ಇದೇ ಫೆಬ್ರವರಿ 5-6-7-8 ನೆನಪಿರಲಿ.

ದೇಶ ಸುತ್ತಿದರೆ ಕೋಶ ಓದಿದ ಫಲವಂತೆ. ಅದೇ ರೀತಿಯಲ್ಲಿ ರೈತರಿಗೆ  ಜ್ಞಾನ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಭೇಟಿ ಕೊಟ್ಟರೆ ಅದು ಅವರ ವೃತ್ತಿಗೆ ತೊಡಗಿಸಿದ ಬಂಡವಾಳ.  ನಿಮ್ಮ ಜ್ಞಾನ ಬಂಡವಾಳವನ್ನು ಹೆಚ್ಚಿಸಬೇಕೆಂಬ ಹಂಬಲ ಇದ್ದಲ್ಲಿ ಇದೇ ತಿಂಗಳ 5 -6-7 ಮತ್ತು 8 ರಂದು  ಹೇಸರಘಟ್ಟಕ್ಕೆ ಭೇಟಿ ಕೊಡಿ. ಸಂಸ್ಥೆಯ ನಿರ್ಧೇಶಕರಾದ ಡಾ| ಎಂ ಆರ್ ದಿನೇಶ್ ರವರು  ನಿಮ್ಮನ್ನು ಆಮಂತ್ರಿಸುತ್ತಾರೆ.

 
 

Click here to watch video of IIHR

 
 

  • ನಮ್ಮೆಲ್ಲರ ಪುಣ್ಯವೋ ಏನೋ ಎಂಬಂತೆ  ನಮ್ಮದೇ ರಾಜ್ಯದ ಬೆಂಗಳೂರಿನ ಹೇಸರಘ್ಟದಲ್ಲಿ 1967 ರಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸ್ಥಾಪನೆಯಾಯಿತು.
  • ಇದರ ಫಲವಾಗಿ ನಾವು ಇಂದು ತರಕಾರಿ ಹಣ್ಣು ಹಂಪಲುಗಳನ್ನು ಯತೇಚ್ಚವಾಗಿ ಬೆಳೆಯುವಂತಾಗಿದೆ, ಬಳಸುವಂತಾಗಿದೆ.

 

Click to WhatsApp and  build  your website now!

  • ರಾಜ್ಯ, ದೇಶದ ಬಹುತೇಕ ರೈತರ ಹೊಲದಲ್ಲಿ  ಬೆಳೆಯಲ್ಪಡುತ್ತಿರುವ ಅರ್ಕಾ ಹೆಸರಿನ ತರಕಾರಿಗಳು, ಹಣ್ಣು ಹಂಪಲುಗಳು ಈ ಕೇಂದ್ರದ ಕೊಡುಗೆ.

 ರಾಷ್ಟ್ರ ಮಟ್ಟದ ತೋಟಗಾರಿಕಾ ಮೇಳ:

ಸಂಸ್ಥೆಯ ನಿರ್ಧೇಶಕರು ಡಾ|| ಎಂ ಆರ್ ದಿನೇಶ್ ಮತ್ತು ತಳಿ ವಿಜ್ಞಾನಿ ಎ ಪಿ ಸದಾಶಿವ ಇವರು ಕೇಂದ್ರದ ಸಾಧನೆಯನ್ನು ವಿವರಿಸುತ್ತಿರುವುದು.
  • IIHR ಇದು ಭಾರತ ದೇಶದ ಏಕೈಕ ತೋಟಗಾರಿಕಾ ಬೆಳೆಗಳ ಸಂಶೊಧನಾ ಸಂಸ್ಥೆ.
  • ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಧಿನದಲ್ಲಿ ಇದು ಕೆಲಸ ಮಾಡುತ್ತದೆ.
  • ಕೇಂದ್ರೀಯ ಸಂಶೋಧನಾ ಸಂಸ್ಥೆಯಾಗಿದ್ದು, ದೇಶದ ಬೇರೆ ಬೇರೆ ಹವಾಮಾನ ಮತ್ತು ಪ್ರಾದೇಶಿಕತೆಗೆ  ಹೊಂದುವ ತಳಿ ಮತ್ತು ಬೇಸಾಯ ಶಾಸ್ತ್ರಗಳ ಕುರಿತು ಸಂಶೋಧನೆ ನಡೆಯುತ್ತದೆ.
ಸಂಸ್ಥೆಯ ನಿರ್ಧೇಶಕ ಡಾ| ಎಂ ಆರ್ ದಿನೇಶ್.
  • ಇಲ್ಲಿನ ತಂತ್ರಜ್ಞಾನಗಳು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕವೂ ಇರುತ್ತದೆ.
  • ಇವರೆಲ್ಲರಿಗೂ ತಂತ್ರಜ್ಞಾನದ ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಇದು ರಾಷ್ಟ್ರೀಯ ತೋಟಗಾರಿಕಾ ಮೇಳ ಎನ್ನಿಸುತ್ತದೆ.
ರಾಷ್ಟ್ರ ಅಂತರ ರಾಷ್ಟ್ರೀಯ ಖ್ಯಾತಿಯ ಅರ್ಕಾ ರಕ್ಷಕ್ ತಳಿ- ಇದು ಈ ಸಂಸ್ಥೆಯ ಕೊಡುಗೆ. ಗಿಡವೊಂದರ 15 ಕಿಲೋ ತನಕ ಇಳುವರಿ ಪಡೆದವರಿದ್ದಾರೆ.

ಕೃಷಿ ಉದ್ದಿಮೆಯಾಗಬೇಕು:

  • ಭಾರತ ಸರಕಾರವು 2022 ರ ಸುಮಾರಿಗೆ ದೇಶದ  ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಮಾಡಿದೆ.
  • ಇದನ್ನು ಸಾಧಿಸಲಿಕ್ಕಾಗಿ, ದೇಶದ ಎಲ್ಲಾ ಸಂಶೋಧನಾ ಸಂಸ್ಥೆಗಳು ಮತ್ತು ನೀತಿ ನಿಯಮಾವಳಿ ರೂಪಕರು ಕಟಿಬದ್ಧರಾಗಿದ್ದಾರೆ.
  • ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ಸಾಂಪ್ರದಾಯಿಕ ಕೃಷಿ ಕ್ರಮದಲ್ಲಿ ಕಷ್ಟವಾಗಬಹುದು.
  • ಕೃಷಿ ಪೂರಕ ವೃತ್ತಿಗಳಲ್ಲಿ ರೈತರನ್ನು ತೊಡಗಿಸಿಕೊಂಡು ಕೃಷಿಯನ್ನು ಉದ್ದಿಮೆಯಾಗಿ ಮಾರ್ಪಡಿಸುವರೇ ಸಂಶೊಧನೆಗಳು ನಡೆಯುತ್ತಿವೆ.
  • ಹಣ್ಣು, ತರಕಾರಿ ಸಂಸ್ಕರಣೆ, ರಪ್ತು, ಮೌಲ್ಯವರ್ಧನೆ ಮುಂತಾದವುಗಳ ಮೂಲಕ ರೈತರು ತಮ್ಮ ಆದಾಯ ದ್ವುಗುಣಗೊಳಿಸಬಹುದು.
  • ಅದು ಕೃಷಿ ಉದ್ದಿಮೆಯಾಗಿ ಬೆಳೆಯಬೇಕು ಎಂಬ ಉದ್ದೇಶ ಈ ಬಾರಿಯ ತೋಟಗಾರಿಕಾ ಮೇಳದ ಧ್ಯೇಯ ಎನ್ನುತ್ತಾರೆ ಸಂಸ್ಥೆಯ ನಿರ್ಧೇಶಕರಾದ ಶ್ರೀ ಎಂ ಆರ್ ದಿನೇಶ್ ರವರು.
ರಾಷ್ಟ್ರೀಯ ಖ್ಯಾತಿಯ ಮಲ್ಲಿಕಾ ಮಾವು ಇಲ್ಲಿನ ಕೊಡುಗೆ

  ತೋಟಗಾರಿಕಾ ಮೇಳದ ಉದ್ದೇಶ:

  • ಹೂವಿನ ಮಾಲೆ ಎಷ್ಟು ಇದ್ದರೇನಂತೆ ಮುಡಿಯುವ ಆಸಕ್ತರು ಬೇಕಲ್ಲವೇ?
  • ಅದೇ ರೀತಿ ನಮ್ಮ ದೇಶದಲ್ಲಿ ಹಲವಾರು ಸಂಶೋಧನಾ ಕೇಂದ್ರಗಳು ಮಾಡಿದ ಕೆಲಸಗಳು ಗೊತ್ತಿದ್ದವರಿಗೆ ಮಾತ್ರ ಗೊತ್ತಿದೆ.
  • ಅದು ತಿಳಿಯಬೇಕಾದರೆ ಅಲ್ಲಿಗೆ ಪ್ರವೇಶ ಮಾಡಲು ಮುಕ್ತ ಅವಕಾಶ ಬೇಕು.
  • ಈ ನಿಟ್ಟಿನಲ್ಲಿ ಎಲ್ಲರೂ ಬರಬೇಕು, ಇಲ್ಲಿನ ತಂತ್ರಜ್ಞಾನ ವನ್ನು ಅರಿಯಬೇಕು ಅಳವಡಿಸಬೇಕು ಎಂಬ ಉದ್ದೇಶದಿಂದ ಈ ತೋಟಗಾರಿಕಾ ಮೇಳ ಇರುತ್ತದೆ.
  • ಒಬ್ಬ ಕೃಷಿಕ ಯಾವುದೇ ದಿನ ಭೇಟಿ ಕೊಟ್ಟಾಗ ದೊರೆಯುವ ಮಾಹಿತಿಗಿಂತ ಈ ದಿನಳಲ್ಲಿ ದೊರೆಯುವ ಮಾಹಿತಿ ಅಪರಿಮಿತ.
ರೆಡ್ ಲೇಡಿ ತಳಿಗೆ ಸಮನಾದ ಸೂರ್ಯ ತಳಿ ಇಲ್ಲಿನ ಕೊಡುಗೆ

ಏನು ನೋಡಲಿಕ್ಕಿದೆ:

  • ಟೊಮಾಟೋ, ಹೀರೆ, ಬದನೆ, ಹರಿವೆ ಮುಂತಾದ 100 ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ ಅದಕ್ಕೆ ಅಳವಡಿಸಲಾದ ನೂತನ ತಾಂತ್ರಿಕತೆ.
  • ಕೇಂದ್ರದಲ್ಲಿ ಬಿಡುಗಡೆಯಾದ 100 ಕ್ಕೂ ಹೆಚ್ಚಿನ ಅಲಂಕಾರಿಕ ಬೆಳೆಗಳ ಪ್ರಾತ್ಯಕ್ಷಿಕೆ.
  • ಔಷದೀಯ ಸಸ್ಯಗಳ ಬೆಳೆ ವಿಧಾನ ಗಳ ಪ್ರಾತ್ಯಕ್ಷಿಕೆ.
  • ಹಣ್ಣಿನ ಬೆಳೆಗಳಾದ ಸೀಡ್ ಲೆಸ್ ಕಪ್ಪು ದ್ರಾಕ್ಷಿ ಮತ್ತು ಹಸಿರು ದ್ರಾಕ್ಷಿ  ಬೆಳೆಯ ವಿವಿಧ ತಳಿ ಮತ್ತು ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ.
  • 500 ಕ್ಕೂ ಮಿಕ್ಕಿದ ಮಾವಿನ ತಳಿಗಳ ಪ್ರಾತ್ಯಕ್ಷಿಕೆ.
  • 300 ಕ್ಕೂ ಹೆಚ್ಚಿನ ಹಲಸಿನ ತಳಿಗಳ ಪ್ರಾತ್ಯಕ್ಷಿಕೆ.

  • 20 ಕ್ಕೂ ಹೆಚ್ಚು ಸೀಬೆ ತಳಿಗಳ ಪ್ರಾತ್ಯಕ್ಷಿಕೆ.
  • ಚಕೋತಾ, ಪ್ಯಾಶನ್ ಪ್ರುಟ್, ಪಪಾಯ, ಬಾಳೆ, ಸಪೋಟಾ, ಲಿಂಬೆ ಹಣ್ಣಿನ ಬೆಳೆ ಪ್ರಾತ್ಯಕ್ಷಿಕೆ.
  • ಬೀಜ ಉತ್ಪಾದನೆ ಮತ್ತು ಸಸ್ಯೋತ್ಪಾದನೆ ತಾಂತ್ರಿಕತೆ.
  • ಹಣ್ಣು ತರಕಾರಿಗಳ ಸಂಸ್ಕರಣೆ ಮತ್ತು ಮೌಲ್ಯವರ್ದನೆ
  • ಅಣಬೆ ಬೇಸಾಯ ಮುಂತಾದ ನೋಡಿ ಮುಗಿಯದಷ್ಟು ಮಾಹಿತಿಗಳ ಆಗರ ಇಲ್ಲಿನ ಹೊಲದಲ್ಲಿರುತ್ತದೆ.
  • ಮೇಳದಲ್ಲಿ ಭಾಗವಹಿಸುವ ನೂರಾರು ಮಳಿಗೆಗಳಲ್ಲಿ ಸಾಕಷ್ಟು ಮಾಹಿತಿಗಳನ್ನು ರೈತರು ಪಡೆಯಬಹುದು.

ಕೇಂದ್ರದ ಹೆಗ್ಗುರುತು:

  • ಈ ಕೇಂದ್ರದ ಉದ್ದೇಶ ರೈತರಿಗೆ  ರೋಗ ನಿರೋಧಕ ಶಕ್ತಿ ಉಳ್ಳ ತಳಿಗಳನ್ನು ದೊರೆಯುವಂತೆ  ಮಾಡುವುದು.
  • ರೈತರು ರೋಗ, ಕೀಟ ಬಾಧೆಗಳಿಂದ ಕಳೆದುಕೊಳ್ಳುವ ಬೆಳೆ ನಷ್ಟವನ್ನು ಖರ್ಚನ್ನು  ಉಳಿಸುವ ನಿಟ್ಟಿನಲ್ಲಿ  ಇಲ್ಲಿ ರೋಗ ನಿರೋಧಕ ಗುಣ, ಹವಾಮಾನ ಹೊಂದಾಣಿಕೆ  ಗುಣಗಳನ್ನು ಆದ್ಯತೆಯಾಗಿಟ್ಟುಕೊಂಡು ಸಂಶೋಧನೆ ನಡೆಯುತ್ತದೆ.

  • ಈ ಕೇಂದ್ರದಲ್ಲಿ ಇತನಕ ಒಟ್ಟು 131 ತರಕಾರಿ ಬೆಳೆ,34 ಹಣ್ಣಿನ ಬೆಳೆ 111 ಅಲಂಕಾರಿಕ ಸಸ್ಯಗಳು (ವಾಣಿಜ್ಯ ಪುಷ್ಪ ಬೆಳೆಗಳು), ಮತ್ತು 13 ಔಷಧೀಯ ಸಸ್ಯಗಳ ತಳಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಅದರ ಪಾತ್ಯಕ್ಷಿಕೆಗಳನ್ನು  ರೈತರು ಇಲ್ಲಿ ನೊಡಬಹುದಾಗಿದೆ.
  • ಈಗ 13 ಹಣ್ಣಿನ ಬೆಳೆ,  26  ತರಕಾರಿ ಬೆಳೆ,10 ಅಲಂಕಾರಿಕ ಬೆಳೆಗಳು, ಮತ್ತು 5 ಔಷದೀಯ ಸಸ್ಯಗಳು ಬಿಡುಗಡೆಗೆ ಸಜ್ಜಾಗಿವೆ.
  • ಬೆಳೆ ಉತ್ಪಾದನೆಗೆ  ಬೇಕಾಗುವ ಪೋಷಕಾಂಶ, ಸಸ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ 145 ತಂತ್ರಜ್ಞಾನಗಳನ್ನು  ಕೊಟ್ಟ ದೇಶದ ಏಕೈಕ ಸಂಶೋಧನ ಸಂಸ್ಥೆ.

ಇಲ್ಲಿ ಸಂಶೋದನೆಗೊಂಡು ಸಾಬೀತಾದ ಸುಮಾರು 80 ತಂತ್ರಜ್ಞಾನಗಳು ಈಗ ವಾಣಿಜ್ಯೀಕರಣಗೊಂಡು ದೇಶದ ಮೂಲೆ  ಮೂಲೆಯಲ್ಲಿ ಸುಮಾರು 400 ಜನ ಇದರ ವಾಣಿಜ್ಯ ಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಉತ್ಪನ್ನ ಒದಗಿಸುತ್ತಿದ್ದಾರೆ.

ಹೇಗೆ  ತಲುಪುವುದು:

  • ಬೆಂಗಳೂರಿನಿಂದ ಹೇಸರಘಟ್ಟ ತಲುಪಲು ಸಾಕಷ್ಟು ಬಸ್ ಸೌಕರ್ಯ ಇರುತ್ತದೆ. 253 AB C D ಎಲ್ಲಾ ಬಸ್ ಗಳೂ ಇಲ್ಲಿಗೆ ತಲುಪುತ್ತವೆ.
  • ಯಲಹಂಕ ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು.
  • 8 ಮೈಲ್ ಮೂಲಕವೂ ಇಲ್ಲಿಗೆ ಬಸ್ ಸೌಕರ್ಯ ಇರುತ್ತದೆ. ಎಂಬುದಾಗಿ  ಸಂಸ್ಥೆಯ ಪ್ರಧಾನ ವಿಜ್ಞಾನಿ, ಮಾಧ್ಯಮ ಅಧಿಕಾರಿ ಶ್ರೀ ಬಿ ನಾರಾಯಣ ಸ್ವಾಮಿ ತಿಳಿಸುತ್ತಾರೆ.

 ರೈತರೇ ನೀವು ಇನ್ನೂ ಈ ಸಂಸ್ಥೆಗೆ ಭೇಟಿ ಕೊಟ್ಟಿಲ್ಲವೇ? ಈ ಬಾರಿ ಅದನ್ನು ಮಿಸ್ ಮಾಡಿಕೊಳ್ಳಬೇಡಿ. ಹೋದವರು ಬರೇ ಸ್ಟಾಲು ವೀಕ್ಷಿಸಿ ಹಿಂದಿರುಗದಿರಿ. ಬೆಳೆ  ಪ್ರಾತ್ಯಕ್ಷಿಕೆ ಮತ್ತು ಇಲ್ಲಿನ ವಿಶಾಲ ಸುಮಾರು 600  ಎಕ್ರೆ ಹೊಲವನ್ನು ಸುತ್ತಾಡಿ ಬನ್ನಿ.

 
 
 
 

3 thoughts on “ಇದೇ ಫೆಬ್ರವರಿ 5-6-7-8 ನೆನಪಿರಲಿ.

  1. ನಾವು ಯಾದಗಿರಿ ಜಿಲ್ಲೆಯವರು ಬಾಗವಹಿಸಬಹುದೆ ಹಾಗೂ ಸಮಯ ತಿಳಿಸಿ

  2. ನಾಲ್ಕು ದಿನ ಬಾಗವಹಿಸಬೇಕಾ ಏನು ಒಂದು ದಿನ ಬಾಗವಹಿಸಿದರೆ ಆಗುತ್ತಾ ಸರ್

Leave a Reply

Your email address will not be published. Required fields are marked *

error: Content is protected !!