6 ವರ್ಷಕ್ಕೆ ಅಡಿಕೆ -ಫಲ – High yield in arecanut

ಅಡಿಕೆ -ಫಲ ಬರುವ ಸಮಯಕ್ಕೇ ತೋಟ ಫ್ರೀ –ಹೇಗೆ?

ಅಡಿಕೆ ತೋಟ ಎಂದರೆ  ನಿರ್ದಿಷ್ಟ ವರ್ಷಕ್ಕೇ ಇಳುವರಿ ಬರಬೇಕು. ಗರಿಷ್ಟ  ಇಳುವರಿ ಸಿಗಬೇಕು. ಅದಕ್ಕೆ ಎಳವೆಯಲ್ಲಿ ಸೂಕ್ತ ಮಿಶ್ರ ಬೆಳೆ ಆರಿಸಬೇಕು. ಅಡಿಕೆ ಬೆಳೆಸುವಾಗ ಪ್ರಾರಂಭದ ಮೂರು ನಾಲ್ಕು ವರ್ಷಗಳ ಕಾಲ ಯಾವ ಮಿಶ್ರ ಬೆಳೆ ಬೆಳೆಯುತ್ತೇವೆಯೋ ಅದನ್ನು ಅವಲಂಭಿಸಿ, ಅದರ ಇಳುವರಿ ನಿರ್ಧಾರವಾಗುತ್ತದೆ. ಎಳೆ ಪ್ರಾಯದಲ್ಲಿ ಮಗುವನ್ನು ಯೋಗ್ಯ ರೀತಿಯಲ್ಲಿ ಸಾಕಿದರೆ ಮಾತ್ರ ಅದರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ. ಇದರಂತೆ ಅಡಿಕೆ, ತೆಂಗು ಮುಂತಾದ  ಧೀರ್ಘಾವಧಿ ಬೆಳೆಗಳೂ ಸಹ. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದ ಇಡೀ ಹೊಲವೇ…

Read more
root puller

ಕಳೆ ಗಿಡಗಳನ್ನು ಬೇರು ಸಮೇತ ತೆಗೆಯಬಹುದಾದ ಸಾಧನ.

    ಕೃಷಿ ಹೊಲದಲ್ಲಿ ಯಾವಾಗಲೂ ಕಳೆ ಸಸ್ಯಗಳು ಸಹಜವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಳೆದಂತೆ ಅದನ್ನು ಬೇರು ಸಹಿತ ತೆಗೆಯಲು ಸಾಧ್ಯವಾಗುವುದಿಲ್ಲ. ಅಂಥಹ ಕಳೆ ಸಸ್ಯಗಳನ್ನು ಬೇರು ಸಹಿತ ಯಾವ ಶ್ರಮದ ಅಗತ್ಯವೂ ಇಲ್ಲದೆ ತೆಗೆಯಬಹುದಾದ ಸಾಧನವನ್ನು  ಸಾಗರದ ಹೆಗಡೆ ಡೈನಾಮಿಕ್ಸ್ ಪ್ರೈ ಲಿಮಿಟೆಡ್ ಇವರು ಅಭಿವೃದ್ಧಿಪಡಿಸಿದ್ದಾರೆ. ಕೆಲವು ಸಾಧಾರಣ ಗಾತ್ರದ ಗಿಡಗಳನ್ನು ಕೀಳಲು ಹಾರೆ, ಗುದ್ದಲಿ ಮುಂತಾದ ಸಾಧನಗಳು ಬೇಕಾಗಿಲ್ಲ. ಇವುಗಳಿಂದ ಕೀಳಿಸುವ ಶ್ರಮಕ್ಕಿಂತ ತುಂಬಾ ಕಡಿಮೆ ಶ್ರಮದಲ್ಲಿ ಯುಕ್ತಿ ಆಧಾರಿತ ಸಾಧನದಲ್ಲಿ ಅದನ್ನ್ನು ತೆಗೆಯಬಹುದು. ಮುಖ್ಯವಾಗಿ…

Read more

ಪ್ರಪಂಚದಲ್ಲೇ ಇದು ಅಧ್ಬುತ– ಮಿಡಿ ಮಾವು.

ಅಪ್ಪೆ ಮಿಡಿ ಒಂದು ಸುಗಂಧಿತ ಮಾವು. ಇದು ಬೆಳೆಯುವುದು ಹೊಳೆ ದಂಡೆಯಲ್ಲಿ. ಅದಕ್ಕಾಗಿ ಈ ಮಾವಿಗೆ ಹೊಳೆಸಾಲು ಅಪ್ಪೆ ಎಂಬ ಹೆಸರು. ಇದು ನಮ್ಮ ರಾಜ್ಯದ ಮಲೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಇದರ ಮಿಡಿಯ ಉಪ್ಪಿನ ಕಾಯಿ ಅಲ್ಲದೆ ಕೆಲವು ಖಾದ್ಯಗಳು ಸರ್ವಶ್ರೇಷ್ಟ. ಮಿಡಿ ಉಪ್ಪಿನ ಕಾಯಿ ಸವಿಯುವುದೇ ಅದರೆ, ಅಪ್ಪೆ ಮಿಡಿಯ ಸವಿಯನ್ನು ಒಮ್ಮೆ ನೋಡಿ. ಅದೂ ಮಲೆನಾಡಿನ ಕೆಲವು ಪಾಕಶಾಸ್ತ್ರಜ್ಞರ ಕೈಯಲ್ಲಿ ಮಾಡಿದ್ದೇ ಆಗಬೇಕು. ಮಾವಿನ ಮಿಡಿ ಒಯ್ದು ಉಪ್ಪಿನ…

Read more
error: Content is protected !!