ಮಳೆ ನೀರು ಇಂಗಿಸುತ್ತೀರಾ – ಜಾಗ್ರತೆ ಇರಲಿ !

Rain water to bore well

ಅಧಿಕ ಮಳೆಯಾಗುವ ಕರಾವಳಿ, ಮಲೆನಾಡಿನಲ್ಲಿ  ಜನ ಇತ್ತೀಚಿನ ವರ್ಷಗಳಲ್ಲಿ ಬೋರ್ ವೆಲ್ ರೀಚಾರ್ಜ್ , ವಿಫಲವಾದ ಬೋರ್ ವೆಲ್ ಗಳಿಗೆ ನೀರಿನ ಮರುಪೂರಣ , ಹಾಗೆಯೇ ಅಲ್ಲಲ್ಲಿ ಇಂಗು ಗುಂಡಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಪೋಲಾಗಿ ಸಾಗರ ಸೇರುತ್ತಿರುವ ನೀರಿನ ಮೇಲೆ ಇವರಿಗೆ ಕಾಳಜಿ, ಇದು ಮತ್ತೊಂದು ಕಡೆಯಲ್ಲಿ  ಅನಾಹುತದ ರೂಪದಲ್ಲಿ ಹೊರಹೋಗುತ್ತಿದೆಯೋ ತಿಳಿಯದಾಗಿದೆ. ಒಟ್ಟಿನಲ್ಲಿ ಇತ್ತೀಚೆಗೆ ಪ್ರಾರಂಭವಾದ ಭೂ ಕುಸಿತದಂತಹ ಘೋರ ಸಮಸ್ಯೆಗೆ  ಇಂತಹ ಯಾವುದೋ ಮಾನವ ಕೃತ ಕಾರ್ಯಗಳು ಕಾರಣ ಇರಲೇ ಬೇಕು.
rain water percolation method

  • ಕರಾವಳಿಯ- ಮಲೆನಾಡಿನಲ್ಲಿ ಬರುವ ಮಳೆ ನೀರನ್ನು ಯಾವ ಕೆರೆ, ಹಳ್ಳ, ನದಿಗಳಿಗೂ ಹಿಡಿದಿಡಲು ಸಾಧ್ಯವಾಗದೆ,  ಸೋತು ಅದನ್ನು ಮತ್ತೆ ಸಾಗರಕ್ಕೆ ಬಿಡುತ್ತವೆ.
  • ಆದರೆ ಇಲ್ಲಿನ ಬುದ್ದಿಜೀವಿಗಳಿಗೆ ಅದು ಎಲ್ಲಿಂದ ಬಂತೋ ಜ್ಞಾನ ಗೊತ್ತಿಲ್ಲ, ಅನವಶ್ಯಕ ಪೋಲಾಗುವ ಈ ನೀರಿನ ಮೇಲೆ ಕಣ್ಣು ಬಿತ್ತು.
  • ಅದನ್ನು ಮರಳಿ ಅಂತರ್ಜಲಕ್ಕೆ ಕುಡಿಸಿದರೆ ನೀರಿನ ಕ್ಷಾಮ ಬಾರದು ಎಂದು ಕೆಲವರು ಯಾವುದೋ ಘನವೆತ್ತ ವಿಶ್ವ ವಿಧ್ಯಾನಿಲಯದಲ್ಲಿ ಅಧ್ಯಯನ ಮಾಡಿ ಉನ್ನತ ಪದವಿಯನ್ನು ಗಳಿಸಿಕೊಂಡರು.
  • ಇವರ ಅನುಯಾಯಿಗಳಾದ ಕುರಿ ಮಂದೆಗಳು ಸಹ ತಜ್ಞರಾಗುವ ನಿಟ್ಟಿನಲ್ಲಿ ಜನರಿಗೆ ಈ ಶಿಕ್ಷಣ ಕೊಟದ್ದೇ ಕೊಟ್ಟದ್ದು.
  • ಸರಕಾರ ಅದಕ್ಕೆ ಸಹಾಯ ಧನವನ್ನೂ ಕೊಟ್ಟದ್ದೇ ಕೊಟ್ಟದ್ದು. ಎಲ್ಲೆಲ್ಲೂ ಇಂಗು ಗುಂಡಿಗಳು. ನೀರು ಸಂಗ್ರಹಿಸುವ ಪಾತ್ರೆಗಳು.
  • ಯಾವ ಮನುಷ್ಯ ನೂರು, ಸಾವಿರ ಅಡಿ ಆಳದ ಅಂತರ್ಜಲ ಸ್ಥಿತಿಯನ್ನು ಸ್ಕಾನ್ ಮಾಡಿ ನೋಡಿದ್ದೋ ತಿಳಿಯದು.

ಇಂಗು ಗುಂಡಿ ಮಾತ್ರವಲ್ಲ- ಚಾವಣಿ ನೀರೂ:

  • ಕೆಲವು ಮಹಾ ಬುದ್ಧಿವಂತರು ತಮ್ಮ ಮನೆ ಚಾವಣಿಯ  ನೀರನ್ನು, ಒರತೆ ಬಂದು ಉಕ್ಕುವ ಬಾವಿಗೆ,  ಕೊಳವೆ ಬಾವಿಗೆ ಉಣಿಸಲು ತಯಾರಾದರು.
  • ಕೆಲವರು ತಮ್ಮ ಹೊಲದಲ್ಲಿ ಹರಿಯುವ ನೀರನ್ನೂ ಕೊಳವೆ ಬಾವಿಗೆ  ಬಿಡುವ ಕೆಲಸವನ್ನು ಮಾಡಿದ್ದುಂಟು.
  • ಅದೇ ರೀತಿಯಲ್ಲಿ ನಾವು ಹೀಗೆ ಮಾಡಿದ ನಂತರ ನೀರಿಗೆ ಕ್ಷಾಮ ಆಗಿಲ್ಲ ಎಂದೂ ಬೀಗಿದ್ದುಂಟು.
  • ಸ್ಥಳೀಯಾಡಳಿತ  ವ್ಯವಸ್ಥೆಗಳೂ ಸಹ ಮನೆ ಕಟ್ಟಲು ಪರವಾನಿಗೆ ನೀಡಬೇಕಾದರೆ ನೀರು ಇಂಗಿಸುವ ಕೆಲಸವನ್ನು ಕಡ್ದಾಯ ಗೊಳಿಸಿದರು.
  • ಈ ನೀರನ್ನು ಹಿಡಿದು ಕಟ್ಟಿ ಹಾಕುವ ತಂತ್ರಗಾರಿಕೆ ಪ್ರಕೃತಿಯ ವಿರುದ್ಧ ಮಾನವನ ಹಸ್ತಕ್ಷೇಪವೋ ಎಂಬ ಸಂದೇಹ ಮೂಡಲಾರಂಭಿಸಿದೆ.

 Di not recharge like this

ನೀರು ಇಂಗಲು ಅನುಕೂಲವಾಗುವ ಗದ್ದೆಗಳು ಕಡಿಮೆಯಾಗಿ ತೋಟವಾಗಿದೆ. ಕೆರೆಗಳು ಹೂಳು ತುಂಬಿವೆ ಎಂದೆಲ್ಲಾ ಹೇಳುತ್ತೇವೆ. ವಾಸ್ತವವಾಗಿ ಕೆರೆಯಲ್ಲಿ ಹೂಳು ಇದ್ದರೂ ಒರತೆ ಆಗುತ್ತದೆ. ಗದ್ದೆಯಲ್ಲಿ ನೀರು ಹೆಚ್ಚಾದದ್ದು ಹೊರಗೆ ಹರಿದು ಹೋಗುತ್ತದೆ. ನೈಸರ್ಗಿಕವಾಗಿ ಅಂತರ್ಜಲಕ್ಕೆ ಸೇರುವುದು ಸೇರುತ್ತಲೇ ಇರುತ್ತದೆ. ನಾವು ಮಾತ್ರ ಮಿತಿಗಿಂತ ಹೆಚ್ಚು ನೀರನ್ನು ಶೋಷಣೆ ಮಾಡುತ್ತಿದ್ದೇವೆ. ನೀರಿನ ಮಿತ ಬಳಕೆಯಿಂದ ಮಾತ್ರ ಅಂತರ್ಜಲ ವೃದ್ದಿ ಸಾಧ್ಯ.

ಎಲ್ಲಿಯ ಅಂತರ್ಜಲ- ಎಲ್ಲಿಯ ಮರು ಪೂರಣ:

  • ಅಂತರ್ಜಲಕ್ಕೆ Underground water recharge  ನೀರು ಸಹಜ ಪ್ರಕ್ರಿಯಲ್ಲಿ ತುಂಬುತ್ತಾ ಬಂದುದೇ ಹೊರತು ನಮ್ಮ ಯಾವ ಹಿರಿಯರೂ ಮಳೆ ನೀರನ್ನು ಹಿಡಿದಿಟ್ಟು ತುಂಬಿದ ವರದಿಗಳಿಲ್ಲ.
  • ಅದೂ ಸಹ ಮಳೆಗಾಲದಲ್ಲಿ ಒರತೆ ರೂಪದಲ್ಲಿ ನೀರು ಹೊರ ಕಾರುವ ಮಣ್ಣು ಹೇಗೆ ನೀರು ಕುಡಿಯುತ್ತದೆಯೋ ಗೊತ್ತಿಲ್ಲ.
  • ಇದನ್ನು  ಯಾರೋ ಪ್ರಚಾರ ಗೀಳಿಗಾಗಿ ಹೇಳಿದ್ದರೆ ಅದು ಸರಿ.
  • ಆದರೆ ವಿಧ್ಯಾವಂತರು, ಶಿಕ್ಷಣ  ಉಳ್ಳವರು ಅದನ್ನು ವಿವೇಚನೆ ಇಲ್ಲದೆ ಪಾಲಿಸುವುದು ನೋಡಿದಾಗ ಇದು ಸಮೂಹ ಸುನ್ನಿಯೇ ಅನ್ನಿಸದಿರದು.
  • ಕರಾವಳಿ , ಮಲೆನಾಡಿನ ಗುಡ್ಡ , ಕಾಡು, ಕಣಿವೆ, ಕಲ್ಲು, ಮರಳು,ಬಯಲು ಮುಂತಾದ ವಿಶಿಷ್ಟ ಭೂ ಸ್ವರೂಪ, ನೀರನ್ನು ಒಂದೆಡೆ ಕುಡಿದರೆ ಮತ್ತೊಂದೆಡೆ ಹೊರ ಹಾಕಲೇ ಬೇಕು.

ಬಯಲು ಸೀಮೆಗೆ ಇದರಲ್ಲಿ ತೊಂದರೆ ಇಲ್ಲ:

Store water in low areas

  • ಅತೀ ಕಡಿಮೆ ಮಳೆಯಾಗುವ ಭೂ ಭಾಗಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯ. water recharge in plain region  https://www.google.com/search?q=water+recharge+in+plain+region
  • ಹಾಗೆಯೇ ಅದನ್ನು ಮರಳಿ ಮಣ್ಣಿಗೆ ಕುಡಿಸಲೂ ಸಾಧ್ಯ.
  • ಏಕೆಂದರೆ ಅಲ್ಲಿನ ಭೂ ಸ್ವರೂಪವೇ ಹಾಗೆ ಇರುತ್ತದೆ. ಆಳ ಮಣ್ಣು, ವಿಶಾಲ ಬಯಲು ಪ್ರದೇಶ, ಹಾಗೆಯೇ ನೀರು ಕುಡಿಯಲು ಸಶಕ್ತ ಮಣ್ಣು ಇರುವ ಕಾರಣ ಅಲ್ಲಿ ಬರುವ ಮಳೆ ನೀರನ್ನು ಸಾಧ್ಯವಾದಷ್ಟು ಮಣ್ಣಿಗೆ ಕುಡಿಸಿದರೆ ಅಂತಹ  ತೊಂದರೆ ಆಗದು.
  • ಮಳೆ ಹೆಚ್ಚು ಬಂದಾಗ ಅಲ್ಲಿ ನೀರು ಸಂಗ್ರಹ ಆಗಬೇಕು ಎಂದೇ ಅಲ್ಲಿ ಹಿರಿಯರು ಕೆರೆಗಳನ್ನು ಮಾಡಿದರು.
  • ಎಷ್ಟೇ ಮಳೆಯಾದರೂ ಕೆರೆ ತುಂಬುವುದಷ್ಟೇ ಹೊರತು ಹೊರ ಹೋಗುವುದು ಅಪರೂಪ.
  • ಇಲ್ಲಿ ಚೆನ್ನಾಗಿ ಮಳೆ ಬಂದು ಕೆರೆ ಕೊಳ್ಳ ತುಂಬಿದರೆ, ಆ ವರ್ಷ ಕೊಳವೆ ಬಾವಿಗಳು, ಬಾವಿಗಳು ನೀರು ತುಂಬಿಕೊಳ್ಳುತ್ತವೆ.
  • ಕರಾವಳಿ ಮಲೆನಾಡಿನಲ್ಲಿ  ಎಷ್ಟೇ ಮಳೆ ಬರಲಿ, ಕೆರೆ ಹೊಳೆ, ಎಲ್ಲೆಲ್ಲೂ ಜಲಾವೃತವಾದರೂ ಸಹ ಬೇಸಿಗೆಯಲ್ಲಿ ನೀರಿಗೆ ಬರವಾಗುತ್ತದೆ.
  • ದುಮ್ಮಿಕಿ ಹರಿದು ರೌದ್ರ ಪ್ರವಾಹ ಹೊರುವ ನದಿಗಳೂ ಬೇಸಿಗೆಯಲ್ಲಿ ಆಟದ ಮೈದಾನದಷ್ಟು ಸ್ವಚ್ಚವಾಗುತ್ತವೆ.

ನೀರು ಇಂಗಿಸುವ , ಅಂತರ್ ಜಲವನ್ನು ಶೋಷಣೆ ಮಾಡಿದ ಕಾರ್ಯಕ್ಕೆ ಪ್ರಾಯಶ್ಚಿತ್ತ ಮಾಡುವ ಮನಸ್ಸು ಇದ್ದರೆ ದಯವಿಟ್ಟು ಅದನ್ನು ಬಯಲುನಾಡಿನಲ್ಲಿ ಮಾಡಿ. ಅಲ್ಲಿನ ಜನರಿಗೆ ನೀರು ಉಳಿಸಿಕೊಟ್ಟರೆ ಅವರು ನಮಗೆ ಅನ್ನ ಆಹಾರ ನೀಡಬಲ್ಲರು.
ಇದೆಲ್ಲಾ  ವಾಸ್ತವಿಕ ಸಂಗತಿಗಳು. ಇದು ನಮಗೆಲ್ಲಾ ಗೊತ್ತಿರುವ ಸಂಗತಿಯೂ ಸಹ. ಇಷ್ಟು ಗೊತ್ತಿದ್ದೂ ನಾವು ಯಾರೋ ಹೇಳಿದರೆಂದು ಅದನ್ನು ಅನುಸರಿಸುತ್ತೇವೆ. ನೀರು ಇಂಗುವುದು ಅದರ ಪಾಡಿಗೆ ಆಗುತ್ತಿರುತ್ತದೆ. ಆದರೆ ಅದರ ಪ್ರಕ್ರಿಯೆಗೆ ನಾವು ಅಡ್ಡಿ ಮಾಡುವುದು ಬೇಡ. ಮರ ಮಟ್ಟು ಕಡಿಯುವುದು, ಕಾಡು ಮಾರಾಟ ಮಾರುವುದು ಬೇಡ. ನೀರು ಇದೆ ಎಂದು ಅದರ ಶೋಷಣೆ ಮಾಡುವುದು ಬೇಡ. ಸಹಜ ಪ್ರಕ್ರಿಯೆಯಲ್ಲಿ ನೀರು ಇಂಗಲಿ. ನಿಮ್ಮೂರ ಪಂಚಾಯತು ( ಕರಾವಳಿ ಮಲೆನಾಡು) ನೀರು ಇಂಗುವ ಇಂಗು ಗುಂಡಿ ಮಾಡ ಹೊರಟರೆ ಅದನ್ನು ಪ್ರಶ್ನಿಸಿರಿ. ಇಷ್ಟು  ಮಾಡಿದರೆ ಮುಂದೆ ನಮ್ಮ ಸುತ್ತಮುತ್ತಲೂ ಭೂ ಕುಸಿತ ಆಗುವುದನ್ನು ಈಗಲೇ ತಡೆಯಬಹುದು.
End of the article:
search words: rain water harvest# borewel recharge# roof water harvest # Underground water# water recharge# rain water harvest is it suitable to heavy rainfall area# heavy rain and water harvest#
Farmer’s  media,Kannada agriculture news krushiabhivruddi ,  agriculture News Media ,,Best agriculture  practice , Media in kannada ,  Scientific Agriculture .

Leave a Reply

Your email address will not be published. Required fields are marked *

error: Content is protected !!