ಅಡಿಕೆ ಕ್ರಯ ಏರಲಿದೆ- ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ.
ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ….