ಜೈವಿಕ ಗೊಬ್ಬರವನ್ನು ಹೀಗೆ ಬಳಸಿದರೆ ಹೆಚ್ಚು ಫಲ ಸಿಗುತ್ತದೆ?

ಬೇರೆ ಬೇರೆ ಜೀವಾಣುಗಳ ಸಹಾಯದಿಂದ ಬೆಳೆ ಪೋಷಣೆ ಮತ್ತು ಬೆಳೆ ಸಂರಕ್ಷಣೆ ಮಾಡಬಹುದು. ಈ ಜೀವಾಣುಗಳನ್ನು ಹುಡಿ, ದ್ರವ ರೂಪದಲ್ಲಿ ರೈತರಿಗೆ ಒದಗಿಸಲಾಗುತ್ತದೆ. ಇದರ ಸಮರ್ಪಕ ಫಲಿತಾಂಶ ಯಾವ ಸಂದರ್ಭದಲ್ಲಿ ಚೆನ್ನಾಗಿ ನಡೆಯುತ್ತದೆ ಎಂಬುದು ಎಲ್ಲರೂ ತಿಳಿದಿರಬೇಕು.
Microbes grown om soil

  • ಜೀವಾಣುಗಳನ್ನು ಬಳಸುವ ಮುನ್ನ ಅದರ ಬಗ್ಗೆ ರೈತರು ತಿಳಿದುಕೊಳ್ಳಬೇಕು. ಅದು
  • ಜೀವಾಣು ಎಂದಲ್ಲ. ಯಾವುದೇ ಬೆಳೆ ಪೋಷಕ ಇರಲಿ ಬೆಳೆ ಸಂರಕ್ಷಕ ಇರಲಿ,

ಬಳಸುವ ಮುನ್ನ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ಯಾರು ಬಹಿರಂಗ ಗೊಳಿಸುತ್ತಾರೆಯೋ ಅವರಿಂದ ಅದನ್ನು ಖರೀದಿ ಮಾಡುವುದು ರೈತರ ಜಾಣತನ.

  • ಜೈವಿಕ  ಉತ್ಪನ್ನಗಳಲ್ಲಿ ರೋಗ ನಿಯಂತ್ರಕಗಳು, ಕೀಟ ನಿಯಂತ್ರಕಗಳು, ಪೋಶಕಾಂಶ ಬೂಸ್ಟರ್ ಗಳು, ಬೆಳವಣಿಗೆ ಪ್ರಚೋದಕಗಳು ಮುಂತಾದ ಹಲವು ಜೀವಾಣುಗಳು ಇವೆ.
  • ಬಹುತೇಕ ಎಲ್ಲವನ್ನೂ ಒಟ್ಟು ಸೇರಿಸಿ( consortia) ಕೊಡಲಿಕ್ಕೂ  ಆಗುತ್ತದೆ.
  • ಇವುಗಳನ್ನು ಬಳಸಿ ಪ್ರಯೋಜನ ಲಭಿಸಬೇಕಾದರೆ  ಅದನ್ನು ಸರಿಯಾದ ಸಮಯದಲ್ಲಿ ಬಳಕೆ ಮಾಡಬೇಕು.
  • ಪ್ರಯೋಗಾಲಯಕ್ಕೂ ಹೊಲಕ್ಕೂ ವ್ಯೆತ್ಯಾಸ ಇದ್ದು, ಬಳಕೆ ಮಾಡುವವರು ಕೆಲವು ಮೂಲಭೂತ ಸಂಗತಿಗಳನ್ನು ಅರಿತಿರಬೇಕು.

ಜೈವಿಕ ಉತ್ಪನ್ನಗಳು ಹೇಗಿರಬೇಕು:

After application of bio products it develops like this on soil.
ಜೈವಿಕ ಉತ್ಪನಗಳನ್ನು ಬಳಸಿದಾಗ ಸಾಮಾನ್ಯವಾಗಿ ಈ ರೀತಿ ನೆಲದಲ್ಲಿ ಅವು ಬೆಳೆದುದು ಕಾಣಿಸುತ್ತದೆ.
  • ಜೈವಿಕ  ಉತ್ಪನ್ನಗಳ ಕ್ಷಮತೆ ಇರುವುದು ಜೀವಾಣುಗಳ ತಳಿ(Strain) ನ್ನು ಅವಲಂಭಿಸಿದೆ.
  • ಅದರ ಸಂಖ್ಯೆ (Count of microbes) ಗರಿಷ್ಟ ಪ್ರಮಾಣದಲ್ಲಿ ಇರಬೇಕು.
  • ಮಣ್ಣಿನಲ್ಲಿರುವ ಇತರ ಜೀವಾಣುಗಳ ಜೊತೆ ಸಹಜೀವನ ನಡೆಸುವ ಗುಣ ಇರಬೇಕು.
  • ಹವಾಮಾನಕ್ಕೆ ಹೊಂದಿಕೆಯಾಗುವ ಗುಣ ಪಡೆದಿರಬೇಕು.
  • ಬಳಕೆಮಾಡಿದ ನೆಲದಲ್ಲಿ ಅದು ವಿಸ್ತಾರ ಪ್ರದೇಶದ ತನಕ ಹರಡುವ ಗುಣ ಪಡೆದಿರಬೇಕು.
  • ಇದೆಲ್ಲವೂ  ರೈತರು ಮಾಡುವಂತದ್ದಲ್ಲ.
  • ಅದನ್ನು ಪೂರೈಕ್ಕೆ ಮಾಡುವವರು ಇಂತಹ ಜೀವಾಣು ಉತ್ಪನ್ನವನ್ನು ತಯಾರಿ ಮಾಡಬೇಕು.
  • ಖರೀದಿ ಮಾಡುವಾಗ ಅ ಜೀವಾಣು ಯಾವ ಉಷ್ಣತಾಮಾನದಲ್ಲಿ ಸಂಗ್ರಹಿಸಲ್ಪಟ್ಟಿದೆ ಎಂಬುದನ್ನು ತಿಳಿಯಬೇಕು.
  • 20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ  ಜೀವಾಣುಗಳು ಚಟುವಟಿಕೆಯಲ್ಲಿರುತ್ತವೆ.
  • ಬಿಸಿ ಹೆಚ್ಚಾದಂತೆ ಅದರ  ಚಟುವಟಿಕೆ ಕಡಿಮೆಯಾಗುತ್ತಾ ಬರುತ್ತದೆ.
  • 40 ಡಿಗ್ರಿ ತಾಪಮಾನಕ್ಕೆ ಅವು ಸತ್ತೇ ಹೋಗುತ್ತವೆ.
  • ಮನಬಂದಂತೆ ಪ್ಯಾಕಿಂಗ್ ಮಾಡಿ, ಅಧಿಕ ಉಷ್ಣತೆಯ ವಾತಾವರಣದಲ್ಲಿ ದಾಸ್ತಾನು ಇಟ್ಟು ಮಾರಲ್ಪಡುವ ಉತ್ಪನ್ನದಲ್ಲಿ ಜೀವಾಣುಗಳು ಕನಿಷ್ಟ ಪ್ರಮಾಣದಲ್ಲಿ ಇರುತ್ತವೆ.

ರೈತರು   ತಿಳಿದುಕೊಳ್ಳಬೇಕಾದುದು:

  • ಜೀವಾಣು ಸಂಕೀರ್ಣಗಳು ( microbial consortia) ಸಾಮಾನ್ಯವಾಗಿ ತಾಪಮಾನ ಕಡಿಮೆ ಇರುವಾಗ ಬಳಸಬೇಕು.
  • ತಂಪು ಹವಾಮಾನ ಇರುವಾಗ ಇದರ ಬೆಳವಣಿಗೆಗೆ ಅನುಕೂಲವಾಗುತ್ತದೆ.
  • ಆದ ಕಾರಣ ಮಳೆಗಾಲದ ಅವಧಿಯಲ್ಲೇ ಇದನ್ನು ಬಳಕೆ ಮಾಡಬೇಕು.
  • ಸಿಂಪರಣೆ ಮಾಡಿ ಅಥವಾ ಚೆಲ್ಲಿದ ನಂತರ ಅದು ಒಂದೆರಡು ದಿನದಲ್ಲಿ ನೆಲದಲ್ಲಿ ಸಂಖ್ಯಾಭಿವೃದ್ದಿಯಾಗುತ್ತದೆ.
  • ಈ ಸಮಯದಲ್ಲಿ ಮಳೆ ಬಂದು ಅದು ಮಣ್ಣಿಗೆ ಸೇರ್ಪಡೆಯಾಗಬೇಕು.
  • ಪ್ರಖರ ಬಿಸಿಲು ಬಂದರೆ ಅದು  ಬದುಕುವ ಪ್ರಮಾಣ ಕಡಿಮೆ ಇರುತ್ತದೆ.

ಬಳಕೆ ಮಾಡುವ ಜೀವಾಣು ಶಿಲೀಂದ್ರ ಆಗಿದ್ದರೆ ಸ್ವಲ್ಪ ಆಮ್ಲೀಯವಾದರೂ (pH 6 ರಿಂದ  6.5) ಬ್ಯಾಕ್ಟೀರಿಯಾ ಆಗಿದ್ದರೆ ಮಣ್ಣು ತಟಸ್ಥ ಆಗಿದ್ದರೆ ಅನುಕೂಲ. ಆಗ ಅದರ ಕೆಲಸ ಉತ್ತಮವಾಗಿ ನಡೆಯುತ್ತದೆ.

  • ಬರೇ ಇಷ್ಟೇ ಅಲ್ಲ, ಬರೇ  ಮಣ್ಣಿನಲ್ಲಿ ಈ ಜೀವಾಣುಗಳು  ಬದುಕಿ ಕೆಲಸ ಮಾಡಲಾರವು.
  • ಅವುಗಳ ಚಟುವಟಿಕೆಗೆ ಆಹಾರವಾಗಿ ಸಾವಯವ ವಸ್ತುಗಳು ಅಗತ್ಯವಾಗಿ ಬೇಕು.
  • ಈ ಜೀವಿಗಳನ್ನು ಮಣ್ಣಿಗೆ ಒದಗಿಸುವಾಗ ಇತರ ತೀಕ್ಷ್ಣ ರಸ ಗೊಬ್ಬರ, ಕೀಟನಾಶಕ, ಶಿಲೀಂದ್ರ ನಾಶಕಗಳನ್ನು ಕೆಲವು ಸಮಯದ ತನಕ ಬಳಕೆ ಮಾಡಬಾರದು.

ಮಣ್ಣು ತೇವಾಂಶದಿಂದ ಕೂಡಿರಬೇಕು.  ಆಯಾಯ ಜೀವಾಣುಗಳಿಗೆ ಬೇಕಾಗುವ ಆಹಾರ ಅಥವಾ ಶಕ್ತಿಯ ಮೂಲವೂ ಇರಬೇಕು. ಹೀಗಿದ್ದಾಗ ಜೀವಾಣುಗಳ ಸೇರ್ಪಡೆಯಿಂದ ಬೆಳೆಗಳಿಗೆ ಅನುಕೂಲವಾಗುತ್ತದೆ.
end of the article: ————————————————————-
search words: Bio products in agriculture# bio control agents# bio fertilisers# bio control # Use of bio products#  Organic farming# microbial consortia#  count of microbes in bio products#  bio products and strins#
 

Leave a Reply

Your email address will not be published. Required fields are marked *

error: Content is protected !!