ಮನುಕುಲವನ್ನು ಕಾಪಾಡುವ ವಾತಾವರಣ ಮಹತ್ವ ಅರಿಯೋಣ.

by | Mar 23, 2020 | Environment Protection (ಪರಿಸರ ಸಂರಕ್ಷಣೆ) | 0 comments

ಪ್ರತೀ ವರ್ಷ ಮಾರ್ಚ್ 23 ರಂದು ಜಾಗತಿಕ ಹವಾಮಾನ ಸಂಸ್ಥೆಯು ವಾತಾವರಣ ವಿಜ್ಞಾನ ದಿವಸವನ್ನು World Meteorological Day ಆಚರಿಸುತ್ತದೆ. 1961 ರಿಂದಲೂ ಇದು ಆಚರಿಸಲ್ಪಡುತ್ತಿದೆ. ಕಳೆದ ವರ್ಷ ಹವಾಮಾನ ಮತ್ತು ನೀರು ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ವರ್ಷ ಭೂ ವ್ಯವಸ್ಥೆಯೊಳಗೆ ಸಾಗರ ಮತ್ತು ಹವಾಮಾನ ಎಂಬ ಧ್ಯೇಯದಲ್ಲಿ ಈ ದಿನವನ್ನು ಅಚರಿಸಲಾಗುತ್ತಿದೆ.  

  • ಹವಾಮಾನದ ಸುಸ್ಥಿತಿ ಎಂಬುದು ಸುಖೀ ಸಂಸಾರದ ತರಹ.
  • ಅದು ಇದ್ದರೆ ಮಾತ್ರ ಬದುಕು, ಇಲ್ಲವಾದರೆ ಅದು ನರಕ.
  • ನಮಗೆ ನಮ್ಮ ಮಕ್ಕಳಿಗೆ ಸುಖೀ ಬದುಕು ಬೇಕಿದ್ದರೆ ಹವಾಮಾನದ ಸುಸ್ಥಿತಿಯನ್ನು ನಾವು ಕಡೆಗಣೀಸಲೇ ಬಾರದು.

ಸಾಗರ ಮತ್ತು ಹವಾಮಾನ:

  • ಹವಾಮಾನ ಬದಲಾವಣೆಯ ನೇರ ಪರಿಣಾಮ ನಮ್ಮ ಜೀವ ಜಲದ ಮೇಲೆ ವಿಶಿಷ್ಟ ರೀತಿಯಲ್ಲಿ ಪರಿಣಾಮ ಬೀರುತ್ತದೆ.
  • ಕೃಷಿ ಉತ್ಪಾದನೆ, ಸಮುದ್ರ ಮಟ್ಟ ಏರಿಕೆ, ಕಾಡ್ಗಿಚ್ಚು ಮತ್ತು ವಿಪರೀತ ಬಿಸಿ, ವಿಪರೀತ ಮಳೆ, ಅಕಾಲಿಕ ಮಳೆ, ರೋಗ ರುಜಿನಗಳು ಇದರ ನೇರ ಪರಿಣಾಮ.
  • ಇದನ್ನು ನೀರಿನ ಕಥೆ ಎಂದರೂ ತಪ್ಪಲ್ಲ.

ತಂಪು ಹವಾಮಾನದಲ್ಲಿ ತೇವಾಂಶದ ನಷ್ಟ ಕಡಿಮೆ. ಬೆಚ್ಚಗಿನ ವಾತಾವರಣದಲ್ಲಿ ಗಾಳಿಯ ಮೂಲಕ, ಸರೋವರಗಳ ಮೂಲಕ, ಮಣ್ಣು, ಸಸ್ಯಗಳ ಮೂಲಕ ನೀರಿನ  ಬಳಕೆ ಹೆಚ್ಚುತ್ತದೆ. ಇದು ನೀರಿನ ಮಟ್ಟವನ್ನು ಇಳಿಯುವಂತೆ ಮಾಡುತ್ತದೆ. ನಮ್ಮಲ್ಲಿ ಫೆಬ್ರವರಿ ಕೊನೆ ತನಕ ನೆಲದಲ್ಲಿ ತೇವಾಂಶ ಆವೀಕರಣ ಕಡಿಮೆ. ನಂತರದ ವಾತಾವರಣದಲ್ಲಿ, ನೀರು ಹೇಗೆ ಮಾಯವಾಗುತ್ತದೆ ಎಂಬುದೇ ತಿಳಿಯುವುದಿಲ್ಲ. ನೆಲದ ಎಲ್ಲಾ ಜೀವ ಜಂತುಗಳೂ ಅತಿಯಾಗಿ ನೀರನ್ನು ಬಳಕೆ ಮಾಡುತ್ತವೆ.

  • ಇದನ್ನು ತಡೆಯಬಲ್ಲ ಏಕೈಕ ಪ್ರಾಕೃತಿಕ ವ್ಯವಸ್ಥೆ  ಭೂಮಿಯ ಮೇಲೆ  ಹಸುರು ಹೊದಿಕೆ ಒಂದೇ.
  • ಹಸುರು ಹೊದಿಕೆಯ ಕೊರತೆಯ ಪರಿಣಾಮದಿಂದ ವರ್ಷದಿಂದ ವರ್ಷಕ್ಕೆ  ತಾಪಮಾನ ಏರಿಕೆಯಾಗಿ ನೀರಿನ ಬಳಕೆಯೂ ಹೆಚ್ಚುತ್ತಿದೆ.

ಅತಿಯಾದ ಮಳೆ:

  • ಕಳೆದ ವರ್ಷ ನಮ್ಮ ದೇಶದ ಕೆಲವು ಭಾಗಗಳಲ್ಲಿ ಸುರಿದ ವಿಪರೀತ ಮಳೆಗೂ ಹವಾಮಾನದ ವೈಪರೀತ್ಯಕ್ಕೂ ನೇರ ಸಂಬಂಧ ಇರುತ್ತದೆ.
  • ಮೇಘಸ್ಪೋಟ ಎಂಬ ಸ್ಥಿತಿಗೆ ಮೂಲ ಕಾರಣ ಭೂಮಿಯ ಮೇಲಿನ ತಾಪಮಾನದ ಏರಿಕೆ.
  • ಬಿಸಿ ವಾತಾವರಣಕ್ಕೆ  ಆವೀಕರಣಕ್ಕೆ ಒಳಗಾದ ನೀರು ಮೇಲೇರಿ ಅದು ತಣ್ಣಗಾಗುವ ಮೂಲಕ ಮತ್ತೆ ಭೂಮಿಯ ಮೇಲೆ  ಅತಿಯಾದ ಮಳೆಯನ್ನೂ ಅತಿಯಾದ ಹಿಮಪಾತವನ್ನೂ ಉಂಟು ಮಾಡುತ್ತದೆ.
  • ವಾತಾವರಣ ಹೆಚ್ಚು ಬಿಸಿಯಾದಂತೆ ಬರುವ ಮಳೆ ರೌದ್ರಾವತಾರ ರೂಪದಲ್ಲಿರುತ್ತದೆ. ಹಿಮವೂ ಸಹ ಅಸಹಜವಾಗಿರುತ್ತದೆ.

ಬಿಸಿ ಮತ್ತು ಆರ್ಧ್ರತೆ ಒಟ್ಟು ಸೇರಿದರೆ  ಮಳೆಯನ್ನು ತರುತ್ತದೆ. ಶುಷ್ಕ ವಾತಾವರಣ ರೋಗ ರುಜಿನಗಳು ಮತ್ತು ಕಾಡ್ಗಿಚ್ಚನ್ನು  ತರುತ್ತದೆ.

ಪರಿಹಾರ ಏನು:

  • ಹವಾಮಾನ ಸುಸ್ಥಿತಿ ಎಂದರೆ, ಸುಮಾರು 50 ವರ್ಷಗಳ ಹಿಂದಿನ ನಮ್ಮ ಹವಾಮಾನ ಸ್ಥಿತಿ.
  • ಆ ಸಮಯದಲ್ಲಿ  ಭೂಮಿಯ ಮೇಲೆ ಇದ್ದ ಹಸುರು ಹೊದಿಕೆಯನ್ನು ಮರು ಸ್ಥಾಪಿಸುವುದಿದ್ದರೆ  ಮಾತ್ರ ನಾವು ಹವಾಮಾನ ಸುಸ್ಥಿತಿಯನ್ನು ಹೊಂದಬಹುದು.

ಇದು ಸಾಧ್ಯವೇ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆ. ಕಳೆದು ಹೋದ ಸ್ಥಿತಿಯನ್ನು ಮರಳಿ ಸ್ಥಾಪಿಸುವುದು ಅಷ್ಟೊಂದು ಸುಲಭದ ಕೆಲಸ ಅಲ್ಲ. ಅದಕ್ಕೆ ವಾತಾವರಣದ ಬೆಂಬಲ ಅಗತ್ಯವಾಗಿ ಬೇಕು. ಅದು ಬಹುಷಃ ಇಲ್ಲ. ನೆಟ್ಟು ಬೆಳೆಸಿದ ಸಸಿ ಬದುಕಲು ಬೇಕಾದ ಹವಾಮಾನ ಸ್ಥಿತಿಯೇ ಇಲ್ಲದ ಮೇಲೆ  ಸಸ್ಯ ಬೆಳೆಸುವುದಾದರೂ ಹೇಗೆ?

ಮೇಲ್ಜಲ ಮಟ್ಟ ಏರಬೇಕಾಗಿದೆ:

  • ಮೇಲ್ಜಲದ ನೀರಿನ ಮಟ್ಟವನ್ನು ಏರಿಸದೆ  ವಿನಹ  ಭೂಮಿಗೆ ಹಸುರು ಹೊದಿಸುವ ನಮ್ಮ ಕೆಲಸ ಪ್ರಯೋಜನಕ್ಕೆ  ಬರಲಾರದು.
  • ನಮ್ಮಲ್ಲಿ ಈಗ ಮೇಲಿನ ಜಲ (Surface Water) ಎಂಬುದು ಗಣನೀಯವಾಗಿ ಇಳಿಕೆಯಾಗಿದೆ.
  • ಸಸ್ಯ ಸಂಕುಲದ ಅವನತಿಗೆ ಇದೂ ಒಂದು ಕಾರಣವಾಗಿದೆ.
  • ದುರ್ಗಮ ಕಾಡುಗಳಲ್ಲೂ ಜೀರ ಜರಿಗಳು ಬೇಸಿಗೆಯಲ್ಲಿ ಬತ್ತುತ್ತಿವೆ.
  • ಆದ ಕಾರಣ ಸಾಧ್ಯವಾದಷ್ಟು ಮೇಲು ಜಲದ ಏರಿಕೆ ಮಾಡಬೇಕಾಗಿದೆ.
  • ಪ್ರಾದೇಶಿಕತೆಗೆ ಅನುಗುಣವಾಗಿ ಅಣೆಕಟ್ಟುಗಳು, ಕಿಂಡಿ ಅಣೆಕಟ್ಟುಗಳನ್ನು ಮಾಡುವ ಮೂಲಕ ನೆಲದ ನೀರಿನ ಮಟ್ಟವನ್ನು ಹೆಚ್ಚಿಸಬಹುದು.
  • ಇದರಿಂದ ತನ್ನಷ್ಟಕ್ಕೇ ಸಸ್ಯ ಬೀಜಗಳು ಹುಟ್ಟುತ್ತವೆ. ಬೆಳೆಯುತ್ತವೆ. ಹಸುರು ಹೊದಿಕೆ  ಮರು ಸ್ಥಾಪಿತವಾಗುತ್ತದೆ.

ಮಣ್ಣು ಸವಕಳಿ ತಡೆಯಿರಿ:

  • ನೆಲ ಒಣಗುವುದರಿಂದ ಮತ್ತು  ಅತಿಯಾದ ಮಳೆ ಮತ್ತು ಭೂ ಹೊದಿಕೆಯ ನಾಶದಿಂದ ಮಣ್ಣು ಸವಕಳಿ ಉಂಟಾಗುತ್ತಿದೆ.
  • ಇದು ವಾತಾವರಣದ ಬಿಸಿ ಏರುವಿಕೆಗೆ ಒಂದು ಕಾರಣವಾಗಿದೆ.
  • ಮಣ್ಣಿನ ಪೋಷಕಾಂಶದ ನಷ್ಟ. ಫಲವತ್ತತೆಯ ನಷ್ಟದಿಂದಾಗಿ ಸಸ್ಯ – ಜೀವ ಸಂಕುಲಗಳು ತೊಂದರೆಗೊಳಗಾಗುತ್ತಿವೆ.
  • ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರತೀಯೊಬ್ಬರೂ ಶ್ರಮಿಸಬೇಕಾಗಿದೆ.
  • ಮಣ್ಣು ಅಗೆತ, ನೈಸರ್ಗಿಕವಲ್ಲದ ಸಸ್ಯ ಸಂಕುಲಗಳ ಬೆಳೆಸುವಿಕೆಯನ್ನು ನಿಲ್ಲಿಸುವ ಮೂಲಕ ವಾತಾವರಣದ ಸುಸ್ಥಿತಿಯನ್ನು ಮರಳಿಸಬಹುದು.

ಮಾಲಿನ್ಯವನ್ನು ಕಡಿಮೆ ಮಾಡಿ:

  •  ವಾತಾವರಣದ ಸುಸ್ಥಿತಿಗೆ ನೀರು ಮತ್ತು ವಾತಾವರಣದ ಮಲಿನತೆಯೂ ಒಂದು ಕಾರಣ.
  • ಸಮುದ್ರ, ನದಿ ನೀರನ್ನು ಔದ್ಯಮಿಕ ತ್ಯಾಜ್ಯಗಳಿಂದ ಮಲಿನ ಮಾಡುವುದು.
  • ಜಲಚರ ಮತ್ತು ವಾತಾವರಣದ ಬಿಸಿ ಏರುವಿಕೆಗೆ ಬೆಂಬಲ ಕೊಡುತ್ತದೆ.
  • ಸಾಮಾನ್ಯ ಜನರಾದ ನಾವು ಕರಗದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ, ಅದೆಲ್ಲವೂ ಜಲ ಮೂಲಕ್ಕೆ ಸೇರಿ  ನೆಲ ಜಲದ ಉಸಿರಾಟಕ್ಕೆ ತೊಂದರೆ ಮಾಡುವಂತಿರಬಾರದು.

ಸಾಗರದ ವೈಪರೀತ್ಯಗಳು:

  • ಹವಾಮಾನ ವೈಪರೀತ್ಯಗಳಿಂದ ಅದರಲ್ಲೂ ಈಗಿನ ಸ್ಥಿತಿಯಲ್ಲಿ ಬಿಸಿ ಹೆಚ್ಚಾಗಿ ಮಂಜುಗಡ್ದೆಯ  ಸಾಗರ ಪ್ರದೇಶ ಕರಗಿ ಅದು ಸಾಗರದ ನೀರಿಗೆ ಹೆಚ್ಚುವರಿ ಒತ್ತಡವನ್ನು ಕೊಟ್ಟು ಕರಾವಳಿ ಪ್ರದೇಶಗಳಿಗೆ  ತೊಂದರೆಯನ್ನು ಉಂಟು ಮಾಡುತ್ತದೆ.

ನಾವೇನು ಮಾಡಬೇಕು:

  • ಎಷ್ಟು ಬೇಕೋ ಅಷ್ಟೇ ನೀರನ್ನು ಬಳಕೆ ಮಾಡಬೇಕು.
  • ಹೆಚ್ಚು ಹೆಚ್ಚು ಭೂ ಭಾಗಗಳನ್ನು ಕೃಷಿಗೆ ಒಳಪಡಿಸುವ ಬದಲು ಇರುವ ಹೊಲದಲ್ಲಿ ಅಧಿಕ ಇಳುವರಿ ಪಡೆಯುವ ತಂತ್ರಗಳನ್ನು ಅನುಸರಿಸಬೇಕು.
  • ಪ್ರತೀ ಊರಿನ ವಿಸ್ತೀರ್ಣಕ್ಕನುಗುಣವಾಗಿ  ಬೇಕಾದಷ್ಟು ಪ್ರಮಾಣದ  ಹಸುರು ಹೊದಿಕೆಯನ್ನು ಹೊಂದಲೇ ಬೇಕು.

ಸ್ಥಳೀಯಾಡಳಿತ ಈ ಕೆಲಸವನ್ನು ಆದ್ಯತೆಯ ನೆಲೆಯಲ್ಲಿ ಮಾಡಬೇಕು. ಅರಣ್ಯ ಇಲಾಖೆಗೆ ಖಾಲಿ ಭೂಮಿಯನ್ನು ವಹಿಸಿಕೊಟ್ಟು ಅರಣ್ಯೀಕರಣದ ಜವಾಬ್ಧಾರಿಯನ್ನು ವಹಿಸಿದರೆ  ಹವಾಮಾನ ಮತ್ತು ಜಲ ಸಮಸ್ಥಿತಿಯಲ್ಲಿ ಉಳಿಯಬಹುದು.

 
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!