ಕೃಷಿಗೆ ಎಲ್ಲವೂ ಇದೆ- ಅದರೆ ನಮಗಲ್ಲ.– ಎನ್ ಸಿ ಪಠೇಲ್.

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಅವರ ತಿಳುವಳಿಕೆಯ ಜ್ಞಾನದಲ್ಲೇ ಕೃಷಿ ಮಾಡುತ್ತಿದ್ದಾರೆ. ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ಕೃಷಿ ಸಂಶೋಧನೆ ಮತ್ತು ವಿಸ್ತರಣೆಗೆ ಕೊಡುತ್ತಿದೆ. ಇದು ಎಲ್ಲಿಗೆ ಹೋಗುತ್ತದೆಯೋ ಗೊತ್ತಾಗುವುದಿಲ್ಲ.

  • ಶ್ರೀಯುತ ನಾಗದಾಸನ ಹಳ್ಳಿಯ ಪ್ರಗತಿಪರ ಕೃಷಿಕ ಎನ್ ಸಿ ಪಠೇಲ್ ರವರು ವಯಸ್ಸಿನಲ್ಲಿ ಹಿರಿಯರು.
  • ಜೊತೆಗೆ ಬಹಳ ಹಿರಿಯ ಕೃಷಿಕರು.
  • 1990 ಇಸವಿಯಲ್ಲಿ  ಬೆಂಗಳೂರಿನ ಜಿಂದಾಲ್ ಕಂಪೆನಿಯ  ಆಸ್ಪತ್ರೆಯೊಂದರ ಉಧ್ಗಾಟನೆಗೆ ಬಂದಿದ್ದ, ಆಗಿನ ಉಪ ಪ್ರಧಾನಿ  ಶ್ರೀ ದೇವೀ ಲಾಲ್ ಇವರ ಹೊಲಕ್ಕೆ ಭೇಟಿಕೊಟ್ಟಿದ್ದರು.

ಅಂದು ಸ್ಥಳದಲ್ಲೇ  ನಾವೆಲ್ಲಾ ಬಳಸುವ  ಹನಿ ನೀರಾವರಿಯಂತಹ ನೀರುಳಿತಾಯ ವ್ಯವಸ್ಥೆಗೆ ಸರಕಾರ ಸಹಾಯ ಧನ ನೀಡಬೇಕು ಎಂದು ಘೋಷಿಸಿ ಅದನ್ನು ಪ್ರಾರಂಭಿಸಿದ್ದು ಇಲ್ಲೇ.

  • ಅಂತಹ ಧೀಮಂತ ಕೃಷಿ ಮಂತ್ರಿಗಳಿದ್ದರೆ ಮಾತ್ರ ಭಾರತದ ಕೃಷಿ ಅಭಿವೃದ್ದಿ ಸಾಧ್ಯ ಎಂಬುದು ಪಠೇಲರ ಮನದಾಳದ ಮಾತು.

ಕೃಷಿ ನೀತಿ ಸರಿ ಇಲ್ಲ:

  • ನಮ್ಮ ದೇಶದಲ್ಲಿ ಕೃಷಿ ಅಭಿವೃದ್ದಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡುತ್ತದೆ.
  • ಈ ತನಕ ಕೃಷಿ ಕ್ಷೇತ್ರಕ್ಕಾಗಿ ವಿನಿಯೋಗಿಸಿದ ಹಣದಲ್ಲಿ ದೇಶದ ಕೃಷಿ ಚಿತ್ರಣ ಅಮೂಲಾಗ್ರವಾಗಿ  ಬದಲಾವಣೆ ಆಗಬೇಕಿತ್ತು.
  • ಆದರೆ ಅದು ಇಂದಿಗೂ ಕುಂಟುತ್ತಾ ಸಾಗಿದೆ.
  • ಇದಕ್ಕೆಲ್ಲಾ ಕಾರಣ ನಮ್ಮಲ್ಲಿ ಕೃಷಿ ಅಭಿವೃದ್ದಿಗಾಗಿ ಇಟ್ಟಿರುವ ವ್ಯವಸ್ಥೆಯ ವೈಫಲ್ಯ.
  • ಪ್ರಯೋಗಾಲಯ ಮತ್ತು ಆವರ ಪ್ರಾತ್ಯಕ್ಷಿಕಾ ತೋಟದಲ್ಲಿ ಮಾಡುವ ಬೆಳೆ ಪ್ರಾತ್ಯಕ್ಷಿಕೆ ಮತ್ತು ಅದರ ಅಧ್ಯಯನ ಅಲ್ಲಿಗೆ ಮಾತ್ರ ಸೂಕ್ತವೇ ಹೊರತು ಅದು ಸಾರ್ವತ್ರಿಕವಾಗಿ ಅಳವಡಿಕೆಗೆ ಅರ್ಹವಾದುದಲ್ಲ.

ಮಾಡುವುದು ಯಾರೋ- ಹೇಳುವುದು ಯಾರೋ:

ಪಠೇಲರು ಎಲ್ಲಿ ಹೋದರೂ ಹೇಳುವುದು – ಕೇಳುವುದು ಇಡೀ ಸಮುದಾಯಕ್ಕೆ ಉಪಕಾರವಾಗುವ ಕೆಲಸ ಮಾಡಿ ಎಂದು
  • ದೇಶಕ್ಕೆ ಕೃಷಿಕರು ಬೇಕಿದ್ದರೆ, ಕೃಷಿ ಉತ್ಪಾದನೆಯಿಂದ ದೇಶದ ಜನರ ಹೊಟ್ಟೆ ತುಂಬಲೇ ಬೇಕಿದ್ದರೆ ಮಾಡಬೇಕಾದುದು ಬೇರೆಯೇ ಇದೆ.
  • ಪ್ರತೀ ತಾಲೂಕು ಮಟ್ಟದಲ್ಲಿ ಆಯಾ ತಾಲೂಕಿನ ಬೆಳೆಯ ಪ್ರಾತ್ಯಕ್ಷಿಕಾ ಹೊಲವನ್ನು ಕೃಷಿ ಇಲ್ಲವೇ ತೋಟಗಾರಿಕಾ ಇಲಾಖೆ ಅಥವಾ ಸಂಶೋಧಾನ ಸಂಸ್ಥೆ ಮಾಡಿ ತೋರಿಸಬೇಕು.
  •   ಇದು ಉಳಿದ  ರೈತರಿಗೆ ಮಾದರಿಯಾಗಿರಬೇಕು.
  • ಇಂದು ರೈತರಿಗೆ ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಒಳ್ಳೆಯದಿತ್ತೇ, ಅವರು ಹಾಕಿದ ಗೊಬ್ಬರ  ಹಾಕಿದರೆ ಒಳ್ಳೆಯದೇ  ಹೀಗೆಲ್ಲಾ  ದ್ವಂದ್ವಗಳು.
  • ರೈತ ಯಾವಾಗಲೂ ತನ್ನದೇ ಆದ ಪ್ರಯೋಗ ಮತ್ತು ವೈಫಲ್ಯಗಳಲ್ಲೇ  ತನ್ನ ಜೀವಮಾನವನ್ನು ಕಳೆಯುತ್ತಿದ್ದಾನೆ.
  • ಅದು ಆಯ್ಕೆ ಮಾಡಿದ ರೈತನ ಹೊಲದಲ್ಲಿ ಅವರ ಖರ್ಚಿನಲ್ಲೇ ಆಗಬೇಕು.

ರಕಾರ ಪ್ರತೀಯೊಂದು ಬೆಳೆಗೂ ಸಂಶೋಧನೆಗೆ ವಿಜ್ಞಾನಿಗಳನ್ನು ನೇಮಿಸಿದೆ. ಇವರೆಲ್ಲರೂ ತಮ್ಮ ಕೇಂದ್ರದ ಒಳಗೆ ಸಂಶೋಧನೆ ಮಾಡಿದರೆ ಫಲವಿಲ್ಲ. ಅದನ್ನು ಜನ ಆಳವಡಿಸಿಕೊಳ್ಳುವಂತೆ ಸ್ಥಳೀಯ ವಾತಾವರಣದಲ್ಲಿ ಮಾಡಿ ತೋರಿಸಬೇಕು.

ಏನೆಲ್ಲಾ ಇದೆ-ಯಾರಿಗೂ ಗೊತ್ತಿಲ್ಲ:

  • ನಮ್ಮಲ್ಲಿ ಇರುವ ಸಂಶೋಧನಾ ಸಂಸ್ಥೆಗಳು ಹಲವು. ಇಲ್ಲಿ ಲಕ್ಷಾಂತರ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ.
  • ಆದರೆ ಅದು ಯಾವುದಾದರೂ ರೈತನಿಗೆ ಗೊತ್ತಿದೆಯೇ?  ಇಲ್ಲ.
  • ನಮ್ಮ ರಾಜ್ಯದಲ್ಲೇ CFTRI  ಎಂಬ ಸಂಸ್ಥೆ ಇದೆ. ಇಲ್ಲಿ ಏನೇನೋ ದೊಡ್ದ ದೊಡ್ಡ ಸಂಶೋಧನೆಗಳು ನಡೆಯುತ್ತವೆ.
  • ಆದರೆ ಅದು ಅವರ ಶೋಕೇಸ್ ಒಳಗೆ ಪ್ರದರ್ಶನಕ್ಕೆ ಮಾತ್ರ.
  • ಯಾವ ಬೆಳೆಗಾರರಿಗೆ ಅದನ್ನು ಅಳವಡಿಸಿಕೊಂಡು ಮೌಲ್ಯವರ್ಧನೆಮಾಡಲು ಸಾಧ್ಯವಾಗುತ್ತಿದೆ.
  • ಇದೆಲ್ಲಾ ಹಣ ಉಳ್ಳ ಕಾರ್ಪೋರೇಟ್ ಗಳ ಕೈಗೆ ಹೋಗುತ್ತಿದೆ.

ಇದನ್ನು ಬಹಿರಂಗವಾಗಿ ಕೇಳಲು ಯಾರಿಗೂ ಧೈರ್ಯವಿಲ್ಲ. ಇದಕ್ಕೆಲ್ಲಾ ವ್ಯಯವಾಗುವುದು ನಮ್ಮ ದೇಶದ ನಾಗರೀಕರ ಹಣವೇ ಹೊರತು ಬೇರೆ ಮೂಲದ್ದಲ್ಲ. ಇದನ್ನು ತಿಳಿಯುವ ಮತ್ತು ಅಳವಡಿಸುವ ಹಕ್ಕು ಪ್ರತೀಯೊಬ್ಬನಿಗೂ ಇದೆ.

  • ಇಂತಹ ಮಾತುಗಳನ್ನು ಹೇಳುವವರು ತುಂಬಾ ಕಡಿಮೆ.
  • ಹಿಂದೊಮ್ಮೆ ಹಿರಿಯ ಕೃಷಿಕರು ಮತ್ತು ಕೃಷಿಯಲ್ಲಿ ತುಂಬಾ ಜ್ಞಾನವನ್ನು ಸಂಪಾದಿಸಿಕೊಂಡಿದ್ದ ದಿವಂಗತ ಕೊಕ್ಕರ್ಣೆ ಭಾಸ್ಕರ ಕಾಮತರು ಹೇಳಿದ್ದು ಈಗಲೂ ನೆನಪಿದೆ.
  • ಇವರೆಲ್ಲಾ ಹೇಳುತ್ತಾರೆ. ಆದರೆ ಯಾಕೆ ತಮ್ಮ ಸಂಶೋಧನಾ ಕೆಂದ್ರದಲ್ಲಿ ಹಸು ಕಟ್ಟಿ ತಾವೇ ಹುಲ್ಲು ಬೆಳೆಸಿ, ಹಿಂಡಿ ಹಾಕಿ,  ಹಾಲು ಕರೆದು ನೋಡುವುದಿಲ್ಲ.
  • ಅದನ್ನು ಮಾಡಿ ನಮಗೆ ಹೇಳಿದರೆ ಮಾತ್ರ ಅದನ್ನು ಅಳವಡಿಸಿಕೊಳ್ಳಬಹುದು.

ಕೃಷಿ ವ್ಯವಸ್ಥೆಯ ಈ ಮಿಡಿತವನ್ನು  ಆಡಳಿತ ವರ್ಗ ಅರಿಯಬೇಕು. ಕೃಷಿ ವ್ಯಾಸಂಗ ಮಾಡಿದವರು ಹೊಲಕ್ಕೆ ಬರಬೇಕು. ರೈತರ ಜೊತೆಗೆ ಕೃಷಿ ವಿಜ್ಞಾನಿಗಳು, ಅಭಿವೃದ್ದಿ ಇಲಾಖೆಗಳು ನಿರಂತರವಾಗಿ ಇದ್ದರೆ ಮಾತ್ರ  ಕೃಷಿ ಅಭಿವೃದ್ದಿ, ಕೃಷಿಕನ ಆದಾಯ ದ್ವಿಗುಣ ಸಾಧ್ಯ.

 

Leave a Reply

Your email address will not be published. Required fields are marked *

error: Content is protected !!