ಭಾರತದ ಕೃಷಿಗೆ TATA ದವರ ಕೊಡುಗೆ ಏನು ಎಂದರೆ TATA ಉತ್ಪನ್ನಗಳು.RATHAN TATA ಅವರ ಯುಗ ಅಂತ್ಯವಾಗಿದೆ. ಆದರೆ ಅವರ ಕೊಡುಗೆ ಅಜರಾಮರವಾಗಿದೆ. ಕೃಷಿಕರಿಗೂ ಟಾಟಾ ಸಂಸ್ಥೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬೇಕು. Tata Trust ಮೂಲಕ ಭಾತರದ ರೈತರಿಗೆ ಟಾಟಾ ಸಂಸ್ಥೆ ಭಾರೀ ಕೊಡುಗೆಯನ್ನು ಕೊಟ್ಟಿದೆ.
ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ. ರತನ್ ಟಾಟಾ ರಂತಹ ನಿಸ್ವಾರ್ಥ ವ್ಯಕಿಗಳಿಗೆ ಆಯುಸ್ಸು ಕೊಡುವವರು ಚಿರಂಜೀವಿಯಾಗಿ ಬದುಕುವ ಆಯುಸ್ಸು ಕೊಡುವುದಿಲ್ಲ ಎಂದು. ಸುಮ್ಮನೆ ಅನ್ನದಂಡ ಭೂಮಿಗೆ ಭಾರ ಎಂಬಂತಿರುವವರಿಗೆ ಧೀರ್ಘಾಯುಷ್ಯ ಕೊಡುವುದಿದೆ.ಪುರಾಣ ಹೇಳುವ 7 ಮಂದಿ ಚಿರಂಜೀವಿಗಳ ಹೊರತಾಗಿ ಯಾರಿಗೂ ಆಯುಸ್ಸು ಬರೆಯುವವನು ಲೆಕ್ಕಾಚಾರದಲ್ಲೇ ಬರೆದಿದ್ದಾನೆ.
ಭಾರತ ಕೃಷಿಗೆ ಟಾಟಾ ಕೊಡುಗೆ:
- ರತನ್ ಟಾಟ ಇವರು ಕೃಷಿಕರಿಗೆ ಕೊಟ್ಟ ಪ್ರಮುಖ ಕೊಡುಗೆ ಎಂದರೆ ಟಾಟಾ ಕೆಮಿಕಲ್ಸ್ Tata chemicals ಎಂಬ ಉದ್ದಿಮೆ.
- ಇದು ಮೂಲತಹ ಇದು UK ಮೂಲದ ಸಂಸ್ಥೆಯಾಗಿದ್ದು
- ಇದನ್ನು ಟಾಟಾ ಸಮೂಹವು ಖರೀದಿ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಅಗತ್ಯವಿರುವ ರಸಗೊಬ್ಬರ, ಕೀಟನಾಶಕ, ರೋಗನಾಶಕ, ಮುಂತಾದವುಗಳನ್ನು
- ತನ್ನ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರದ Research and development Centre ಮೂಲಕ ಉತ್ಪಾದಿಸಿ ಒದಗಿಸುತ್ತದೆ.
- ಇವರ ತಯಾರಿಕೆಯ ಉತ್ಪನ್ನಗಳು ಇತರ ಬಹುರಾಷ್ಟ್ರೀಯ ಸಂಸ್ಥೆಗಳ ಉತ್ಪನ್ನಕ್ಕಿಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
- ಟಾಟಾ ಕೃಷಿ ರಾಸಾಯನಿಕಗಳು ಎಂದರೆ ಅದು ಸಂಪೂರ್ಣವಾಗಿ ಸಂಶೊಧಿತ ಉತ್ಪನ್ನವಾಗಿರುತ್ತದೆ.
- ತರಹೇವಾರು ತಜ್ಣ ವಿಜ್ಞಾನಿಗಳನ್ನು ನೇಮಿಸಿಕೊಂಡು ಇಲ್ಲಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
- Rallis India ಎಂಬ ಕೃಷಿ ರಾಸಾಯನಿಕ ಕಂಪೆನಿಯೂ ಇವರ ಸಹ ಸಂಸ್ಥೆಯೇ ಆಗಿರುತ್ತದೆ.
- ಟಾಟಾ ಕೆಮಿಕಲ್ಸ್ ಎಂಬುದು ಭಾರತ ಮೂಲದ ಒಂದು ಬಹುರಾಷ್ಟ್ರೀಯ ಸಂಸ್ಥೆಯಾಗಿರುತ್ತದೆ.
- ಕೃಷಿಗೆ ಬೇಕಾಗುವ ನೂರಾರು ಬಗೆಯ ಬೆಳೆ ಸಂರಕ್ಷಕ ಉತ್ಪನ್ನಗಳನ್ನು ಟಾಟಾ ಸಂಸ್ಥೆ ನೀಡಿದೆ.
- ಭಾರತದ ಕೃಷಿಗೆ ಭಾರತೀಯರ ಕೊಡುಗೆ ಇದು.
ಕೃಷಿ ಯಂತ್ರೋಪಕರಣಗಳು:
- ಹಾರೆ ಪಿಕ್ಕಾಸು, ವಿವಿಧ ಟೂಲ್ ಗಳು, ಸುತ್ತಿಗೆ, ಮಚ್ಚು (TATA agri tools) ಹಿಡಿದು, ಟ್ರಾಕ್ಟರ್ ,ಟ್ರಕ್ ವರೆಗೆ ಟಾಟಾ ಸಂಸ್ಥೆಯವರು ರೈತರನ್ನು ತಲುಪಿದ್ದಾರೆ.
- ಅದು ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದೆ. ಟಾಟಾ ಉತ್ಪಾದನೆಯ ಯಾವುದೇ ವಸ್ತುವಿದ್ದರೂ ಅದಕ್ಕೆ ಬೆಲೆಯೂ ಕಡಿಮೆ, ಗುಣಮಟ್ಟವೂ ಅಧಿಕ.
- ಒಂದು ಪುಟ್ಟ ಸ್ಕ್ರೂ ನಿಂದ ಹಿಡಿದು ದೊಡ್ದ ಟ್ರಾಕ್ಟರ್ ,ಟ್ರಕ್ ವರೆಗೆ ಟಾಟಾ ದವರು ಮುಟ್ಟದ ಕ್ಷೇತ್ರವೇ ಇಲ್ಲ.
ಸುಸ್ಥಿರ ಕೃಷಿ ಮತ್ತು ಟಾಟಾ ಸಂಸ್ಥೆ:
- ಭಾತರದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರೆಂದರೆ ರತನ್ ಟಾಟಾ ರವರು.
- ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟು ಮಾಡುವಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದಾರೆ.
- ಟಾಟಾ ಟ್ರಸ್ಟ್ ಮುಖಾಂತರ ಭಾರತೀಯ ರೈತರ ಜೀವನೋಪಾಯ ಸುಧಾರಿಸುವಲ್ಲಿ, ಸುಸ್ಥಿರ ಕೃಷಿ ಪದ್ದತಿಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
- ಕೃಷಿ ವಲಯದಲ್ಲಿ ತಾಂತ್ರಿಕ ಆವಿಷ್ಕಾರಗಳಿಗೆ ಸಲಹೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
- ಇವರ ಕೊಡುಗೆಗಳು ಗ್ರಾಮಿಣ ಅಭಿವೃದ್ದಿ, ಮತ್ತು ಭಾರತದ ಕೃಷಿ ಸಮುದಾಯದ ಯೋಗಕ್ಷೇಮಕ್ಕೆ ಭದ್ದವಾಗಿದೆ.
- ಇವರ ರಾಷ್ಟ್ರೀಯ ಚಿಂತನೆ ವಿಶಾಲ ದೃಷ್ಟಿಕೋನವನ್ನು ಹೊಂದಿದೆ.
- ಭಾರತದ ಸಂಮೃದ್ದಿಯು ಅಲ್ಲಿನ ರೈತರ ಏಳಿಗೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.
- ಭಾರತ ನಿಜವಾಗಿಯೂ ಅಭಿವೃದ್ದಿಯನ್ನು ಹೊಂದಬೇಕಾದರೆ ಗ್ರಾಮೀಣ ಅರ್ಥಿಕತೆ ಬಲವಾಗಬೇಕು.
- ಕೃಷಿ ಕ್ಷೇತ್ರ ಬಲವಾದರೆ ಗ್ರಾಮೀಣ ಅರ್ಥಿಕತೆ ಮೇಲೇರುತ್ತದೆ ಎಂದು ಟಾಟಾ ಟ್ರಸ್ಟ್ ನ ರತನ್ ಟಾಟಾ ಅವರ ಚಿಂತನೆ.
- ಹಳೆಯ ತಂತ್ರಜ್ಞಾನದಿಂದ ನೂತನ ತಂತ್ರಜ್ಞಾಕ್ಕೆ ಭಾರತದ ರೈತರು ಬರಬೇಕು ಎಂಬುದು ಅವರ ಆಶಯವಾಗಿತ್ತು.
- ಅದಕ್ಕಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಹಲವಾರು ಆವಿಷ್ಕಾರಗಳನ್ನು ಮಾಡಿದ್ದಾರೆ( ಉದಾ: ಈರುಳ್ಳಿ ಡ್ರೈಯರ್)
- ನೀರಿನ ನಿರ್ವಹಣೆ, ಭೂ ಬಳಕೆ ಮುಂತಾದ ವಿಷಯಗಳಲ್ಲಿ ಸಂಪನ್ಮೂಲಗಳ ನಾಶ ಆಗಬಾರದು ಎನ್ನುವುದು ಇವರ ಚಿಂತನೆಯಾಗಿತ್ತು.
- ಸುಸ್ಥಿರ ಹಸಿರು ಕ್ರಾಂತಿ ಆಗಬೇಕೆಂದು ಬಯಸಿದವರು.
ಭಾರತದ ರೈತರು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿ ಇಟ್ಟುಕೊಳ್ಳಬೇಕು. ಆದರೆ ಅಲ್ಲಿ ಬಳಸುವ ವಿಧಾನಗಳು ಪರಿಸರಕ್ಕೆ ಪೂರಕವಾಗಿರಬೇಕು. ಅದಕ್ಕಾಗಿಯೇ ಟಾಟಾ ಟ್ರಸ್ಟ್ ಹವಾಮಾನ, ಸ್ಮಾರ್ಟ್ ಕೃಷಿ, ಬೆಳೆ ವೈವಿಧ್ಯ ಮತ್ತು ನೀರಿನ ಸಂರಕ್ಷಣೆ ಯಲ್ಲಿ ತಮ್ಮ ಉಪಕ್ರಮವನ್ನು ಹೂಡಿಕೆ ಮಾಡಿದೆ.
ರತನ್ ಟಾಟಾ ಇನ್ನೂ ಇದ್ದಾರೆ:
ವ್ಯಕ್ತಿಯ ದೇಹ ಇಲ್ಲದಾದರೂ ಅವರ ಹೆಸರು ಅಜರಾಮರವಾಗಿದೆ. ಇದು ಜೀವನದ ಸಾರ್ಥಕ್ಯ. ನಾವು ಜೀವನ ಮಾಡಿ ಬಿಟ್ಟು ಹೋಗುವುದು ಒಳ್ಳೆಯತನವನ್ನು. ರತನ್ ಟಾಟಾ ಅದನ್ನೇ ಮಾಡಿದ್ದಾರೆ. ತನಗಾಗಿ ಏನನ್ನೂ ಮಾಡದೆ ದೇಶಕ್ಕೆ ಎಲ್ಲವನ್ನು ಸಮರ್ಪಿಸಿದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಕೊಟ್ಯಾಂತರ ಜನರಿಗೆ ಪರೋಕ್ಷವಾಗಿ ಬದುಕು ಕೊಟ್ಟ ರತನ್ ಟಾಟಾ ಯಾವತ್ತೂ ಅಜರಾಮರ.
ರತನ್ ಟಾಟಾ ರವರ ಕನಸುಗಳನ್ನು ಅವರ ಉತ್ತರಾಧಿಕಾರಿಗಳು ಸಾಕಾರಗೊಳಿಸಲಿ. ಕೃಷಿಕರಾದ ನಾವು ಟಾಟಾ ರವರನ್ನು ನಿತ್ಯ ಸ್ಮರಿಸೋಣ.