ಇದು ಅಸಾಮಾನ್ಯ ರೋಗನಿರೋಧಕ ಶಕ್ತಿಯುಳ್ಳ ಹಣ್ಣು.

by | Jul 8, 2020 | Fruit Crop (ಹಣ್ಣಿನ ಬೆಳೆ), Traditional Fruits (ಸಾಂಪ್ರದಾಯಿಕ ಹಣ್ಣು) | 0 comments

ನಮ್ಮ ರಾಜ್ಯದ ಬಯಲು ಸೀಮೆ ಪ್ರದೇಶಗಳಲ್ಲಿ ಬೆಳೆಯುವ ಬೇಲದ ಹಣ್ಣಿನಷ್ಟು ಆರೋಗ್ಯಕರ ಹಣ್ಣು ಬೇರೊಂದಿಲ್ಲ.ಇದು ಒಂದು ಅರಣ್ಯ ಹಣ್ಣು. ರೋಮನ್ನರು ಈ ಮರವನ್ನು ಅರಣ್ಯ ದೇವತೆ ಎಂದು ಕರೆದಿದ್ದಾರೆ. ಅರೆ ಶುಷ್ಕ ಭೂಮಿಯಲ್ಲಿ ಬೆಳೆಯಲ್ಪಡುವ  ಹಣ್ಣಿನ ಬೆಳೆ ಇದು. ನಮ್ಮ ದೇಶದ ಫಲ ಸಂಪತ್ತಿನಲ್ಲಿ ಹೆಚ್ಚು ಜನಪ್ರಿಯವಾಗದೇ ಇರುವ ಬಹಳ ಆರೋಗ್ಯಪೂರ್ಣವಾದ  ಹಣ್ಣು ಎಂದರೆ ಇದು.

ಬೆಳೆಯುವ ಪ್ರದೇಶಗಳು:

  • ಕರಾವಳಿ ಮಲೆನಾಡಿನಲ್ಲಿ ಈ ಹಣ್ಣಿನ ಮರಗಳು ಇಲ್ಲವೇ ಇಲ್ಲ ಎನ್ನಬಹುದು.
  • ಉಳಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದು ಕಂಡು ಬರುತ್ತದೆ.
  • ಕಠಿಣ ಬಿಸಿಲನ್ನು ಸಹಿಸಿಕೊಂಡು ಬೆಳೆಯುತ್ತದೆ.
  • ಬಯಲು ಸೀಮೆಯಯ ಜನ ಬೇಲದ ಹಣ್ಣಿನ ಪಾನಕಕ್ಕೆ ಭಾರೀ ಮಹತ್ವ ಕೊಡುತ್ತಾರೆ.

ಔಷದೀಯ ಗುಣ:

  • ಕೆಮ್ಮು ಅಸ್ತಮಾ, ಗಂಟಲು ನೋವು ಮುಂತಾದ ಸಮಸ್ಯೆಗೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಮನೆ ಮದ್ದುಗಳಲ್ಲಿ ಬೇಲದ ಹಣ್ಣಿನ ಪಾನಕದ ಸೇವನೆ ಒಂದು.
  • ಈ ಹಣ್ಣು ಔಷಧೀಯ ಗುಣಗಳ ಆಗರ.
  • ವಿದೇಶಿಯರೂ ಇದನ್ನು ಒಪ್ಪಿದ್ದಾರೆ.
  • ಬಹಳ ಗಟ್ಟಿಯಾದ ಹೊರ ಕವಚ ಇರುವ ಹಣ್ಣು.
  • ಒಳಗೆ ಹಿತವಾದ ಸುವಾಸನೆ ಉಳ್ಳ ತಿರುಳು.
  • ಇದನ್ನು ಹಾಗೆಯೇ ತಿನ್ನುತ್ತಾರೆ.
  • ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿ ಉಳ್ಳ ಹಣ್ಣು. ಹೆಚ್ಚಾಗಿ ಇದನ್ನು ಪಾನಕ ಮಾಡಿ ಸೇವಿಸುತ್ತಾರೆ.
  • ರೋಗ ನಿರೋಧಕ ಶಕ್ತಿ ಕೊಡುವ ಈ ಪಾನಕದ ಸೇವನೆಯಿಂದ ಅನೇಕ ಲಾಭಗಳು ಇವೆ.
  • ಇದು ವಸಡಿನ ರಕ್ತ ಸ್ರಾವವನ್ನು ತಡೆಯುತ್ತದೆ.
  • ಅತಿಸಾರ, ಆಮಶಂಕೆ, ಕಫ, ಸುಸ್ತು, ಮುಂತಾದ ಸಮಸ್ಯೆಗಳಿಗೆ ಇದು ರಾಮಬಾಣ.
  • ಇದನ್ನು ಶಕ್ತಿ ವ ವರ್ಧಕ  ಟಾನಿಕ್ ಎಂದೇ ಕರೆಯುತ್ತಾರೆ.
  • ಕಣ್ಣು ಬೇನೆ, ರೋಗ ಮುಂತಾದ ಸಮಸ್ಯೆಗೂ ಸಹ ಬೇಲದ ಹಣ್ಣು ಪರಿಹಾರ.
  • ಇದು ವಿಷಹರವೂ  ಹೌದು.
  • ಮರದ ಸರ್ವಾಂಗವೂ ಔಷದೀಯ ಗುಣ ಹೊಂದಿದೆ.
  • ಎಲೆ ವಾತಹರ ಮತ್ತು ಇದರ ಕಷಾಯ ಮಕ್ಕಳಿಗೆ ಜೀರ್ಣ ಕ್ರಿಯೆಗೆ ಉತ್ತಮ ರಸ ಅಲರ್ಜಿ ತುರಿಕೆಗೆ ಮದ್ದು.

ವಿವಿಧ ಹೆಸರುಗಳು:

  • ಈ ಹಣ್ಣಿಗೆ ಬೆಳವಲ ಹಣ್ಣು ಎಂದು ಕರೆಯುತ್ತಾರೆ.
  • ಬ್ಯಾಲ, ಮಳೂರ, ವುಡ್ ಆಪಲ್, ಎಲಿಪೆಂಟ್ ಆಪಲ್, ಹಿಂದಿಯಲ್ಲಿ ಕವಿತ, ಸಂಸ್ಕೃತದಲ್ಲಿ ಕಪಿತ್ಥ, ದಂತಫಲ ಗ್ರಾಹಿ, ಕರಂಜ ಫಲಕ, ತೆಲುಗಿನಲ್ಲಿ  ವೇಲಗ, ತಮಿಳಿನಲ್ಲಿ ವಿಳಂಗ ಎಂಬ ಹೆಸರುಗಳಿಂದ  ಕರೆಯುತ್ತಾರೆ.
  • ಇದು ದೇಶದಾದ್ಯಂತ ಬೆಳೆಯಲ್ಪಡುತ್ತದೆ.
  • ಇದರ ವೈಜ್ಞಾನಿಕ ಹೆಸರು ಫೆರೋನಿಯಾ ಎಲಿಫೆಂಟಮ್ ( Feronia elephantum corr.F.limoinia L)
  • ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತನಕ ಹಣ್ಣು ಆಗುತ್ತದೆ.
  • ಇದರ ಮೂಲ ಭಾರತ ದೇಶದ. ಮುಳ್ಳುಗಳಿಂದ ಕೂಡಿರುವ ಮರ. ಬಿಲ್ವ ಪತ್ರೆ ತರಹ. ಕಂದು ಬಣ್ಣದ ತಿರುಳು.

ಸಸ್ಯಾಭಿವೃದ್ದಿ:

  • ಬೀಜದಿಂದ ಹುಟ್ಟಿ ಸಸಿಯಾದ ಮರಗಳೇ ಎಲ್ಲಾ ಕಡೆ ಕಂಡು ಬರುತ್ತದೆ.
  • ನಿರ್ಲಿಂಗ  ರೀತಿಯಲ್ಲೂ ಸಸ್ಯಾಭಿವೃದ್ದಿ ಮಾಡಬಹುದು.
  • ಇರರಲ್ಲಿ ತಳಿಗಳು ಇಲ್ಲ. ಎಲ್ಲಾ ಕಡೆಯಲ್ಲೂ ಒಂದೇ ತಳಿ.
  • ಕೆಲವು ಮರಗಳಲ್ಲಿ ಚಿಕ್ಕ ಗಾತ್ರದ ಹುಳಿ ಹಣ್ಣು ಮತ್ತೆ ಕೆಲವು ಕಡೆ ದೊಡ್ಡ ಗಾತ್ರದ ( ಕ್ರಿಕೆಟ್ ಬಾಲ್ ತರಹ) ಹಣ್ಣುಗಳನ್ನು ಬಿಡುವ ಮರಗಳನ್ನು ಕಾಣಬಹುದು.
  • ಹಣ್ಣಿನಲ್ಲಿರುವ ಬೀಜಗಳನ್ನು 24  ಗಂಟೆ ಗೋ ಮೂತ್ರದಲ್ಲಿ ಅದ್ದಿ ನಂತರ ಬಿತ್ತಿದರೆ ಮೊಳಕೆಯೊಡೆಯುತ್ತದೆ.

ಕೀಟ ರೋಗ ಬಾಧೆ ಇಲ್ಲದ , ಯಾವುದೇ ರಾಸಾಯನಿಕ ಕೀಟನಾಶಕ ರೋಗನಾಶಕ  ಹಾಗೂ ರಸಗೊಬ್ಬರ ಬಯಸದ ಆರೋಗ್ಯಕರ ಹಣ್ಣು.
ಹಿಂದೆ ಈ ಮರ ಒಂದು ದೈವಿಕ ಶಕ್ತಿಯ ಮರವಾಗಿ ಪರಿಗಣಿಸಲ್ಪಟ್ಟಿತ್ತು. ಹಾಗಾಗಿ ಯಾರೂ ಕಡಿಯುತ್ತಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿದ್ದ ಮರಗಳು ಯಾವ್ಯಾವುದೋ ಕಾರಣಕ್ಕೆ ಅವನತಿಯಾದವು. ರೈತರ ಹೊದದ್ದು, ಕೃಷಿ ವಿಸ್ತರಣೆಯಿಂದ ಕಳೆದು ಹೋಯಿತು. ಈಗ Anti oxient drink  ಎಂಬ ಹೆಸರಿನ ಸಿದ್ದ ಉತ್ಪನ್ನಕ್ಕಾಗಿ  ಇದಕ್ಕೆ ಮಹತ್ವ ಬರಲಾರಂಭಿಸಿದೆ. ನೆಟ್ಟು ಬೆಳೆಸುವ ಕಾರ್ಯ ಭರದಿಂದ ಸಾಗಿದೆ. ನೀವೂ ನೆಟ್ಟು ಬೆಳೆಸಿ.
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!