ಎಷ್ಟು ಸಮಯದ ತನಕ  ಮಳೆ ಬರುವ ಮುನ್ಸೂಚನೆ ಇದೆ?

ಮಳೆ ಬರುವ ಮುನ್ಸೂಚನೆ

ಜಾಗತಿಕ ತಾಪಮಾನದ ವ್ಯತ್ಯಯದಿಂದಾಗಿ ಮಳೆಯ ಲಯ ತಪ್ಪಿದೆ. ಅಕಾಲದಲ್ಲಿ ಮಳೆಯಾಗುವುದು, ಹಂಚಿಕೆ ವ್ಯತ್ಯಾಸವಾಗುವುದು ಕಳೆದ ಮೂರು ವರ್ಷಗಳಿಂದ ನೊಡುತ್ತಿದ್ದೇವೆ. ಕಳೆದ ವರ್ಷ ಡಿಸೆಂಬರ್ ತನಕವೂ ಮಳೆ ಬಂದು ಕೃಷಿಕರಿಗೆ  ಬಹಳಷ್ಟು ತೊಂದರೆ ಅಗಿದೆ. ಈ ವರ್ಷ 2022 ಜುಲೈ ತಿಂಗಳು, ಇಡೀ ಋತುಮಾನದಲ್ಲಿ ಬರುವ ಮಳೆಯ ¾ ಪ್ರಮಾಣದಷ್ಟು ಈಗಾಗಲೇ ಬಂದಾಗಿದೆ. ಇನ್ನು ಮಳೆ ಕಡಿಮೆಯಾಗಬಹುದೇ? ಎಷ್ಟು ಸಮಯದ ತನಕ ಮುನ್ಸೂಚನೆ ಇದೆ ಎಂಬುದರ ಮಾಹಿತಿ ಇಲ್ಲಿದೆ.

ಮಳೆಯ ಪ್ರಮಾಣ ಭಾರೀ ಹೆಚ್ಚಳವಾಗಿದೆಯೋ ಅಥವಾ ಹಂಚಿಕೆ ವ್ಯತ್ಯಾಸವಾಗಿದೆಯೋ ಎಂಬುದನ್ನು ಹಿರಿಯರು ಹೇಳಬೇಕು. ಸುಮಾರು 30-40 ವರ್ಷಗಳ ಹಿಂದೆಯೂ ಇದೇ ರೀತಿ ಸತತವಾಗಿ ಸುರಿಯುತ್ತಿತ್ತಂತೆ. ವಾರಗಟ್ಟಲೆ ಮನೆಯಿಂದ ಹೊರಗೆ ತಲೆ ಹಾಕದ ತರಹ, ಬರುತ್ತಿತ್ತು ಎನ್ನುತ್ತಾರೆ.  ಕ್ರಮೇಣ ಪ್ರಮಾಣ ಕಡಿಮೆಯಾಗುತ್ತಾ ಬಂದು ನಮಗೆ ಹಳೆಯ ನೆನಪುಗಳು ಮರೆತು ಹೋದಂತಾಯಿತು. ಒಂದೊಂದು ವರ್ಷ ಸ್ವಲ್ಪ ಹೆಚ್ಚು ಬರುತ್ತಿತ್ತಾದರೂ ದೀಪಾವಳಿಯ ತರುವಾಯ ಇಲ್ಲ ಎಂಬ ತೀರ್ಮಾನಕ್ಕೆ ನಾವೆಲ್ಲಾ ಹೊಂದಿಕೊಂಡಿದ್ದೆವು. ಆದರೆ ಆ ಚಕ್ರ ಕಳೆದ ಮೂರು ವರ್ಷಗಳಿಂದ ಬದಲಾವಣೆಯಾಗಿ ಡಿಸೆಂಬರ್ ತನಕವೂ ಬರುವುದು ಚಳಿಗಾಲ ಎಂಬ ಋತುಮಾನದಾವಧಿಯೇ ಕಿರಿದಾದದ್ದು ನಾವೆಲ್ಲಾ ಗಮನಿಸಿರುವಂತದ್ದು.

ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ವರ್ಷದ ಎಲ್ಲಾ ತಿಂಗಳುಗಳಲ್ಲೂ ಮಳೆ ಬರುವ ಪರಿಸ್ಥಿತಿ ಕಳೆದ ವರ್ಷ 2020 ರಿಂದ ಪ್ರಾರಂಭವಾಗಿದೆ. ಈ ವರ್ಷ ಮಾತ್ರ ಯಾಕೋ ವರುಣ ಮುನಿಸಿಕೊಂಡಂತೆ ಜುಲೈ ತಿಂಗಳಲ್ಲಿ ಭಾರೀ ಮಳೆ, ರಭಸದ ಹನಿ, ನೆರೆ, ಭೂ ಕುಸಿತ, ಅಪಾರ ಬೆಳೆ ಹಾನಿ, ಆಸ್ತಿ ಪಾಸ್ತಿ, ಜೀವ ಹಾನಿ ಆದದ್ದನ್ನು ಕಾಣಬಹುದು. ಮಿಥುನ ಮಾಸದಲ್ಲಿ ಇಷ್ಟೊಂದು ಮಳೆಯಾದ ಕಾರಣ ಇನ್ನು ಕರ್ಕಾಟಕ ಮಾಸ ,ಸಿಂಹ ಮಾಸಗಳಲ್ಲಿ ತಗ್ಗಬಹುದೇ ಅಥವಾ ಹೀಗೇ ಮುಂದುವರಿದೀತೇ ಎಂಬ ನಮ್ಮೆಲ್ಲರ ಸಂದೇಹಗಳಿಗೆ ಸ್ವಲ್ಪ ಮಟ್ಟಿಗೆ  ಸಹಕಾರಿಯಾಗಬಲ್ಲ ಮುನ್ಸೂಚನೆ ಇಲ್ಲಿದೆ.

 ಬಿರುಸಾದ ಮಳೆ
ಚಿತ್ರ; ಶುಶೃತ ಅದ್ದೂರ್ ರವರದ್ದು.

ಮಂಗಳೂರು ಜಿಲ್ಲೆ:

 • ಜುಲೈ 18 ಸೋಮವಾರ  ಸ್ವಲ್ಪ ಮಳೆ ಆಗುವ ಸಾಧ್ಯತೆ ಇದೆ.
 • 19-20-21-22-23-24 ತನಕ ಹೆಚ್ಚು ಬರುವ ಸೂಚನೆ ಇದೆ.
 • 25 -26-27-28 ಮತ್ತೆ ಸ್ವಲ್ಪ ಬಿಡುವು ಸಿಗಬಹುದು,ಅಲ್ಪ ಸ್ವಲ್ಪ ಆಗಬಹುದು.
 • 29 -30-31  ಆಗಸ್ಟ್ 6 ರ ತನಕ ಮಳೆ ಹೆಚ್ಚು ಬರುವ ಸಾಧ್ಯತೆ ಇದೆ.
 • ದಿನಾಂಕ 7-8-9  ಸಲ್ಪ ಕಡಿಮೆಯಾಗಬಹುದು. 
 • ಆಗಸ್ಟ್ 10 ರಿಂದ 14 ತನಕ ಮತ್ತೆ ಮಳೆ ಇರುತ್ತದೆ.
 • ದಿನಾಂಕ 15 ರಂದು ಸ್ವಲ್ಪ ಬಿಡುವೂ,16-17 ಹಾಗೂ 18 -23 ತಾರೀಕಿನ ತನಕ ಸ್ವಲ್ಪ ಬಿಡುವೂ  ಇರುತ್ತದೆ.
 • 24  ರ ನಂತರ ಸ್ವಲ್ಪ ಬಿಡುವು ಇರಬಹುದು. ಸಪ್ಟೆಂಬರ್ ತಿಂಗಳಲ್ಲಿ 15 ದಿನ ಹೆಚ್ಚು ಮಳೆ ಇರುವ ಸಾಧ್ಯತೆ ಇದೆ. 
 • ಕರಾವಳಿಯಲ್ಲಿ ಸ್ವಲ್ಪ ಕಡಿಮೆಯೂ ಒಳನಾಡು ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಆಗುವ ಸಂಭವ ಇದೆ.

ಉಡುಪಿ ಜಿಲ್ಲೆ:

 • ಮಂಗಳೂರು ಜಿಲ್ಲೆಯ ರೀತಿಯಲ್ಲೇ ಮಳೆ ವಾತಾವರಣದ ಮುನ್ಸೂಚನೆ ಇದೆ.
 • ಜುಲೈ 18 ಸೋಮವಾರ  ಸ್ವಲ್ಪ ಮಳೆ ಆಗಬಹುದು.
 • 19-20-21-22 ಹೆಚ್ಚು ಬರುವ ಸೂಚನೆ ಇದೆ.
 • 23-24- 25 -26-27-28-29 ಮತ್ತೆ ಸ್ವಲ್ಪ ಬಿಡುವು ಇದ್ದು ಅಲ್ಪ ಸ್ವಲ್ಪ ಬರಬಹುದು.
 • 30-31  ಆಗಸ್ಟ್ 1 ರ ತನಕ ಮಳೆ ಹೆಚ್ಚು ಬರುವ ಸಾಧ್ಯತೆ ಇದೆ.
 • ದಿನಾಂಕ 2-3  ಸಲ್ಪ ಕಡಿಮೆಯಾಗಬಹುದು. 
 • ಆಗಸ್ಟ್ 4 ರಿಂದ 9 ತನಕ ಮತ್ತೆ ಮಳೆ ಇರುತ್ತದೆ.
 • ದಿನಾಂಕ 10-15 ತನಕ ಸ್ವಲ್ಪ ಬಿಡುವೂ,16-17 ಮಳೆ ಹಾಗೂ 18 -28 ತಾರೀಕಿನ ತನಕ ಸ್ವಲ್ಪ ಬಿಡುವೂ  ಇರುತ್ತದೆ.
 • 29-30-31 ರಂದು ಮಳೆ ಹೆಚ್ಚು ಇರಬಹುದು.
 • ಸಪ್ಟೆಂಬರ್ ತಿಂಗಳಲ್ಲಿ 1-2-3 ರಂದು ಮಳೆಯೂ, ಉಳಿದ 15 ದಿನ ಕೆಲವು ದಿನಗಳಲ್ಲಿ ಹೆಚ್ಚು ಆಗುವ ಸಾಧ್ಯತೆ ಇದೆ. 
 • ಜಿಲ್ಲೆಯ ಘಟ್ಟ ಪ್ರದೇಶದ ತಪ್ಪಲಿನಲ್ಲಿ ಹೆಚ್ಚು ತೀರ ಪ್ರದೇಶಗಳಲ್ಲಿ ಸ್ವಲ್ಪ ಕಡಿಮೆಯೂ ಆಗಬಹುದು.

ಶಿವಮೊಗ್ಗ ಜಿಲ್ಲೆ:

 • ಜುಲೈ 18-19   ಹೆಚ್ಚು ಮಳೆ ಇದೆ. 20 ರಂದು ಸ್ವಲ್ಪ ಕಡಿಮೆ ಇದೆ.
 • 21 ರಿಂದ 23 ತನಕ ಮಳೆ ಇದೆ.  ದಿನಾಂಕ 24 ರಂದು ಬಿಡುವು ಇದೆ. 
 • 25 ಮತ್ತೆ ಮಳೆ ಇದೆ. 26 ಬಿಡುವು ಇದೆ. 27-28 ಹೆಚ್ಚು ಮತ್ತು 29 ಸ್ವಲ್ಪ ಕಡಿಮೆ ಹಾಗೂ 30-31 ಹೆಚ್ಚು ಇದೆ. 
 • ಆಗಸ್ಟ್ 1—2 ಮಳೆ ಕಡಿಮೆ ಇದೆ. 3 ರಿಂದ 10 ರ ತನಕ ಹೆಚ್ಚು ಇದೆ.
 • 11-12 ಮಳೆ ಕಡಿಮೆ ಇದೆ. 13-14-15-16-17 ತನಕ ಮಳೆ ಇದೆ. 
 • 18-29 ತನಕ ತುಂಬಾ ಕಡಿಮೆಯಾಗಲಿದೆ.  ಸಪ್ಟೆಂಬರ್ ತಿಂಗಳಲ್ಲಿ 9-12-16-19-20-21-22 ದಿನಾಂಕಗಳಂದು ಮಳೆ ಇದೆ.
 • ಉಳಿದ ದಿನಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ. 

ಹಾಸನ ಜಿಲ್ಲೆ: 

 • ಜುಲೈ ತಿಂಗಳ ದಿನಾಂಕ 18  ಬಿಸಿಲಿನ ವಾತಾವರಣ 19 ರಿಂದ 25 ತನಕ ಅಧಿಕ ಮಳೆ, 26 ರಂದು ಬಿಸಿಲು ಮಳೆ ಇರಬಹುದು.
 • 27 ರಿಂದ 31 ತನಕ ಮಳೆ ಇರಲಿದೆ. ಆಗಸ್ಟ್ ತಿಂಗಳಲ್ಲಿ 1 ರಿಂದ  8 ರ ತನಕ  ಮಳೆ ಹೆಚ್ಚಾಗಿರಬಹುದು.
 • 9 ರಂದು ಸ್ವಲ್ಪ ಬಿಡುವು ಇರಬಹುದು. 10 ರಿಂದ 14 ತಾರೀಕಿನ ತನಕ ಮಳೆ ಇರಲಿದೆ.
 • 15 ರಿಂದ 23 ತಾರೀಕಿನ ತನಕ ಕಡಿಮೆ ಇರುತ್ತದೆ.
 • 24 ರ ನಂತರ ಬಿಸಿಲಿನ ವಾತಾವರಣ ಇರುತ್ತದೆ ಎಂಬ ವರದಿ ಇದೆ.

ಚಿತ್ರದುರ್ಗ ಜಿಲ್ಲೆ:

 • ಜುಲೈ ತಿಂಗಳು ದಿನಾಂಕ 18-19-20-21-22-23-24-25-26-27  ತನಕ ಮಳೆ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು.
 • 28 ರಿಂದ 30 ತನಕ ಸ್ವಲ್ಪ ಕಡಿಮೆಯಾಗಬಹುದು. ಬಿಸಿಲಿನ ವಾತಾವರಣ ಇರಲಿದೆ.
 • 22 ರಿಂದ 25 ತನಕ ಹೆಚ್ಚಾಗುವ ಸಾಧ್ಯತೆ ಇದೆ.
 • 27 ಬಿಸಿಲಿನ ವಾತಾವರಣ ಹಾಗೂ 28 ರಿಂದ 31 ತನಕ ಮಳೆ ಬಿಸಿಲು ಇರುವ ಸಾಧ್ಯತೆ ಇದೆ.
 • 31 ಮಳೆಯ ಸಾಧ್ಯತೆ ಇದೆ. ಆಗಸ್ಟ್ ತಿಂಗಳಲ್ಲಿ 1-2-3-4-5-6-7-8 ತಾರೀಕಿನ ತನಕ ಕಡಿಮೆ ಇರುತ್ತದೆ.
 • 9 ರಿಂದ 12 ತಾರೀಕಿನ ತನಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
 • 13 ರಿಂದ 21  ತಾರೀಖಿನ ತನಕ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.
 • ದಿನಾಂಕ 22 ರಿಂದ 24 ತನಕ ಹೆಚ್ಚು ಮಳೆಯಾಗುವ ಸಾದ್ಯತೆ ಇದೆ.
 • 25 ರಿಂದ 31 ತನಕ ಅಲ್ಪ ಸ್ವಲ್ಪ ಮಳೆಯಾಗಬಹುದು.

ಭದ್ರಾವತಿ: 

 • ಜುಲೈ19 ಮಳೆ  ಹೆಚ್ಚು ಇರಬಹುದು.20 ರಂದು ಸ್ವಲ್ಪ ಕಡಿಮೆ ಇರುತ್ತದೆ.
 • 21ರಿಂದ 23 ತನಕ ಹೆಚ್ಚಿನ ಮಳೆ, 24 ಸ್ವಲ್ಪ ಕಡಿಮೆ,25-26-27-28 ಹೆಚ್ಚು 29 ರಂದು ಸ್ವಲ್ಪ ಕಡಿಮೆ ಇರುತ್ತದೆ.
 • ದಿನಾಂಕ 30-31 ಹೆಚ್ಚಿನ ಮಳೆ ಇರಲಿದೆ.  ಆಗಸ್ಟ್ ನಲ್ಲಿ 1-2 ಕಡಿಮೆ ಇರಲಿದೆ. 
 • 3 ರಿಂದ10 ತನಕ ಅಧಿಕ ಮಳೆ ಇರಲಿದೆ.
 • 1112 ಸ್ವಲ್ಪ ಕಡಿಮೆ  ಇರಲಿದೆ. 13  ರಿಂದ ಪ್ರಮಾಣ ಕಡಿಮೆಯಾಗುತ್ತಾ ಬರಲಿದೆ ಎಂಬ ವರದಿ ಇದೆ.

ಮೈಸೂರು ಜಿಲ್ಲೆ:

 • ಜುಲೈ 19-20 ರಂದು ಅಲ್ಪ ಸ್ವಲ್ಪ ಮಳೆ ಮುನ್ಸೂಚನೆ ಇದೆ. 
 • ನಂತರ 24-25 ,30-31 ದಿನಾಂಕಗಳಲ್ಲಿ ಮಳೆ ಬರಬಹುದು.
 • ಉಳಿದ ದಿನಗಳಲ್ಲಿ ಬಿಸಿಲಿನ ವಾತಾವರಣ ಇರುತ್ತದೆ.
 • ಆಗಸ್ಟ್ ತಿಂಗಳಲ್ಲಿ 2-4-9-12-19-24 ತಾರೀಕಿನ ದಿನಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗಲಿದೆ.
 • ಉಳಿದ ದಿನಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ.

ತುಮಕೂರು ಜಿಲ್ಲೆ:

 • ಜುಲೈ ತಿಂಗಳ ದಿನಾಂಕ 18-19-20-21  ಹೆಚ್ಚು ಮಳೆಯಾಗಬಹುದು.
 • 25-29-30- 31 ಅಲ್ಪ ಸ್ವಲ್ಪ ಮಳೆಯಾಗುವ ಸಾದ್ಯತೆ ಇದೆ.
 • ಆಗಸ್ಟ್ ತಿಂಗಳಲ್ಲಿ 6 ರಂದು ಸ್ವಲ್ಪ ಮಳೆಯೂ, 12-13-14-15  ತನಕ ಹೆಚ್ಚಿನ ಮಳೆಯೂ, 28-29-30-31 ಅಧಿಕ ಮಳೆಯಾಗುವ ಸಂಭವವಿದೆ.

ಮಂಡ್ಯ ಜಿಲ್ಲೆ:

 • ಜುಲೈ ತಿಂಗಳ 19 ಸಾಧಾರಣ ಮಳೆ 20 ತಾರೀಕಿನಂದು ಹೆಚ್ಚು ಮಳೆಯಾಬಹುದು.
 • 25 ರಂದು ಸಹ ಮಳೆ ಬರುವ ಸಾದ್ಯತೆ ಇದೆ. ಉಳಿದ ದಿನಗಳಲ್ಲಿ ಬಿಸಿಲಿನ ವಾತಾರವಣ ಇರಲಿದೆ.
 • ಆಗಸ್ಟ್ ತಿಂಗಳಿನಲ್ಲಿ 4 ನೇ ತಾರೀಕಿಗೆ ಅಲ್ಪ ಸ್ವಲ್ಪ ಮಳೆಯೂ, 19 ರಂದು ಸ್ವಲ್ಪ ಹೆಚ್ಚಾಗುವ ಮಳೆಯಾಗುವ ಸಾದ್ಯತೆ ಇದೆ.
 • ದಿನಾಂಕ 22-23-24-25 ತನಕ ಅಧಿಕ ಮಳೆ,  ಉಳಿದ ದಿನಗಳಲ್ಲಿ ಕೆಲವು ದಿನ ಮೋಡ ಕವಿದ ವಾತಾವರಣವೂ, ಬಿಸಿಲಿನ ವಾತಾವರಣವೂ ಇರಲಿದೆ.

ಗದಗ ಜಿಲ್ಲೆ:

 • ಜುಲೈ ತಿಂಗಳ ದಿನಾಂಕ 18,19-20-21-22-23-24-25-26-27-28-29 ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. 
 • ಆಗಸ್ಟ್ ತಿಂಗಳಲ್ಲಿ 5-6-7-8-9-10-11-12-13 ತಾರೀಕುಗಳಂದು ಮಳೆ ಸಾಧ್ಯತೆ ಇದೆ.
 • 15-16-17 ರಂದು ಅಲ್ಪ ಸ್ವಲ್ಪ ಬರಬಹುದು. ಇದೆ.25-26-27 ಹೆಚ್ಚು ಮಳೆಯಾಗುವ ಸಂಭವವಿದೆ.
 • 30-31 ಅಲ್ಪ ಸ್ವಲ್ಪ ಮಳೆಯಾಗಲಿದೆ. ಉಳಿದ ದಿನಗಳಲ್ಲಿ ಮೋಡ ಕವಿದ ಆಗಾಗ ಬಿಸಿಲಿನ ವಾತಾವರಣ ಇರಲಿದೆ.

ಹೊಸಪೇಟೆ ಜಿಲ್ಲೆ:

 • ಜುಲೈ ತಿಂಗಳ 18-19-20-21 ಅಧಿಕ ಮಳೆಯಾಗುವ ಸಾಧ್ಯತೆ ಇದೆ. 
 • 22 ರಿಂದ 31 ತನಕ ಹೆಚ್ಚಿನ ದಿನಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ.
 • ಆಗಸ್ಟ್ ತಿಂಗಳಲ್ಲಿ ದಿನಾಂಕ 4 ರಿಂದ 8 ತನಕ ಅಲ್ಪ ಸ್ವಲ್ಪ ಮಳೆಯಾಗಬಹುದು.
 • 11-12-15-16-17 ರಂದು ಹದವಾದ ಮಳೆಯೂ, 29-30 ಹೆಚ್ಚಿನ ಮಳೆಯ ಸಾಧ್ಯತೆ ಇದೆ.

ಬಳ್ಳಾರಿ ಜಿಲ್ಲೆ: 

 • ಜುಲೈ ತಿಂಗಳ 18-19  ಹೆಚ್ಚು ಮಳೆಯೂ,ನಂತರ ಬಿಸಿಲಿನ ವಾತಾವರಣವೂ ಇರಲಿದೆ.
 • ದಿನಾಂಕ 21-26-29 ರಂದು ಅಲ್ಪ ಸ್ವಲ್ಪ ಮಳೆಯಾಗುವ ನಿರೀಕ್ಷೆ ಇದೆ.
 • ಆಗಸ್ಟ್ ತಿಂಗಳಲ್ಲಿ ಕೆಲವು ಆಯ್ದ ಭಾಗಗಳಲ್ಲಿ 21-22-24-28-30-31 ಹೆಚ್ಚು ಮಳೆಯ ಸಾಧ್ಯತೆ ಇದೆ.
 • ಉಳಿದ ದಿನಗಳಲ್ಲಿ ಮೊಡ ಮತ್ತು ಬಿಸಿಲಿನ ವಾತಾವರಣ ಇರುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲೆ:

 • ಇಲ್ಲಿನ ಕೆಲವು ಭಾಗಗಳಲ್ಲಿ  ಜುಲೈ ತಿಂಗಳ ದಿನಾಂಕ 18 ರಿಂದ 31 ತನಕವೂ ಮಳೆ ಇದೆ. 
 • ದಿನಾಂಕ 24-25-26 ರಂದು ಸ್ವಲ್ಪ ಕಡಿಮೆ ಇರಬಹುದು.
 • ಆಗಸ್ಟ್ ತಿಂಗಳಲ್ಲಿ 1 ರಿಂದ 18 ತಾರೀಕಿನ ತನಕ ಹೆಚ್ಚು ಮಳೆಯೂ ನಂತರ 31 ರ ವರೆಗೆ ಆಗಾಗ ಬರುವ ಸಾಧ್ಯತೆ ಇದೆ.

ಗುಲಬರ್ಗಾ ಜಿಲ್ಲೆ:

 • ಇಲ್ಲಿನ ಕೆಲವು ಪ್ರದೇಶಗಳಲ್ಲಿ ಜುಲೈ ತಿಂಗಳ ದಿನಾಂಕ 18 ರಿಂದ 23 ತಾರೀಕಿನ ತನಕ ಮಳೆ ಇರುತ್ತದೆ.
 • 24 ರಿಂದ 31  ತನಕ ಒಂದೆರಡು ದಿನ ಅಲ್ಪ ಸ್ವಲ್ಪ ಮಳೆ ಮತ್ತು ಬಿಸಿಲಿನ ವಾತಾವರಣ ಇರುತ್ತದೆ.
 • ಆಗಸ್ಟ್ ತಿಂಗಳಲ್ಲಿ 2 ರಿಂದ 7 ತಾರೀಕಿನ ತನಕ ಮಳೆ ಇರುತ್ತದೆ.
 • ನಂತರ 13 ತಾರೀಕಿನ ವರೆಗೆ ಬಿಸಿಲಿನ ವಾತಾವರಣ ಆಗಾಗ ಮಳೆಯೂ ಆಗುವ ಸಾಧ್ಯತೆ ಇದೆ.
 • ದಿನಾಂಕ 14 ರಿಂದ 18 ತನಕ ಸ್ವಲ್ಪ ಮಳೆಯ ವಾತಾವರಣ ಇರಲಿದೆ.
 • 26 ರಿಂದ 29 ತನಕ ಹೆಚ್ಚು , ಉಳಿದ ದಿನಗಳಲ್ಲಿ ಬಿಸಿಲು ಮೋಡದ ವಾತಾವರಣ ಇರುತ್ತದೆ.

ರಾಯಚೂರು ಜಿಲ್ಲೆ:

 • ಇಲ್ಲಿನ ಕೆಲವು ಭಾಗಗಳಲ್ಲಿ  ಜುಲೈ ತಿಂಗಳ ದಿನಾಂಕ 18-19-20-21 ಮಳೆಯಾಗುವ ಸಂಭವ ಹೆಚ್ಚು ಇದೆ. 
 • ದಿನಾಂಕ 23-24 ಹೆಚ್ಚಿನ ಮಳೆಯೂ, 26 ರಿಂದ 31 ತನಕ ಹೆಚ್ಚು ಮಳೆಯೂ ಆಗಬಹುದು.
 • ಆಗಸ್ಟ್ ತಿಂಗಳಲ್ಲಿ ದಿನಾಂಕ 1-2-3-4 ರಂದು ಮಳೆ ಆಗುವ ಸಂಭವ ಇದೆ.
 • 6-7 ಹೆಚ್ಚಿನ ಮಳೆಯಾಗಬಹುದು. 15-16 ಸಾಧಾರಣ ಮಳೆಯಾಗಬಹುದು.
 • 23-24 ಸಾಧಾರಣ ಮಳೆಯಾಗುವ ಸಂಭವ ಇದೆ.
 • ತಿಂಗಳಾಂತ್ಯಕ್ಕೆ  ದಿನಾಂಕ 27-28-29-30-31 ತನಕ ಹೆಚ್ಚು ಆಗುವ ಸಾಧ್ಯತೆ ಇದೆ.

ಬೀದರ್ ಜಿಲ್ಲೆ:

 • ದಿನಾಂಕ 18-30 ತನಕ ಕೆಲವು ದಿನ ಹೆಚ್ಚಿನ ಮಳೆ ಕೆಲವು ದಿನ ಕಡಿಮೆ ಆಗಬಹುದು.
 • ಆಗಸ್ಟ್ ತಿಂಗಳಲ್ಲಿ 1 ರಿಂದ 8 ತಾರೀಕಿನ ತನಕ ಕೆಲವು ದಿನ ಹೆಚ್ಚು ಮತ್ತು ಕೆಲವು ದಿನ ಕಡಿಮೆ ಇರುವ ಸಾಧ್ಯತೆ ಇದೆ.
 • 9 ರಿಂದ12 ತನಕ ಬಿಸಿಲಿನ ವಾತಾವರಣ ಇರಲಿದೆ.
 • ದಿನಾಂಕ 14 ರಿಂದ 19 ತನಕ ಹದವಾದ ಮಳೆ ವಾತಾವರಣ ಇರಲಿದೆ. 
 • 23-24 ಮಳೆ ಇದೆ. ತಿಂಗಳಾಂತ್ಯಕ್ಕೆ ದಿನಾಂಕ 26-30 ತನಕ ಮಳೆ ಇರುತ್ತದೆ.

ಮುಂದಿನ ವರ್ಷಗಳಲ್ಲಿ ಮಳೆ ಸ್ಥಿತಿ:

 • ಮಳೆ ಮುಂದಿನ ದಿನಗಳಲ್ಲಿ ನಾವು ಊಹಿಸಿದಂತೆ ಇರುವುದಿಲ್ಲ. ಒಂದೊಂದು ವರ್ಷ ಕಡಿಮೆಯಾಗಬಹುದು.
 • ಹಾಗೆಂದು ಲೆಕ್ಕಕ್ಕಿಂತ ಹೆಚ್ಚು ಬಾರದಿದ್ದರೂ ಹಂಚಿಕೆ ವ್ಯತ್ಯಯವಾಗಿಯೇ ಇರುತ್ತದೆ. 
 • ಹಾಗಾಗಿ ಕೃಷಿಕರೆಲ್ಲರೂ ನೀರಿನ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ.
 • ಭೂ ಹೊದಿಕೆ ನೀರಿನ ಸರಾಗ ಚಲನೆಗೆ ಅನುಕೂಲವಾಗುವ ಸೂಕ್ತ ವ್ಯವಸ್ಥೆಗಳನ್ನು ರೈತರು ಮಾಡಿಕೊಳ್ಳಬೇಕು.
 • ವೃಥಾ ಮಳೆ ನೀರು ಇಂಗಿಸುವಿಕೆ, ಕೃಷಿ ಹೊಂಡಗಳ ಮೂಲಕ ನೀರನ್ನು ಮಣ್ಣಿಗೆ ಕುಡಿಯುವಂತೆ ಮಾಡುವಾಗ ಅದರ ಗುಣಾವಗುಣಗಳನ್ನು ಎರಡೆರಡು  ಬಾರಿ ಯೋಚಿಸಿ ಮಾಡಿಕೊಳ್ಳಿ.
 • ನೀರು ಕುಡಿದ ಮಣ್ಣು ಅದನ್ನು ಎಲ್ಲಿಯಾದರೂ ಹೊರ ಹಾಕಲೇ ಬೇಕು.
 • ಆಗ ಭೂ ಕುಸಿತ, ಮರಮಟ್ಟುಗಳು ಬುಡ ಕಿತ್ತು ಬೀಳುವುದು ಆಗುತ್ತದೆ. 
 • ಮುಂದಿನ ದಿನಗಳಲ್ಲಿ ಮಳೆ ನೀರಿನ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ  ಸಣ್ಣ ಸಣ್ಣ ಗುಡ್ಡಗಳೂ ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
 • ಹಾಗಾಗಿ ಜೌಗು ಜಾಗದಲ್ಲಿ ಮನೆ ಕಟ್ಟುವಾಗ ಹಾಗೆಯೇ ಕೃಷಿ ಮಾಡುವಾಗ ಸಾಧ್ಯವಾದಷ್ಟು ಅಂತರ್ಗತ ಬಸಿಗಾಲುವೆಗಳನ್ನು ಮಾಡಿಸಿಕೊಳ್ಳಿ.

 ನೀರು ಹರಿವಿನ ದಾರಿ ಬದಲಿಸುವುದು, ನೈಸರ್ಗಿಕ ಅರಣ್ಯ, ಸರಕಾರಿ ಭೂ ಒತ್ತುವರಿ ಈ ಬಗ್ಗೆ ಸ್ಥಳೀಯ ಪಂಚಾಯತು, ತಾಲೂಕು ಕಚೇರಿಗಳಿಗೆ ಮಾಹಿತಿ ಕೊಟ್ಟು ಅಲ್ಲಿ ಅಪಾಯಕಾರಿ ಬದಲಾವಣೆಗಳು ಆಗದಂತೆ  ನೋಡಿಕೊಳ್ಳುವುದು ಸಾರ್ವಜನಿಕ ಹಿತ ದೃಷ್ಟಿಯಿಂದ ಅಗತ್ಯವಾಗುತ್ತದೆ.

ಶೊಲಾ ಅರಣ್ಯ
ಶೊಲಾ ಅರಣ್ಯ

ಶೋಲಾ ಅರಣ್ಯಗಳನ್ನು ಒಮ್ಮೆ ನೋಡಿ:

ಕೆಲವು ಘಾಟಿ ಪ್ರದೇಶಗಳಲ್ಲಿ ಎತ್ತರದ ಗುಡ್ಡಗಳ ತುದಿಯಲ್ಲಿ ಹುಲ್ಲು ಮಾತ್ರ ಬೆಳೆದಿರುತ್ತದೆ. ಮರಮಟ್ಟುಗಳು ಇರುವುದಿಲ್ಲ. ಇಲ್ಲಿ ಬಿದ್ದ ಮಳೆನೀರು ಹುಲ್ಲು ಸಸ್ಯಗಳ ಮೂಲಕ ಜಾರಿಕೊಂಡು ಕೆಳಕ್ಕೆ ಇಳಿಯುತ್ತದೆ. ಒಂದು ವೇಳೆ ಅಲ್ಲಿ ಮರಮಟ್ಟುಗಳು, ಕೃಷಿ  ಇದ್ದರೆ ಮಣ್ಣು ನೆನೆದು ಗುಡ್ಡ ಕುಸಿಯುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಪ್ರಕೃತಿಕ ವ್ಯವಸ್ಥೆ ಶೋಲಾ ಅರಣ್ಯಗಳು.  

ಇಲ್ಲಿ ನೀಡಲಾದ ಮಾಹಿತಿಗಳು ಕೆಲವು ಹವಾಮಾನ ಮುನ್ಸೂಚನೆಯನ್ನು ಸಂಗ್ರಹಿಸಲ್ಪಟ್ಟಿದ್ದು, ಇದರಲ್ಲಿ ಕೆಲವು ವ್ಯತ್ಯಯಗಳು ಆಗಲೂಬಹುದು. ಓದುಗರು ಇಂತಹ ವ್ಯತ್ಯಾಸಗಳನ್ನು  ಗುರುತಿಸಿ ತಿಳಿಸುವುದರಿಂದ ಮುಂದಕ್ಕೆ ಹೆಚ್ಚು ಕರಾರುವಕ್ಕಾಗಿ ಮಾಹಿತಿ ಪ್ರಕಟಿಸಲು ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!