ಮಳೆ ಬಂದಿದೆ, ಕೆರೆ ತುಂಬಿದೆ ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ, ಕೆರೆ ತುಂಬಿದೆ  ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ ಕೆರೆ ತುಂಬಿದೆ ನೀರಿಗೇನೂ ಬರವಿಲ್ಲ ಎಂದು ನಂಬಿದ್ದ ನಮ್ಮ ನಂಬಿಕೆ ಈಗ ಹುಸಿಯಾಗಲಾರಂಭಿಸಿದೆ. ಎಲ್ಲೆಲ್ಲೂ ಕೊಳವೆ ಬಾವಿಗಳು ಇಳುವರಿ ಕಡಿಮೆಯಾಗುತ್ತಿದೆ. ವಿಫಲವಾಗುತ್ತಿದೆ. ಕಿಂಡಿ ಅಣೆಕಟ್ಟುಗಳು, ಕಿರು ಜಲವಿದ್ಯುತ್  ಉತ್ಪಾದಿಸುವ ಅಣೆಕಟ್ಟುಗಳಲ್ಲೂ ನೀರಿಲ್ಲದಾಗಿದೆ. ರೈತರು ಹೊಸ ಬಾವಿ ತೋಡಲು ರಿಗ್ ನ ಹಿಂದೆ ತಿರುಗುವಂತಾಗಿದೆ. ಅಂತರ್ಜಲ ಕಳೆದ ಕೆಲವು ವರ್ಷಗಳಿಂದ ರೈತರೂ ಸೇರಿದಂತೆ ಎಲ್ಲರೂ ಕೊಳವೆ ಬಾವಿ ನೀರಿಗೇ ಅವಲಂಬಿತರಾದ ಕಾರಣ ಅಂತರ್ಜಲದ ಮೇಲೆ ಒತ್ತಡ ಹೆಚ್ಚಿದೆ. ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು…

Read more

ಬೋರ್ ವೆಲ್ ಕೊರೆಯುವಾಗ ನೀರು ಎಲ್ಲಿಂದ ಬರುತ್ತದೆ?

ಜನ ಬೋರ್  ವೆಲ್ ಎಂದರೆ ಭೂಮಿಯ ಅಥವಾ ಬಂಡೆಯ ಎಡೆಯಲ್ಲಿ  ಅಂತರ್ಗಾಮೀ ನದಿಗಳೇ ಇದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವಿಕತೆ ಬೇರೆಯೇ ಇದೆ.ಭೂಮಿಯಲ್ಲಿ ಬಂಡೆಯ ಬಿರುಕುಗಳ ಎಡೆಯಲ್ಲಿ ಜಿನುಗುವ ನೀರು ಇರುತ್ತದೆ. ಇದೆಲ್ಲಾ ಒಟ್ಟುಗೂಡುತ್ತಾ ದೊಡ್ದ ಪ್ರಮಾಣದ ನೀರಾಗುತ್ತದೆಯೇ ಹೊರತು “ ದಂಡು” ಅಥವಾ ನದಿ ಇರುವುದಿಲ್ಲ. ಹಾಗಿದ್ದರೆ ಏನಿದೆ ಒಳಗೆ? ನೀವು ಎಲ್ಲಿಯಾದರೂ ಬೆಟ್ಟದ ಬದಿಯಲ್ಲಿ ನೀರು ಹೊರಬರುವ ಚಿಲುಮೆಯನ್ನು ಕಂಡದ್ದಿದೆಯೇ? ಕಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿರಿ. ಅದು ಹೇಗೆ ಹೊರ ಬರುತ್ತದೆ. ಎಲ್ಲಿಂದ ಬರುತ್ತದೆ. ಅದರ…

Read more

ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.

ಎಲ್ಲೆಡೆ ಆಂತರ್ಜಲ ಮಟ್ಟ ಕುಸಿದಿದೆ, ನಾಳೆಯ ನೀರಿಗಾಗಿ ಇಂದು ಚಿಂತನೆ ನಡೆಯುತ್ತಿದೆ.ನೀರಿನ ತೃಷೆ ತಣಿಸಲು ಆಂತರ್ಜಲ ಬಳಕೆ ಪ್ರಾರಂಭ ಆದ ನಂತರ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತು. ಜನ ಮಳೆ ಕಡಿಮೆಯಾಗಿದೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಹೇಳುತ್ತಾ ಜಲ ಜಾಗೃತಿ ಮೂಡಿಸುತ್ತಿದ್ದಾರೆ. ವಾಸ್ತವಾಗಿ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಹಲವು ಇದೆ. ಇದರಲ್ಲಿ ಅತಿಯಾದ ನೀರಿನ ಬಳಕೆ ಒಂದು. ಅಂತರ್ಜಲ ಕೆಳಗಿಳಿಯಲು ಕಾರಣ: ಸರಳವಾಗಿ ಹೇಳಬೇಕೆಂದರೆ ಲೆಕ್ಕಕ್ಕಿಂತ ಮಿತಿ ಮೀರಿ ನೀರಿನ ಬಳಕೆ ಆದುದೇ ಅಂತರ್ಜಲ ಕುಸಿತಕ್ಕೆ ಕಾರಣ….

Read more
error: Content is protected !!