ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು- ಕೆಂಪು 52,500 ಚಾಲಿ 48,500

ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು- ಕೆಂಪು 52,000 ಚಾಲಿ 48,500

ಈ ವಾರದಲ್ಲಿ ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು ಬಂದಿದೆ. ಚಾಲಿ ಅಡಿಕೆದರ ಏರುತ್ತಿದೆ. ಕೆಂಪಡಿಕೆಯೂ ಏರಿಕೆಯಾಗಲಾರಂಭಿಸಿದೆ. ಇಂದು ಹೊಸ ಚಾಲಿ ಖಾಸಗಿ ಮಾರುಕಟ್ಟೆಯಲ್ಲಿ 48,500 ತನಕ ಖರೀದಿ ಮಾಡುವುದಾಗಿ ದರ ಪ್ರಕಟಿಸಿರುತ್ತಾರೆ. ಕೆಂಪಡಿಕೆ ಸರಾಸರಿ 52,500 ದಾಟಿದೆ. ಅಡಿಕೆ ಬೆಳೆಗಾರರ ಬಹುದಿನಗಳ ಆಸೆ ಇನ್ನು ಮುಂದಿನ ದಿನಗಳಲ್ಲಿ ಈಡೇರುವ ನಿರೀಕ್ಷೆ ಇದೆ. ಎಲ್ಲೆಡೆಯಲ್ಲೂ ಅಡಿಕೆಗೆ ಬೆಲೆ ಏರಿದ್ದೇ ಸುದ್ದಿ, ಎಲ್ಲರಿಗೂ ಖುಷಿಯೋ ಖುಷಿ.

ದೇಶದ ಮಾರುಕಟ್ಟೆಗೆ  ಮಲೇಶಿಯಾ, ಇಂಡೋನೇಶಿಯಾ, ಶ್ರೀಲಂಕಾ ಗಳಿಂದ ಅಡಿಕೆ ಆಮದು ಆಗುತ್ತಲೇ ಇದೆ. ಇದು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಮುನ್ನ ಬೆಳೆಗಾರರ ನಿಯೋಗ ಕೇಂದ್ರ ಸರಕಾರದ ಸಂಬಂಧಿಸಿದ ಮಂತ್ರಿಗಳ ಗಮನಕ್ಕೆ ತಂದು ಬೆಳೆಗಾರರ ಹಿತಕ್ಕಾಗಿ ಮಾಡಬೇಕಾದ ಅಗತ್ಯ ಕ್ರಮಗಳ ಬಗ್ಗೆ ವಿಸ್ತೃತವಾಗಿ ವಿವರಿಸಿ ಮನವಿ ಸಲ್ಲಿಸಿದ್ದಾರೆ. ನಿಯೋಗದ ಮನವಿಗೆ ಎಲ್ಲರೂ ಸ್ಪಂದಿಸಿದ್ದಾರೆ.ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರೇ ಇರುವ ಕಾರಣ ನಮ್ಮ ಮನವಿಗೆ ಸರಕಾರ ಸ್ಪಂದಿಸದೆ ಇರಲಾರದು. ಜೊತೆಗೆ ಮನವಿ ಸಲ್ಲಿಸಿದ ನಿಯೋಗವೂ ಆಡಳಿತ ಪಕ್ಷದವರೇ ಆಗಿರುವ ಕಾರಣ ಅದಕ್ಕೆ ತೂಕ ಹೆಚ್ಚು ಬರಲಿದೆ. ಅಡಿಕೆ ಆಮದು ಬಿಗುವಾಗಲಿದೆ. ಸ್ಥಳೀಯ ಅಡಿಕೆ ಬೆಲೆ ಏರಿಕೆಗೆ ಇನ್ನು ಯಾವ ಆತಂಕವೂ ಇಲ್ಲ.

 • ಕಳೆದ ವರ್ಷವೇ ಕೆಲವು  ವರ್ತಕರು ಅಡಿಕೆ ದರ ಕ್ವ್ವಿಂಟಾಲಿಗೆ 60000 ಆದರೂ ಅಚ್ಚರಿ ಇಲ್ಲ ಎನ್ನುತ್ತಿದ್ದರು.
 • ಇದೆಲ್ಲವೂ ಒಂದು ಊಹನೆ ಮಾತ್ರವೇ ಎಂಬಂತಿತ್ತು. 
 • ಆದರೆ ಪರಿಸ್ಥಿತಿ ಇವರ ಹೇಳಿಕೆಗಳಿಗೆ ಸಮೀಪವಾಗಿಯೇ ಬರುತ್ತದೆಯೋ ಏನೋ ಎಂಬ ಅನುಮಾನ ಕಂಡು ಬರುತ್ತಿದೆ.
 • ವಿದೇಶಗಳ ಅಡಿಕೆ ಬಂದರೆ ಅದಕ್ಕೆ ಆಮದು ಸುಂಕ ಹೆಚ್ಚಿಸಿದರೆ ಅದಕ್ಕಿಂತ ನಮ್ಮ ಅಡಿಕೆಗೇ ಬೇಡಿಕೆ ಬರುತ್ತದೆ.
 • ಮುಂದಿನ ವರ್ಷ ಚುನಾವಣೆ ಇರುವ ಕಾರಣ ಕೇಂದ್ರ ಸರಕಾರ ಕರ್ನಾಟಕದ ಬೆಳೆಗಾರರ ಬೆಂಬಲಕ್ಕೆ ನಿಲ್ಲದೆ  ಇರಲಾರದು.
 • ಹಾಗಾಗಿ ಅಡಿಕೆ ಬೆಳೆಗಾರರಿಗೆ ಬೆಲೆ ಕುಸಿತವಾಗದು ಎಂಬುದು ಖಾತ್ರಿಯಾದಂತಾಗಿದೆ.
 • ದಿನದಿಂದ ದಿನಕ್ಕೆ ಅಡಿಕೆ ಧಾರಣೆ ಸ್ವಲ್ಪ ಸ್ವಲ್ಪವೇ ಏರಿಕೆ ಕಾಣಲಿದೆ. ಚಾಲಿ  ಜೊತೆ ಜೊತೆಯಾಗಿ ಕೆಂಪಡಿಕೆ ಏರಿಕೆ ಆಗುತ್ತಿದೆ.
 • ಯಲ್ಲಾಪುರದಲ್ಲಿ  ರಾಶಿ 55,900 ತನಕ ಏರಿದೆ. ಶಿರಸಿಯಲ್ಲಿ 53,000 ದಾಟಿದೆ.
 • ಸರಾಸರಿ ಎಲ್ಲಾ ಕಡೆ ರಾಶಿ ಅಡಿಕೆಗೆ 52,000  ತನಕ ಇದೆ.

ಎಷ್ಟು ಏರಿಕೆ ಆಗಬಹುದು?

ಗುಣಮಟ್ಟದ ಚಾಲಿಗೆ ಭಾರಿ ಬೇಡಿಕೆ
ಗುಣಮಟ್ಟದ ಚಾಲಿಗೆ ಭಾರಿ ಬೇಡಿಕೆ
 • ಗುಟ್ಕಾ ತಯಾರಕರಲ್ಲಿ ಅಡಿಕೆ ದಾಸ್ತಾನು ಇಲ್ಲ ಎಂಬ ಸುದ್ದಿ ಇದೆ.
 • ಈ ವರ್ಷ ಚಾಲಿ ಅಡಿಕೆಯಾಗುವಲ್ಲಿ ಎಲ್ಲಿಯೂ ಎಂದಿನಂತೆ ತಾಜಾ ಸುಪಾರಿಯಾಗಿ ಬಳಕೆ ಮಾಡಬಹುದಾದ ಉತ್ತಮ ಅಡಿಕೆಯೇ ಮಾರುಕಟ್ಟೆಗೆ ಬಂದಿಲ್ಲ ಎನ್ನುತ್ತಾರೆ. 
 • ಈ ಕಾರಣದಿಂದಾಗಿಯೇ ಹಳೆ ಚಾಲಿಗೆ ಭಾರೀ ಬೇಡಿಕೆ ಬಂದದ್ದು.
 • ಹಳೆ ಚಾಲಿ ಸಹ ದಾಸ್ತಾನು ಸಮರ್ಪಕವಾಗಿರದೆ, ನಿರೀಕ್ಷೆಯಷ್ಟು ಗುಣಮಟ್ಟ ಇಲ್ಲದಾಗಿದೆ.
 • ಹಾಗಾಗಿ ಮತ್ತೆ ಹೊಸ ಚಾಲಿಗೆ ಬೇಡಿಕೆ ಬಂದಿದೆ.
 • ಬೆಳೆಗಾರರು ಯಾವಾಗಲೂ ಮೊದಲು ಗುಣಮಟ್ಟ ಒಳ್ಳೆಯದಿಲ್ಲದ, ದಾಸ್ತಾನು ಇಡಲು ಯೋಗ್ಯವಲ್ಲದ ಅಡಿಕೆಯನ್ನು ಮಾರುಕಟ್ಟೆಗೆ ಬಿಡುತ್ತಾರೆ.
 • ಬಹುತೇಕ  ಇಂತಹ ಅಡಿಕೆ ಖಾಲಿಯಾಗಿರುವ ಕಾರಣ ಹೊಸತಕ್ಕೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ.
 • ಶಿರಸಿ, ಸಿದ್ದಾಪುರ, ಸಾಗರ, ಯಲ್ಲಾಪುರದಲ್ಲಿ ದರ ಹೆಚ್ಚಳವಾಗಲಾರಂಭಿಸಿದೆ.
 • ಅಧಿಕ ಪ್ರಮಾಣದಲ್ಲಿ ಅವಕವೂ ಇದೆ. ಇಂದು ಪುನಹ ಏರಿಕೆ ಮುನ್ಸೂಚನೆ ಇದೆ.
 • ಹಳೆ ಚಾಲಿ ದರ ಇನ್ನು  ಹೆಚ್ಚು ಏರಿಕೆ ಆಗಲಾರದು. ಏನಿದ್ದರೂ 5-10 ರೂ. ಗಳ ಏರಿಕೆ ಕಾಣಬಹುದು.
 • ಆದರೆ ಹೊಸ ಚಾಲಿ ಈ ತಿಂಗಳ ಕೊನೆ ಒಳಗೆ 500 ರ ಸಮೀಪ ಬರುವುದು ನಿಶ್ಚಿತ ಎನ್ನಿಸುತ್ತಿದೆ.
 • ಅದಕ್ಕಿಂತ ಮೇಲೆ ಹೋಗುವ ಸಾಧ್ಯತೆ ಕಡಿಮೆ ಇದ್ದು,  ಕೆಲವು ಸಮಯದ ತನಕ ಸ್ಥಿರತೆಯಲ್ಲಿ ಮುಂದೂಡಿ,  ನವೆಂಬರ್ – ಡಿಸೆಂಬರ್ ನಂತರ ಮತ್ತೆ  ಏರಿಕೆ ಪ್ರಾರಂಭವಾಗಬಹುದು ಎಂಬುದಾಗಿ ಸುದ್ದಿ ಇದೆ.
 • ಕೆಂಪಡಿಕೆ ಏರಿಕೆ ಆಗುವ ಎಲ್ಲಾ ಸೂಚನೆಗಳಿದ್ದು, ಈ ತಿಂಗಳ ಕೊನೆಯ ಒಳಗೆ 54,000-55,000 ತನಕ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.
 • ಕೆಂಪಡಿಕೆಗೆ ಬೇಡಿಕೆ ಹೆಚ್ಚಾದಾಗ ಒಡೆದ ಚಾಲಿ ಅಡಿಕೆ, ಕರಿ ಗೋಟು, ಸಿಪ್ಪೆ ಗೊಟಿನ ಬೇಡಿಕೆ ಹೆಚ್ಚಾಗುತ್ತದೆ.
 • ಈಗ ಉತ್ತಮ ಅಡಿಕೆಗಿಂತ ಈ ತರಾವಳಿಯ ಅಡಿಕೆಗೆ ಬೇಡಿಕೆ ಉಂಟಾಗಿದೆ.
 • ಹಾಗಾಗಿ ಸಧ್ಯವೇ ಕೆಂಪಡಿಕೆ ರಾಶಿಯ ದರ ಏರಿಕೆಯಾಗುತ್ತಾ ಹೋಗಲಿದೆ.
 • ಇಂದು ಹೊಸನಗರದ ಮಾರುಕಟ್ಟೆಯಲ್ಲಿ  ಖರೀದಿಯಾಗುವ ದರ ಮತ್ತು ನಾಳೆ ತೀರ್ಥಹಳ್ಳಿಯಲ್ಲಿ ಖರೀದಿಸಲ್ಪಡುವ ದರ ಮುಂದಿನ ಏರಿಕೆಯನ್ನು ನಿರ್ಧರಿಸಲಿದೆ.
 • ಕೆಲವು ಮೂಲಗಳ ಪ್ರಕಾರ ಹೊಸನಗರದಲ್ಲಿ ಇಂದಿನ ದರ 53,000 ಕ್ಕೆ ಏರಿಕೆಯಾಗುವ ಸಂಭವವಿದೆ.

ಎಲ್ಲೆಲ್ಲಿ ಯಾವ ದರ ಇತ್ತು?

ಚಾಲಿ ಮಾರುಕಟ್ಟೆ:

 • ಬಂಟ್ವಾಳ: ಹೊಸ ಚಾಲಿ, 27500, 46500, 43500
 • ಹಳೆ ಚಾಲಿ, 46000, 56000, 51000
 • ಬೆಳ್ತಂಗಡಿ ಹೊಸಚಾಲಿ, 30000, 47500, 39000
 • ಹಳೆ ಚಾಲಿ, 40420, 56500, 46000
 • ಕಾರ್ಕಳ ಹೊಸ ಚಾಲಿ: 40000, 46500, 43000
 • ಹಳೆ ಚಾಲಿ, 46000, 56000, 55000
 • ಕುಂದಾಪುರ ಹಳೆ ಚಾಲಿ: 50000, 56000, 55000
 • ಪುತ್ತೂರು ಹೊಸ ಅಡಿಕೆ: 33500, 46500, 40000
 • ಹೊಸ ಚಾಲಿ: 40000, 46500, 46000
 • ಕುಮಟಾ ಹಳೆ ಚಾಲಿ: 47899, 48539, 48069
 • ಹೊಸ ಚಾಲಿ: 37001, 43019, 42719
 • ಸಾಗರ ಹೊಸ ಚಾಲಿ: 30100, 40299, 39899
 • ಸಿದ್ದಾಪುರ ಹೊಸ ಚಾಲಿ: 38099, 43109, 42699
 • ಸಿರ್ಸಿ ಹೊಸ ಚಾಲಿ: 36300, 44221, 42780
 • ಯಲ್ಲಾಪುರ ಹೊಸ ಚಾಲಿ: 38020, 43500, 42329
 • ಸಿಪ್ಪೆಗೋಟು: ಸಾಗರ: 11269, 23269, 22699
 • ಪಟೋರಾ ದರ: 30,000-40,000
 • ಉಳ್ಳಿ ಗಡ್ಡೆ :20,000-30,000
 • ಕರಿಗೋಟು: 21,000-30,000
ರಾಶಿ ಆಡಿಕೆ 52,500

ಕೆಂಪಡಿಕೆ ಮಾರುಕಟ್ಟೆ:

 • ಭದ್ರಾವತಿ: 47899, 52599, 51620
 • ಚೆನ್ನಗಿರಿ: 51399, 52599, 52042
 • ಚಿತ್ರದುರ್ಗ ಅಪಿ, 51939, 52399, 52189
 • ರಾಶಿ: 51429, 51869, 51679
 • ಹೊಳಲ್ಕೆರೆ ರಾಶಿ: 49199, 50999, 50339
 • ಹೊನ್ನಾಳಿ ರಾಶಿ: 51599, 51599, 51599
 • ಕುಮಟಾ ಸಿಪ್ಪು 27009, 34639, 34029
 • ಕೋಕಾ: 16099, 33230, 32349
 • ಸಾಗರ ರಾಶಿ: 40166, 52599, 51799
 • ಶಿಕಾರಿಪುರ ಕೆಂಪು: 47600, 50745, 49500
 • ಶಿವಮೊಗ್ಗ ಬೆಟ್ಟೆ:52169, 55572, 54780
 • ರಾಶಿ: 48658, 52599, 51869
 • ಸರಕು:6000, 80296, 71000
 • ಸಿದ್ದಾಪುರ ರಾಶಿ: 47599, 51299, 50999
 • ತಟ್ಟೆ ಬೆಟ್ಟೆ: 38169, 49589, 45099
 • ಸಿರ್ಸಿ ಬೆಟ್ಟೆ: 35601, 48699, 44598
 • ರಾಶಿ: 46399, 53099, 50143
 • ತೀರ್ಥಹಳ್ಳಿ ರಾಶಿ: 38021, 52199, 51509
 • ಯಲ್ಲಾಪುರ ರಾಶಿ: 50050, 55939, 54399
 • ತಟ್ಟೆ ಬೆಟ್ಟೆ: 40269, 49770, 44599

ಬೆಳೆಗಾರರು ಸ್ವಲ್ಪ ಕಾದು ಮಾರಾಟ ಮಾಡುವುದು ಸೂಕ್ತ. ಈಗಾಗಲೇ ಸಾಕಷ್ಟು ಕಾದಿದ್ದೀರಿ. ಈ ತಿಂಗಳು ಕೊನೆಯ ತನಕ ಕಾಯುವುದು ಸೂಕ್ತ. ಹಾಗೆಂದು 500 ರ ಸನಿಹಕ್ಕೆ ತಲುಪಿದ ತರುವಾಯ ತಮ್ಮ ಅಗತ್ಯಕ್ಕೆ ಬೇಕಾದಷ್ಟು ಮಾರಾಟ ಮಾಡುವುದು ಉತ್ತಮ. ಕೆಂಪಡಿಕೆ ಬೆಳೆಗಾರರು  ಮುಂದೆ ಹೊಸ ಅಡಿಕೆ ಮಾರುಕಟ್ಟೆಗೆ ಬರುವ ಕಾರಣ ಭಾರೀ ದರ ಏರಿಕೆಯ ನಿರೀಕ್ಷೆಯನ್ನು ಇಟ್ಟುಕೊಂಡು ಮಾರಾಟ ಮುಂದೂಡಬೇಡಿ. ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ  ಹೆಚ್ಚಿನ ಬೆಲೆ ಪಡೆಯಿರಿ.

Leave a Reply

Your email address will not be published. Required fields are marked *

error: Content is protected !!