ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.
ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ. ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ. ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ ಬೆಳೆ ಎಷ್ಟು ಇಳುವರಿ ಬಂದರೂ ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ. ಇತ್ತೀಚಿನ…