ಪಪ್ಪಾಯ – ಇದು ಸಂಜೀವಿನಿ ಸಸ್ಯ.

ರೋಗ ಇರಲಿ  ಇಲ್ಲದಿರಲಿ. ಕೆಲವು ಹಣ್ಣು ಹಂಪಲು ಸೊಪ್ಪು ತರಕಾರಿಗಳು ಔಷಧೀಯ ಗಿಡಗಳನ್ನು ಅಲ್ಪ ಸ್ವಲ್ಪಬಳಕೆ ಮಾಡುತ್ತಾ ಇದ್ದರೆ  ದೇಹಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ. ರೋಗ ಬಾರದಂತೆಯೂ, ಬಂದರೆ  ಬೇಗ ಗುಣಮುಖವಾಗುವಂತೆಯೂ ಇದು ನೆರವಾಗುತ್ತದೆ. ಇಂತಹ ಗಿಡಗಳಲ್ಲಿ ಒಂದು ಪಪ್ಪಾಯಿ.

ಪಪ್ಪಾಯಿ ಶಕ್ತಿ ಗಿಡ:

  • ಪಪ್ಪಾಯಿ ತಿನ್ನುವಾಗ ಅದರ ಸಿಪ್ಪೆ ಮತ್ತು ಬೀಜಗಳನ್ನು ಎಸೆಯಲಾಗುತ್ತದೆ.
  • ಆದರೆ ಬೀಜದಲ್ಲೂ ಉತ್ತಮ ಔಷಧೀಯ ಗುಣಗಳು ಇವೆ ಎನ್ನುತ್ತಾರೆ.
  • ಪಪ್ಪಾಯ ಬೀಜದಲ್ಲಿ  ಲಿವರ್ ಸಂಬಂಧಿತ ಕಾಯಿಲೆ ದೂರ ಮಾಡುವ ಶಕ್ತಿ ಇದೆಯಂತೆ.
  • ಪಪ್ಪಾಯಿ ಬೀಜಗಳು ಯಕೃತ್ತಿನ ಸಿರೋಸಿಸ್ ಗುಣಪಡಿಸಲು ಸಹಕರಿಸುತ್ತದೆ.
  • ಹೆಚ್ಚಿನ ಪ್ರಮಾಣದಲ್ಲಿ ಬೀಜ ಇದ್ದರೆ ಅದನ್ನೆಲ್ಲಾ ತಿನ್ನಬೇಕಾಗಿಲ್ಲ.
  • ಪಪ್ಪಾಯಿ ತಿನ್ನುವಾಗ 5-6 ಬೀಜಗಳನ್ನು ಹಣ್ಣಿನ ತಿರುಳಿನ ಜೊತೆಗೆ  ಸೇವಿಸಿರಿ. ಬರೇ ನುಂಗುವುದಲ್ಲ.
  • ಅದನ್ನು ಜಗಿದು ನುಂಗಬೇಕು. 30 ದಿನಗಳ ಕಾಲ ಪಪ್ಪಾಯಿ ಹಣ್ಣಿನ ಜೊತೆಗೆ ಸ್ವಲ್ಪ ಸ್ವಲ್ಪ ಬೀಜಗಳನ್ನೂ ಸೇವಿದಿದರೆ  ಅದರ ಫಲಿತಾಂಶ  ಉತ್ತಮವಾಗಿರುತ್ತದೆ.

ಪಪ್ಪಾಯಿಯಿಂದ ಇದೆಲ್ಲಾ ದೂರವಾಗುತ್ತದೆ:

  • ಮಾನವ ಶರೀರದಲ್ಲಿ ಹುಟ್ಟಿಕೊಳ್ಳುವ ಕೆಲವು ಬ್ಯಾಕ್ಟೀರಿಯಾಗಳ ವಿರುದ್ಧ ಪಪ್ಪಾಯಿ ಬೀಜ ಕೆಲಸ ಮಾಡುತ್ತದೆ.
  • ಅಂದರೆ ಕೆಲವು ಬ್ಯಾಕ್ಟೀರಿಯಾಗಳನ್ನು ಇದು ಸಾಯಿಸುತ್ತದೆ.
  • ಕೆಲವೊಮ್ಮೆ ಆಹಾರ ಸೇವನೆ ವೆತ್ಯಾಸವಾಗಿ ಫುಡ್ ಪಾಯಿಸನ್ ಉಂಟಾಗುವುದಿದೆ.
  • ಅದನ್ನು ತಡೆಯಲು ಸಹ ಪಪ್ಪಾಯಿ ಬೀಜಗಳು ಸಹಕಾರಿ..
  • ಕೆಲವು ತರಹದ ವೈರಲ್ ಸೋಂಕಿನಿಂದ ನೆಗಡಿ, ಮುಂತಾದವುಗಳು ಆಗುತ್ತವೆ.
  • ಅದನ್ನು ತಡೆಯುವಲ್ಲಿ ಪಪ್ಪಾಯಿ ಬೀಜ ಸಹಕಾರಿ.
  • ಕ್ಯಾನ್ಸರ್  ಗಡ್ಡೆಗಳ ಬೆಳವಣಿಗೆಯನ್ನೂ ಸಹ  ಪಪ್ಪಾಯಿ ಬೀಜಗಳು ತಡೆಯಬಲ್ಲವಂತೆ.
  • ಸ್ತನ, ಶ್ವಾಸಕೋಶ, ಪ್ರಾಸ್ಟೇಟ್ ಕ್ಯಾನ್ಸರ್ ತಡೆಯುವಲ್ಲಿ ಇದು ಸಹಕಾರಿ.
  • ಮನುಷ್ಯರಿಗೆ ಹುಳದ ಬಾಧೆ ಉಂಟಾದರೆ ಅದನ್ನು ತಡೆಯಲು ಸಹ ಇದು ಸಹಕಾರಿ.
  • ಹೊಟ್ಟೆ ಹುಳವನ್ನು ಕೊಲ್ಲುವ ಅಲ್ಕಲಾಯ್ಡ್ ಗಳನ್ನು ಇವು ಉತ್ಪಾದಿಸುತ್ತವೆ.
ಹಣ್ಣಿನೊಂದಿಗೆ 3-4 ಬೀಜಗಳನ್ನೂ ತಿನ್ನಿ.

ಹೇಗೆ ಸೇವಿಸುವುದು:

  • ಹಸಿ ಪಪ್ಪಾಯಿಯನ್ನು ಬೇಯಿಸಿ ಅದರ ರಸವನ್ನು ರುಚಿಗೆ ಬೇಕಾದರೆ ಸ್ವಲ್ಪ ಉಪ್ಪು ಹಾಕಿ ½ ಗ್ಲಾಸ್ ಕುಡಿಯುವುದರಿಂದ ಗಂಟು ನೋವು ಕಡಿಮೆಯಾಗುತ್ತದೆ.
  • ಎಲೆಯ ರಸದಿಂದ ರಕ್ತದ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಾಗುತ್ತವೆ.
  • ಪಪ್ಪಾಯಿಯ ಎಲೆಯನ್ನು ನೆರಳಿನಲ್ಲಿ ಒಣಗಿಸಿ ಹಸುರಾಗಿಯೇ ಇರುವುದನ್ನು ಹುಡಿ ಮಾಡಿಟ್ಟುಕೊಂಡು ಚಹಾ ಡಿಕಾಕ್ಷನ್ ನಂತೆ ಮಾಡಿ ಸೇವಿಸಬಹುದು.
  • ಚಹಾ ಹುಡಿಯ ಜೊತೆ ಸೇರಿಸಬಹುದು.
  • ಪಪ್ಪಾಯಿಯ ಎಲೆಯನ್ನು ಗುದ್ದಿ ನುಣ್ಣಗೆ ಉಂಡೆ ಮಾಡಿ ಅದಕ್ಕೆ ಬೆಳ್ಳುಳ್ಳಿ + ಉಪ್ಪು+ ಹಸಿ ಅಥವಾ ಒಣ ಕರಿಮೆಣಸು ಸೇರಿಸಿ ಗುಳಿಗೆ ತರಹ ಮಾಡಿ ನುಂಗಿದರೆ ಬಹಳ ಪ್ರಯೋಜನ ಇದೆ.

  • ಇದು ವೈರಸ್ ಸೋಂಕನ್ನು ತಡೆಯುತ್ತದೆ
  • ಹೊಟ್ಟೆ ನೋವಿಗೂ ಸಹ ಪಪ್ಪಾಯಿ ಬೀಜ ಉಪಶಮನ ಕೊಡುತ್ತದೆ. ಬೀಜವನ್ನು ಹಣ್ಣಿನೊಂದಿಗೆ ಸೇವಿಸಿದರೆ ಅಥವಾ 4-5 ಬೀಜಗಳನ್ನು ಅರೆದು ನೀರಿನೊಂದಿಗೆ ಮಿಶ್ರಣ ಮಾಡಿ 3 ಬಾರಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಗಂಟಲು ನೋವಿಗೂ ಸಹ ಇದು ಉತ್ತಮ.

ಪಪ್ಪಾಯಿಯ ಎಲೆಯ ಹುಡಿಯನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡುವವರೂ  ಪ್ರಾರಂಭವಾಗಿದ್ದಾರೆ.

ಪಪಾಯಿ ಗಿಡ ನಿಮ್ಮ ಹಿತ್ತಲಿನ ಒಂದು ಅಮೂಲ್ಯ ಔಷದೀಯ ಗಿಡ ಎಂದು ತಪ್ಪದೇ ಬೆಳೆಸಿ. ಇದು ಆಪತ್ಕಾಲಕ್ಕೆ ಬೇಕಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!