ಕಪ್ಪು ಗೋಧಿ- ಇದು ಬಲು ಅಪರೂಪ

by | Aug 27, 2020 | Health (ಆರೋಗ್ಯ) | 0 comments

ಅಕ್ಕಿಯಲ್ಲಿ ಕಪ್ಪಕ್ಕಿ ಬಗ್ಗೆ ಬಾರೀ ಪ್ರಚಾರ ಇದೆ. ಕಪ್ಪಕ್ಕಿ ಬೆಳೆಯುವ ಕೆಲವು ರೈತರು ನಮ್ಮಲ್ಲಿದ್ದಾರೆ. ಅದೇ ರೀತಿಯಲ್ಲಿ ಸಾಂಪ್ರದಾಯಿಕ ಕಪ್ಪು ಗೋಧಿ ತಳಿಯೂ ಇದೆ. ಇದನ್ನು ಉಳಿಸಿ ಸಂರಕ್ಷಿಸುವ ಕೆಲಸವನ್ನು ಕೆಲವು ರೈತರು ಮಾಡಿದ್ದಾರೆ. ಅವರಲ್ಲಿ ಒಬ್ಬರು ಮಧ್ಯಪ್ರದೇಶದ  ಬೋರೇಂದ್ರ ಸಿಂಗ್.
Black wheat

  • ಸುಮಾರು 25 ವರ್ಷಗಳಿಂದ ಇವರು ಕಪ್ಪು ಗೋಧಿಯನ್ನು ಬೆಳೆಸುತ್ತಾ ಬಂದಿದ್ದಾರಂತೆ.
  • ಇದು ಒಂದು ಸಾಂಪ್ರದಾಯಿಕ ಅಪರೂಪದ ತಳಿಯಾಗಿದ್ದು, ದೇಶದಲ್ಲಿ ಬಹಳ ಅಪರೂಪದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ.
  • ನಮ್ಮಲ್ಲಿ ಮಾನವನ ನಾಗರೀಕತೆಯ ಕಾಲದಿಂದ ಲಾಗಾಯ್ತು ಬೆಳೆಯಲಾಗುತ್ತಿದ್ದ ಅಹಾರ ಧಾನ್ಯಗಳಲ್ಲಿ, ತರಕಾರಿ ಹಣ್ಣು ಹಂಪಲುಗಳಲ್ಲಿ ಎಷ್ಟೊಂದು ವೈವಿಧ್ಯಮಯ  ತಳಿಗಳಿದ್ದವೋ ಯಾರಿಗೂ ಗೊತ್ತಿಲ್ಲ.
  • ನಮ್ಮ ತಾತ ಮುತ್ತಾತ ಅವರ ತಾತ ಮುಂತಾದ ವಂಶ ವೃಕ್ಷಗಳು ಸಮರ್ಪಕವಾಗಿ ಲಭ್ಯವಿಲ್ಲವೋ ಅದೇ ರೀತಿಯಲ್ಲಿ, ಹಿಂದೆ ಇದ್ದ ತಳಿಗಳು ಅವುಗಳ ಗುಣ ವಿಷೇಶಗಳು ಹೊಸ ತಲೆಮಾರಿಗೆ ಗೊತ್ತೇ ಇಲ್ಲ.
  • ಬಹುಷಃ ಮಾನವ ಧವಸ ಧಾನ್ಯ, ಹಣ್ಣು ಹಂಪಲು ತರಕಾರಿಯನ್ನು ಬೆಳೆದು ಬಳಸಲು ಪ್ರಾರಂಭಿಸಿದಂದಿನಿಂದ ಈ ತನಕ ಅದೆಷ್ಟೂ ತಳಿ ವೈವಿಧ್ಯಗಳ ಸಾಮ್ರಾಜ್ಯವೇ  ಅಳಿದು ಹೋಗಿತೋ ಯಾರಿಗೆ ಗೊತ್ತು!

ಬಹುಶಃ ನಮ್ಮ ಹಿರಿಯರ ಧೀರ್ಘಾಯುಶ್ಯ, ರೋಗ ನಿರೋಧಕ ಶಕ್ತಿ ಹಾಗೆಯೇ  ಇನ್ನಿತರ ಆರೋಗ್ಯ ಗುಣಗಳಿಗೆ ಅವರ ಆಹಾರದ ಪೌಷ್ಟಿಕತೆಗಳ ಗುಣವೇ ಆಧಾರವಾಗಿರಬೇಕು.

ಕಪ್ಪು ಗೋಧಿಯ ವಿಷೇಶ :

Black wheat in plant

  • ಇದು ನಾವು ಸಾಮಾನ್ಯವಾಗಿ ಕಾಣುವ ಚಿನ್ನದ ಬಣ್ಣದ ಮಡಿ ಗೋಧಿಯಂತಿಲ್ಲ. ಬದಲಿಗೆ ಅದೇ ಆಕಾರದಲ್ಲಿ ಕಪ್ಪು ಬಣ್ಣವನ್ನು ಹೊಂದಿದೆ.
  • ಇದರಲ್ಲಿ ಸಾಮಾನ್ಯ ಗೋಧಿಗಿಂತ ಹೆಚ್ಚಿನ ಪೌಷ್ಟಿಕಾಂಶಗಳು ಅಡಕವಾಗಿದೆ.
  • ಇದು ಮಾನವನ ದೈಹಿಕ ಅಶಕ್ತಿಯನು ನಿವಾರಿಸುವ ಗುಣ ಹೊಂದಿದೆ.
  • ಅಲ್ಲದೆ ಕೆಲವು ಅಸಾಸ್ತ್ಯಗಳಾದ  ಹೆಚ್ಚುವರಿ ಬೊಜ್ಜು ( Obesity)  ಕ್ಯಾನ್ಸರ್, ಮಧು ಮೇಹ, ಹೃದಯ ಸಂಬಂಧಿ ಸಮಸ್ಯೆಗಳ  ನಿವಾರಣೆಗೆ  ಇದು ಉತ್ತಮ ಆಹಾರ.

ಸಾಮಾನ್ಯ ನಾವು ತಿನ್ನುವ ಗೋಧಿಯಲ್ಲಿ ಪ್ರೋಟೀನ್ ಮತ್ತು ಪ್ಲೋವನಾಯ್ಡ್ ಗಳು (Anthocyanin) 5-15 ppm ಪ್ರಮಾಣದಲ್ಲಿರುತ್ತದೆ.  ಆದರೆ ಕಪ್ಪು ಗೋಧಿಯಲ್ಲಿ 40-140 ppm ನಷ್ಟು ಇರುತ್ತದೆ. ಇದರಲ್ಲಿ  ಸತುವಿನ  ZINK ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಇದನ್ನು ಬಳಸುವುದರಿಂದ ಆರೋಗ್ಯ ಸ್ಥಿತಿಗತಿ ಸುಧಾರಣೆಯಾಗುತ್ತದೆ.
  • ಈಗಿನ ಸಮಯದಲ್ಲಿ ಬಹುತೇಕ ಎಲ್ಲರೂ ಆಯಾಸ,ಖಿನ್ನತೆ(Stress) ಬಳಲುತ್ತಿರುತ್ತಾರೆ.
  • ಇದನ್ನು ನಿವಾರಿಸುವ ಸಲುವಾಗಿ ಅವನು ಬೇರೆ ಬೇರೆ ಹೊಸ ಹೊಸ ಔಷಧಿಗಳನ್ನು ಬಳಸುತ್ತಾನೆ.
  • ಆದರ ಪರಿಣಾಮದಿಂದ ಸ್ವಲ್ಪ ಸಮಯ ಕಳೆದ ನಂತರ ಅದರ ಅಡ್ದ ಪರಿಣಾಮಗಳಿಂದ ಶಾರೀರಿಕ ಅಸ್ವಾಸ್ಥ್ಯ ಹೆಚ್ಚೇ ಆಗುತ್ತದೆ.
  • ಇಂತವರಿಗೆ ಕಪ್ಪು ಗೋಧಿ ಎಂಬುದು ಒಂದು ಔಷಧೀಯ ಆಹಾರ ಇದ್ದಂತೆ. ಯಾವುದೇ ಆಡ್ಡ ಪರಿಣಾಮ ಇರುವುದಿಲ್ಲ.

ಈ ಗೋಧಿಯನ್ನು ಮೊಹಾಲಿಯ ರಾಷ್ಟ್ರೀಯ ಕೃಷಿ ಆಹಾರ ಜೀವ ತಂತ್ರಜ್ಞಾನ ಸಂಸ್ಥೆಯು( National Agri-food Biotechnology Institute NABI)  ಕಳೆದ 7 ವರ್ಷಗಳಿಂದ ಅಧ್ಯಯನ ನಡೆಸಿ  ಇದರ ಆರೋಗ್ಯ ಗುಣವನ್ನು ಪರಿಗಣಿಸಿ ಇದಕ್ಕೆ  Nabi MG ಎಂಬ ಹೆಸರನ್ನು ಕೊಟ್ಟಿದೆ. ಇದಕ್ಕೆ ಪೇಟೆಂಟ್ ಸಹ ದೊರೆತಿದೆ.

  • ಕಳೆದ ವರ್ಷ ಇದರ ಬೀಜಕ್ಕಾಗಿ ಬಹಳ ಬೇಡಿಕೆ ಬಂದಿತ್ತು ಆದರೆ ಲಭ್ಯತೆ ತುಂಬ ಕಡಿಮೆ ಇದ್ದ ಕಾರಣ ಬಹಳಷ್ಟು ಜನ ಬೀಜ ಪಡೆಯಲು ಆಗಲಿಲ್ಲ.
  • ಈ ವರ್ಷ ಸ್ವಲ್ಪ ಮಟ್ಟಿಗೆ ಬೀಜಗಳು ಲಭ್ಯವಿದ್ದು, ಯಾರಾದರೂ ಬೀಜ ಬಯಸಿದಲ್ಲಿ  ಇವರನ್ನು ಸಂಪರ್ಕಿಸಬಹುದು.

ಇದರ ಬೀಜವನ್ನು ಕುಂಡದಲ್ಲಿ ಹಾಕಿಯೂ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಗೋಧಿ ಬೆಳೆಸಬಹುದು. ತಳಿಯ ಉಳಿವಿಗೆ ಎಲ್ಲರೂ ಸಹಕರಿಸಿದರೆ ಎಲ್ಲಿಯಾದರೂ ಇದು ಸಂರಕ್ಷಿಸಲ್ಪಡುತ್ತದೆ.
picture curtsy by Berendra singh
ವಿಳಾಸ ಮತ್ತು ಸಂಪರ್ಕ: Berendra Singh, Morena, madhyapradesh8555092809 Berendra73@gmail.com
end of the artile:————————————
search words: Wheet# black wheat# Berendra singh#  healthy wheat#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!