ತೆಂಗಿನ ಮರ ಒಂದು ಕಲ್ಪ ವೃಕ್ಷ. ಇದರ ಸರ್ವಾಂಗವೂ ಉಪಯುಕ್ತ. ಇದನ್ನು ನಾವು ಬಳಸಿಕೊಳ್ಳುವುದರಿಂದ ಗರಿಷ್ಟ ಲಾಭವನ್ನು ಪಡೆಯಬಹುದು. ಇದು ಹೇಗೆ ಎಂದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿಕೊಟ್ಟ ತೆಂಗಿನ ಪ್ಲಾಂಟೇಷನ್ ಗೋವಾದ ಮರ್ಗಾವ್ ನಲ್ಲಿ ಇದೆ.
- ಇಲ್ಲಿ ಬರೇ ತೆಂಗು ಬೆಳೆಯನ್ನು ಆಧರಿಸಿ ಬೇರೆ ಬೇರೆ ಮೌಲ್ಯ ವರ್ಧಿತ ಉತ್ಪನ್ನವನ್ನು ತಯಾರಿಸಿ ಆ ಬೆಳೆಯಿಂದ ಗರಿಷ್ಟ ಲಾಭವನ್ನು ಪಡೆಯಲಾಗುತ್ತಿದೆ.
- ಒಂದು ತೆಂಗಿನ ಕಾಯಿಯ ಮೌಲ್ಯವನ್ನು ಇವರು ಲೆಕ್ಕ ಹಾಕಿ ರೂ. 6೦ ರೂ ಆ ಗಳಿಗೂ ಹೆಚ್ಚು ಪಡೆಯುತ್ತಾರೆ.
- ಇಲ್ಲಿನ ಮ್ಯಾನೇಜರ್ ದಿನೇಶ್ ಪ್ರಯಾಗ್ ಹೇಳುವುದು, ತೆಂಗಿನ ಬೆಳೆ ಲಾಭದಾಯಕ.
- ಅದನ್ನು ನಾವು ಗುರುತಿಸಿ ಪಡೆಯಬೇಕು ಎಂದು.
ಹೇಗೆ:
- ತೆಂಗಿನ ಮರದಿಂದ ವರ್ಷಕ್ಕೆ 250 ಕಾಯಿಯ ಇಳುವರಿ ಪಡೆಯಬೇಕು.
- ಬರೇ ಕಾಯಿಯನ್ನು ಮಾತ್ರಲ್ಲದೆ ಅದರ ಸರ್ವಾಂಗವನ್ನೂ ಬಳಕೆ ಮಾಡಿಕೊಳ್ಳಬೇಕು.
- ತೆಂಗಿನ ಮರದ ಮಧ್ಯಂತರದಲ್ಲಿ ಎನೆಲ್ಲಾ ಮಿಶ್ರ ಬೆಳೆ ಬೆಳೆಸಬಹುದು ಅದನ್ನೆಲ್ಲಾ ಬೆಳೆಯಬೇಕು.
- ಬರೇ ಕಾಯಿಯನ್ನು ಮಾರಾಟ ಮಾಡದೆ ಅದನ್ನು ಮೌಲ್ಯವರ್ಧಿತ ಉತ್ಪನ್ನ ತಯಾರಿಸಿಯೇ ಮಾರಾಟ ಮಾಡಬೇಕು.
- ತೆಂಗಿನ ತೋಟದ ಮಧ್ಯಂತರವನ್ನು ಬೇರೆ ಬೇರೆ ಮಿಶ್ರ ಬೆಳೆಗೆ ಬಳಸಿಕೊಳ್ಳಬೇಕು.
ಏನೆಲ್ಲಾ ಉತ್ಪನ್ನ ತಯಾರಿಸಬಹುದು:
- ತೆಂಗಿನ ಬೆಳೆಯಲ್ಲಿ ದೊರೆಯುವ ಕಾಯಿಯಲ್ಲಿ ದೊಡ್ದ ಕಾಯಿಯನ್ನು ತಾಜಾ ಕಾಯಿಯಾಗಿ ಮಾರಾಟ ಮಾಡಿ.
- ಎರಡನೇ ದರ್ಜೆಯ ಕಾಯಿ ಮತ್ತು ಮೂರನೇ ದರ್ಜೆಯ ಕಾಯಿಯನ್ನು ಮೌಲ್ಯ ವರ್ಧನೆಗೆ ಬಳಸಿಕೊಳ್ಳಿ.
- ತೆಂಗಿನ ಕಾಯಿ ನೀರಿನ ವಿನೇಗಾರ್ ತಯಾರಿಸಬಹುದು.
- ಎರಡನೇ ದರ್ಜೆಯ ಕಾಯಿಯಿಂದ ಡೆಸಿಕೇಟೆಡ್ ಕೋಕನಟ್ ತಯಾರಿಸಿ. ಇದಕ್ಕೆ 150-250 ರೂ. ತನಕ ಬೆಲೆ ಇದೆ.
- ಡೆಸಿಕೇಟೆಡ್ ಕೋಕೋನಟ್ ಮಾಡುವಾಗ ದೊರೆಯುವ ಹಾಲಿನಿಂದ ವರ್ಜೀನ್ ಕೋಕನಟ್ ಆಯಿಲ್ ಮಾಡಿ.
- ಇದಕ್ಕೆ ಲೀಟರಿಗೆ 600 ರೂ. ತನಕ ಬೆಲೆ ಇದೆ.
- ಅತೀ ಸಣ್ಣ ಕಾಯಿಯನ್ನು ತೆಂಗಿನ ಎಣ್ಣೆ ತಯಾರಿಕೆಗೆಗೆ ಬಳಸಿಕೊಳ್ಳಿ. ತೆಂಗಿನ ಎಣ್ಣೆಗೆ ಲೀ. 200 ರೂ .ಗಿಂತ ಹೆಚ್ಚು ಬೆಲೆ ಇದೆ.
- ಅನುತ್ಪಾದಕ ಮರ ಅಥವಾ ಮಂಗಗಳ ಕಾಟ ಇರುವಲ್ಲಿ ಕಾಯಿಗೆ ಗೆ ಮಹತ್ವ ಕೊಡದೆ ಆ ಮರದಿಂದ ನೀರ ತೆಗೆಯಿರಿ.
- ಒಂದು ಮರಕ್ಕೆ ದಿನಕ್ಕೆ 3 ಲೀ. ನೀರಾ ದೊರೆಯುತ್ತದೆ.
- ಶೀತಲೀಕೃತ ನೀರಾ ಗೆ ಲೀ. 100 ರೂ. ಬೆಲೆ ಇದೆ.
- ತೆಂಗಿನ ಕಾಯಿಯ ಸಿಪ್ಪೆಯನ್ನು ಹುಡಿ ಮಾಡಿ ಅದನ್ನು ನಾರು ಮತ್ತು ಹುಡಿ ಬೇರ್ಪಡಿಸಿ ನಾರನ್ನು ಮರಕ್ಕೆ ಗೊಬ್ಬರವಾಗಿ ಬಳಸಿ. ಹುಡಿಯನ್ನು ಸಸಿ ಬೆಳೆಸುವ ಪಿತ್ ಆಗಿ ಮಾರಾಟ ಮಾಡಬಹುದು.
- ತೆಂಗಿನ ತೋಟದ ಮಧ್ಯಂತರದಲ್ಲಿ ಅನಾನಾಸು , ತರಕಾರಿ, ಲಿಂಬೆ , ತುಳಸಿ , ಔಷಧ ಸಸ್ಯ ಬೆಳೆಯಿರಿ. ಸರಿ ಹೊಂದುವ ಹಣ್ಣೂ ಹಂಪಲು ಬೆಳೆಸಿ.
- ಉತ್ತಮ ಗುಣಮಟ್ಟದ ತೆಂಗಿನ ಮರವನ್ನು ಆಯ್ಕೆ ಮಾಡಿ ಆ ಮರವನ್ನು ಬೀಜೋತ್ಪಾದನೆಗೆ ಆಯ್ಕೆ ಮಾಡಿಕೊಳ್ಳಿ.
- ಹೈಬ್ರೀಡ್ ಬೀಜೋತ್ಪಾದನೆ ಮಾಡಿದಾಗ, ಒಂದು ಹೈಬ್ರೀಡ್ ಸಸಿಗೆ 400 ರೂ ಬೆಲೆ ಇದೆ.
- ಮಧ್ಯಂತರದಲ್ಲಿ ಕೊಕ್ಕೋ ಬೆಳೆಯಿರಿ. ಒಂದು ಕೊಕ್ಕೋ ಸಸ್ಯ ವರ್ಷಕ್ಕೆ 500 ರೂ. ಉತ್ಪತ್ತಿ ಕೊಡುತ್ತದೆ.
- ಮಧ್ಯಂತರದಲ್ಲಿ ಬಾಳೆ ಬೆಳೆಸಿ. ಒಮ್ಮೆ ನೆಟ್ಟ ಗಾಳಿ ಬಾಳೆ ಮೊದಲು 1 ಗೊನೆ, ನಂತರ ವರ್ಷಕ್ಕೆ 2-3 ಗೊನೆಯಂತೆ ಇಳುವರಿ ಕೊಡುತ್ತದೆ.
- ತೆಂಗಿನ ಕಾಯಿಯ ಚಿಪ್ಪನ್ನು ಅರೆ ಸುಟ್ಟು, ಇದ್ದಿಲು ಮಾಡಿ ಅದನ್ನು ಪ್ಯಾಕಿಂಗ್ ಮಾಡಿದರೆ ಕಿಲೋ ಇದ್ದಿಲಿಗೆ ರೂ. 40 ಬೆಲೆ ಇದೆ.
- ತೆಂಗಿನ ಮರದ ಗರಿಯ ಕಡ್ಡಿಯಿಂದ ಕಸಬರಿಕೆ ಮಾಡಿದರೆ 1 ಕಸ ಬರಿಕೆಗೆ 100 ರೂ. ಬೆಲೆ ಇದೆ
- ಅರಶಿನ, ಶುಂಠಿ, ಕರಿ ಮೆಣಸು, ಲವಂಗ, ಜಾಯೀ ಕಾಯಿ ಸೀತಾಫಲ, ಪಪ್ಪಾಯಿ ಮಧ್ಯಂತರದಲ್ಲಿ ಬೆಳೆಸಿ. ಅದರಿಂದ ಇಳುವರಿ ಪಡೆಯಿರಿ ಅದೂ ತೆಂಗಿನ ತೋಟದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಗೋವಾದ ಮರ್ಗೋವಾದಲ್ಲಿ ನಾನೂ ಫಾರಂ ಎಂಬ ಕೃಷಿ ಕ್ಷೇತ್ರದಲ್ಲಿ ಇದನ್ನೆಲಾ ಮಾಡಿ 1 ತೆಂಗಿನ ಕಾಯಿಯಿಂದ ಪ್ರತ್ಯಕ್ಷ ಪರೋಕ್ಷ ರೀತಿಯಲ್ಲಿ ರೂ. 60 ಉತ್ಪತ್ತಿ ಪಡೆಯಲಾಗುತ್ತಿದೆ. ಒಂದು ತೆಂಗಿನ ಮರ ಇಲ್ಲಿ ಸರಾಸರಿ 250 ಕಾಯಿ ಇಳುವರಿ ಕೊಡುತ್ತದೆ.
ತೆಂಗಿನ ತೋಟ ಲಾಭದಾಯಕ ಅಲ್ಲ ಎನ್ನುತೇವೆ. ಅದರೆ ಅದರಿಂದ ಲಾಭ ಇದೆ. ಅದನ್ನು ಲಾಭದಾಯಕವಾಗಿ ಮಾರ್ಪಡಿಸಿದಾಗ ಮಾತ್ರ ಅದು ಸಾಧ್ಯ. ಇದಕ್ಕೆ ಯೋಜನೆ ಹಾಕಿಕೊಳ್ಳಬೇಕು.ಇಲ್ಲಿ ಇದೆಲ್ಲಾ ನೋಡಲು ಸಿಗುತ್ತದೆ. ರೈತರಿಗೆ ತರಬೇತಿಯನ್ನು ಸಹ ಕೊಡುತ್ತಾರೆ.