ಕಬ್ಬು ಬೆಳೆಗೆ ಕ್ಯಾಲ್ಸಿಯಂ ಪೋಷಕ ಅಗತ್ಯ.

ಕ್ಯಾಲ್ಸಿಯಮ್ ಸಮೃಧ ಕಬ್ಬು ಬೆಳೆ

ಕ್ಯಾಲ್ಸಿಯಂ ಎಲ್ಲಾ ಸಸ್ಯಗಳ ಬೆಳವಣಿಗೆ ಮುಖ್ಯವಾದ ಆಹಾರವಾಗಿದೆ. ಇದು ಮಣ್ಣು ಹಾಗು ಬೆಳೆಯಲ್ಲಿನ ಹುಳಿ ಆಂಶವನ್ನು ತಟಸ್ಥ ಮಾಡುವುದು.  ಕಬ್ಬಿನ ಬೆಳೆಗೆ ಕ್ಯಾಲ್ಸಿಯಂ ಅಥವಾ ಸುಣ್ಣವನ್ನು ಹಾಕುವುದರಿಂದ ಇಳುವರಿ ಹೆಚ್ಚುತ್ತದೆ. ಕಬ್ಬಿನ ಗುಣಮಟ್ಟ ಉತ್ತಮವಾಗುತ್ತದೆ.ಮಣ್ಣಿನ ಗುಣವೂ ಉತ್ತಮವಾಗುತ್ತದೆ.

 • ಯಾವುದೇ ಬೆಳೆ ಇರಲಿ ಅದಕ್ಕೆ ಬರೇ ಮುಖ್ಯ ಪೋಷಕಾಂಶಗಳಾದ ಸಾರಜನಕ , ರಂಜಕ ಮತ್ತು ಪೊಟ್ಯಾಶ್ ಮಾತ್ರ ಸಾಲದು.
 • ಈ ಮೂರು ಪೋಷಕಗಳು ಸಮರ್ಪಕವಾಗಿ ಬೆಳೆಗೆ ದೊರೆಯಲು ದ್ವಿತೀಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ಅಂಶ ಬೇಕು. 
 • ಇದೂ ಅಲ್ಲದೆ ಲಘು ಪೋಷಕಾಂಶಗಳಾದ ಸತು, ಬೋರಾನ್, ಮ್ಯಾಂಗನೀಸ್, ಕಾಪರ್, ಫೆರಸ್ ಸಹ ಬೇಕು.
 • ಕಬ್ಬು ಬೆಳೆಯೂ ಇದಕ್ಕೆ  ಹೊರತಲ್ಲ.
 • ಈಗಿನ ಕಾಲದಲ್ಲಿ ರೈತರ  ಮುಂದಿರುವ ಸವಾಲು ಎಂದರೆ ಗರಿಷ್ಟ ಮತ್ತು ಗುಣಮಟ್ಟದ ಇಳುವರಿ ಪಡೆಯುವುದು. 
 • ಅದಕ್ಕಾಗಿ  ಸಸ್ಯ ಬಯಸುವುದನ್ನೆಲ್ಲಾ ಒದಗಿಸಲೇ ಬೇಕು.

ಯಾಕೆ ಕ್ಯಾಲ್ಸಿಯಂ ಬೇಕು:

 • ಮಣ್ಣು ಸಡಿಲವಾಗಿ ಇದ್ದರೆ ಬೇರುಗಳು ಉತ್ತಮವಾಗಿ ಹಬ್ಬುತ್ತದೆ. 
 • ಮಣ್ಣು ಸಡಿಲವಾಗಿರಬೇಕಾದರೆ ಅದರ pH ( ರಸಸಾರ)  ತಟಸ್ಥವಾಗಿರಬೇಕು.
 • ಸಾಮಾನ್ಯವಾಗಿ ಬಯಲು ಸೀಮೆಯ ಕಬ್ಬು ಬೆಳೆಯಲಾಗುವ ಪ್ರದೇಶಗಳ ಮಣ್ಣು ಕ್ಷಾರೀಯವಾಗಿರುತ್ತದೆ.
 • ಮಲೆನಾಡು ಹಾಅಗು ಕರಾವಳಿಯಲ್ಲಿ ಆಮ್ಲೀಯವಾಗಿರುತ್ತದೆ. 
 • ಹೆಚ್ಚಾಗಿ ಬೆಳೆಗಳಿಗೆ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಇತರ ಪೋಷಕಾಂಶ ಪೂರೈಕೆಗಾಗಿ  ಕ್ಯಾಲ್ಸಿಯಂ ಪೋಷಕವನ್ನು ಒಡಬೇಕಾಗುತ್ತದೆ.
 • ಹಿಂದೆ ಕ್ಯಾಲ್ಸಿಯಂ ಪೋಷಕವಾಗಿ ಮಣ್ಣಿಗೆ ಸುಣ್ಣವನ್ನು ಸೇರಿಸುವ ಕ್ರಮವನ್ನು ಅನುಸರಿಸಲಾಗುತ್ತಿತ್ತು.
 • ಈಗ  ಹೆಚ್ಚಿನ ಕಬ್ಬು ಬೆಳೆಗಾರರು ಹನಿ ನೀರಾವರಿಯ ಮೂಲಕ ಪೋಷಕಗಳನ್ನು ಕೊಡುವ  ಕಾರಣ ನೀರಿನಲ್ಲಿ ಕರಗುವ ರೂಪದ ಕ್ಯಾಲ್ಸಿಯಂ ಪೋಷಕವನ್ನು ಕೊಡಬೇಕು.
 • ಕ್ಯಾಲ್ಸಿಯಂ ನೈಟ್ರೇಟ್ ಗೊಬ್ಬರವನ್ನು ಮೊಳಕೆಯಲ್ಲಿ ದಂಟು ಮೂಡುವ ಸಮಯದಲ್ಲಿ ಮತ್ತು 6 ನೇ ತಿಂಗಳಲ್ಲಿ ಎರಡು ಬಾರಿ ಎಕ್ರೆಗೆ 15  ಕಿಲೋ   ಪ್ರಮಾಣದಲ್ಲಿ ಹನಿ ನೀರಾವರಿಯ ಮೂಲಕ ಕೊಡಬೇಕು.
 • ಹೊಲದ ಸಿದ್ದತೆ ಮಾಡುವಾಗ ಉಳುಮೆ ಮಾಡಿ ಮಣ್ಣಿಗೆ ಎಕರೆಗೆ 100 ದಷ್ಟು ಜಿಪ್ಸಮ್ ಸೇರಿಸಬೇಕು.
 • ಬಿತ್ತನೆ ಮಾಡಿ 2 ತಿಂಗಳ ಒಳಗೆ  ಮಣ್ಣಿನ ಪರೀಕ್ಷೆ ಮಾಡಿಸಿ ರಸಸಾರವನ್ನು ಹೊಂದಿಕೊಂಡು ನಂತರ ನೀರಿನಲ್ಲಿ ಕರಗುವ ಕ್ಯಾಲ್ಸಿಯಂ ಪೋಷಕವನ್ನು ಕೊಡಬೇಕು.

ಕಬ್ಬಿನ ಹಣ್ಣಾದ ಎಲೆ ಮತ್ತು ಕಾಕಂಬಿಯನ್ನು ಹೊಲಕ್ಕೆ ಸೇರಿಸಿದಾಗ ಕ್ಯಾಲ್ಸಿಯಂನ ಕೊರತೆ ಕಂಡು ಬರಲಾರದು. ಆದರೂ ಮಣ್ಣಿನ ರಸಸಾರ ಪರೀಕ್ಷೆ ಮಾಡಿಸಿ  ಪೋಷಕವನ್ನು  ಕೊಡಬೇಕು. 

 • ರಂಜಕ, ಸಾರಜನಕ  ಮತ್ತು ಪೊಟ್ಯಾಶಿಯಂ ರಾಸಾಯನಿಕ ಗೊಬ್ಬರದ ಬಳಕೆಯ ಮೇಲೆ ಕ್ಯಾಲ್ಸಿಯಂ ಪೋಷಕ ಅಗತ್ಯ ಬೀಳುತ್ತದೆ.
 • ಮೂಲ ಗೊಬ್ಬರವಾಗಿ ಸೂಪರ್ ಫೋಸ್ಫೇಟ್ ಕೊಡುವಾಗ ಆದರಲ್ಲೇ ಕ್ಯಾಲ್ಸಿಯಂ ಅಂಶ ಇರುತ್ತದೆ.

ಕ್ಯಾಲ್ಸಿಯಂ ನ ಪಾತ್ರ:

 • ಮಣ್ಣಿನಲ್ಲಿ ಕ್ಯಾಲ್ಸಿಯಂ ಸಾಕಷ್ಟು ಇದ್ದಾಗ  ಮಣ್ಣು ಸಡಿಲವಾಗಿರುತ್ತದೆ.
 • ಮಣ್ಣಿನ ರಚನೆ ಸುಧಾರಿಸುತ್ತದೆ.  ಮಣ್ಣು ಸಾಕಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. 
 • ಮಣ್ಣಿನ ರಸ ಸಾರ ಬೆಳೆಯ ಗರಿಷ್ಟ ಇಳುವರಿಗೆ ಅಗತ್ಯವಾದ ಸ್ಥಿತಿ.
 • ಅದಷ್ಟೇ ಅಲ್ಲದೆ ನಾವು ಕೊಡಮಾಡುವ ಪೋಷಕಗಳೂ ಸಹ ಸಸ್ಯಗಳಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಬೇಕಿದ್ದರೆ  ಮಣ್ಣಿನ ರಸಸಾರ ತಟಸ್ಥ ಅಥವಾ ತುಸು ಕ್ಷಾರೀಯ (8 ರಷ್ಟು) ಇರಬೇಕು.
 • ರಸಸಾರ ಸರಿಯಾಗಿದ್ದಾಗ ಜೀವಾಣುಗಳು ಕ್ರಿಯಾತ್ಮಕವಾಗಿರುತ್ತದೆ.
 • ಸಾವಯವ ವಾಸ್ತುಗಳು ಮತ್ತು ಸಾರಜನಕ  ಚಕ್ರ ಉತ್ತಮಗೊಳ್ಳುತ್ತದೆ.

ಹೆಚ್ಚು ಆಗಬಾರದು:

 • ಮಣ್ಣು ಪರೀಕ್ಷೆ ಮಾಡಿಯೇ ಕ್ಯಾಲ್ಸಿಯಂ ಪೋಷಕವನ್ನು ಕೊಡಬೇಕು.
 • ಕ್ಯಾಲ್ಸಿಯಂ ಹೆಚ್ಚಾದರೆ ಪೊಟ್ಯಾಶ್ ಮತ್ತು ಕೆಲವು  ಲಘು ಪೋಷಕಾಂಶಗಳ ಕೊರತೆ ಉಂಟಾಗುವುದು ಇದೆ.
 • ಕೆಲವೊಮ್ಮೆ ಕಬ್ಬಿನ ರಸದ ಗುಣ ಬದಲಾವಣೆ ಆಗುವ ಸಾಧ್ಯತೆ ಇದೆ.
 • ಕ್ಯಾಲ್ಸಿಯಂ ಹೆಚ್ಚಾದರೆ ಅಥವಾ ಕ್ಯಾಲ್ಸಿಯಂ ಒದಗಿಸಿದಾಗ ಸಾರಜನಕ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ.
 • ಆಗ ಅದರ ಕೊರತೆ ಉಂಟಾಗುತ್ತದೆ.
 • ಸಾರಜನಕದ ಕೊರತೆ ಉಂಟಾದಾಗ ಪೊಟ್ಯಾಶಿಯಂ ಕೊರತೆ ಉಂಟಾಗುತ್ತದೆ. 
 • ಹುಳಿ ಮಣ್ಣು ಆಗಿದ್ದಲ್ಲಿ ಮಾತ್ರ ಕ್ಯಾಲ್ಸಿಯಂ (ಡೊಲೋಮೈಟ್ ) ಕೊಡಿ. 
 • ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಅಥವಾ ಸೂಪರ್ ಫೋಸ್ಫೇಟ್ ಕೊಟ್ಟಾಗ ಕ್ಯಾಲ್ಸಿಯಂ ಕೊಡುವ ಅಗತ್ಯ ಕಡಿಮೆ.
 • ಕ್ಯಾಲ್ಸಿಯಂ ಚಲನೆಯುಳ್ಳದ್ದು ಅಲ್ಲ. ಆದ್ದರಿಂದ ಹೊಲಕ್ಕೆ ಎರಚಬೇಕು.

ಕೊರತೆಯ ಲಕ್ಷಣ:

 • ಎಲೆಗಳಲ್ಲಿ ಸಣ್ಣ ಸಣ್ಣ ಚುಕ್ಕೆಗಳು ಉಂಟಾಗುತ್ತದೆ. ಹರಿತ್ತು ಕಡಿಮೆಯಾಗುತ್ತದೆ. ಚುಕೆಗಳು ದೊಡ್ಡದಾಗುತ್ತದೆ.
 • ಸಸಿಗಳು ನಿಸ್ತೇಜವಾಗಿರುತ್ತದೆ. ಸಸಿ ಬೆಳೆದಂತೇ ಅದರ ಶಕ್ತಿ ಕಡಿಮೆಯಾಗುತ್ತದೆ.
 • ಬರ ತಡೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.
 • ಕಬ್ಬಿನ ತೊಗಟೆ ಮೆತ್ತಗಾಗುತ್ತದೆ. ಬೆಳೆವಣಿಗೆಯಾಗುವಾಗ ಅದರಲ್ಲಿ ಸಕ್ಕರೆ ಪ್ರಮಾಣವೂ ಕಡಿಮೆಯಾಗುತ್ತದೆ.
 • ಕೆಲವೊಮ್ಮೆ ಬೆಳವಣಿಗೆಯ ಮುಂಚೆಯೇ ಒಣಗುತ್ತದೆ.
 • ಬೆಲ್ಲ ಮಾಡುವ ಕಬ್ಬಿಗೆ ಕ್ಯಾಲ್ಸಿಯಂ ಅಂಶ ಪ್ರಾಮುಖ್ಯ. ಅದನ್ನು ತಪ್ಪದೇ ಕೊಡಲೇ ಬೇಕು.

ಬಯಲು ನಾಡಿನ ಪ್ರದೇಶದಲ್ಲಿ ಕ್ಯಾಲ್ಸಿಯಂ ಪೋಷಕವನ್ನು ಮಣ್ಣಿನ ಪರೀಕ್ಷೆ  ಮಾಡಿಸಿಯೇ ಹಾಕಬೇಕು. ಮಲೆನಾಡು ಕರಾವಳಿಯಲ್ಲಿ ಸುಣ್ಣ (ಡೊಲೋಮೈಟ್) ಹೆಕ್ಟೇರಿಗೆ 1-2 ಟನ್ ಪ್ರಮಾಣದಲ್ಲಿ ಹೊಲ ಸಿದ್ದತೆ  ಮಾಡುವಾಗಲೇ ಮಣ್ಣಿಗೆ ಸೇರಿಸಿ ಉಳುಮೆ ಮಾಡಬೇಕು. ಇದು ಎಲ್ಲಾ ಭಾಗಕ್ಕೂ ದೊರೆಯುತ್ತದೆ.

Leave a Reply

Your email address will not be published. Required fields are marked *

error: Content is protected !!