ಬೂದು ಕುಂಬಳ -ಸರ್ವ ರೋಗ ನಿವಾರಕ.

by | Mar 16, 2020 | Krushi Abhivruddi, Vegetable Crops (ತರಕಾರಿ ಬೆಳೆ) | 0 comments

ಶರೀರದಲ್ಲಿ ಬೊಜ್ಜು ಇದೆಯೇ, ರಕ್ತದೊತ್ತಡ, ಮಧು ಮೇಹ , ಅಲ್ಲದೇ ಹೊಟ್ಟೆ ಸಂಬಂಧಿತ ತಾವುದೇ ಸಮಸ್ಯೆಗಳಿದ್ದರೂ ಕುಂಬಳ ಕಾಯಿಗೆ ಅದನ್ನು ಸರಿಪಡಿಸುವ ಶಕ್ತಿ ಇದೆ. ಇದರ ಜ್ಯೂಸ್ ದಿನಾ ಒಂದು ಲೋಟ ಕುಡಿದರೆ ನೀವು ಧೀರ್ಘಾಯುಶಿಗಳಾಗುತ್ತೀರಿ. ಬೂದಿ ಕುಂಬಳದ ರಸವನ್ನು ಕುಡಿಸಿ ಪ್ರಕೃತಿ ಚಿಕಿತ್ಸೆಯಲ್ಲಿ ಆರೋಗ್ಯ ಸಮಸ್ಯೆ ಸರಿಪಡಿಸಲಾಗುತ್ತದೆ.

 • ಏಷ್ಯಾದ  ಜಾವಾ ಮೂಲದ ತರಕಾರಿ ಇದು.
 • ತರಕಾರಿಯೂ ಧೀರ್ಘಾಯುಶಿ. ತಿಂದವರೂ ಧೀರ್ಘಾಯುಶಿಗಳು.
 • ಚಪ್ಪರದ ಮೇಲೆ, ನೆಲದ ಮೇಲೆ  ಹಬ್ಬಿ ಬೆಳೆಯುವ ಬಳ್ಳಿ ಸಸ್ಯ.
 • ಸೋರೆಕಾಯಿ ಕುಟುಂಬಕ್ಕೆ ಸೇರಿರುವ ತರಕಾರಿ ಬೂದುಗುಂಬಳ.
 • ಈ ಬೂದುಗುಂಬಳಕ್ಕೆ ಸಸ್ಯಶಾಸ್ತ್ರದಲ್ಲಿ  Benincasa hispida  ಎಂದು ಕರೆಯುತ್ತಾರೆ.
 • ಸಂಸ್ಕೃತ ಬಾಷೆಯಲ್ಲಿ ಇದಕ್ಕೆ ಕೂಶಮಾಂಡ.
 • ಹಿಂದಿ ಬಾಷೆಯಲ್ಲಿ ಪೇಟಾ ಮತ್ತು ಸಫೇದ್ ಪೇಟಾ ತೆಲುಗಿನಲ್ಲಿ ಬೂದು ಗಮ್ಮಡ ಎನ್ನುತ್ತಾರೆ.
 • ಹೊರ ದೇಶಗಳಲ್ಲೂ ಇದನ್ನು ಬೆಳೆಸಿ ಬಳಸುತ್ತಾರೆ.

 ಬೂದಿ ಯಾಕೆ ಇದೆ:

 • ಬಲಿತ ಕುಂಬಳಕಾಯಿ ಸಿಪ್ಪೆ ತುಂಬಾ ಗಟ್ಟಿಯಾಗಿದ್ದು ಹಸಿರು ಬಣ್ಣ ಹೊಂದಿದೆ.
 • ಸಿಪ್ಪೆಯ ಮೇಲೆ ಜಿಡ್ಡಿನಿಂದ ಕೂಡಿದ ಬಿಳಿಪುಡಿ ಲೇಪನ ಇದೆ.
 • ಬೂದಿ ಲೇಪನ ಉಳ್ಳ ಕಾರಣ  ಇದಕ್ಕೆ ಬೂದುಗುಂಬಳ ಎಂದು ಹೆಸರು ಬಂದಿದೆ.
 • ಈ ಬೂದಿಯಂತಹ  ಬಿಳಿಯ ಪುಡಿ ಕೀಟಗಳಿಂದ ಕಾಯಿಯನ್ನು ರಕ್ಷಿಸುತ್ತದೆ.
 • ದಪ್ಪ ಸಿಪ್ಪೆಯೂ ಇದರ ಬಲುದೊಡ್ಡ ರಕ್ಷಕವೇ ಆಗಿದೆ.
 • ಇದು ಒಟ್ಟಾರೆಯಾಗಿ ಕುಂಬಳ ಕಾಯಿಗೆ ದೀರ್ಘಾಯುಷ್ಯವನ್ನು ಕೊಟ್ಟಿದೆ.
 • ನೆಲದಿಂದ ಮೇಲೆ  ಇರುವಂತೆ ಹಗ್ಗದಲ್ಲಿ ಕಟ್ಟಿ ನೇತು ಹಾಕಿದರೆ ಸುಮಾರು ಒಂದು ವರ್ಷದವರೆಗೆ ಕೆಡದೆ ಇರುತ್ತದೆ.

ಹಿಂದೂ ಧಾರ್ಮಿಕ ವಿಧಿಗಳ ಆಚರಣೆಯಲ್ಲಿ ಬೂದುಗುಂಳಕಾಯಿಗೆ ಒಂದು ವಿಶಿಷ್ಠ ಸ್ಥಾನವಿದೆ. ನವಗ್ರಹ ಆರಾಧನೆಯಲ್ಲಿ ದಾನವಾಗಿಯೂ ಇದನ್ನು ಕೊಡಲಾಗುವುದು. ಎಲ್ಲಕಿಂತ ಹೆಚ್ಚಾಗಿ ಗೃಹ ಪ್ರವೇಶದ ಸಂಭ್ರಮದಲ್ಲಿ ಇದು ಅವಶ್ಯವಾಗಿ ಇರಲೇಬೇಕಾದ ತರಕಾರಿ. ಹೊಸ ಮನೆಗಳ ಮುಂಭಾಗದಲ್ಲಿ ದುಷ್ಟಶಕ್ತಿಗಳನ್ನು ದೂರವಿಡುವ ನಂಬಿಕೆಯಿಂದ ಹಗ್ಗಕಟ್ಟಿ ನೇತು ಹಾಕಿರುವ ದೃಶ್ಯ ಸರ್ವೆ ಸಾಮಾನ್ಯ.

ಸಣ್ಣ ಕುಟುಂಬ ಕ್ಕೆ ಸೂಕ್ತವಾದ ಕಾಶೀ ಕುಂಬಳ

ಔಷಧ ಸಂಪನ್ನ:

 • ಬೂದು ಕುಂಬಳ ಕಾಯಿ ಸಪ್ಪೆ ಎಂದೆಣಿಸದಿರಿ. ಸಪ್ಪೆಯೇ ಇದರ ವಿಶಿಷ್ಟ ಗುಣ.
 • ಆಯುರ್ವೇದ ಔಷಧಿಗಳ ತಯಾರಿಕೆಯಲ್ಲೂ  ಇದನ್ನು ಬಳಸುತ್ತಾರೆ.
 • ಇದರ ಸಿಹಿ ಮತ್ತು ಖಾರದ ತಿನಿಸುಗಳು ಅತ್ಯಂತ ಸ್ವಾದಿಷ್ಟ.
 • ಆದರೆ ಯಾವಾಗಲೂ ಬಲಿತ ಕಾಯಿಯನ್ನೆ ಬಳಸುವುದು ಅತ್ಯಂತ ಸೂಕ್ತವಾದುದು.
 • ತೊಟ್ಟಿನ ಬಳಿ ಸುಮಾರು 2-3 ಇಂಚುಗಳಷ್ಟು ಬಳ್ಳಿ ಒಣಗಿದ ನಂತರ ಬಳಸಬೇಕು.
 • ಎಳೆಯದು ದೇಹಕ್ಕೆ ಅಪಥ್ಯವಾಗುತ್ತದೆ.
 • ಕೂಷ ಮಾಡಂ-ಕೋಮಲಂ ವಿಷಂ ಎಂಬ ಉಕ್ತಿ ಇದೆ.

ಬೂದುಗುಂಬಳಕಾಯಿಯಲ್ಲಿ ಅನೇಕ ಆರೋಗ್ಯವನ್ನು ಪೋಷಿಸುವ ಪೌಷ್ಟಿಕಾಂಶಗಳು ಜೀವಸತ್ವಗಳು ಖನಿಜಗಳು ಇದ್ದು ಜೊತೆಗೆ ಗಿಡದ ಸರ್ವಾಂಗಗಳನ್ನು ಔಷಧಿಗಳಿಗೆ ಬಳಸಬಹುದು. ಗುಂಡಾಗಿಯೂ ಅಥವಾ ಅಂಡಾಕಾರವಾಗಿಯೂ ಇರುವ ಬೃಹದಾಕಾರದ ಈ ತರಕಾರಿಯ ಔಷಧಿ ಗುಣಗಳು ಅದರ ಗಾತ್ರದಷ್ಟೇ ಅಪಾರವಾಗಿದೆ ಇಂದರೆ ಉತ್ಪ್ರೇಕ್ಷೆಯಲ್ಲ. ಜೀವಾಧಾರ ಪ್ರಮುಖ ಅಂಗಗಳನ್ನು ರಕ್ಷಿಸುವ ಹಾಗೂ ಅವುಗಳ ರೋಗ ನಿವಾರಿಸುವ ಔಷಧಿ ಗುಣಗಳನ್ನು ಹೊಂದಿದ್ದ ಔಷಧಿ ತರಕಾರಿಯಾಗಿದೆ.

ಅಡುಗೆಯಲ್ಲಿ  ರುಚಿಕರ:

 • ಸುಲಭವಾಗಿ ಜೀರ್ಣವಾಗುವ ಬಲಿತ ಬೂದುಗುಂಬಳ ಅಡುಗೆಗೆ ಯೋಗ್ಯ ಬೂದುಗುಂಬಳ ಕಾಯಿಯನ್ನು ಸಿಹಿ ಹಾಗೂ ಖಾರದ ತಿನಿಸುಗಳಲ್ಲಿ ಸುಲಭವಾಗಿ ಸಂಯೊಜಿಸಬಹುದು.
 • ಕರ್ನಾಟಕದಲ್ಲಿ ಇದರಿಂದ ಮಾಡಿದ ಮಜ್ಜಿಗೆ ಹುಳಿ ತುಂಬಾ ಪ್ರಚಲಿತ.
 • ಚೈನಾ ದೇಶದಲ್ಲಿ ಇದನ್ನು ಸೂಪಿನಲ್ಲಿ ಹೆಚ್ಚಾಗಿ ಬಳಸುತ್ತಾರೆ.
 • ಕುಂಬಳ ಕುಡಿಯನ್ನು ಬಳಸಿ ಕೂಟು,ಪಲ್ಯಗಳನ್ನು ತಯಾರಿಸುವುದು.
 • ಸಿಪ್ಪೆಯಿಂದ ಉಪ್ಪಿನಕಾಯಿ ಹಾಗೂ ಸೆಂಡಿಗೆ ತಯಾರಿಸುವುದು,ಹೂವುಗಳನ್ನು ಸ್ವಲ್ಪ ತುಪ್ಪದಲ್ಲಿ ಬಾಡಿಸಿ ಚಟ್ನಿ,ರಾಯತ ತಯಾರಿಸುವುದು ಸರ್ವೇ ಸಾಮಾನ್ಯ.
 • ಹೆಚ್ಚಾಗಿ ಸಿಪ್ಪೆಯನ್ನು ಪಲ್ಯ ಮಾಡಲು ಬಳಸುತ್ತಾರೆ.

ಒಳ ತಿರುಳನ್ನು ಬಳಸಿ ದೋಸೆ, ಇಡ್ಲಿ ತಯಾರಿಸಬಹುದು. ಸಿಹಿ ತಿಂಡಿಗಳಲ್ಲಿ ಹಲ್ವ, ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತವಾದುದು. ಆಗ್ರಾದ ಪೇಟಾ ಸಿಹಿ ತಿಂಡಿ ದೇಶದ್ಯಾಂತ ತುಂಬಾ ಪ್ರಸಿದ್ದವಾಗಿದೆ. ನಮ್ಮ ಸ್ವ ಕಲ್ಪನೆಯಿಂದ ತಂಪು ಪಾನೀಯಗಳನ್ನು ಸಿಹಿ ಹಾಗೂ ಖಾರದ ಖಾಧ್ಯ ಪದಾರ್ಥಗಳನ್ನು ಅನೇಕ ಹೊಸ ರುಚಿಗಳನ್ನು ತಯಾರಿಸಬಹುದು. ಅಡುಗೆಯಲ್ಲಿ ತಪ್ಪದೇ ಆಗಾಗ್ಗೆ ಈ ತರಕಾರಿಯನ್ನು ಮಿತಿಯಾಗಿ ಬಳಸಬೇಕೆಂದು ಆಯುರ್ವೇದ ತಜ್ಞರ ಅಭಿಪ್ರಾಯವನ್ನು ನೆನಪಿನಲ್ಲಿಡಬೇಕಾಗಿರುವುದು ಅತ್ಯಗತ್ಯ. ಶಾರೀರಿಕ ಶುದ್ಧಿಗೆ ಬೆಳಗ್ಗೆ ಕುಂಬಳ ಕಾಯಿಯ ರಸ ಸೇವನೆ ಉತ್ತಮ ಎನ್ನುತ್ತಾರೆ.

ಆರೋಗ್ಯಕ್ಕೆ  ಅಮೃತ:

 • ಬೂದುಗುಂಬಳಕಾಯಿಗೆ ಅಮೃತವೆಂದರೆ ತಪ್ಪೇನಲ್ಲ.
 • ಬೂದುಗುಂಬಳಕಾಯಿ ಆಮ್ಲೀಕರಣ ನಿರೋಧಕ , ಮೂತ್ರಕಾರಕ, ತೃಷನಿವಾರಕ, ಕ್ಷಯ ನಿವಾರಕ ಹಾಗೂ ದೇಹಕ್ಕೆ ತಂಪು ನೀಡುವ ಗುಣಧರ್ಮವನ್ನು ಹೊಂದಿವೆ.
 • ಇಷ್ಟಲ್ಲದೇ ಕರುಳಿನ ಹುಣ್ಣನ್ನು ವಾಸಿಮಾಡುವ ಹೃದಯಕ್ಕೆ ಬಲ ಕೊಡುವ, ದೇಹದ ಬಿಸಿಲಿನ ತಾಪ ಪರಿಹರಿಸುವ ಯಕೃತ್ತಿನ ಅನೇಕ ತೊಂದರೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ.
 • ಮಾನಸಿಕ ಒತ್ತಡದ ಪ್ರಯಾಸದ ಪರಿಹಾರಕ್ಕೂ, ನಿದ್ರಾಹಿನತೆಗೂ ಪಾಂಡು ರೋಗಕ್ಕೂ ಹಾಗೂ ಕೆಮ್ಮು, ಜ್ವರ, ಆಮಶಂಕೆ ಇತ್ಯಾದಿ ಅನೇಕ ರೋಗಗಳಿಗೆ ರಾಮಬಾಣದಂತಹ ಮನೆ ಮದ್ದಾಗಿದೆ.
 • ಮುಪ್ಪು ಮುಂದೂಡುವ ಹಾಗೂ ಪುಪ್ಪಸಕ್ಕೆ ಬಲ ನೀಡುವುದರಲ್ಲಿ ಪರಿಣಮಕಾರಿಯಾಗಿದೆ.

ಪೋಷಕಾಂಶಗಳು:

ಸುಣ್ಣ     11 -70 ಮಿಲಿಗ್ರ್ರಾಂ, ಪ್ರೋಟಿನ್ 0.4 ಗ್ರಾಂ, ಇತರ ಖನಿಜಗಳು 0.30 – 0.45 ಗ್ರಾಂ ,ಪ್ಲೋರಿನ್        0.38 ಪಿಪಿಎಂ, ಐಯೋಡಿನ್            3.5 ಪಿಪಿಎಂ, ಕೊಬ್ಬು 0.1 ಗ್ರಾಂ, ಕಬ್ಬಿಣ 0.8 ಮಿಲಿಗ್ರಾಂ ,ಥಯಾಮಿನ್ 0.06 ಮಿಲಿಗ್ರಾಂ, ರಿಬೋಪ್ಲೇವನ್  0.01 ಮಿಲಿಗ್ರಾಂ, ನಿಯಾಸಿನ್ 0.04 ಮಿಲಿಗ್ರಾಂ, ಸಿ ಜೀವಸತ್ವ 0.1 ಮಿಲಿಗ್ರಾಂ  ಇದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.

ಸಾಧ್ಯವಾದಷ್ಟು ಕುಂಬಳ ಕಾಯಿ ತಿನ್ನಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಇದು ಎಲ್ಲಾ ಕಡೆ ಎಲ್ಲಾ ವರ್ಗದವರಿಗೂ ದೊರೆಯಬಲ್ಲ  ಸಾರ್ವತ್ರಿಕ ತರಕಾರಿ.

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!