ಕೊಕ್ಕೋ ಬೆಳೆದರೆ ಪ್ರೂನಿಂಗ್ ಅಗತ್ಯ.

ಕೊಕ್ಕೋವನ್ನು  ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ ಸಸ್ಯಗಳನ್ನು  ಉತ್ತಮವಾಗಿ ಆರೈಕೆ ಮಾಡಿದಲ್ಲಿ ಹೆಚ್ಚುವರಿ ಕೊಡು ಪಡೆಯಬಹುದು. ನಾವು ಕಂಡುಕೊಂಡಂತೆ  ಅರೆಮಲೆನಾಡು  ಭಾಗದಲ್ಲಿ ಕೊಕ್ಕೋ ಬಹಳ ಉತ್ತಮವಾಗಿ ಬರುತ್ತದೆ. ರೋಗ ತೊಂದರೆ ಇಲ್ಲ.

  • ಕೊಕ್ಕೋ ಸಸ್ಯವು ವರ್ಷದಲ್ಲಿ ಎರಡು ಬಾರಿ ಹೂ ಬಿಟ್ಟು ಎರಡು  ಬೆಳೆ  ಕೊಡುತ್ತದೆ.
  • ಮೊದಲನೇ ಬೆಳೆ ಬೇಸಿಗೆ ಕಾಲದಲ್ಲೂ ಎರಡನೇ ಬೆಳೆ ಮಳೆಗಾಲದಲ್ಲೂ  ದೊರೆಯುತ್ತದೆ.
  • ಹೂವು ಬಿಟ್ಟು 6 ತಿಂಗಳಿಗೆ  ಬೆಳೆಯುತ್ತದೆ.
  • ಮಾರ್ಚ್ ತಿಂಗಳಿನಿಂದ ಜುಲೈ ತನಕ ಅಧಿಕ ಇಳುವರಿ.
  • ಅನಂತರ ಸ್ವಲ್ಪ ಕಡಿಮೆ. ವರ್ಷ ಪೂರ್ತಿ ಫಸಲು ಇದ್ದೇ ಇರುತ್ತದೆ.
  • ವಾರ ವಾರ ಖರ್ಚಿಗೆ ಹಣ ದೊರೆಯುತ್ತದೆ.

ಕೊಕ್ಕೋ  ಒಂದು ಮಿಶ್ರ ಬೆಳೆಯಾದ ಕಾರಣ  ಅದರ ಬೆಳವಣಿಗೆ ಇತರ ಮುಖ್ಯ  ಬೆಳೆಗೆ  ತೊಂದರೆದಾಯಕವೂ ಆಗಬಾರದು. ಅದಕ್ಕೋಸ್ಕರವೂ ಸಸಿಯ ಗೆಲ್ಲನ್ನು  ಸವರುತ್ತಿರಬೇಕು.

 ಯಾಕೆ  ಪ್ರೂನಿಂಗ್:

  • ಪ್ರೂನಿಂಗ್ ಮಾಡದಿದ್ದರೆ  ಸಸ್ಯ  4-5 ಮೀ ಎತ್ತರದ ಮರವಾಗಿಯೂ ಬೆಳೆಯಬಲ್ಲುದು.  ಮಾಡಿದರೆ  ಕಾಯಿ ಹೆಚ್ಚು ಬಿಡುತ್ತದೆ.
  • ಸಾಮಾನ್ಯವಾಗಿ ಹೂವು ಬರುವ 2 ತಿಂಗಳ ಮುಂಚೆ ಪ್ರೂನಿಂಗ್  ಮಾಡಬೇಕು.
  • ಆಗಸ್ಟ್ ತಿಂಗಳಲ್ಲಿ  ಪ್ರೂನಿಂಗ್ ಮಾಡಿದರೆ ಒಕ್ಟೋಬರ್ ತಿಂಗಳಿಗೆ  ಹೂ ಮೊಗ್ಗು ಬಿಡಲಾರಂಭಿಸುತ್ತದೆ.
  • ತಡ ಮಾಡಿದರೆ ಹೂ ಬಿಡುವಿಕೆಯೂ ಮುಂದೆ ಹೋಗುತ್ತದೆ.

ಅಕ್ಟೋಬರ್ ತಿಂಗಳಿಗೆ  ಹೂ  ಬಿಟ್ಟರೆ  ಎಪ್ರೀಲ್  ತಿಂಗಳಿಗೆ  ಹೆಚ್ಚು ಹಣ್ಣುಗಳು ದೊರೆಯುತ್ತದೆ. ಮಳೆಗಾಲ  ಬರುವ ಜೂನ್ ತಿಂಗಳಿಗೆ  ಕಾಯಿಗಳು ಹಣ್ಣಾಗಿ ಮುಗಿಯುತ್ತದೆ. ಈ ಸಮಯದ ಬೆಳೆ ಬೆಳೆಗಾಗರಿಗೆ ಹೆಚ್ಚು ಅನುಕೂಲಕರವಾದುದೂ, ಆದಾಯ ಕೊಡುವಂತದ್ದೂ ಆಗಿದ್ದು , ಯಾವುದೇ ಶಿಲೀಂದ್ರ ನಾಶಕ ಬೇಕಾಗುವುದಿಲ್ಲ. ದಂಶಕಗಳ ಉಪಟಳವೂ  ಹೆಚ್ಚು ಇರುವುದಿಲ್ಲ.  ಉತ್ಪಾದನೆ  ಗರಿಷ್ಟ ಪ್ರಮಾಣದಲ್ಲಿ ಪಡೆಯುವುದಕ್ಕೆ ನಮ್ಮ ಗುರಿ ಇರಬೇಕು.

ಸಾಧ್ಯವಾದಷ್ಟು ಕಾಂಡದಲ್ಲಿ ಕಾಯಿ ಬರುವಂತಿದ್ದರೆ ಕೊಯಿಲು ಸುಲಭ
  • ಕೊಕ್ಕೋ ಸಸ್ಯವನ್ನು  ಅಡಿಕೆ  ತೋಟದಲ್ಲಿ ಬೆಳೆಸಿದ್ದರೆ  ನೆಲಮಟ್ಟದಿಂದ 1 ರಿಂದ 1.5 ಮೀ. ಎತ್ತರಕ್ಕಿರುವಷ್ಟು ಮಾತ್ರ  ಬೆಳೆಯಲು ಬಿಡಬೇಕು.
  • ನಂತರ  ಬರುವ ಚೂಪಾನನ್ನು  ತೆಗೆಯುತ್ತಿರಬೇಕು. ಅಡ್ಡ ಗೆಲ್ಲುಗಳನ್ನೂ ಸಹ  ಮರಕ್ಕೆ 4-5 ಸಂಖ್ಯೆಯಲ್ಲಿ ಮಾತ್ರವೇ ಉಳಿಸಿಕೊಳ್ಳಬೇಕು.
  • ಗೆಲ್ಲುಗಳಲ್ಲಿ ಎಲೆಗಳು ಇರಬೇಕು. ಆದರೆ  ಅದು ಪೂರ್ತಿ ಕವಿದುಕೊಂಡು ಇರಬಾರದು.
  •  ಒಂದು ಕಾಯಿಗೆ  30 ಎಲೆಗಳು ಇರಬೇಕು ಎಂಬುದು  ಲೆಕ್ಕಾಚಾರವಾದರೂ ಆದಕ್ಕಿಂತ ಸ್ವಲ್ಪ ಕಡಿಮೆಯಾದರೂ  ತೊಂದರೆ ಇಲ್ಲ.
  • ಎಲೆ ಹೆಚ್ಚು ಇದ್ದರೆ ಕಾಯಿ ಜಾಸ್ತಿ ಲಭ್ಯ. ಕವಲು ಗೆಲ್ಲುಗಳ ತುದಿ ಭಾಗ 1 ಮೀ ದೂರ ಬೆಳೆದ ನಂತರ ಕತ್ತರಿಸುತ್ತಿರಬೇಕು.

ಉದ್ದ ಬೆಳೆದರೆ  ಅದು ಬಾಗಿ ಅದರಲ್ಲಿ ಮತ್ತೆ  ಕಂಬ ಚಿಗುರುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ.  ಹೆಚ್ಚಿನ ಕಂಬ ಚಿಗುರುಗಳನ್ನು ತೆಗೆದು  ಗಿಡಕ್ಕೆ  ಗಾಳಿ ಬೆಳಕು ಹೆಚ್ಚು ದೊರೆಯುವಂತೆ ಮಾಡಬೇಕು.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

  • ಸ್ಪ್ರಿಂಕ್ಲರ್ ನೀರಾವರಿಗೆ ಕೊಕ್ಕೋ ಸಸ್ಯ  ನೀರಿನ ಎಸೆತಕ್ಕೆ ತೊಂದರೆ ಕೊಡದೇ ಇರಲಿ.
  • ತೆಂಗಿನ ತೋಟದಲ್ಲಿ ಬೆಳೆಸುವಾಗ  ಎರಡನೇ ಜಾರ್ಕೆಟ್ ಬಿಡಬಹುದು. ಅದರ ಎತ್ತರವೂ  3 ಮೀ ಗಿಂತ ಹೆಚ್ಚಾಗದಿರಲಿ. ಇದರಿಂದ ಕೊಯಿಲಿಗೆ ಅನುಕೂಲವಾಗುತ್ತದೆ.
  • ಕಸಿ ಮಾಡಿದ ಸಸ್ಯಗಳಾದಲ್ಲಿ  ಸವರುವಿಕೆ ಸ್ವಲ್ಪ ಜಠಿಲ.
  • ಬುಡದಿಂದ ಒಂದೇ ಕಾಂಡ ಬಿಡಲಿಕ್ಕೂ ಕಷ್ಟವಾಗುತ್ತದೆ.
  • 2-3 ಕಾಂಡಗಳು ಇರುತ್ತವೆ. ಈ ಸಸ್ಯಗಳಲ್ಲಿ  ಎತ್ತರ ಬೆಳೆಯುವುದನ್ನು  ನಿಯಂತ್ರಿಸಬೇಕಾಗಿಲ್ಲ.
  • ಅಗಲ ಮತ್ತು ನಿಬಿಡವಾಗುವುದನ್ನು ನಿಯಂತ್ರಿಸಿ ಥಿನ್ನಿಂಗ್ ಮಾಡಬೇಕು.

ಪ್ರೂನಿಂಗ್ ಮಾಡುವುದರಿಂದ ಕಾಯಿಗಳ ಸಂಖ್ಯೆ  ಸ್ವಲ್ಪ ಕಡಿಮೆಯಾಗುತ್ತದೆಯಾದರೂ  ಬರುವ ಕಾಯಿಗಳು ಪುಷ್ಟಿಯಾಗಿರುತ್ತವೆ. ಕೊಯಿಲಿಗೆ ಅನುಕೂಲವಾಗುತ್ತದೆ. ಚೆನ್ನಾಗಿ ಪಕ್ವಾಗುತ್ತದೆ. ದಂಶಕಗಳ  ಉಪಟಳ ಸಹ  ಕಡಿಮೆಯಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!