ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ

ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ?

ಅಡಿಕೆ ಬೆಳೆಗಾರರಲ್ಲಿ ಸಿಗುವ ತ್ಯಾಜ್ಯಗಳಾದ ಸುಲಿದ ಅಡಿಕೆ ಸಿಪ್ಪೆ, ಅದರ ಗರಿ, ಹಾಳೆ ಎಲ್ಲವನ್ನೂ ಒಟ್ಟು ಸೇರಿದರೆ ಅದರ ಪ್ರಮಾಣ, ಆ ಅಡಿಕೆ ತೋಟಕ್ಕೆ ಬೇಕಾಗುವ ಎಲ್ಲಾ ಸಾವಯವ ಅಂಶವನ್ನು  ಪೂರೈಸುವಷ್ಟು. ಆದರೆ ನಮ್ಮಲ್ಲಿ  ಅವುಗಳ ಸದುಪಯೋಗ ಆಗುತ್ತಿಲ್ಲ. ಹೆಚ್ಚಿನ ರೈತರು ಅಡಿಕೆ ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು  ಸಮರ್ಪಕವಾಗಿ ಬಳಕೆ ಮಾಡದೆ ನಷ್ಟ ಮಾಡಿಕೊಳ್ಳುತ್ತಾರೆ. ಇದನ್ನು ಸ್ವಲ್ಪವೂ ನಷ್ಟವಾಗದಂತೆ ಬಳಸಿ ರಕ್ಷಿಸಿದರೆ ಮಣ್ಣು ಫಲವತ್ತಾಗುತ್ತದೆ.ಬೆಳೆ ನಳನಳಿಸುತ್ತದೆ. ನೀವೆಂದಾದರೂ ಉತ್ತರ ಕರ್ನಾಟಕ, ಮಲೆನಾಡಿನ ಕಡೆ ಹೋಗಿದ್ದರೆ ಒಮ್ಮೆ ಅಲ್ಲಿನ…

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
ಬಯೋ ಚಾರ್

ಮಣ್ಣಿನ ಸ್ನೇಹಿತ -ಬಯೋ ಚಾರ್.

ಮಣ್ಣಿಗೆ ಒಂದು ಜೀವ ಚೈತನ್ಯ ಎಂಬುದಿದೆ. ಮಣ್ಣಿನ ಜೀವಾಣುಗಳಿಗೆ ಬದುಕಲು ಸೂಕ್ತವಾದ ವಾತಾವರಣ ಬೇಕು. ಅದೇ ರೀತಿಯಾಗಿ ತೇವಾಂಶ ಭರಿತ ತಂಪಾದ ವಾತಾವರಣವೂ ಬೇಕು. ಇದನ್ನು ಒದಗಿಸಿಕೊಡುವಂತದ್ದೇ  ಬಯೋ ಚಾರ್. ಅರೆ ಸುಟ್ಟ ಕೃಷಿ ತ್ಯಾಜ್ಯಗಳು ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಿ, ಮಣ್ಣಿಗೆ ಜೀವ ಚೈತನ್ಯವನ್ನು ಕೊಡುತ್ತದೆ. ಮಣ್ಣಿಗೆ ಒಂದಷ್ಟು ತರಗೆಲೆ ಹಾಕಿ. ಅದು ಮಣ್ಣಿನಲ್ಲಿರುವ ಅಸಂಖ್ಯಾತ ಜೀವಾಣುಗಳ ಸಹಯೋಗದಿಂದ ಕರಗಿ ಮಣ್ಣಾಗುತ್ತದೆ. ಹೆಚ್ಚೆಂದರೆ  ವರ್ಷ ತನಕ ಇರಬಹುದು. ಅದೇ ರೀತಿಯಲ್ಲಿ ಒಂದು ಕಟ್ಟಿಗೆಯನ್ನು ಹಾಕಿದರೂ…

Read more

ಸಾವಯವ ಅಂಶ ಮತ್ತು ಬೆಳೆ ಉತ್ಪಾದಕತೆ.

ಮಣ್ಣು ಕಲ್ಲು ಖನಿಜಗಳ ಶಿತಿಲತ್ವದಿಂದ ಉಂಟಾದುದು. ಮಣ್ಣಿನಲ್ಲಿ ಹುಟ್ಟಿ ಬೆಳೆದ ಸಸ್ಯ, ಪ್ರಾಣಿಗಳ ತ್ಯಾಜ್ಯಗಳು ಮಣ್ಣಿಗೆ ಸೇರಲ್ಪಟ್ಟು ಅದು ಸಾವಯವ ಅಂಶವನ್ನು ಹೆಚ್ಚಿಸುತ್ತಾ ಬಂದಿದೆ. ಸಾವಯವ ಅಂಶ ಇಲ್ಲದ ವಿನಹ ಮಣ್ಣು ಜೀವಂತಿಕೆಯಲ್ಲಿರುವುದಿಲ್ಲ….. ಏನು ಆಗಿದೆ? ಇತ್ತೀಚಿನ ದಿನಗಳಲ್ಲಿ ಅತೀಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಹಾಗೇಯೇ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅವುಗಳ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದರೂ ಅವುಗಳ ಚಟುವಟಿಕೆಗೆ ಅನುಕೂಲಕರವಾಗಿಲ್ಲ. ಇದರಿಂದಾಗಿ…

Read more
error: Content is protected !!