ಚಾಲಿ ಅಡಿಕೆ ಧಾರಣೆ ನಿರೀಕ್ಷೆಯಂತೆ ಈ ತಿಂಗಳಾಂತ್ಯದ ಒಳಗೆ ಕಿಲೋ.500 ತಲುಪುವುದು ಬಹುತೇಕ ಖಾತ್ರಿಯಾದಂತಾಗಿದೆ. ಜೊತೆಗೆ ಕೆಂಪಡಿಕೆಯೂ ಏರಿಕೆ ಕಂಡಿದೆ. ಅದರೆ ನಿರೀಕ್ಷೆ ಮಾತ್ರ 60,000 ದ ವರೆಗೆ ಎಂದಿತ್ತು. ಅದಕ್ಕೆ ಪೂರಕವಾಗಿ ಪರಿಸ್ಥಿತಿಯೂ ಇತ್ತು. ಆದರೆ ದರ ಆ ಮಟ್ಟಕ್ಕೆ ಏರಿಕೆಯಾಗಲಿಲ್ಲ. 49,000 ದ ಆಸುಪಾಸಿನಲ್ಲಿದ್ದುದು, 52,000 -53,000 ಕ್ಕೆ ಏರಿಕೆಯಾಯಿತಷ್ಟೇ. ಕೆಂಪಡಿಕೆಯ ಮಾರುಕಟ್ಟೆಯನ್ನು ಚಾಲಿ ನುಂಗಿದಂತಾಗಿದೆ.
ಸಾಮಾನ್ಯವಾಗಿ ಹಿಂದೆ ಆಗಸ್ಟ್ ತಿಂಗಳಿನಿಂದ ಸಪ್ಟೆಂಬರ್ ತಿಂಗಳ ನವರಾತ್ರೆ ವರೆಗೆ ಅಡಿಕೆ ತೇಜಿ ಆಗುವುದು ಮಾಮೂಲು. ಹಿರಿಯ ಬೆಳೆಗಾರರು ಹೇಳುವುದುಂಟು, ಉತ್ತರ ಭಾರತದ ಖರೀದಿದಾರರು ಇಲ್ಲಿಗೆ ಬಂದು ಬೇಕಾದಷ್ಟು ಖರೀದಿ ಮಾಡಿಕೊಂಡು ನವರಾತ್ರೆ ಹಬ್ಬಕ್ಕೆ ಊರಿಗೆ ಹೋದರೆ ಮತ್ತೆ ಒಂದು ತಿಂಗಳ ನಂತರ ಬರುವುದು ಎಂದು. ಅದೆಲ್ಲಾ ಹಿಂದಿನ ಕಾಲದಲ್ಲಿ. ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಅಡಿಕೆ ಖರೀದಿ ಮಾಡುವವನ ಮುಖ ಸಹ ಕಳುಹಿಸುವವರು ನೋಡಿರುವುದು ಕಡಿಮೆ. ಅವರು ಅಲ್ಲೇ ಕುಳಿತುಕೊಂಡು ವ್ಯವಹಾರ ಮಾಡುತ್ತಾರೆ. ಹಬ್ಬ ಇತ್ಯಾದಿ ಯಾವ ಕಟ್ಟುಪಾಡೂ ಇಲ್ಲ. ಸ್ಟಾಕು ಖಾಲಿಯಾದ ತಕ್ಷಣ ಬೇಡಿಕೆ ಸಲ್ಲಿಸುತ್ತಾರೆ, ಆಗ ಬೆಲೆ ಹೆಚ್ಚಾಗುತ್ತದೆ. ಬೇಡಿಕೆ ಇರುವಾಗ ಹಣ ತಕ್ಷಣ ಬರುತ್ತದೆ. ಇಲ್ಲದಾಗ ಹಣ ಸ್ವಲ್ಪ ನಿಧಾನವಾಗುತ್ತದೆ. ಇಷ್ಟೇ ಮಾರುಕಟ್ಟೆ ವಿಷಯ. ಈಗ ಬೇಡಿಕೆ ಹೆಚ್ಚಾಗಲು ಕಾರಣ ಹಳೆಯ ಸ್ಟಾಕು ಮುಗಿದಿರುವುದು. ಹೊಸ ಸ್ಟಾಕು ಭರ್ತಿಯಾದರೆ ಮತ್ತೆ ಪುನಹ ದರ ಸ್ವಲ್ಪ ಹಿನ್ನಡೆಯಾಗುತ್ತದೆ.
ಇಂದು ಅಡಿಕೆ ಮಾರುಕಟ್ಟೆಯ ಸ್ಥಿತಿ:
- ಚಾಲಿ ಮಾರುಕಟ್ಟೆಯಲ್ಲಿ ಶಿರಸಿ 565, ಸಿದ್ದಾಪುರ 400, ಯಲ್ಲಾಪುರಗಳಲ್ಲಿ 492 ಚೀಲಗಳಷ್ಟು ಅಡಿಕೆ ಮಾರಾಟವಾಗಿದೆ.
- ಇಲ್ಲಿ ಕಳೆದ ಎರಡು ವಾರಗಳಿಂದ ಚಾಲಿ ಅವಕ ಹೆಚ್ಚಾಗಿದೆ.
- ಕರಾವಳಿಯಲ್ಲಿ ಹೊಸ ಅಡಿಕೆ ಮಾರಾಟಕ್ಕೆ ತೀರಾ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.
- ಪುತ್ತೂರಿನಲ್ಲಿ ಮಾತ್ರ 106 ಚೀಲ ಬಂದಿದ್ದು, ಉಳಿದೆಡೆ ಎರಡಂಕೆಯಶ್ಟು ಮಾತ್ರ.
- ಬೆಳೆಗಾರರು ಅಡಿಕೆ ಬಿಡುತ್ತಿಲ್ಲ. ದರ ಕೇಳುತ್ತಾರೆ. ಮಾರಾಟ ಮುಂದೂಡುತ್ತಾರೆ.
- ಹಾಗಾಗಿ ಅಡಿಕೆ ಬೇಡಿಕೆ ಇರುವ ಕಾರಣ ಸಪ್ಟೆಂಬರ್ 9 ರ ಒಳಗೆ 500-510 ತನಕ ದರ ಏರಿದರೂ ಏರಬಹುದು ಎನ್ನುತ್ತಾರೆ ಉಪ್ಪಿನಂಗಡಿಯ ಓರ್ವ ವ್ಯಾಪಾರಿಗಳು.
- ಓರ್ವ ಗುಜರಾತ್ ಮೂಲದ ಅಡಿಕೆ ಖರೀದಿದಾರ, ಗಾರ್ಬಲ್ ಮಾಡುವವರ ಪ್ರಕಾರ
- ಹಬ್ಬದ ದಿನಗಳಲ್ಲಿ ಗುಟ್ಕಾ, ಪಾನ್ ಗಳು ಹೆಚ್ಚು ಮಾರಾಟವಾಗುತ್ತದೆಯಂತೆ.
- ಮುಂದೆ ಬೆಳೆ ಕೊಯಿಲಿನ ಸಿಸನ್ ಸಹ ಇದೆ. ಹಾಗಾಗಿ ಈಗ ಗುಟ್ಕಾ ಉತ್ಪಾದನೆ ಗರಿಷ್ಟ ಪ್ರಮಾಣದಲ್ಲಿರುತ್ತದೆ.
- ಈಗ ಫ್ಯಾಕ್ಟರಿ ಕೆಲಸಕ್ಕೂ ಜನ ಸಿಗುತ್ತಾರೆ.
- ಅಕ್ಟೋಬರ್ ನಂತರ ಅವರು ಬೇರೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
- ಪಾನ್ ಗೆ ಬಳಕೆಯಾಗುವ ಅಡಿಕೆಯನ್ನೂ ಸ್ವಲ್ಪ ಮಟ್ಟಿಗೆ ದಾಸ್ತಾನು ಇಡುತ್ತಾರೆ.
- ಹಾಗಾಗಿ ಈಗ ಚಾಲಿ ಹಾಗೂ ಕೆಂಪು ಎರಡರ ದರವೂ ಏರಿಕೆ ಆಗಿರುವುದು.
- ಜೊತೆಗೆ ಇದು ಒಂದು ಸೆಂಟಿಮೆಂಟ್ ಸಹ ಆಗಿರುತ್ತದೆ ಎನ್ನುತ್ತಾರೆ.
ಅಡಿಕೆ ಮಾರುಕಟ್ಟೆ ಏರಿಕೆ ಸುದ್ದಿಗಾಗಿ ಕಾಯುತ್ತಿರುವ ಬೆಳೆಗಾರರು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ದರ, ಖರೀದಿಯಲ್ಲಿ ಸ್ಪರ್ಧೆ,ಇದು ಪ್ರಚಲಿತ ವಿಧ್ಯಮಾನ. ಅಡಿಕೆ ಬೆಳೆಗಾರರು ಬೆಲೆ ಏರಬೇಕು ಎಂದು ಬಯಸುತ್ತಾರೆ. ಎಲ್ಲಿ ತುದಿ ಎಂಬುದು ಯಾರಿಗೂ ಗೊತ್ತಿಲ್ಲ.
- ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಖಾಸಗಿಯವರು ಕೆಲವು ಕಡೆ ಹೊಸ ಅಡಿಕೆ ಕಿಲೋ ರೂ. 500 ರೂ. ತನಕವೂ ಖರೀದಿ ಮಾಡಿರುವ ಸುದ್ದಿ ಇದೆ.
- ಅಡಿಕೆ ವ್ಯಾಪಾರದಲ್ಲಿಯೂ ಅವರಿಗೆ ಕೊಡಬಾರದು, ಇವರಿಗೇ ಕೊಡಬೇಕು ಎಂಬೆಲ್ಲಾ ಸುದ್ದಿಗಳ ಮಧ್ಯೆ ತಪ್ಪಿ ಕೊಡುವವರಿಗೆ ಅಧಿಕ ದರ ನೀಡುವುದು ಕಂಡು ಬರುತ್ತಿದೆ.
- ಹೊಸ ಅಡಿಕೆ ಬರುವ ಪ್ರಮಾಣ ತುಂಬಾ ಕಡಿಮೆ ಇದೆ.
- ಹೆಚ್ಚಿನ ಕಡೆ ಹಳೆ ಅಡಿಕೆ 1-2 ಚೀಲ ಮಾರುಕಟ್ಟೆಗೆ ಬರುತ್ತಿದ್ದರೆ ಬೆಳ್ತಂಗಡಿಯಲ್ಲಿ ಮಾತ್ರ ಕಳೆದ ಒಂದು ತಿಂಗಳಿಂದಲೂ 200 ಚೀಲ ತನಕವೂ ಮಾರಾಟಕ್ಕೆ ಬರುತ್ತಿದೆ.
- ಈ ದಿನ 313 ಚೀಲ ಹಳೆ ಅಡಿಕೆ ಮಾರಾಟವಾಗಿದೆ.
- ಹೊಸ ಅಡಿಕೆ ಮಾರಾಟಕ್ಕೆ ಯಾರೂ ಸಿದ್ದರಿಲ್ಲ.
- ಯಾವುದಕ್ಕೂ 500 ಗಡಿ ದಾಟಲಿ ಎಂದು ಕಾಯುತ್ತಿದ್ದಾರೆ.
- ಕ್ಯಾಂಪ್ಕೋ ಅಧ್ಯಕ್ಷರ ಪ್ರಕಾರ ಉತ್ತರ ಭಾರತದಿಂದ ಬೇಡಿಕೆ ಚೆನ್ನಾಗಿದೆಯಂತೆ. ಸ್ವಲ್ಪ ಕಾದು ಮಾರಾಟ ಮಾಡಿ. ಬೆಲೆ ಹೆಚ್ಚಳವಾಗುತ್ತದೆ ಎಂದು ಹೇಳುತ್ತಾರೆ.
ಗುಣಮಟ್ಟ ಎಂಬ ಪ್ರಾಶಸ್ತ್ಯವನ್ನು ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಬೇಡಿಕೆ ಹೆಚ್ಚು ಇರುವಾಗ ಈ ವಿಷಯ ಸ್ವಲ್ಪ ಸಡಿಲಿಕೆಯಾಗುತ್ತದೆ. ಹಾಗಾಗಿ ಮೊದಲ ಕೊಯಿಲು, ಒದ್ದೆಯಾದ ಸ್ವಲ್ಪ ಮಸುಕು ಅಡಿಕೆಯನ್ನೂ ಸಹ ಉತ್ತಮ ಬೆಲೆಗೆ ಖರೀದಿ ಮಾಡುತ್ತಿದ್ದಾರೆ.
ಚಾಲಿ ಅಡಿಕೆ ಧಾರಣೆ:
- ಬಂಟ್ವಾಳ ಹೊಸತು:27500, 47500, 44500
- ಹಳತು: 46000, 56000, 51000
- ಬೆಳ್ತಂಗಡಿ ಹೊಸತು: 27000, 47500, 36000
- ಹಳತು: 40420, 56500, 46000
- ಹೊಸನಗರ ಹೊಸ ಚಾಲಿ: 38000, 39609, 38500
- ಕಾರ್ಕಳ, ಹೊಸತು: 40000, 47500, 43000
- ಹಳತು: 46000, 56000, 55000
- ಕುಮಟಾ ಹೊಸ ಚಾಲಿ: 39999, 43139, 42349
- ಹಳೆ ಚಾಲಿ: 47899, 48539, 48069
- ಕುಂದಾಪುರ ಹಳೆ ಚಾಲಿ: 50000, 56000, 55000
- ಹೊಸತು: 40000, 46500, 46000
- ಪುತ್ತೂರು ಹೊಸತು: 34500, 47500, 41000
- ಸಾಗರ ಹೊಸ ಚಾಲಿ: 38939, 41103, 40769
- ಸಿದ್ದಾಪುರ ಹೊಸ ಚಾಲಿ: 38199, 44019, 43799
- ಸಿರ್ಸಿ ಹೊಸ ಚಾಲಿ: 35099, 45111, 43644
- ಯಲ್ಲಾಪುರ ಹೊಸ ಚಾಲಿ: 38499, 44000, 42909
- ಪಟೋರಾ: 38,000-40,000
- ಉಳ್ಳಿಗಡ್ಡೆ: 25,000-30,000
- ಕರಿಗೋಟು: 22,500-30,000
ಕೆಂಪಡಿಕೆ ದಾರಣೆ:
- ಯಲ್ಲಾಪುರ ರಾಶಿ: 50090, 56669, 53890
- ತಟ್ಟೆ ಬೆಟ್ಟೆ: 39199, 49899, 44700
- ಅಪಿ: 76269, 76269, 76269
- ಬಿಳೇಗೋಟು: 27018, 35299, 33662
- ಕೊಕಾ: 19018, 32969, 28899
- ಕೆಂಪುಗೋಟು: 31000, 35889, 34399
- ಭದ್ರಾವತಿ: 46199, 53699, 52661
- ಚೆನ್ನಗಿರಿ: 51000, 53399, 52820
- ಚಿತ್ರದುರ್ಗ ಅಪಿ: 51939, 52399, 52189
- ರಾಶಿ: 51429, 51869, 51679
- ಹೊಳಲ್ಕೆರೆ ರಾಶಿ: 49199, 50999, 50339
- ಹೊನ್ನಾಳಿ ರಾಶಿ: 51799, 51799, 51799
- ಹೊಸನಗರ ರಾಶಿ: 48099, 53559, 52899
- ಬಿಳೇಗೋಟು: 26899, 26899, 26899
- ಕೆಂಪುಗೋಟು: 37569, 39121, 38699
- ಕುಮಟಾ ಚಿಪ್ಪು: 31589, 34509, 32869
- ಸಾಗರ ಬಿಳೇಗೋಟು: 32699, 33699, 32789
- ಕೊಕಾ: 35299, 37809, 36989
- ಕೆಂಪುಗೋಟು: 37899, 38699, 37899
- ರಾಶಿ: 47009, 53127, 52799
- ಸಿಪ್ಪೆಗೋಟು: 22599, 23599, 22599
- ಶಿಕಾರಿಪುರ ರಾಶಿ:47600, 50745, 49500
- ಶಿವಮೊಗ್ಗ ಬೆಟ್ಟೆ: 53999, 55639, 54519
- ಗೊರಬಲು:, 18009, 39299, 38699
- ರಾಶಿ: 47869, 53121, 52399
- ಸರಕು: 63159, 76999, 72100
- ಸಿದಾಪುರ ಬಿಳೇಗೋಟು: 30889, 34599, 33499
- ಕೋಕಾ: 26699, 34899, 32119
- ಕೆಂಪುಗೋಟು: 32311, 44969, 34119
- ರಾಶಿ: 48899, 51299, 50799
- ತಟ್ಟೆ ಬೆಟ್ಟೆ: 45089, 50309, 47689
- ಸಿರಾ: 9000, 50000, 46310
- ಸಿರ್ಸಿ ಬೆಟ್ಟೆ: 25099, 48655, 44141
- ಬಿಳೇಗೋಟು: 26899, 35906, 32720
- ರಾಶಿ: 47499, 52489, 50035
- ತರೀಕೆರೆ ಪುಡಿ: 8333, 20000, 13000
- ತೀರ್ಥಹಳ್ಳಿ ಬೆಟ್ಟೆ : 51369, 55789, 54599
- ಇಡಿ: 42099, 53809, 53299
- ಗೊರಬಲು: 30111, 40121, 38699
- ರಾಶಿ: 40166, 53599, 52899
- ಸರಕು: 51099, 79560, 70299
- ಸಿಪ್ಪೆಗೋಟು: 20321, 20322, 20322
- ತುಮಕೂರು ರಾಶಿ: 49500, 53500, 51500
ಕರಿಮೆಣಸು ಮಾರುಕಟ್ಟೆ ಸ್ಥಿತಿ:
- ಕರಿಮೆಣಸಿನ ದರ ಏರಿಕೆಯಾಗಬೇಕಿತ್ತು. ಆದರೆ ಆಗಲೇ ಇಲ್ಲ.
- ದೊಡ್ದ ದೊಡ್ಡ ಬೆಳೆಗಾರರು ಎರಡು ಮೂರುವರ್ಷಗಳಿಂದ ದಾಸ್ತಾನು ಇಟ್ಟು, 550 ಆದಾಗ 600 ಕ್ಕೆ ಕಾದು ದರ ಇಳಿದಾಗ ಮತ್ತೆ 495-500 ಕ್ಕೆ ಮಾರಾಟ ಮಾಡಿದ ಸುದ್ದಿ ಇದೆ.
- ಕಳೆದ ಎರಡು ವಾರಗಳಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಮಡಿಕೇರಿಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಮೆಣಸು ಮಾರಾಟವಾಗಿದೆ.
- ಹಾಗಾಗಿ ಮಾರುಕಟ್ಟೆಯಲ್ಲಿ ಸ್ಟಾಕು ಇದೆ ಎಂಬ ವರ್ತಮಾನ ಕೇಳಿ ಬರುತ್ತಿದೆ.
- ಕ್ಯಾಂಪ್ಕೋ ಸಂಸ್ಥೆ ತನ್ನ ಖರೀದಿ ದರ 49,500 ವನ್ನು ಸ್ಥಿರವಾಗಿ ಉಳಿಸಿಕೊಂಡ ಕಾರಣ ದರ ಕುಸಿದಿಲ್ಲ.
- ಖಾಸಗಿ ಖರೀದಿದಾರದಲ್ಲಿ ಅಂತಹ ಆಸಕ್ತಿ ಇಲ್ಲ. ಹಾಗಾಗಿ ದರ ಏರಿಕೆ ಕಷ್ಟ.
- ಕರಿಮೆಣಸು ಬೆಳೆಗಾರರು ಅಡಿಕೆ ದಾಸ್ತಾನು ಇಟ್ಟುಕೊಂಡು ಮೆಣಸನ್ನು ಮಾರಾಟ ಮಾಡುವುದು ಸೂಕ್ತವೆನಿಸುತ್ತದೆ.
- ಗರಿಷ್ಟ ಖರೀದಿ ದರ 49,500 ಇದೆ. ಖಾಸಗಿಯವರು 49,000-48500 ದರಕ್ಕೆ ಖರೀದಿ ಮಾಡುತ್ತಿದ್ದಾರೆ.
- ಪೆಪ್ಪೆರ್ ಪಿನ್ ಹೆಡ್ಸ್ (Black pepper PINHEDS) ಗೆ ಕಿಲೋ 100 ರೂ. ತನಕ ಹಾಗೂ
- ಲೈಟ್ ಬೆರ್ರಿಸ್ ಗೆ (Black pepper light berries) ರೂ.160 ತನಕ ಕ್ಯಾಂಪ್ಕೋ ಖರೀದಿಸುತ್ತದೆ.
- ಈ ತನಕ ಕಾದಿರುವ ಬೆಳೆಗಾರರು ಸಪ್ಟೆಂಬರ್ ಕೊನೇ ತನಕ ಕಾಯಬಹುದು.
ಕೊಬ್ಬರಿ ದರ:
- ಕೊಬ್ಬರಿ ದರ ಇಳಿಕೆಯಾಗಿದೆ. ತೆಂಗಿನ ಕಾಯಿಗೂ ಬೇಡಿಕೆ ಕಡಿಮೆಯಾಗಿದೆ.
- ಈ ವರ್ಷ ತೆಂಗಿನ ಬೆಳೆ ಹೆಚ್ಚು ಎನ್ನಲಾಗುತ್ತಿದೆ.
- ತೆಂಗಿನ ಕಾಯಿಯ ಡೆಸಿಕೇಟೆಡ್ ಕೋಕೋನಟ್ ಬೇಡಿಕೆ ಕಡಿಮೆಯಾದದ್ದೇ ಕಾರಣ ಎನ್ನಲಾಗುತ್ತಿದೆ.
- ಈ ಸಮಯದಲ್ಲಿ ಯಾವಾಗಲೂ ಬೇಡಿಕೆ ಚೆನ್ನಾಗಿರುತ್ತದೆ. ಆದರೆ ಈ ವರ್ಷ ಹಾಗಿಲ್ಲ.
- ಕಾಯಿಯ ಗುಣಮಟ್ಟವೂ ಚೆನ್ನಾಗಿಲ್ಲ ಎಂಬುದಾಗಿ ಹೇಳುತ್ತಾರೆ.
- ಹಸಿ ಕಾಯಿ ಕಿಲೋ. 24 ಹಾಗೂ ಎಣ್ಣೆ ಕೊಬ್ಬರಿ ಕಿಲೋ. 80-85 , ಬಾಲ್ ಕೊಬ್ಬರಿ ಕ್ವಿಂಟಾಲು 13625 ರಷ್ಟು ಇದೆ.
ಅಡಿಕೆ ಬೆಳೆಗಾರರು ಜುಲೈ ಕೊನೆ ಅಥವಾ ಸಪ್ಟೆಂಬರ್ ಮೊದಲವಾರದಲ್ಲಿ ಸ್ವಲ್ಪ ಪ್ರಮಾಣವನ್ನು ಮಾರಾಟ ಮಾಡಿ. ನಂತರ ಸ್ವಲ್ಪ ಬೆಲೆ ವ್ಯತ್ಯಾಸ ಬರಬಹುದು. ಹಾಗೆಂದು ಇಳಿಕೆ ಸಾಧ್ಯತೆ ಕಡಿಮೆ. ಕೆಲವು ಸಮಯದ ತನಕ ಬಿಗು ಮಾರುಕಟ್ಟೆ ಸ್ಥಿತಿ ಉಂಟಾದರೆ ಗುಣಮಟ್ಟ ಹೆಸರಿನಲ್ಲಿ ಸ್ವಲ್ಪ ದರ ಕಡಿಮೆಯಾಗುತ್ತದೆ. ಮೆಣಸು ಬೆಳೆಗಾರರು ಹೆಚ್ಚು ದರ ನಿರೀಕ್ಷೆ ಬೇಡ.