ತಿನ್ನಲು ಸಿಗದ ಈ ಹಣ್ಣುಗಳು- ಏನು ಪರಿಹಾರ?

by | Apr 17, 2020 | Pest Control (ಕೀಟ ನಿಯಂತ್ರಣ), Fruit Crop (ಹಣ್ಣಿನ ಬೆಳೆ) | 0 comments

ಒಂದು ವರ್ಷ  ಈ ಹಣ್ಣುಗಳು ತಿನ್ನಲು ಸಿಕ್ಕರೆ ಮತ್ತೆ ಇಲ್ಲವೇ ಇಲ್ಲ. ರಾಶಿ ರಾಶಿ ಹಣ್ಣುಗಳಾಗುತ್ತವೆ. ಆದರೆ ಎಲ್ಲವೂ ಬುಡದಲ್ಲಿ ಬಿದ್ದು, ಹಾಳೇ ಆಗುವುದು. ಇದು ನಮ್ಮ ಬಹುತೇಕ ರೈತರಲ್ಲಿ ಇರುವ ರೋಸ್ ಆಪಲ್ ಹಾಗೂ ವುಡ್ ಆಪಲ್ ಎಂಬ ಬಹು ಬಗೆಯ ಬೇಸಿಗೆ ಹಣ್ಣುಹಂಪಲುಗಳ  ಗತಿ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಧಾನ ಇಲ್ಲಿದೆ.

  • ಇದು ಹಣ್ಣು ನೊಣದಿಂದ ಆಗುವ ತೊಂದರೆ ,
  • ಇದನ್ನು ಪ್ರಾರಂಭಿಕ ಹಂತದಲ್ಲಿ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು ಉಳಿಸಬಹುದು.

Rose apple

  ಯಾವ ನೊಣ:

Fruit fly

  •  ಕಂಚುಕಾರ ನೊಣದ ತರಹದ  ಒಂದು ನೊಣ,  ಕಾಯಿ ಹಂತದಲ್ಲಿದ್ದಾಗ ಪ್ರಾರಂಭಿಸಿ ಸಿಪ್ಪೆಯ ಮೇಲೆ ಚುಚ್ಚಿ ಮೊಟ್ಟೆ ಇಡುತ್ತದೆ.
  • ಹಣ್ಣು ಪಕ್ವವಾಗುವಾಗ ಹಣ್ಣಿನೊಳಗೆಲ್ಲಾ ಹುಳವಿರುತ್ತದೆ.
  • ಹಣ್ಣು ಹಂಪಲು, ತರಕಾರಿ ಬೆಳೆಯಲಾಗುವ ಎಲ್ಲಾ ಕಡೆ  ನೊಣ ಇದೆ.

Red rose apple

  • ಹಣ್ಣು ಇರುವಲ್ಲೆಲ್ಲಾ ಹಣ್ಣು ನೊಣ ಇದೆ ಎನ್ನಬಹುದು.
  • ಮಾರಾಟ, ದಾಸ್ತಾನುರಫ್ತು ಪ್ರತೀಯೊಂದರಲ್ಲೂ  ಹಣ್ಣು ಹಂಪಲುಗಳಿಗೆ ಕೆಟ್ಟ ಹೆಸರು ತಂದ ಕೀಟ ಇದು.

ಮಳೆ ಬರುವುದಕ್ಕೆ  ಮುಂಚೆ ಹಣ್ಣಾದರೆ ಸ್ವಲ್ಪ  ಉಪಟಳ ಕಡಿಮೆ. ಒಂದು ಮಳೆ ಬಂದರೆ ಸಾಕು ಹೇಳತೀರದು.

Fruit fly damage

 ನಿಯಂತ್ರಣ ಹೇಗೆ?

  •    ನಿಯಂತ್ರಣಕ್ಕೆ  ಕೀಟನಾಶಕದ  ಬಳಕೆ  ಆಗುತ್ತದೆ.
  • ಆದರೆ ಅದು ತಿನ್ನುವ ಹಣ್ಣು ಆದ ಕಾರಣ ಇದು ಸೂಕ್ತವಲ್ಲ. 
  • ಅದರ ಬದಲು ಮೋಹಕ ಬಲೆಗಳು ಸಹಕಾರಿ.

Damaged fruit

  • ಮಿಡಿ ಕಚ್ಚುವ ಸಮಯದಲ್ಲಿ ಮರದ ಗೆಲ್ಲಿನಲ್ಲಿ ನೆಲಮಟ್ಟದಿಂದ 4-5 ಅಡಿ ಎತ್ತರಕ್ಕಿರುವಂತೆ ನೆರಳಿನ ಜಾಗದಲ್ಲಿ ನೇತು ಹಾಕಬೇಕು.
  • ಇದಕ್ಕೆ ಹಣ್ಣು ನೊಣದ ಗಂಡು ದುಂಬಿ ಬಂದು ಮುತ್ತುತ್ತದೆ.
  • ಗಂಡು ಇಲ್ಲದೆ ಹೆಣ್ಣೂ ಸಂತಾನಾಭಿವೃದ್ದಿಗೆ ಅನನುಕೂಲವಾಗಿ  ಮೊಟ್ಟೆ ಇಡುವಿಕೆ ನಿಲ್ಲುತ್ತದೆ
  • ಟ್ರಾಪನ್ನು  ನೇತಾಡಿಸಿದಾಗ ಬೀಳುವ ನೊಣಗಳ ಸಂಖ್ಯೆಯನ್ನು  ಗಮನಿಸಿ ತೀವ್ರತೆಯನ್ನು ತಿಳಿಯಬಹುದು.
  •   ಒಂದು ಟ್ರಾಪಿನಲ್ಲಿ ದಿನಕ್ಕೆ 6 ಕ್ಕಿಂತ ಹೆಚ್ಚು ನೊಣಗಳು ಬಿದ್ದರೆ ಅದರ ಸಂಖ್ಯೆ ಹೆಚ್ಚುಇದೆ ಎಂದರ್ಥ.
  •  ಸಾಮಾನ್ಯವಾಗಿ  ಹೂ ಬಿಡುವ  ಸಮಯದಲ್ಲೇ ಇದನ್ನು ಇಟ್ಟರೆ ಗಂಡು ಸಂತತಿ ತುಂಬಾ ಕಡಿಮೆಯಾಗಿ   ಹೆಣ್ಣು ನೊಣ ಮೊಟ್ಟೆ ಇಡದಂತಾಗುತ್ತದೆ.

This method will helpful to control

ನೊಣಗಳು ಎಲ್ಲಿಂದ ಬರುತ್ತವೆ:

  •  ಮೊದಲ ಫಸಲಿಗೆ ಹಣ್ಣು ನೊಣದ ತೊಂದರೆ ಬಹಳ ಕಡಿಮೆ. ನಂತರದ ವರ್ಷ  ಅದು ಪ್ರಾರಂಭವಾಗುತ್ತದೆ.
  • ಹೇಗೆಂದರೆ  ಹಾಳಾಗಿ ಬಿದ್ದ ಕಾಯಿಗಳಲ್ಲಿ ಇರುವ ಹುಳಗಳು  ದುಂಬಿಯಾಗಿ  ಸಂತತಿ ಹೆಚ್ಚಾಗುತ್ತದೆ.
  • ಕೆಲವು ಅಪಕ್ವ ಸ್ಥಿತಿಯಲ್ಲಿ ಉದುರುತ್ತವೆ.
  • ಅದನ್ನು ಯಾಕಾಗಿ ಹೆಕ್ಕುವುದು, ಎಂದು ಅದನ್ನು ಅಲ್ಲೇ ಬಿಡುತ್ತೇವೆ.
  • ಅದರ ಮೂಲಕ ಹಣ್ಣು ನೊಣ ಸಂತಾನಾಭಿವೃದ್ದಿಯಾಗುತ್ತದೆ.
  • ಅವು ಹಾರುವ ಕೀಟಗಳಾಗಿದ್ದು  ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರಿ ಬರುತ್ತವೆ
  • ಬಿದ್ದ ಕಾಯಿಗಳ ಮೂಲಕ  ಸಂತಾನಾಭಿವೃದ್ದಿಯಾಗಿ ಅದು  ನೆಲದಲ್ಲಿ, ಮರದ ಎಡೆ ಸಂದುಗಳಲ್ಲಿ  ವಾಸ್ತವ್ಯವಿರುತ್ತದೆ.
  •  ಹಣ್ಣಾಗುವಾಗ  ಕಾಯಿಯ ಮೇಲೆ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ.
  • ಆದ ಕಾರಣ  ಮೂಲದಲ್ಲೇ  ಹಣ್ಣು ನೊಣದ ಸಂತತಿಯನ್ನು ಹತ್ತಿಕ್ಕಲು ಬುಡದಲ್ಲಿ  ಬೀಳುವ ಯಾವುದೇ ಕಾಯಿಗಳನ್ನು ಅಲ್ಲೇ ಕೊಳೆಯಲು ಬಿಡಬಾರದು.
  • ಅದನ್ನು  ಸುಡಬೇಕು ಇಲ್ಲವೇ ಆಳದಲ್ಲಿ ಹುಗಿಯಬೇಕು.
  • ಇಲ್ಲವೇ ಬಿದ್ದ ಕಾಯಿಗಳನ್ನು ಕೀಟನಾಶಕ ದ್ರಾವಣದಲ್ಲಿ  ಹಾಕಬೇಕು.    

ಟ್ರಾಪು ಹೇಗೆ:

  •  ನೀರಿನ  ಪ್ಲಾಸ್ಟಿಕ್ ಬಾಟಲಿಯನ್ನು  (ಚಿತ್ರದಲ್ಲಿ ತೋರಿದಂತೆ) ಎರಡೂ ಕಡೆ ತೆರೆದು ಮಿಥೇಲ್ ಯುಜಿನಾಲ್ ದ್ರವ ಹಾಕಿದ ಕಾರ್ಡ್ ಬೋರ್ಡ್ ತುಂಡನ್ನು ಬಾಟಲಿಯ  ಮುಚ್ಚಳಕ್ಕೆ ಹಗ್ಗದಿಂದ ಸುರಿದು ಬಾಟಲಿಯ ಒಳಭಾಗದೊಳಗೆ ನೇತಾಡಿಸಬೇಕು.
  • ಈ ಬಿಲ್ಲೆಗೆ  ಲ್ಯೂರ್ ಎನ್ನುತ್ತಾರೆ.
  • ಇದನ್ನು ಹಲವು ಬಯೋ ಕಂಟ್ರೋಲ್ ಲ್ಯಾಬೊರೇಟರಿಗಳವರು ತಯಾರಿಸುತ್ತಾರೆ.
  • ಇದರ ವಾಸನೆಗೆ ಎಲ್ಲಿದ್ದರೂ ಗಂಡು ದುಂಬಿಗಳು ಬರುತ್ತವೆ.

ಫೆರಮೋನು ಟ್ರಾಪುಗಳು ಬೇಕು. ಆದರೆ ಬುಡದ ಸ್ವಚ್ಚತೆ ಅಗತ್ಯವಾಗಿ ಬೇಕೇ ಬೇಕು.  ಇಲ್ಲವಾದರೆ  ಹಣ್ಣು ಬಿಡುವ ಮರಕ್ಕೆ ಸಣ್ಣ ತೂತಿನ ನುಶಿ ಬಲೆಯನ್ನೇ ಹೊದಿಸಬೇಕು.

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!