡೆಯುವಿಕೆಯೂ ಹೆಚ್ಚು, ಹೂವಾಗುವುದೂ ಹೆಚ್ಚು. ಬೇರಿನ ಬೆಳವಣಿಗೆಯೂ ಹೆಚ್ಚು.

plants can sustain only in manure

 • ಆಗ  ಅದಕ್ಕೆಲ್ಲಾ  ಆಹಾರದ ಅಗತ್ಯಗಳೂ ಹೆಚ್ಚಾಗುತ್ತದೆ.(ಉದಾಹರಣೆಗೆ ಚಳಿಗಾಲದಲ್ಲಿ ಕಲ್ಲಂಗಡಿಯಂತಹ ಬೆಳೆಯಲ್ಲಿ ಕೊಯಿಲಿಗೆ  90 ದಿನಗಳ ಕಾಲ ಬೇಕಾದರೆ ಬೇಸಿಗೆಯಲ್ಲಿ ಇದು 60-70 ದಿನದಲ್ಲಿ ಬೆಳವಣಿಗೆ ಹೊಂದುತ್ತದೆ.)
 • ಬೇಸಿಗೆಯಲ್ಲಿ ತೇವಾಂಶ ಸಿಕ್ಕರೆ ತಕ್ಷಣ ಹುಲ್ಲಿನಂತಹ ಕಳೆ ಬೀಜಗಳು ಮೊಳಕೆ ಒಡೆಯುತ್ತವೆ.
 • ಅಂದರೆ ಮೊಳಕೆ ಒಡೆಯುವಿಕೆಯೂ ಈ ಸಮಯದಲ್ಲಿ  ಹೆಚ್ಚು.
 • ಬಹುತೇಕ ಎಲ್ಲಾ ತೋಟಗಾರಿಕಾ ಬೆಳೆಗಳಲ್ಲಿ ಹೂವಾಗುವುದಕ್ಕೂ ಬೇಸಿಗೆಯ ಸಮಯ ಅನುಕೂಲಕರ.
 • ಬೇಸಿಗೆಯ ಸಮಯದಲ್ಲಿ ಹೂವು ಕಾಯಿಕಚ್ಚಿಕೊಳ್ಳುವಷ್ಟು ಚಳಿಯ ಸಮಯದಲ್ಲಿ ಆಗುವುದಿಲ್ಲ.
 •  ಈ ಎಲ್ಲಾ ಚಟುವಟಿಕೆ ಉತ್ತಮವಾಗಿ ನಡೆಯಲು ಅಥವಾ ಬೆಲೆಗಳಿಂದ ಸರಿಯಾಗಿ ಪ್ರತಿಫಲ ದೊರೆಯಲು ಪೋಷಕ ಮತ್ತು ನೀರಿನ ಅಗತ್ಯ ಇರುತ್ತದೆ.
 • ನೀರು ಪೋಷಕಗಳನ್ನು ಸಸ್ಯಾಂಗಗಳಿಗೆ ಸಾಗಿಸುವ ಕೆಲಸ ಮಾಡುತ್ತದೆ.
 • ಪೋಷಕದ ಕೊರೆತೆಯಾದಲ್ಲಿ ಚಿಗುರಿದ ಎಲೆಗಳಲ್ಲಿ ಶಕ್ತಿ ಇರಲಾರದು.
 • ಹೂವುಗಳು ಉದುರುವುದು, ಕಾಯಿ ಸರಿಯಾಗಿ ಕಚ್ಚಿಕೊಳ್ಳದಿರುವುದು, ಅಪಕ್ವ ಬೆಳವಣಿಗೆ ಉಂಟಾಗುತ್ತದೆ.
 • ಲೆಕ್ಕಮೀರಿ ನೀರು ಕೊಡುವುದರಿಂದ ಬಾಷ್ಪೀಭವನ ಹೆಚ್ಚಾಗಿ ನೀರು ಹೊರ ಹೋಗುವುದು ಜಾಸ್ತಿಯಾಗುತ್ತದೆ.

ಬೇಸಿಗೆಯಲ್ಲಿ ಗೊಬ್ಬರ:

Dark green is the healthy symptom

 • ಸಸ್ಯಗಳ ಅವಶ್ಯಕತೆಗನುಗುಣವಾಗಿ ಗೊಬ್ಬರಗಳನ್ನು ಕೊಡುವುದರಿಂದ ಫಲಿತಾಂಶ ಹೆಚ್ಚು.
 • ಇದನ್ನು ಸಸ್ಯಗಳಿಗೆ ಪೋಷಕ ವಸ್ತುಗಳ ಒಲವು ಎಂದು ಕರೆಯುತ್ತಾರೆ.
 • ಬೇಸಿಗೆಯಲ್ಲಿ ಸಸ್ಯಗಳು ಸಾರಜನಕ, ರಂಜಕ ಮತ್ತು ಪೊಟ್ಯಾಶ್ , ದ್ವಿತೀಯ ಪೋಷಕಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ಅಲ್ಲದೆ ಲಘು ಪೋಷಕಾಂಶ ಮುಂತಾದ ಎಲ್ಲವನ್ನೂ  ಬಯಸುತ್ತದೆ.
 • ಬೇಸಿಗೆಯ ಅವಧಿಯಲ್ಲಿ ಗೊಬ್ಬರಗಳನ್ನು ಕೊಡುವಾಗ ಸಾಧ್ಯವಾದಷ್ಟು ವಿಭಜಿತ ಕಂತುಗಳಲ್ಲಿ ನೀರಾವರಿ ಮಾಡಿ ತೇವವಾದ ಜಾಗಕ್ಕೆ ಬೀಳುವಂತೆ ಕೊಡಬೇಕು. ( ಹನಿ ನೀರಾವರಿಯೊಂದಿಗೆ ಕೊಡುವಾಗ ಅದರ ಬಳಕೆ ಉತ್ತಮವಾಗಿರಲು ಕಾರಣ ಇದು)
 • ತೇವಾಂಶ ಇರದ ಜಾಗಕ್ಕೆ ಕೊಡುವುದು ಪೋಷಕಾಂಶದ ಪೋಲು ಆಗಿರುತ್ತದೆ. ದ್ರವರೂಪಕ್ಕೆ ಪರಿವರ್ತಿಸಿ ಕೊಡುವುದು ಉತ್ತಮ.

ಮೆಗ್ನೀಶಿಯಂ ಮತ್ತು ಪೊಟ್ಯಾಶ್ ಅಗತ್ಯವಾಗಿ ಬೇಕಾಗುತ್ತದೆ:

 • ಮೆಗ್ನೀಶಿಯಂ ಪೋಷಕ ಸಸ್ಯ ಬೆಳವಣಿಗೆ ವೇಗ ಗತಿಯಲ್ಲಿ ಇರುವಾಗ ಅಗತ್ಯವಾಗಿ ಬೇಕಾಗುತ್ತದೆ.
 • ಇದು ಎಲ್ಲಾ ಪೋಷಕಗಳನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತದೆ.
 • ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಎಂಬ ಪೋಷಕಾಂಶಗಳು ಬೇಸಿಗೆಯ ಕಾಲದಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದೆ.
 • ಪೋಟಾಶಿಯಂ ಗೊಬ್ಬರವು ಸಸ್ಯಗಳ ಸ್ಟೊಮಟಾ ತೆರೆದುಕೊಂಡು ಹೆಚ್ಚು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಸ್ವೀಕರಿಸಿಕೊಳ್ಳಲು ಸಹಾಯಕವಾಗುತ್ತದೆ.
 • ಪೊಟ್ಯಾಶಿಯಂ ಕೊರತೆಯಾದಲ್ಲಿ ಸ್ಟೊಮಾಟಾ ಮುಚ್ಚಿಕೊಳ್ಳುತ್ತದೆ.
 • ಮೆಗ್ನೀಶಿಯಂ ಸಸ್ಯದ ಪ್ರತೀಯೊಂದು ಅಣುವಿನಲ್ಲೂ ಇರುವುದರಿಂದ ಎಲ್ಲಾ ಹಸುರು ಬೆಳೆವಣಿಗೆಗೆ ಅವಶ್ಯಕ.
 • ಮೆಗ್ನೀಶಿಯಂ ಕೊರತೆ ಉಂಟಾಗುವುದೇ ಬೇಸಿಗೆಯ ಸಮಯದಲ್ಲಿ. ಆಗ ಹಸುರು ಕಡಿಮೆಯಾಗಲು insufficient Mg and K reduces the efficiency of photosynthesis ಬಿಡಬಾರದು.
 • ಪೊಟ್ಯಾಶ್ ಮತ್ತು ಮೆಗ್ನೀಶಿಯಂ ಎರಡೂ ಬೇಸಿಗೆಯ ಅತ್ಯಗತ್ಯ ಪೋಷಕಾಂಶವಾಗಿರುತ್ತದೆ.
 • ಶರ್ಕರ ಪಿಷ್ಟಾದಿಗಳ ಚಲನೆ ಹಾಗೂ ಫಸಲಿನ ಗುಣಮಟ್ಟದ ಮೇಲೆ ಮೆಗ್ನೀಶಿಯಂ ತನ್ನದೇ ಆದ ಪಾತ್ರವನ್ನು ಹೊಂದಿದೆ.
 • ಮೆಗ್ನೀಶಿಯಂ ಇಲ್ಲದೆ ಸಸ್ಯದ ಎಲೆಗಳು ಪತ್ರಹರಿತ್ತಿನ ಮೂಲಕ ಸೂರ್ಯನ ಬೆಳಕನ್ನು ಹೀರಿಕೊಳ್ಳಲಾರವು, ಇದರಿಂದ ಆಹಾರ ತಯಾರಿಕೆಗೆ ಅಡ್ಡಿಯಾಗುತ್ತದೆ.
 • ಮೆಗ್ನೀಶಿಯಂ ಹೆಚ್ಚಾದರೆ ಸಸ್ಯಗಳು  ಕ್ಯಾಲ್ಸಿಯಂ ಮತ್ತು ಪೊಟ್ಯಾಶ್ ಗಳನ್ನು  ಹೆಚ್ಚು ಬಳಸಿಕೊಳ್ಳುತ್ತವೆ. ಅವುಗಳ ಕೊರತೆ ಉಂಟಾಗುತ್ತದೆ.

ಒಂದು ಅಡಿಕೆ ಮರಕ್ಕೆ ವರ್ಷಕ್ಕೆ 60 ಗ್ರಾಂ ಮೆಗ್ನೀಶಿಯಂ ಸಲ್ಫೇಟ್ ಹಾಗೂ ಒಂದು ತೆಂಗಿನ ಮರಕ್ಕೆ ಸುಮಾರು 500 ಗ್ರಾಂ ಮೆಗ್ನೀಶಿಯಂ ಸಲ್ಫೇಟ್ ಬೇಕು. ಬೇಸಿಗೆಯಲ್ಲಿ ಮೆಗ್ನೀಶಿಯಂ ಕೊಡುವವರು ಶೇ.೦.5 ರ ಪ್ರಮಾಣದಲ್ಲಿ (200 ಲೀ ನೀರಿಗೆ 1 ಕಿಲೋ ಮೆಗ್ನೀಶಿಯಂ ಸಲ್ಫೇಟ್)ಎಲೆಗಳಿಗೆ ಸಿಂಪರಣೆ ಮಾಡುವುದು ಸೂಕ್ತ. ಜೊತೆಗೆ 1 ಕಿಲೋ ಸಲ್ಫೇಟ್ ಆಪ್ ಪೊಟ್ಯಾಶ್ (SOP) ಸೇರಿಸಿದರೆ ಒಳ್ಳೆಯದು. EDTA ರೂಪದ ಮೆಗ್ನೀಶಿಯಂ ಅನ್ನು 1 ಲೀ. ನೀರಿಗೆ ½ ಗ್ರಾಂ ಪ್ರಮಾಣದಲ್ಲಿ ಮಿಶ್ರಣ ಮಾಡಿ ಎಲೆಗಳಿಗೆ ಸಿಂಪರಣೆ ಮಾಡುವುದು ಸೂಕ್ತ.

ಮಿಡಿ ಕಾಯಿ ಉದುರುವಿಕೆ, ಕಾಯಿ ಫಲಿತವಾಗದೆ ಇರುವುದು, ಕೊಬ್ಬರಿ ತೂಕ  ಬಾರದೆ ಇರುವುದು, ಎಲೆಗಳು ಕಡಿಮೆಯಾಗುವುದು, ಕುಬ್ಜವಾಗುವುದು, ಬೆಳವಣಿಗೆ ಕುಂಠಿತವಾಗುವುದು ಮುಂತಾದ ಸಮಸ್ಯೆಗೆ ಮೆಗ್ನೀಶಿಯಂ ಕೊರತೆ ಒಂದು ಕಾರಣ. ಇದಕ್ಕೆ ತಕ್ಷಣದ ಪರಿಹಾರ ಎಲೆಗಳಿಗೆ ಸಿಂಪರಣೆ. ದ್ರವೀಕರಿಸಿ ಬೇರುಗಳ ಮೂಲಕವೂ ಕೊಡಬಹುದು. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

error: Content is protected !!