ಸ್ವಾವಲಂಬಿ ಬದುಕಿಗೆ ಮನೆಯಂಗಳದಲ್ಲಿ ತರಕಾರಿ.

by | Mar 26, 2020 | Vegetable Crops (ತರಕಾರಿ ಬೆಳೆ) | 0 comments

ಅವರವರು ಬೆಳೆದ ತರಕಾರಿ ಹಣ್ಣು  ಹಂಪಲುಗಳನ್ನು ಅವರವರೇ ಬಳಸಿದರೆ  ಅದರಷ್ಟು ಆರೋಗ್ಯಕ್ಕೆ ಒಳ್ಳೆಯದು ಬೇರೊಂದಿಲ್ಲ. ನಾವು ಅಂಗಡಿಯಿಂದ ತರುವ ತರಕಾರಿ ಹಣ್ಣು  ಹಂಪಲುಗಳು ಎಷ್ಟೆಂದರೂ ಅಷ್ಟೇ. ಅದರ ಗಾತ್ರ ದೊಡ್ದದಾಗಲು ನೋಟ ಆಕರ್ಷಕವಾಗಿರಲು ಲೆಕ್ಕಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ,ನಿಷೇಧಿತ ರಕ್ಷಕಗಳನ್ನು  ಬಳಕೆ  ಮಾಡಲಾಗುತ್ತದೆ ಎನ್ನುತ್ತಾರೆ.

 • ಎಂದೋ ಕೊಯಿದ, ಎಲ್ಲಿಂದಲೋ ತಂದ ತರಕಾರಿ ಹಣ್ಣು ಹಂಪಲುಗಳಲ್ಲಿ ಶಿಲೀಂದ್ರ ಬೆಳೆದಿರುವುದೂ ಇದೆ.
 • ವಿಷ ರಾಸಾಯನಿಕ ಬಳಸಿದ ಉಳಿಕೆ ಅಂಶ ಇರುವುದೂ ಇದೆ.
 • ಇದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅವರವರೇ ಬೆಳೆಸಿದರೆ ಎಷ್ಟು ಉತ್ತಮ.
 • ಸ್ವಸ್ಥ ಆರೋಗ್ಯ ಎಲ್ಲಕ್ಕಿಂತ ದೊಡ್ಡದು.

ಹೇಗೆ ತರಕಾರಿ ಬೆಳೆಸಬಹುದು:

 • ಸ್ವ ಉದ್ದೇಶಕ್ಕೆ ಬಳಸುವ ತರಕಾರಿ- ಹಣ್ಣು ಹಂಪಲುಗಳನ್ನು  ಬೆಳೆಸುವಾಗ ಮೊದಲಾಗಿ ಒಂದು  ಪ್ಲಾನ್ ಬೇಕು.
 • ಎಲ್ಲಿ ಯಾವುದನ್ನು  ಬೆಳೆಸಬೇಕು, ಯಾವುದಕ್ಕೆ ಎಷ್ಟು ಬೆಳಕು ಬೇಕು ಎಂಬುದನ್ನು  ಪ್ಲಾನ್ ಮಾಡಿ ಬೆಳೆಸ  ಬೇಕು.
 • ಅವಕಾಶಗಳು ನಾವು ಹುಡುಕಿದರೆ  ಎಲ್ಲಾ ಕಡೆಯೂ ಇರುತ್ತದೆ.
 • ಬರೇ ಸಣ್ಣ ಮನೆ ಇದ್ದವರೂ ಸಹ ಸ್ವಲ್ಪ ಮಟ್ಟಿಗೆ  ತರಕಾರಿ ಬೆಳೆಸಿಕೊಳ್ಳಬಹುದು.
 • ಮನೆಯ ಮೇಲಿನ ತಾರಸಿ ಹೆಚ್ಚು ಬಿಸಿಲು ಇರುವ ಸ್ಥಳ. ಇಲ್ಲಿ ಹೆಚ್ಚು ಬಿಸಿಲು ಅಪೇಕ್ಷಿಸುವ ತರಕಾರಿಗಳನ್ನು ಬೆಳೆಸಬೇಕು

 • ಬಳ್ಳಿ ತರಕಾರಿಗಳನ್ನು ಬದಿಯಲ್ಲಿ  ಬೆಳೆಸಬೇಕು. ಇದರ ಬಳ್ಳಿ ಕೆಳಕ್ಕೆ ಇಳಿದು ಅವಕಾಶದ ಸದುಪಯೋಗ   ಆಗುತ್ತದೆ.
 • ಚಪ್ಪರ  ಇತ್ಯಾದಿಗಳನ್ನು  ಮಾಡುವಾಗ ಮನೆಯ  ತಾರಸಿಗೆ  ಬಿಸಿಲಿನ  ರಕ್ಷಣೆ  ಕೊಟ್ಟಂತಾಗಬೇಕು.
 • ಚಪ್ಪರದ ಬದಲಿಗೆ ಗೂಟ ಹಾಕಿ ಅದಕ್ಕೆ ಹಗ್ಗ ನೆಯ್ದು ಬಳ್ಳಿ  ಏರಲು ಅವಕಾಶ ಮಾಡಿಕೊಟ್ಟರೆ ಸಾಕಾಗುತ್ತದೆ.
 • ಆಂಶಿಕ ನೆರಳನ್ನು ಬಯಸುವ ಸೊಪ್ಪು ತರಕಾರಿಗಳನ್ನು  ಚಪ್ಪರದ ಕೆಳಭಾಗದಲ್ಲಿ  ಗ್ರೋ ಬ್ಯಾಗ್ ಅಥವಾ ಚೀಲದಲ್ಲಿ ಬೆಳೆಸಬೇಕು.
 • ತಾರಸಿ ಮೇಲೆ  ಹೋಗುವ ಮೆಟ್ಟಿಲುಗಳ ಎರಡೂ ಪಕ್ಕದಲ್ಲಿ  ತರಕಾರಿ ಗಿಡಗಳನ್ನು ಬೆಳೆಸಬಹುದು. ಆಗ ಅದರ ಸ್ಥಳಾವಕಾಶದ ಸದುಪಯೋಗ ಆಗುತ್ತದೆ.

 • ಮನೆಯ ಕಂಪೌಂಡ್ ಬದಿಯಲ್ಲಿ ಬಸಳೆ ಅಥವಾ ನೆಲಬಸಳೆಯನ್ನು ಬೆಳೆಯಬೇಕು. ಇದನ್ನು ಕಂಪೌಂಡ್  ಎತ್ತರದಷ್ಟು ಬೆಳೆದಾಗ ಕತ್ತರಿಸಿ ಬಳಕೆ  ಮಾಡಬೇಕು.
 • ಗೋ ಬ್ಯಾಗ್ ಅಥವಾ ಗೋಣಿ ಚೀಲದಲ್ಲಿ ಬೆಳೆಸುವ ತರಕಾರಿಗಳನ್ನು ಸಾಧ್ಯವಾದಷ್ಟು ಆಂಶಿಕ ನೆರಳು ಇರುವಲ್ಲಿ ಇಡಬೇಕು. ಇಲ್ಲವಾದರೆ  ಸಸಿ ಬೆಳೆದು ಫಸಲು ಕೊಡುವ ಸಮಯಕ್ಕೆ  ಅದು ಹರಿದು ಹೋಗಿರುತ್ತದೆ.

ಮನೆ ಹಿತ್ತಲಲ್ಲಿ ಹಣ್ಣು ಹಂಪಲು ಸಸ್ಯಗಳನ್ನು  ಬೆಳೆಸುವಾಗ ದೊಡ್ದ ಮರ ಆಗದಂತೆ  ಅದನ್ನು ತರಬೇತಿ ಮಾಡಿ  ಬೆಳೆಸಬೇಕು.

ಮುಸಂಬಿ ಗಿಡ

 • ಮಾವು, ಚಿಕ್ಕು, ಹಲಸು ದೊಡ್ದ ಮರವಾದರೆ ನೆರೆಮನೆಯವರಿಗೆ  ತೊಂದರೆಯಾಗುತ್ತದೆ ಅನಿವಾರ್ಯವಾಗಿ ಕಡಿಯಬೇಕಾಗುತ್ತದೆ.  ವರ್ಷ ವರ್ಷವೂ ಪ್ರೂನಿಂಗ್ ಮಾಡುತ್ತಾ ಬೆಳವಣಿಗೆಯನ್ನು  ನಿಯಂತಿಸುತ್ತಿರಬೇಕು.
 • ಮಾವು , ಹಲಸು, ಸೀಬೆ, ಚಿಕ್ಕು, ಹಾಗೂ ಇನ್ನಿತರ ಸಸ್ಯಗಳನ್ನು 10-15 ವರ್ಷ ಬೆಳೆದರೂ ಅದರ ಗಾತ್ರ ದೊಡ್ದದಾಗದಂತೆ ತಡೆಯಲು ಚಿಗುರು ನಿಯಂತ್ರಣ ಸಹಕಾರಿ.

ಪೋಷಣೆ:

 • ನೆಲದಲ್ಲಿ ಬೆಳೆ ಬೆಳೆಸುವಾಗ ಆ ಸಸ್ಯಕ್ಕೆ ಬೇರು ಹಬ್ಬಲು ಅವಕಾಶ ಹೆಚು ಇರುವ ಕಾರಣ ನಾವು ಬಳಕೆ ಮಾಡುವ ಪೋಷಕ ಮಾಧ್ಯಮ ಕಡಿಮೆಯಾದರೂ ತೊಂದರೆಯಾಗುವುದಿಲ್ಲ.
 • ನಿಯಮಿತ ಸ್ಥಳದಲ್ಲಿ ಬೆಳೆಸುವಾಗ ಅದರ ಬೇರುಗಳು ಹಬ್ಬುವ ವೈಶಾಲ್ಯತೆಯೂ ಕಡಿಮೆ ಇರುವ ಕಾರಣ ಅಲ್ಲಿ ಪೋಷಕಗಳು ಹೆಚ್ಚು ಬೇಕಾಗುತ್ತದೆ.

ಲಿಂಬೆ ಗಿಡ

ಉತ್ತಮ ಸಾರವುಳ್ಳ ಮಾಧ್ಯಮವನ್ನು ಬಳಸಬೇಕು. ಸಾವಯವ ಗೊಬ್ಬರಗಳಲ್ಲೇ ಈ ತರಕಾರಿಗಳನ್ನು ಬೆಳೆಸುವ ಕಾರಣ ಫಲವತ್ತಾದ ಕಾಡು ಮಣ್ಣು ಅಥವಾ ಗೊಬ್ಬರವನ್ನೇ ಮಾಧ್ಯಮವಾಗಿ  ಬಳಕೆ  ಮಾಡಬೇಕು.

 • ನೀರಿನ ಜೊತೆಗೆ ಕಡಿಮೆ ಸಾರದಲ್ಲಿ  ನಿರಂತರ ಗೊಬ್ಬರಗಳನ್ನು ಕೊಡುತ್ತಿರಬೇಕು.
 • ಬಳಕೆ ಮಾಡುವ ಪೋಷಕಗಳು  ಹೆಚ್ಚು ಸಾರ ಹೊಂದಿರುವವುಗಳಾಗಿರಬೇಕು. ಕೆಲವು ಪ್ರಾಣಿ ಜನ್ಯ ತ್ಯಾಜ್ಯಗಳು, (ಮೀನಿನ ಗೊಬ್ಬರ, ಎರೆ ಗೊಬ್ಬರ, ಹಿಂಡಿ ಗೊಬ್ಬರಗಳನ್ನು ಬಳಕೆ  ಮಾಡಬೇಕು.
 • ಕೀಟಗಳನ್ನು ಸಾಧ್ಯವಾದಷ್ಟು ಪ್ರಾರಂಭದಲ್ಲಿ ಗುರುತಿಸಿ ಕೊಂದು ನಿಯಂತ್ರಣ ಮಾಡಬೇಕು. ರೋಗಗಳಿಂದ ಮುಕ್ತವಾಗಿ  ಬೆಳೆ ಬೆಳೆಸಲು ಉತ್ತಮ ಮಾಧ್ಯಮ ಬಳಕೆ  ಮಾಡಬೇಕು. ನೀರು  ಹೆಚ್ಚು ಕೊಡಬಾರದು.

ಹಣ್ಣು ಹಂಪಲು  ಬೆಳೆಯುವಾಗ ಸಸಿಯನ್ನು ಬೋನ್ಸಾಯ್ ತರಹ ಕುಬ್ಜವಾಗಿ ಬೆಳೆಸಿದರೆ ಕೊಯಿಲು ಸುಲಭ. ಹಣ್ಣು ನೊಣದಂತ ಕೀಟ ಸಮಸ್ಯೆಗೆ  ಬಲೆ ಹೊದಿಸಿ ವಿಷ ರಹಿತ ಪರಿಹಾರ ಕಂಡು ಕೊಳ್ಳಬಹುದು. 

ಪ್ರತಿಕ್ರಿಯೆಗಳಿಗೆ ಸ್ವಾಗತ:

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!