ಕಬ್ಬು ಬೆಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ ಹೀಗೆ.
ಕೂಳೆ ಬೆಳೆ ಬೆಳೆದರ ಖರ್ಚು ತುಂಬಾ ಕಡಿಮೆಯಾಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಇಳುವರಿ ಚೆನ್ನಾಗಿಯೇ ಬರುತ್ತದೆ. ನಮ್ಮ ದೇಶದಲ್ಲಿ ಕೆಲವು ರೈತರು ಕೂಳೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದರೆ ಬಹಳ ಜನ ಕಡಿಮೆ ಇಳುವರಿ ಪಡೆಯುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಕೂಳೆ ಬೆಳೆಯಲ್ಲಿ ಮೂಲ ಬೆಳೆಗಿಂತ ಹೆಚ್ಚು ಇಳುವರಿ ಪಡೆಯುತ್ತಾರೆ. ನಮಗೂ ಸರಿಯಾದ ಬೇಸಾಯ ಕ್ರ ಮ ಅನುಸರಿಸಿದರೆ 2-3 ಕೂಳೆ ಬೆಳೆಯನ್ನು ಬೆಳೆಸಲು ಸಾಧ್ಯವಿದೆ. ನಮ್ಮಲ್ಲಿ ಸಾಮಾನ್ಯವಾಗಿ ತುಂಬಾ ಸೋಮಾರಿಗಳು ಮಾತ್ರ ಕೂಳೆ…