ಕೊಕ್ಕೋ ಬೆಳೆದರೆ ಹಸುರು ಸೊಪ್ಪಿಗೆ ಬರವಿಲ್ಲ.

ಕೊಕ್ಕೋ ಕೋಡು

ಇತ್ತೀಚಿನ ದಿನಗಳಲ್ಲಿ ನಮಗೆ ಹಿಂದಿನಂತೆ ತೋಟಕ್ಕೆ ಹಸಿ ಸೊಪ್ಪು ಸದೆ ಹಾಕಲು ಸಂಪನ್ಮೂಲಗಳಿಲ್ಲ. ಕಾಡು ಇಲ್ಲ. ತರುವ ಮಜೂರಿಯೂ ಅಧಿಕ. ಕೊಕ್ಕೋ ಬೆಳೆ ತೋಟದಲ್ಲಿದ್ದರೆ ವರ್ಷಕ್ಕೆ ಸಾಕಷ್ಟು ಹಸುರು ಸೊಪ್ಪು ದೊರೆಯುತ್ತದೆ. ಈ ಸೊಪ್ಪಿನಲ್ಲಿ ಪೋಷಕಾಂಶಗಳು ಹೆಚ್ಚು ಇರುತ್ತವೆ.  ರಾಸಾಯನಿಕ ಮೂಲದ ಸೂಕ್ಷ್ಮ ಪೋಷಕ, ಸುಣ್ಣ, ಮೆಗ್ನೀಶಿಯಂ ಬಳಸುವ ಖರ್ಚನ್ನು ಇದು ಉಳಿಸುತ್ತದೆ. ಹಸಿ ಸೊಪ್ಪು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಒಳ್ಳೆಯ ಆಹಾರ.

 • ಅಡಿಕೆ ಮರಗಳ ಮಧ್ಯಂತರದಲ್ಲಿ ಕೊಕ್ಕೋ ಬೆಳೆದಾಗ  ಕೊಕ್ಕೋ ಸಸ್ಯವು ತನ್ನ ಪಾಲಿನ ಪೋಷಕಾಂಶವನ್ನು  ಹೀರಿಕೊಂಡು ಸೊಂಪಾಗಿ ಬೆಳೆಯುತ್ತದೆ ಎಂಬುದು ನಿಜ.
 • ಅಷ್ಟೇ ಅದು ಪರೋಕ್ಷ ಪ್ರಯೋಜನವನ್ನೂ ಕೊಡುತ್ತದೆ.
 • ಮುಖ್ಯ ಬೆಳೆಗೆ ತೊಂದರೆ  ಆಗದಿರಲು ಕೊಕ್ಕೋ ಬೆಳೆಗೆ ಅಗತ್ಯವಾದ ಪೊಷಕಾಂಶ ಮತ್ತು ಸಮರ್ಪಕ ಪ್ರೂನಿಂಗ್ ಮಾಡುವುದೇ ಪರಿಹಾರ.

ಕೊಕ್ಕೋ ಗಿಡದಲ್ಲಿ ಫಲ

ಗೊಬ್ಬರ ಕೊಟ್ಟು ಬೆಳೆಸಬೇಕು:

 • ಕೊಕ್ಕೋ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಮುಖ್ಯವಾಗಿ ಅದಕ್ಕೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಪೋಷಕಾಂಶಗಳನ್ನು ಒದಗಿಸಬೇಕು.
 • ಪೋಷಕಾಂಶಗಳ  ಪೂರೈಕೆಯ ಮೇಲೆ ಅಧಿಕ ಹೂ ಬಿಡುವಿಕೆ ಕಾಯಿಯಾಗುವಿಕೆ ನಿಂತಿದೆ.
 • ಒಂದು ಕೊಕ್ಕೋ ಗಿಡಕ್ಕೆ ಒಂದು ಅಡಿಕೆ ಮರಕ್ಕೆ ಕೊಡುವಷ್ಟಾದರೂ ಗೊಬ್ಬರವನ್ನು ಕೊಡಲೇ ಬೇಕಾಗುತ್ತದೆ.
 • ವರ್ಷಪೂರ್ತಿ ಬೆಳೆವಣಿಗೆಯಲ್ಲಿ ಇರುವ ಕಾರಣ ಸ್ವಲ್ಪ ಹೆಚ್ಚೇ  ಗೊಬ್ಬರದ ಅವಶ್ಯಕತೆ  ಇರುತ್ತದೆ
 • ಒಂದು ಗಿಡಕ್ಕೆ  120 ಗ್ರಾಂ ಸಾರಜನಕ, 60 ಗ್ರಾಂ ರಂಜಕ, ಮತ್ತು 150 ಗ್ರಾಂ ಪೊಟ್ಯಾಶಿಯಂ ಗೊಬ್ಬರವನ್ನು  ಎರಡು ವಿಭಾಗ ಮಾಡಿ ಫೆಬ್ರವರಿಮಾರ್ಚ್ ಮತ್ತು ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ  ಕೊಡಬೇಕು.

ಹೂವು  ಇಲ್ಲದ ಸಮಯ ಸಪ್ಟೆಂಬರ್ ತಿಂಗಳಲ್ಲಿ ಮಾತ್ರ ದೊಡ್ದ ಗೆಲ್ಲುಗಳ ಪೂನಿಂಗ್ ಮಾಡಬೇಕು ಗೊಬ್ಬರಗಳನ್ನು ಕೊಡುವುದರಿಂದ ಅದು ಮುಖ್ಯ ಬೆಳೆಯ ಪೋಷಕಗಳನ್ನು  ಕಸಿಯುವುದಿಲ್ಲ.
ವರ್ಷಕ್ಕೊಮ್ಮೆ ಸತುವಿನ ಸಲ್ಫೇಟ್ , ಫೆರಸ್ ಸಲ್ಫೇಟ್ 1 ಲೀ. ನೀರಿಗೆ 3 ಗ್ರಾಂ ಪ್ರಮಾಣದಲ್ಲಿ ಹಾಕಿ ಎಲೆಗಳಿಗೆ ಸಿಂಪರಣೆ ಮಾಡಬೇಕು. ಹೂ ಬಾರದೆ ಇರುವ ಗೆಲ್ಲುಗಳನ್ನು ನಿರಂತರ ಪ್ರೂನಿಂಗ್ ಮಾಡುತ್ತಿರಬೇಕು. 

ಪ್ರೂನಿಂಗ್ ಮಾಡಿದ ಕೊಕ್ಕೋ ಗಿಡ

ನಿರ್ವಹಣೆ ಏನು ಮಾಡಬೇಕು:

 • ಕಾಂಡದಲ್ಲಿ ಬೆಳೆಯುವ ಎಳೆ ಚಿಗುರುಗಳನ್ನು ಎಳೆಯದಿರುವಾಗ  ಕೈಯಿಂದ ಮುರಿದು ತೆಗೆಯಬೇಕು.
 • ಪದೇ ಪದೇ ತೆಗೆಯುತ್ತಿದ್ದರೆ ಕ್ರಮೇಣ ಚಿಗುರು ಮೂಡುವುದು ಕಡಿಮೆಯಾಗುತ್ತದೆ.  
 • ಅಲ್ಲಿ ಗಂಟಿನಂತ ರಚನೆ ಉಂಟಾಗಿ ಆ ಭಾಗದಲ್ಲಿ ಹೂವು ಹೆಚ್ಚು ಬರುತ್ತದೆ.
 • ಕತ್ತಿಯಲ್ಲಿ ಕಡಿದು ಬಿಟ್ಟರೆ ಮತ್ತೆ ಮತ್ತೆ ಚಿಗುರುತ್ತಿರುತ್ತದೆ.

ಬೆಳೆದಷ್ಟೂ ಸೊಪ್ಪಿನ ಇಳುವರಿ ಹೆಚ್ಚು
 ಸ್ಪ್ರಿಂಕ್ಲರ್ ನೀರಾವರಿ ವಿಧಾನವಾದರೆ ಏಕ ಕಾಂಡವಾಗಿ  ಸುಮಾರು 7-8 ಅಡಿ ಎತ್ತರದ ತನಕ ಬೆಳೆದು ನಂತರ ಜಾರ್ಕೆಟ್ಗಳನ್ನು  ಬಿಟ್ಟರೆ ಅನುಕೂಲ. ಜಾರ್ಕೆಟ್ಗಳು ಸುಮಾರು 1.5 ಮೀಟರಿಗಿಂತ ಹೆಚ್ಚು ಬೆಳೆಯಲು ಬಿಡಬಾರದು. ಹೆಚ್ಚು ಬೆಳೆದರೆ  ಅದು ಬಾಗಿ ನೀರಾವರಿಗೆ ತಡೆಯಾಗುತ್ತದೆ.

 • ಕಾಂಡದಲ್ಲಿ ಬರುವ ಉಪ ರೆಂಬೆಗಳನ್ನು  ತೆಗೆಯುತ್ತಾ ಇದ್ದರೆ ಕಾಂಡಕ್ಕೆ ಭಾರ ಕಡಿಮೆಯಾಗಿ ಕೆಳಮುಖವಾಗಿ  ಬಾಗುವಿಕೆ ಕಡಿಮೆಯಾಗುತ್ತದೆ.
 • ಗೆಲ್ಲುಗಳು 3-4 ಅಡಿ ತ್ರಿಜ್ಯದಷ್ಟು ಮಾತ್ರ ಇರಬೇಕು.

ಅಡಿಕೆ ತೋಟದಲ್ಲಿ ಸೊಪ್ಪಿಗೆ ಮತ್ತು ಆದಾಯಕ್ಕೆ ಕೊಕ್ಕೋ
ಹನಿ ನೀರಾವರಿಯಾದರೆ ಸ್ವಲ್ಪ ಎತ್ತರ ಕಡಿಮೆಯಾದರೂ ತೊಂದರೆ  ಇಲ್ಲ. ಕೊಕ್ಕೋ ಸಸ್ಯ ಇರುವಲ್ಲಿ  ಒಡಾಟಕ್ಕೆ ತೊಂದರೆ ಆಗಬಾರದು. ಯಾವುದೇ ಸಾಗಾಣಿಗೆಗೆ ಅಡ್ಡಿಯಾಗಬಾರದು. ಅದಕ್ಕನುಗುಣವಾಗಿ ಎತ್ತರವನ್ನು ಕಾಪಾಡಿಕೊಳ್ಳಬೇಕು.

 • ಕೈಗೆಟಕದ ಕೊಡುಗಳನ್ನು ಸಣ್ಣ ಕತ್ತಿ ಕೊಕ್ಕೆಯ ಮೂಲಕ ಕೊಯಿಲು ಮಾಡಬೇಕು.
 • ಸವರಿದ ಗಿಡ ಒಂದು ಛತ್ರಿಯ ತರಹ ಇರಬೇಕು.
 • ಮೃದು ಕಾಂಡ ಕಸಿಯ ಗಿಡದಲ್ಲಿ ಏಕಕಾಂಡ ಬಾರದೆ ಬೇಗ ಕವಲುಗಳು ಬರುತ್ತದೆ.
 • ಇದರಲ್ಲಿ ಅನುಕೂಲ ಇದ್ದರೆ  ಮಾತ್ರ ಎತ್ತರಕ್ಕೆ ಬೆಳೆಯಲು ಬಿಡಬೇಕು.
 • ಕಣ್ಣು ಕಸಿ ಗಿಡಗಳು ಎತ್ತರಕ್ಕೆ  ಬೆಳೆಯಬಲ್ಲವು
 • ಸವರುವಾಗ ಒಂದು ಕಾಯಿಗೆ ಕನಿಷ್ಟ 30 ಎಲೆಗಳನ್ನು ಉಳಿಸಬೇಕು.
 • ಹೆಚ್ಚು ಗಾಳಿಯಾಡುವಿಕೆ  ಇದ್ದಲ್ಲಿ ರೋಗ ಕೀಟ ಬಾಧೆ ಕಡಿಮೆ.
 • ಕಾಂಡದಲ್ಲಿ ಬಿಡುವ ಕೋಡುಗಳು ಪುಷ್ಟಿಯಾಗಿ ಉತ್ತಮ ಬೀಜಗಳನ್ನು ಹೊಂದಿರುತ್ತದೆ.

ಪ್ರೂನಿಂಗ್ ವಿಧಾನ

ನಿರ್ಲಕ್ಷ್ಯ ಮಾಡಬಾರದು:

ತೆಂಗಿನ ತೋಟದಲ್ಲಿ ಕೊಕ್ಕೋ

 • ಕೊಕ್ಕೋಗೆ  ಬೆಲೆ ಇಲ್ಲ ಎಂದು ಕಡಿದು ಹಾಕಬೇಡಿ. 
 • ತೋಟಕ್ಕೆ ಮಂಗಳ ಕಾಟ ಇದ್ದರೆ ಅವುಗಳಿಗೆ ಬಿಡಿ.
 • ಉಳಿದ ಬೆಳೆಗೆ ತೊಂದರೆ  ಕಡಿಮೆಯಾಗುತ್ತದೆ.
 • ಬೆಲೆ ಎಷ್ಟೇ ಇರಲಿ ಬಂದದ್ದು ಲಾಭ.
 • ಸಸ್ಯದಲ್ಲಿ ಹಾಳಾಗುವ ಕೊಡುಗಳನ್ನು ಅಲ್ಲೇ ಉಳಿಸಬೇಡಿ.
 • ಅದನ್ನು ತೆಗೆದು  ವಿಲೇವಾರಿ ಮಾಡಬೇಕು.
 • ಇಲ್ಲವಾದರೆ   ರೋಗ ಕೀಟ ಸಮಸ್ಯೆ ಹೆಚ್ಚಾಗುತ್ತದೆ.

ಕೊಕೋ ಎಲೆಕೊಡುಗಳಿಂದ ಅಡಿಕೆಗೆ ರೋಗ ಹೆಚ್ಚಾಗುತ್ತದೆ ಎಂಬುದು ತಪ್ಪು. ಕೊಕ್ಕೋ ಸಸ್ಯಕ್ಕೆ,  ಎಲೆಯ ಅಡಿಗೆ, ಕೋಡಿಗೆ  ಅಡಿಕೆಗೆ ಸಿಂಪರಣೆ  ಮಾಡಿದಂತೆ ಶಿಲೀಂದ್ರ ನಾಶಕ ಸಿಂಪರಣೆ  ಮಾಡಬೇಕು.
ಸಸ್ಯಕ್ಕೆ ಗಾಳಿ ಬೆಳಕು ದೊರೆಯುವಂತೆ ಮಾಡಿ ರೋಗ ಪ್ರಸಾರವನ್ನು ತಡೆಯಬಹುದು. ಕೊಕ್ಕೋ ಬೆಲೆ ಇಲ್ಲದ ವರ್ಷ ಗರಿಷ್ಟ ಪ್ರೂನಿಂಗ್ ಮಾಡಿ. ಇದ್ದ ವರ್ಷ ಬೇಕಾದಷ್ಟೇ ಮಾಡಿ ಬೆಳೆ ಪಡೆಯಿರಿ. ಕೊಕ್ಕೋ ಅಡಿಕೆ  ತೆಂಗು ತೋಟಗಳಲ್ಲಿ ಸೂಕ್ಷ್ಮ ವಾತಾವರಣ ಉಂಟು ಮಾಡಲು, ಕಳೆ ನಿಯಂತ್ರಣಕ್ಕೆ ಮತ್ತು ಫಲವತ್ತತೆ ಹೆಚ್ಚಲು  ಸಹಕಾರಿಯಾಗುವ ಬೆಳೆ.
end of the article:———————————————————————————–
search words: Coco Intercrop # Intercrop with arecanut# Intercrop with coconut# Coco cultivation# Organic waste by coco plant#  Green manure #

Leave a Reply

Your email address will not be published. Required fields are marked *

error: Content is protected !!