ಈ ವರ್ಷದ ಮಳೆ ಭವಿಷ್ಯ
ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ. ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು, ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ. ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ…