ತರಕಾರಿ ಬೆಳೆಗಳಲ್ಲಿ ಸಸ್ಯ ಹೇನು ನಿಯಂತ್ರಣ

by | Feb 24, 2020 | Vegetable Crops (ತರಕಾರಿ ಬೆಳೆ) | 0 comments

ಅಲಸಂಡೆ ಚಳಿಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆ.  ಈ ಸಮಯದಲ್ಲಿ ಇದರಲ್ಲಿ ಇಳುವರಿ ಜಾಸ್ತಿ. ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು.   ಇದರ  ನಿಯಂತ್ರಣ ಹೀಗೆ..

  • ಸಸ್ಯ ಹೇನು  ಅಥವಾ ಏಫಿಡ್ ( Aphids) ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ,
  • ಕಾಯಿಯ ಬೆಳವಣಿಗೆಯನ್ನು  ಕುಂಠಿತಗೊಳಿಸುತ್ತದೆ,
  • ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ. 
  • ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ..

ಸಸ್ಯ ಹೇನು ಎಂದರೇನು: 

  • ಸಸ್ಯ ಹೇನುಗಳಲ್ಲಿ ಸುಮಾರು 250 ಬಗೆಯ ಪ್ರಭೇಧಗಳಿದ್ದು, ಹೆಚ್ಚಿನವು ಬೆಳೆಗಳಿಗೆ ಹಾನಿ ಮಾಡುವವುಗಳಾಗಿವೆ.
  • ಇವು ರಸ ಹೀರುವುದು ಮಾತ್ರವಲ್ಲದೆ ಕೆಲವು ರೋಗಗಳನ್ನೂ ಸಹ ಪ್ರಸರಿಸುತ್ತವೆ.
  • ಇದರ ನಿಯಂತ್ರಣಕ್ಕೆ ಬೇರೆ ಬೇರೆ ಉಪಾಯಗಳಿದ್ದು, ರಾಸಾಯನಿಕವಾಗಿ ಡೈಮಿಥೋಯೇಟ್ ಕೀಟನಾಶಕವನ್ನು ಬಳಸಿ ಇದನ್ನು ನಿಯಂತ್ರಿಸಲಾಗುತ್ತದೆ.
  •  2.5 ಮಿಲಿ 1 ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಡೈಮಿಥೊಯೇಟ್ (ರೋಗರ್) ಇದನ್ನು ಬಳಕೆ  ಮಾಡಿ ಸುಮಾರು 1 ವಾರ ತನಕವಾದರೂ ಅದನ್ನು ಬಳಕೆ  ಮಾಡಬಾರದು.

  • ಇಷ್ಟು ಸಮಯ ಬಿಟ್ಟರೆ ಅದು ಅದು ಬೆಳೆದಿರುತ್ತದೆ. ಇದರ ಬದಲಿಗೆ ಇನ್ನೂ ಕೆಲವೊಂದು ಸುರಕ್ಷಿತ  ನಿವಾರಣಾ ಉಪಾಯಗಳಿವೆ.
  • ಹೆಚ್ಚಾಗಿ ಸಸ್ಯ ಹೇನುಗಳು ಎಳೆ ಚಿಗುರಿನ ಬಾಗದಲ್ಲಿ ಮೂಲತಹ ಕಂಡು ಬರುತ್ತದೆ.ಮೊದಲಾಗಿ ಇದನ್ನು ಗುರುತಿಸಿದ್ಡೇ ಆದರೆ ಎಲ್ಲಿ ಇದರ ಹಿಂಡು ಇದೆಯೋ ಆ ಭಾಗವನ್ನು  ಕತ್ತರಿಸಿ ತೆಗೆದು ಬೆಂಕಿಗೆ ಹಾಕಿ ನಾಶ ಮಾಡಬಹುದು.
  •  ಅಧಿಕ ಒತ್ತಡದಲ್ಲಿ ನೀರನ್ನು  ಈ ಸಸ್ಯ ಹೇನುಗಳು ಇರುವ ಭಾಗಕ್ಕೆ  ಸಿಂಪಡಿಸಿದಾಗ ಅದು ಸಣ್ಣ ಜೀವಿಯಾದ ಕಾರಣ ತೊಳೆದು ಹೋಗಿ ನಿಯಂತ್ರಣಕ್ಕೆ ಬರುತ್ತದೆ.

  • ಸಾಬೂನಿನ ದ್ರಾವಣ( ಧೋಬಿ ಸಾಬೂನು ಅಥವಾ ಡಿಷ್ ವಾಶ್)ಒಂದು 50 ಗ್ರಾಂ ನಷ್ಟು ಇರುವ ಒಂದು ತುಂಡು ಸಾಬೂನನ್ನು ನೀರಿನಲ್ಲಿ ಕರಗಿಸಿ ಅದನ್ನು ಸುಮಾರು 5 ಲೀ ನೀರಿಗೆ ಮಿಶ್ರಣ ಮಾಡಿ ಅದನ್ನು ಸಿಂಪರಣೆ ಮಾಡುವುದರಿಂದ ಸಸ್ಯ ಹೇನುಗಳು ಕಡಿಮೆಯಾಗುತ್ತವೆ.
  • ಸಾಬೂನಿನ ಖಾರ ಸಸ್ಯ ಹೇನುಗಳಿಗೆ ಮಾರಕವಾಗುತ್ತದೆ.
  • ಬೇವಿನ ಎಣ್ಣೆ ಅಥವಾ ಹೊಂಗೆ ಎಣ್ಣೆಯನ್ನು  ಸಾಬೂನು ನೀರಿನ ಜೊತೆಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಣ ಮಾಡಬಹುದು.
  • ಈ ಸಿಂಪರಣೆಯನ್ನು ಮಾಡುವಾಗ ಅಧಿಕ ಒತ್ತಡದಲ್ಲಿ ಹೇನುಗಳು ಇರುವ ಭಾಗಕ್ಕೆ  ಬೀಳುವಂತೆ ಸಿಂಪಡಿಸಬೇಕು.
  • ಕೆಲವು ಕಡೆ ಕೀಟ ನಿಯಂತ್ರಕ ಸಾಬೂನುಗಳು ಲಭ್ಯವಿದೆ.

  • ಈ ಸಾಬೂನಿನಲ್ಲಿ ಬೇವು, ಹೊಂಗೆ  ಜೊತೆಗೆ ಸಾಬೂನಿಗೆ ಬಳಕೆ ಮಾಡುವ ಮೂಲವಸ್ತುಗಳನ್ನು ಸೇರಿಸಿರುತ್ತಾರೆ.
  • ಇದನ್ನು ಕಲಕಿ ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಿಸಬಹುದು.
  • ಪ್ರಕೃತಿಯಲ್ಲಿ ಕೆಲವೊಂದು ಉಪಕಾರೀ ಕೀಟಗಳಿದು, ಹಸುರು ಬಣ್ಣದ ಮಿಡತೆ, ಕೆಲವು ಇರುವೆ, ಹಾಗೆಯೇ ಕೆಲವು ಪಕ್ಷಿಗಳು ಸಸ್ಯ ಹೇನುಗಳನ್ನು ತಿನ್ನುತ್ತದೆ.
  • ಇದನ್ನು ಗುರುತಿಸಿ ಅಲಸಂಡೆ ಬೆಳೆಯುವಲ್ಲಿ ಬಿಡುವುದರಿಂದ ಸಸ್ಯ ಹೇನು ನಿಯಂತ್ರಿಸಬಹುದು.   

 ಫಲ ಇರುವ ಸಮಯದಲ್ಲಿ  ರಾಸಾಯನಿಕ ಕೀಟನಾಶಕ ಬಳಕೆ ಮಾಡಬೇಡಿ. ಸಸಿ ಹಂತದಲ್ಲಿ ಬಳಸಿದರೆ ಸಮಸ್ಯೆ  ಇಲ್ಲ.  ಪ್ರಾರಂಭದ ಹಂತದಲ್ಲಿ ಹೇನು ನಿಯಂತ್ರಣ ಮಾಡಿದರೆ  ಮತ್ತೆ ಕಡಿಮೆಯಗುತ್ತದೆ.

end of the article: ————————————————————–
search words: pests of vegetables# Aphids control#  vegetable cultivation#  pest management in cowpia # suckling pest#
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!