ಶ್ರೀಗಂಧದ ಹೊಲದಲ್ಲಿ ನಿರಂತರ ಆದಾಯ.

ಶ್ರೀಗಂಧ ಒಂದು ನಮ್ಮ ಕಾಡು ಬೆಟ್ಟಗಳಲ್ಲಿ ಬೆಳೆಯುವ ಸಸ್ಯ ಸಂಕುಲದ  ತರಹದ್ದೇ ಆದ ಸಸ್ಯ. ಇದು ಬೇರೆ ಸಸ್ಯಗಳನ್ನೂ ಬೆಳೆಯಲು ಬಿಡುತ್ತದೆ. ಯಾವುದೇ ಜೀವ ವೈವಿಧ್ಯಕ್ಕೆ  ಇದರಿಂದ ತೊಂದರೆ ಇಲ್ಲ. ಬೆಳೆ ಕಠಾವಿನ ತನಕವೂ ಒಂದಷ್ಟು ಆದಾಯವನ್ನು ಈ ಹೊಲದಲ್ಲಿ ಪಡೆಯುತ್ತಲೇ ಇರಬಹುದು.

  •  ಶ್ರೀಗಂಧ  ಎಂದರೆ ಅದು ಕಲ್ಪ ವೃಕ್ಷದ ತರಹವೇ.  ಇದರ
  • ಪ್ರತೀಯೊಂದೂ ಭಾಗವೂ ಸಹ  ಉಪಯುಕ್ತ ಮತ್ತು ಅದರಲ್ಲಿ ಔಷಧೀಯ ಗುಣಗಳೂ ಇವೆ.
  • ಆದ  ಕಾರಣ ಶ್ರೀಗಂಧ  ಬೆಳೆದ ಹೊಲ ಎಂದರೆ ಅದು ಸದಾ ಸಂಮೃಧಿಯ ಹೊಲ..
  • ಶ್ರೀಗಂಧ ಬೆಳೆಯಲ್ಲಿ ಸಾಕಷ್ಟು ಅಧ್ಯಯನ ಮಾಡಿದ  ಮರ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ರಸಾಯನ ಶಾಸ್ತ್ರ ಮತ್ತು ಜೀವ ರಸಾಯನ ಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ರವಿ ಕುಮಾರ್ ರವ ರು ಹೇಳುವುದು ಇದು.


 

ಹೇಗೆ ನಿರಂತರ ಲಾಭ:

  •  ಶ್ರೀಗಂಧ ಬೆಳೆಯ ಜೊತೆಯಲ್ಲಿ  ಹಲವು ಮಿಶ್ರ ಬೆಳೆಗಳನ್ನು ಬೆಳೆಸಬಹುದು.
  • ಶ್ರೀಗಂಧ ಒಂದು  ಆಂಟೀ ವೈರಲ್ ಸಸ್ಯ.  ಇದರಲ್ಲಿ ಚರ್ಮ ರೋಗ  ಗುಣಪಡಿಸುವ  ಗುಣ ಇದೆ.
  • ಕ್ಯಾನ್ಸರ್  ವಿರುದ್ಧ ಹೋರಾಡುವ ಗುಣ ಇದೆ.
  • ಇದು ಮನಸ್ಸಿಗೆ  ಸಂತೋಷ ಕೊಡುವ ( ಶಕ್ತಿ) ಕೊಡುವ  ಗುಣ ಪಡೆದಿದೆ.
  • ನಮ್ಮ ಹಿರಿಯರು ಗಂಧ ಅರೆದು ತಿಲಕಕ್ಕೆ ಒಂದು ನಾಮ ಎಳೆದು ಅದರಲ್ಲಿ ಒಂದು ಅಂತಃ ಶಕ್ತಿಯನ್ನು ಗುರುತಿಸಿದ್ದರು.

  • ಇದು  ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರೋಮಾ ಹೀಲಿಂಗ್ ಎಂಬ ಚಿಕಿತ್ಸೆಯಲ್ಲಿ ಶ್ರೀಗಂಧ ಪ್ರಾಮುಖ್ಯ ಪಾತ್ರವನ್ನು ಪದೆದಿದೆ.
  • ಕೋಪ ದೂರವಾಗುತ್ತದೆ. ದುಷ್ಟ ಶಕ್ತಿಗಳೂ ಸಹ ತಣ್ಣಗಾಗುತ್ತವೆ.
  • ಶ್ರೀಗಂಧ ಪ್ರಾಯ ಆದದ್ದನ್ನು ಹೊರತೋರಿಸಲಾರದು.
  • ಶ್ರೀಗಂಧ + ಅರಶಿನ+ ಗುಲಾಬಿ ರಸ + ಕಡ್ಲೆ ಹಿಟ್ಟು ಮಿಶ್ರಣ ಮಾಡಿ  ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ  ಹೆಚ್ಚುತ್ತದೆ.
  • ಸರ್ಪ ಸುತ್ತಿನಂತಹ ವೈರಸ್ ಮತ್ತು ನರಸಂಬಂಧಿತ  ರೋಗಕ್ಕೂ ಸಹ ಶ್ರೀಗಂಧ ಔಷಧಿ.
  • ಇಷ್ಟೆಲ್ಲಾ ಗುಣ ಹೊಂದಿದ ಶ್ರೀಗಂಧದ ಸರ್ವಾಂಗವೂ ಸಹ ಉಪಕಾರಿಯಾಗಿದೆ.

ಆದಾಯದ ಮೂಲಗಳು:

  • ಶ್ರೀಗಂಧ ಬೆಳೆಸಿದ ವರ್ಷ  ಆ ಹೊಲದಲ್ಲಿ  ಹರಿವೆ ಸೊಪ್ಪು  ಬೆಳೆಸಬಹುದು.
  • ಬೇರೆ ಬೇರೆ ತರಕಾರಿ ಬೆಳೆಗಳನ್ನು  ಬೆಳೆಸಬಹುದು.
  • ಹಾಗೆಂದು ಅವುಗಳಿಗೆ ರೋಗಗಳು ಬಂದಾಗ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಹರಡದಂತೆ  ತಡೆಯಬೇಕು.

ಶೀಗಂಧದ ಬೆಳೆಯ ಜೊತೆಗೆ  ಔಷಧೀಯ ಸಸ್ಯಗಳನ್ನು ಬೆಳೆಸುವುದು  ಲಾಭದಾಯಕ. ಕೊಳ್ಳುವವರನ್ನು  ಗೊತ್ತು ಮಾಡಿಕೊಂಡು ಬೆಳೆದರ ಲೆಮನ್ ಗ್ರಾಸ್,  ಅಶ್ವಗಂಧ , ಸರ್ಪಗಂಧ, ಕಲಮೇಘ ( ಕಿರಾತ ಕಡ್ಡಿ) ಸಲ್ಲಾಕಿ, ಅಮೃತ ಬಳ್ಳಿ, ನೆಲಬೇವು, ಮಂಡೂಕ ಪರ್ಣಿ( ತಿಮರೆ)  ತುಳಸಿ ಜಾತಿಯ ಬೆಸಿಲ್, ಜೆರೇನಿಯಂ ಮುಂತಾದ ಅಧಿಕ ವಾಣಿಜ್ಯ ಮಹತ್ವ ಉಳ್ಳ ಬೆಳೆಗಳನ್ನು  ಬೆಳೆಯಬಹುದು.

ಶ್ರೀಗಂಧ ಬಳಸಿದ ಉತ್ಪನ್ನಗಳು
  • ಶ್ರೀಗಂಧ ಬೆಳೆಯುವಾಗ  ಕಾಯಿ ಮತ್ತು ಸೊಪ್ಪಿಗಾಗಿ ನುಗ್ಗೆ  ಬೆಳೆದರೆ ಲಾಭದಾಯಕ.
  •  ಮಾವಿನ ಬೆಳೆಯನ್ನು ಶ್ರೀಗಂಧದ ಜೊತೆ ಬೆಳೆಸಬಹುದು.
  • ಶ್ರೀ ಗಂಧ ನೆಟ್ಟು 3   ವರ್ಷಕ್ಕೆ ಹೂ ಬಿಡಲಾರಂಭಿಸುತ್ತದೆ.
  • ಇದು ವರ್ಷಕ್ಕೆ  ಎರಡು ಸಾರಿ ಹೂ ಬಿಡುತ್ತದೆ.
  • ಈ ಹೂವಿನಲ್ಲಿ ಉತ್ತಮ ಮದು ಇದ್ದು, ಇದರಲ್ಲಿ ಜೇನು ಸಾಕಾಣಿಕೆಯನ್ನು ಲಾಭದಾಯಾವಾಗಿ ಮಾಡಬಹುದು.

ಶ್ರೀಗಂಧದ ಬೀಜಗಳು ಉತ್ತಮ  ಬೆಲೆಯನ್ನು ಹೊಂದಿದ್ದು, ಇದರಲ್ಲಿ ಎಣ್ಣೆಯನ್ನು(Fatty Oil) ತೆಗೆಯಲಿಕ್ಕಾಗುತ್ತದೆ. ಇದು ಹಲವಾರು  ಸೌಂದರ್ಯ ವರ್ಧಕ ಮತ್ತು ಔಷಧೀಯ ಬಳಕೆಗೆ ಉಪಯುಕ್ತ. ಇದರ ಸಿಪ್ಪೆಯನ್ನು ಪಶು ಆಹಾರವಾಗಿ ಬಳಕೆ ಮಾಡಬಹುದು.

  • ಶ್ರೀಗಂಧದ ಚಿಗುರೆಲೆಗಳನ್ನು ಗ್ರೀನ್ ಟೀ ಆಗಿ ಮಾಡಿ ಬಳಕೆ ಮಾಡಬಹುದು.
  • ಇದನ್ನು ಸಂಸ್ಥೆ ಮಾಡಿ ಬಳಸಿದೆ.

ಶ್ರೀಗಂಧದ ಉಪ ಉತ್ಪನ್ನಗಳ  ತಯಾರಿ ಬಗ್ಗೆ ಮರವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಹಲವಾರು ಪ್ರಯೋಗಗಳನ್ನು  ಕೈಗೊಂಡು ಯಶಸ್ವಿಯಾಗಿದೆ. ಹೊಸ ಹೊಸ ಬಳಕೆಯ ಬಗ್ಗೆ ಸದಾ ಸಂಶೋಧನೆಯಲ್ಲಿ ನಿರತವಾಗಿದೆ.

 

Leave a Reply

Your email address will not be published. Required fields are marked *

error: Content is protected !!