ಮಳೆ ನೀರು ಕೊಯಿಲು- ಎಲ್ಲಿ ಸಾಧ್ಯ? ಎಲ್ಲಿ ಅಸಾಧ್ಯ?

rain and water storing tank

ಮಳೆ ಎಂದರೆ ಅದು ಪ್ರಕೃತಿಯ ಕೊಡುಗೆ. ಇದು ಇಷ್ಟೇ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಹೆಚ್ಚೂ ಬರಬಹುದು. ಕೆಲವೊಮ್ಮೆ ಕಡಿಮೆಯೂ ಬರಬಹುದು. ಅದನ್ನು ಸಂಗ್ರಹಿಸಲು ಬೇಕಾದ ಪಾತ್ರೆಗಳಿಗೆ ಅಳತೆ ಇಲ್ಲ.

  • ಮಳೆ ನೀರು ಕೊಯಿಲು ಇದು ಒಂದು ಸುಂದರವಾದ ವಾಕ್ಯ ಅಷ್ಟೇ. ಧಾರಾಕಾರವಾಗಿ ಸುರಿಯುವ ಕರಾವಳಿ ಮಲೆನಾಡಿನ ಮಳೆ ನೀರನ್ನು ಸಂಗ್ರಹಿಸಲು ಪಾತ್ರೆ ಗಾತ್ರವನ್ನು ಯಾರಾದರೂ ಅಳತೆ ಮಾಡಿದ್ದುಂಟೇ?
  • ಮಳೆ ನೀರನ್ನು  ಹಿಡಿದಿಟ್ಟಾಕ್ಷಣ ಅದು ಎಲ್ಲಾ ಸಮಸ್ಯೆಗೂ ಉತ್ತರವೇ? ಖಂಡಿತವಾಗಿಯೂ ಅಲ್ಲ.
  • ಮಳೆ ನೀರನ್ನು ಸಂಗ್ರಹಿಸುವುದಲ್ಲ. ಅದನ್ನು ನಿರ್ವಹಣೆ ಮಾಡುವುದು ಇದು ಎಲ್ಲರೂ ಮಾಡಬಹುದಾದ ಕೆಲಸ.
  • ಮಳೆಗಾಲದ ಒಂದು ದಿನ ನಿಮ್ಮ ಮನೆ ಚಾವಣಿಯ ಮೇಲೆ ಬೀಳುವ ಮಳೆಯ ನೀರನ್ನು ನೀವು ಸಾಧ್ಯವಾದರೆ  ಬ್ಯಾರಲ್ ನಲ್ಲಿ ಸಂಗ್ರಹಿಸಲು ಪ್ರಯತ್ನಿಸಿ. ನಂತರ ಹೇಳಿ.
  • ಎಷ್ಟು ಬ್ಯಾರಲ್ ಬೇಕಾಗಬಹುದು ಎಂದು.  ಹಾಗಾದರೆ ನಿಮ್ಮ ಹೊಲದಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವೇ?
  • ಹೆಚ್ಚೇಕೆ ಬರೇ  5 ಸೆಂಟ್ಸ್ ಸ್ಥಳದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸುವುದೂ ಕಷ್ಟ ಸಾಧ್ಯ.
  • ಒಂದು ವೇಳೆ ಸಂಗ್ರಹಿಸುವುದಿದ್ದರೂ ಅದಕ್ಕೆ ತಗಲುವ ಖರ್ಚು ವೆಚ್ಚಗಳು ಎಷ್ಟಾಗಬಹುದು.
  • ಇದೆಲ್ಲದದ ಬದಲು ಮಳೆ ನೀರನ್ನು ಸರಿಯಾಗಿ ನಿರ್ವಹಣೆ ( Management) ಮಾಡಿ.
  • ಅದನ್ನು ಭೂಮಿಗೆ ಸಾಧ್ಯವಾದರೆ ಇಂಗುವಂತೆ ಮಾಡುವುದು ತುಂಬಾ ಸುಲಭ.
Rain water harvest with Expensive tank

ಮಳೆ ಹಂಚಿಕೆ ಮತ್ತು ಪ್ರಮಾಣ:

  • ನಮ್ಮಲ್ಲಿ ಅಧಿಕ ಮಳೆಯಾಗುವ ಪ್ರದೇಶಗಳು (Heavy rain fall area ) ಮತ್ತು ಸಾಧಾರಣ ಮಳೆಯಾಗುವ ಪ್ರದೇಶಗಳು, ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳು ಎಂದು ಮೂರು ಭಾಗಗಳನ್ನು ಮಾಡಲಾಗಿದೆ.
  • ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ವರ್ಷದಲ್ಲಿ ಜೂನ್ ನಿಂದ ಪ್ರಾರಂಭವಾಗಿ ಅಕ್ಟೋಬರ್ ತನಕ ದಿನಂಪ್ರತೀ ಮಳೆ ಬರುವುದು ಸಾಮಾನ್ಯ.
  • ಸಾಧಾರಣ ಮಳೆಯಾಗುವ ಪ್ರದೇಶಗಳಲ್ಲಿ  ಹಾಗಿಲ್ಲ. ವರ್ಷದಲ್ಲಿ ಕೆಲವು ಸಮಯದಲ್ಲಿ ಮಾತ್ರ ಮಳೆ ಬರುವುದು ಮತ್ತು ಪ್ರಮಾಣ ಕಡಿಮೆ ಇರುತ್ತದೆ.
  • ಅತೀ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ವರ್ಷದಲ್ಲಿ ಕೆಲವೇ ಕೆಲವು ಮಳೆ ಬರುತ್ತದೆ.
  • ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಭೂ ರಚನೆ ಮರಳು ಮಿಶ್ರಿತ ಮಣ್ಣಾಗಿರುತ್ತದೆ. ಇಲ್ಲಿ ಎಷ್ಟೇ ಮಳೆ ಬಿದ್ದರೂ ಸಹ ಅದು ಸ್ವಲ್ಪ ಪ್ರಮಾಣ ಮಣ್ಣಿನ ಕಣಗಳ ಮೂಲಕ ತಳಕ್ಕೆ ಇಳಿದು ಮೇಲು ಜಲವಾಗುತ್ತದೆ.
  • ಅದರಲ್ಲೇ ಅಂತರ್ಜಲಕ್ಕೂ (Underground water recharge ) ಸೇರಿಕೊಳ್ಳುತ್ತದೆ.
  • ಬಹುತೇಕ ನೀರು ಹಳ್ಳ ಕೊಳ್ಳ, ನದಿಗಳ ಮೂಲಕ ಸಮುದ್ರ ಸೇರುತ್ತದೆ.
  • ಸಾಧಾರಣ ಮಳೆಯಾಗುವ ಕಡೆ ಮಳೆ ಬಂದಾಗ ನೀರು ಅಲ್ಲಲ್ಲಿ ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತದೆ.
  • ಒಂದು ಮಳೆ ಬಂದರೂ  ವಾರಗಳ ತನಕವೂ ನೀರು ಸಂಗ್ರಹವಾಗಿರುತ್ತದೆ.  ಬಹಳ ನಿಧಾನವಾಗಿ ಮಣ್ಣಿನ ಕಣಗಳ ಮೂಲಕ ನೀರು ಕೆಳಕ್ಕೆ ಇಳಿಯುತ್ತದೆ.
  • ತೀರಾ ಕಡಿಮೆ ಮಳೆ ಬರುವ ಕಡೆಯೂ ಇದೇ ರೀತಿಯಲ್ಲಿ ಮಳೆ ನೀರು ತಗ್ಗು ಪ್ರದೇಶಗಳಲ್ಲಿ ತಿಂಗಳು ತನಕವೂ ಸಂಗ್ರಹವಾಗಿರುತ್ತದೆ.
water storage in les rain fall area

ಎಲ್ಲಿ ಮಳೆ ನೀರು ಸಂಗ್ರಹಿಸಲು ಸಾಧ್ಯ:

  • ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಳೆ ನೀರನ್ನು ಸಂಗ್ರಹಿಸುದಕ್ಕಿಂತ ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗಿ ನಿಂತು ಚಲಿಸುವಂತೆ ಮಾಡುವುದು ಸೂಕ್ತ. 
  • ಹೊಲದಲ್ಲಿ ಹರಿಯುವ ನೀರನ್ನು ಅನುಕೂಲ ಇರುವಲ್ಲಿ ಅಲ್ಲಲ್ಲಿ ನಿಂತು ಚಲಿಸುವಂತೆ ಮಾಡಿದರೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಅದು ಅಂತರ್ ಜಲಕ್ಕೆ  ಸೇರಿಕೊಳ್ಳಬಹುದು.
  • ಮಳೆ ನೀರನ್ನೇ ನೀರಾವರಿಗೆ  ಬಳಕೆ ಮಾಡುವ ಸಾಹಸ ಮಾಡುವುದಿದ್ದರೆ ಅದಕ್ಕೆ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ದಾಸ್ತಾನು ಮಾಡಬಹುದು.
  • ಅಷ್ಟು ಬಂಡವಾಳ ಹೂಡುವ ಸಾಮರ್ಥ್ಯ ಇರುವವರು ಮಾಡಬಹುದು.
  • ನೆಲದಲ್ಲಿ ಹೊಂಡ ಮಾಡಿ ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಸಂಗ್ರಹಿಸದಿದ್ದರೆ, (rain water storage) ಇಲ್ಲಿ ನೀರು ಉಳಿಯುವುದಿಲ್ಲ.
  • ಈ ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಮಳೆ ಮುಗಿದ ತಕ್ಷಣ ಅದನ್ನು ಕಟ್ಟಿ ಹಾಕಿ ನೀರನ್ನು ತಡೆ ಹಿಡಿಯುವುದು ಅತ್ಯುತ್ತಮ. 
  • ಹೊಲಕ್ಕೆ ಅಗಳು ಹಾಕುವ ಸಂಪ್ರದಾಯವನ್ನು ಬಿಟ್ಟ ಕಾರಣ, ಬಾವಿಗಳನ್ನು ಮುಚ್ಚಿ, ಕೊಳವೆ ಬಾವಿ, ಸಾರ್ವಜನಿಕ ವಿತರಣಾ ನೀರನ್ನೇ ಅವಲಂಭಿಸಿರುವ ಕಾರಣ ನೀರನ್ನು ಹಿಡಿದಿಡುವ ಪಾತ್ರೆಗಳು ಕಡಿಮೆಯಾಗಿವೆ.
  • ಹಳ್ಳಿಯ ಜನ ಕುಡಿಯುವ ನೀರಿಗೆ ಬಾವಿಯನ್ನು ಹೊಂದುವುದು, ಹೊಲದ ಬೌಂಡರಿಗಳಿಗೆ ಅಗಳು ಹಾಕುವುದನ್ನು ಮಾಡಿದರೆ ಅಲ್ಲಿ ನೀರು ನಿಂತು ನಿಂತು  ಚಲಿಸುತ್ತದೆ.
  • ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ  ನೆಲದಲ್ಲೇ  ದೊಡ್ಡ ದೊಡ್ಡ ಹೊಂಡಗಳನ್ನು ಮಾಡಿ ಅದಕ್ಕೆ ಮಳೆ ನೀರನ್ನು ತುಂಬಿಸಿ ಸಂಗ್ರಹಿಸಬಹುದು.
  • ಇದು  ಬಹಳ ಸಮಯದ ತನಕ ಇಳಿದು ಹೋಗಿ ನಷ್ಟವಾಗುವುದಿಲ್ಲ.
  • ಇದನ್ನು ಕೃಷಿ ಉಪಯೋಗಕ್ಕೂ ಬಳಕೆ ಮಾಡಬಹುದು. ಈ ನೀರು ಅಂತರ್ಜಲಕ್ಕೂ ಸೇರಿಕೊಳ್ಳಬಹುದು.
  • ತೀರಾ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲೂ ಹೀಗೆ ಮಾಡುವುದರಿಂದ ನೀರಿನ ದಾಸ್ತಾನು ಸಾಧ್ಯವಿದೆ.ಇದರ ಉಪಯೋಗವೂ ಇದೆ.
high-tech water storage tank and aquaponics

ಎಲ್ಲದಕ್ಕಿಂತ ಉತ್ತಮ ವಿಧಾನ ಇದು:

  • ನೀರನ್ನು ಬೇಕಾಬಿಟ್ಟೆ ಬಳಕೆ ಮಾಡುವುದನ್ನು ಕಡಿಮೆ ಮಾಡುವುದೇ ಎಲ್ಲದಕ್ಕಿಂತ ಉತ್ತಮ ವಿಧಾನ. ಇದಕ್ಕೆ ಖರ್ಚು ಇಲ್ಲ.
  • ಇದರಿಂದ ಎಲ್ಲರಿಗೂ ಅನುಕೂಲ.  ಬೆಳೆಗಳಿಗೆ ಎಷ್ಟು ಬೇಕೋ ಅಷ್ಟು ಮಾತ್ರ ನೀರು ಬಳಕೆ ಮಾಡಬೇಕು.
  • ಸಾರ್ವಜನಿಕ ಉಪಯೋಗಕ್ಕೆ ಕೊಳವೆ ಬಾವಿಯ ನೀರನ್ನು ಬಳಕೆ ಮಾಡುವುದನ್ನು ಬಿಟ್ಟು, ಅದಕ್ಕೆ ಸಾರ್ವಜನಿಕ ಕಿಂಡಿ ಅಣೆಕಟ್ಟುಗಳ ಮೂಲಕ ನೀರನ್ನು ಬಳಕೆ ಮಾಡಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ.
  • ಊರು ಉರುಗಳಲ್ಲಿ ಕಿಂಡಿ ಅಣೆಕಟ್ಟುಗಳು, ಕಿರು ಅಣೆಕಟ್ಟುಗಳು(Went dam or check dam) ನಿರ್ಮಾಣವಾಗುತ್ತಿವೆ.
  • ಆದರೆ ಪಂಚಾಯತುಗಳು, ಪುರಸಭೆಗಳು ಕೊಳವೆ ಬಾವಿಯ ನೀರನ್ನೇ ಸಾರ್ವಜನಿಕ  ಉಪಯೋಗಕ್ಕೆ ಬಳಕೆ ಮಾಡುತ್ತಿವೆ.
  • ಕಿಂಡಿ ಅಣೆಕಟ್ಟುಗಳು ಸರಿಯಾದ ನಿರ್ವಹಣೆ ಇಲ್ಲದೆ ಹೋಗುತ್ತಿವೆ. ಇದೆಲ್ಲವನ್ನೂ ಸರಿಪಡಿಸಿದರೆ ಮಳೆ ನೀರು ಕೊಯಿಲಿನ ಅಗತ್ಯ ಇಲ್ಲ.

ಕೊಳವೆ ಬಾವಿಯ ಕೊರೆಯುವಿಕೆ ಹೆಚ್ಚಾಗಿ ಅಂತರ್ಜಲದ ಬಳಕೆ ಹೆಚ್ಚಾಗಿ ನೀರಿನ ಕ್ಷಾಮ ಉಂಟಾಗಿದೆ. ಅನುಕೂಲ ಇರುವ ಕಡೆ ಕೊಳವೆ ಬಾವಿ ನೀರೇ ಬೇಕಾಗದಂತೆ ಮಾಡಲು ಸಾಧ್ಯವಾದರೂ ಅದನ್ನು ಮಾಡಲಾಗುತ್ತಿಲ್ಲ. ಕಾನೂನಾತ್ಮಕವಾಗಿ ಬಾವಿಗೆ ಪ್ರೋತ್ಸಾಹ, ಅಗಳು ಮಾಡಲು ಪ್ರೋತ್ಸಾಹ  ಕೊಟ್ಟು ಅದರಷ್ಟಕ್ಕೆ ಖರ್ಚು ಇಲ್ಲದೆ ಮಳೆ ನೀರ್ವಹಣೆ ಮಾಡುವುದು ಒಳ್ಳೆಯದು.

ನಮ್ಮ ಪೂರ್ವಜರು ಯಾರೂ ಮಳೆ ನೀರನ್ನು ಕೊಯಿಲು ಮಾಡಲು ಹೋಗಲಿಲ್ಲ. ಮಳೆಯಾಶ್ರಯದ ಬೆಳೆ ಬೆಳೆದಿದ್ದರು. ನೀರನ್ನು ಹಿತ ಮಿತವಾಗಿ ಬಳಸಿ ಅದಕ್ಕೆ ಗೌರವವನ್ನು ಕೊಟ್ಟಿದ್ದರು. ಆದ ಕಾರಣ ನಮಗೆ ಈ ತನಕ ನೀರು ಅಲ್ಲಿಂದಲ್ಲಿಗೆ ಉಳಿದಿದೆ. ಇನ್ನು ಮುಂದಿನವರಿಗೆ ಮಳೆ ನೀರು ಕೊಯಿಲು ಮಾಡಿ ನೀರನ್ನು ಉಳಿಸುವುದಕ್ಕಿಂತ ಮಿತ ಬಳಕೆ ಮಾಡಿ ಉಳಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *

error: Content is protected !!