ಮಳೆ ನೀರು ಕೊಯಿಲು- ಎಲ್ಲಿ ಸಾಧ್ಯ? ಎಲ್ಲಿ ಅಸಾಧ್ಯ?
ಮಳೆ ಎಂದರೆ ಅದು ಪ್ರಕೃತಿಯ ಕೊಡುಗೆ. ಇದು ಇಷ್ಟೇ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಹೆಚ್ಚೂ ಬರಬಹುದು. ಕೆಲವೊಮ್ಮೆ ಕಡಿಮೆಯೂ ಬರಬಹುದು. ಅದನ್ನು ಸಂಗ್ರಹಿಸಲು ಬೇಕಾದ ಪಾತ್ರೆಗಳಿಗೆ ಅಳತೆ ಇಲ್ಲ. ಮಳೆ ನೀರು ಕೊಯಿಲು ಇದು ಒಂದು ಸುಂದರವಾದ ವಾಕ್ಯ ಅಷ್ಟೇ. ಧಾರಾಕಾರವಾಗಿ ಸುರಿಯುವ ಕರಾವಳಿ ಮಲೆನಾಡಿನ ಮಳೆ ನೀರನ್ನು ಸಂಗ್ರಹಿಸಲು ಪಾತ್ರೆ ಗಾತ್ರವನ್ನು ಯಾರಾದರೂ ಅಳತೆ ಮಾಡಿದ್ದುಂಟೇ? ಮಳೆ ನೀರನ್ನು ಹಿಡಿದಿಟ್ಟಾಕ್ಷಣ ಅದು ಎಲ್ಲಾ ಸಮಸ್ಯೆಗೂ ಉತ್ತರವೇ? ಖಂಡಿತವಾಗಿಯೂ ಅಲ್ಲ. ಮಳೆ ನೀರನ್ನು ಸಂಗ್ರಹಿಸುವುದಲ್ಲ….