ಈ ವರ್ಷದ ಮಳೆ ಭವಿಷ್ಯ

rain water

ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ.

 • ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ
 • ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು,
 • ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ.

ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ ಅಥವಾ ಸಮಾನ್ಯ ಮಳೆ ಎಂದು ವ್ಯಾಖ್ಯಾನಿಸಲಾಗುತ್ತದೆ. ರೈತರು ಮೇ ತಿಂಗಳಲ್ಲಿ ಹೊಲದ ಸಿದ್ದತೆ ಮಾಡಿಕೊಳ್ಳಬಹುದು. ಎಲ್ಲಾ ಪ್ರದೇಶದಲ್ಲೂ ಏಕ ಪ್ರಕಾರ ಮಳೆಯಾಗುತ್ತದೆ. ಎಂದೂ ಸಹ ಇಲಾಖೆ ಹೇಳಿದೆ.

rain fall

ಕೃಷಿ ಆರ್ಥಿಕತೆಗೆ ಸಹಕಾರಿ:

 • ಈ ವರ್ಷ ದೇಶಕ್ಕೆ ಹಾಗೂ ಪ್ರಪಂಚಕ್ಕೆ ಎದುರಾದ ಗಂಡಾಂತರ ಇಡೀ  ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲೂ ಬಹುದು.
 • ಆದರೆ ತಕ್ಷಣಕ್ಕೆ ದೇಶದ ಆಹಾರ ಸಮಸ್ಯೆ ಮತ್ತು ಜೀವನ ಬಧ್ರತೆಗೆ ಮುಂಗಾರು ಮಳೆಯೇ ಪ್ರಮುಖ ಆಧಾರ.
 • ಉತ್ತಮ ಮುಂಗಾರು ಮಳೆ ಇದ್ದರೆ ದೇಶಕ್ಕೆ ಆಹಾರದ ಧಾನ್ಯಗಳ ಕೊರತೆ ಉಂಟಾಗಲಾರದು.
 • ಅದು ಈ ವರ್ಷ ಕೈಗೂಡಲಿದೆ. ನಾಲ್ಕೂ ತಿಂಗಳ ಕಾಲ ಮಳೆ ಬರಲಿದ್ದು, ಕೆರೆ, ಜಲಾಶಯಗಳು ಭರ್ತಿಯಾಗಿ ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಯಾವುದೇ ತೊಂದರೆ ಉಂಟಾಗಲಾರದು ಎಂದು ಭಾವಿಸಲಾಗಿದೆ.

ಮಳೆ ಮತ್ತುದೇಶದ ಕೃಷಿ:

 • ಭಾರತದ ಆರ್ಥಿಕತೆ ಕೃಷಿ ಕ್ಷೇತ್ರವನ್ನು ಅವಲಂಭಿಸಿದೆ.
 • ಇಲ್ಲಿ 1.3 ಶತಕೋಟಿ ಜನಸಂಖ್ಯೆ ಕೃಷಿಯನ್ನು ಅವಲಂಭಿಸಿದ್ದಾರೆ.
 • ಬಹುಷಃ ಪೂರ್ವ ಮುಂಗಾರು ಮೇ ಎರಡನೇ ವಾರದಲ್ಲೇ ಪ್ರಾರಂಭವಾಗುವ ಮುನ್ಸೂಚನೆ ಇದೆ.
 • ಎಲ್ ನೀನೋ ಪರಿಣಾಮ ಈ ವರ್ಷ ತಟಸ್ಥವಾಗಿದೆ.
 • ಆದರೆ ಮುಂಗಾರು ಮಳೆ ಪ್ರಾರಂಭವಾಗಿ ಕೆಲವು ಸಮಯದ ತರುವಾಯ ಲಾ ನೀನಾ ಪರಿಣಾಮ ಉಂಟಾಗಲೂ ಬಹುದು.
 • ಎಲ್ ನೀನೋ ಪರಿಣಾಮದಿಂದ ಮಳೆ ಅಸ್ಥಿರವಾಗುತ್ತದೆ. ಲಾನೀನಾ ಪರಿಣಾಮದಿಂದ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯಬಹುದು.
 • ಜಲಾಶಯಗಳಲ್ಲಿ ನೀರಿನ ಸಂಗ್ರಹ ಜಾಸ್ತಿಯಾಗಿ ಅಂತರ್ ಜಲ ಸಂಗ್ರಹ ಹೆಚ್ಚಾಗಲು ಅವಕಾಶವಾಗಬಹುದು.
 • ಭಾರತದ ಬಹುತೇಕ ಕೃಷಿ ಚಟುವಟಿಕೆಗಳು ಮುಂಗಾರು ಮಳೆಯನ್ನೇ ನಂಬಿ ನಡೆಯುವಂತವುಗಳು.
 • ಇಲ್ಲಿ ಮಳೆಯಾಶ್ರಿತ ಬೆಳೆಗಳೇ ಜಾಸ್ತಿ. ಕಳೆದ ಕೆಲವು ವರ್ಷಗಳಿಂದ ಮಳೆಯ ಕೊರತೆ, ಅದಕಾಗಿ ನಡೆದ ಅಂತರ್ಜಲ ಶೋಷಣೆ ಪರಿಣಾಮ ಇಲ್ಲಿ ಜಲ ಕ್ಷಾಮವೂ ಎದುರಾಗಿದೆ.

ಇದೆಲ್ಲಾ ಸಮಸ್ಯೆಗಳು ಈ ವರ್ಷ ಕಡಿಮೆಯಾಗಲಿದ್ದು, ದೇಶದ ಆರ್ಥಿಕತೆಯನ್ನು ಮುನ್ನಡೆಸಲು ಕೃಷಿ ಕ್ಷೇತ್ರ ಸಹಕ್ಕರಿಸಲಿದೆ ಎಂಬುದಾಗಿ ಹವಾಮಾನ ಇಲಾಖೆ ಹೇಳುತ್ತದೆ.

ಈ ವರ್ಷದ ಹವಾಮಾನವೂ ಇದನ್ನು ಪುಷ್ಟೀಕರಿಸುತ್ತಿದ್ದು, ಈಗಾಗಲೇ ತಾಪಮಾನ ಏರಿಕೆ ಪ್ರಾರಂಭವಾಗಿದೆ. ಕೆಲವು ಕಡೆ ಈಗಲೇ ಮಳೆ ಸಿಂಚನ ಅಗಲಾರಂಭಿಸಿದೆ. ಇದು ಮುಂದೆಯೂ ಇದೇ ರೀತಿ ಮುಂದುವರಿಯಲಿದೆ.

Leave a Reply

Your email address will not be published. Required fields are marked *

error: Content is protected !!