ಅಮೆರಿಕಾ ದೇಶವು ಭಾರತದೊಂದಿಗೆ ಡೈರಿ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದ ನಮ್ಮ ದೇಶದ ಸಣ್ಣ ಅತೀ ಸಣ್ಣ ಡೈರಿ ಉದ್ದಿಮೆದಾರರು ಕಷ್ಟಕ್ಕೆ ಬೀಳಬಹುದು.
- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯವೇ ಭೇಟಿ ಕೊಡಲಿದ್ದು,
- ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ನಡೆಯುವ ಒಪ್ಪಂದಗಳಲ್ಲಿ ಹೈನೋದ್ಯಮದಲ್ಲಿ ( ಹೈನೋತ್ಪನ್ನಗಳು)ತನ್ನ ಪಾಲುದಾರಿಕೆಯೂ ಸೇರಿದೆ.
- ಭಾರತ ಏನಾದರೂ ಈ ಒಪ್ಪಂದಕ್ಕೆ ಸಮ್ಮತಿಸಿ ಸಹಿ ಹಾಕಿದ್ದೇ ಆದರೆ ಇಲ್ಲಿನ ಹೈನೋದ್ಯಮಕ್ಕೆ ಗ್ರಹಣ ಬಡಿದಂತೆ.·
- ನಮ್ಮ ದೇಶದಲ್ಲಿ 2-4 10 -20 ಹಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುವವರೇ ಜಾಸ್ತಿ.
- ಗ್ರಾಮೀಣ ಭಾಗದ ಸಣ್ಣ, ಅತೀ ಸಣ್ಣ, ಕೃಷಿಕರು, ಮಹಿಳೆಯರು ತಮ್ಮ ದೈನಂದಿನ ಜೀವನೋಪಾಯದ ಅಲ್ಪ ಖರ್ಚಿಗೆ ಮತ್ತು ಬೆಳೆ ಪೊಷಣೆಯ ಗೊಬ್ಬರಕ್ಕಾಗಿ ಹಸು ಸಾಕುತ್ತಾರೆ.·
- ಉತ್ಪಾದನೆಯಾಗುವ ಅಲ್ಪ ಸ್ವಲ್ಪ ಹಾಲನ್ನು ಮಾರಾಟಾ ಮಾಡಿ ಕಿಂಚಿತ್ತು ಹಣ ಸಂಪಾದನೆ ಮಾಡುತ್ತಾರೆ.
- ಅಮೆರಿಕಾ ದೇಶವು ಸಾವಿರಾರು ಹಸುಗಳನ್ನು ಸಾಕಿ ನಮ್ಮ ದೇಶದ ಹಾಲಿಗಿಂತ ಮೂರು- ನಾಲ್ಕು ಪಟ್ಟು ಹೆಚ್ಚು ಹಾಲು ಉತ್ಪಾದನೆ ಮಾಡುತ್ತಾರೆ.
- ಇವರು ಪ್ರವೇಶ ಮಾಡಿದರೆಂದರೆ ನಮ್ಮ ಭವಿಷ್ಯವು ಚಿಂತಾಜನಕ ಆಗುವ ಸಾಧ್ಯತೆ ಇದೆ.
ಭಾರತದ ಡೈರಿ ಉದ್ದಿಮೆ:·
- ಡೈರಿ ಕಾಯಕವು ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವುದಲ್ಲದೆ, ರಾಷ್ಟ್ರೀಯ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತದೆ.
- ಲಕ್ಷಾಂತರ ಗ್ರಾಮೀಣ ಕುಟುಂಬಗಳ ಆಹಾರ ಸುರಕ್ಷತೆಯನ್ನು ಖಾತರಿಪಡಿಸುವುದರ ಜೊತೆಗೆ ಗ್ರಾಮೀಣ ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವಲ್ಲಿ ಡೈರಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ.
- ಡೈರಿ ಉದ್ದಿಮೆಯನ್ನು ನಂಬಿ ನಮ್ಮ ದೇಶದಲ್ಲಿ ಭತ್ತ, ಗೋಧಿ ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯು ಇದೆ.
- ಕೃಷಿ ಉತ್ಪನ್ನ ಮತ್ತು ಡೈರಿ ಉದ್ದಿಮೆ ಪರಸ್ಪರ ಕೂಡಿಕೊಂಡು ಇದೆ..
- ಕೃಷಿ ಕ್ಷೇತ್ರ ಭಾರತದ ಜನಸಂಖ್ಯೆಗೆ ವಾರ್ಷಿಕ 90-120 ಮಾನವ ದಿನಗಳ ಉದ್ಯೋಗವನ್ನು ಕೊಡುತ್ತದೆ. ಉಳಿದ ದಿನಗಳನ್ನು ಡೈರಿ ಉದ್ದಿಮೆ ಕೊಡುತ್ತದೆ.
- ನಮ್ಮ ದೇಶದ ಡೈರಿ ಉದ್ದಿಮೆ ಪೂರ್ತಿಯಾಗಿ ದೇಶೀಯ ಬಳಕೆಗಷ್ಟೇ ಸೀಮೆಇತವಾಗಿದೆ.
- ಭಾರತದ ಡಿರಿ ಉದ್ದಿಮೆಯ ರಪ್ತು ಪಾಲು (0.06 %) ತೀರಾ ನಗಣ್ಯವಾಗಿದೆ.
- ನಮ್ಮ ದೇಶದಿಂದ ಅಮೇರಿಕಾಕ್ಕೆ ರಪ್ತು ಆಗುವ ಡೈರಿ ಉತ್ಪನ್ನ ಎಂದರೆ ತುಪ್ಪ , ಚೀಸ್ ಮತ್ತು ಬೆಣ್ಣೆ ಮಾತ್ರ.
- ಇದರಲ್ಲಿ ತುಪ್ಪದ ಪಲು ಅತೀ ದೊಡ್ಡದು.
- ಭಾರತದ ಹೈನ ಉತ್ಪನ್ನಕ್ಕೆ ಅಮೇರಿಕಾದಲ್ಲಿ ಉತ್ತಮ ಅಭಿಪ್ರಾಯವಿರುವುದು, ಇಲ್ಲಿನ ದನಗಳಿಗೆ ಮಾಂಸವನ್ನು ನೀಡಲಾಗುವುದಿಲ್ಲ ಎಂಬ ಕಾರಣಕ್ಕೆ.
ಅಮೆರಿಕಾದ ಡೈರಿ ಉದ್ದಿಮೆ:
- ಅಮೆರಿಕಾದಲ್ಲಿ ಡೈರೀ ಉದ್ದಿಮೆಯು ಪೂರ್ತಿಯಾಗಿ ರಪ್ತು ಕೇಂದ್ರೀಕೃತವಾಗಿದ್ದು, ಜಗತ್ತಿನಲ್ಲೇ ಡೈರೀ ಉತ್ಪನ್ನಗಳ ಬಹು ದೊಡ್ದ ರಪ್ತುದಾರ ದೇಶವಾಗಿದೆ.
- ಭಾರತ ಮತ್ತು ಅಮೆರಿಕಾ ನಡುವಿನ ಈ ಡೈರಿ ಒಪ್ಪಂದವು ಪರಸ್ಪರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ತರಹವೇ ಆಗಿದ್ದು ಭಾರತ ಅದಕ್ಕೆ ಒಪ್ಪುವ ಸಾಧ್ಯತೆ ಇದೆ.
- ಅಮೆರಿಕಾದಲ್ಲಿ ಡೈರಿ ಉದ್ದಿಮೆ ದೊಡ್ದ ಪ್ರಮಾಣದಲ್ಲಿರುವ ಕಾರಣ , ಹಾಲಿನ ಮತ್ತು ಹಾಲಿನ ಉತ್ಪನ್ನದ ಉತ್ಪಾದನಾ ವೆಚ್ಚ ಕಡಿಮೆ ಇರುತ್ತದೆ.
ನಮಗೆ ಹೇಗೆ ತೊಂದರೆ:
- ಒಂದು ವೇಳೆ ನಮ್ಮ ದೇಶವು ಈ ವ್ಯಾಪಾರ ಒಡಂಬಡಿಕೆಗೆ ಸಹಿ ಹಾಕಿ ಮುಕ್ತ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟರೆ ನಮ್ಮ ದೇಶದ ಮಾರುಕಟ್ಟೆಗೆ ಅಮೆರಿಕಾ ದೇಶದಿಂದ ಹೈನ ಉತ್ಪ್ಪನ್ನಗಳು ಹೇರಳವಾಗಿ ಆಮದು ಆಗಲಿದೆ.
- ಆಗ ನಮ್ಮಲ್ಲಿಂದ ರಪ್ತು ಆಗುತ್ತಿರುವ ಉತ್ಪನ್ನಗಳಿಗೆ ಪೆಟ್ಟು ಬೀಳಲಿದೆ.
- ದೇಶೀಯ ಮಾರುಕಟ್ಟೆಗೂ ಹೊಡೆತ ಬೀಳಲಿದೆ.
- ಭಾರತದ ಈ ತನಕದ ಹೈನೋದ್ದಿಮೆಯಲ್ಲಿ ಮಾಡಿದ ಸಾಧನೆಗಳು ಮೂಲೆ ಗುಂಪಾಗಲಿದೆ.
- ನಮ್ಮ ದೇಶದ ಹಾಲು ಉತ್ಪಾದಕರಿಗೆ ಮಾರುಕಟ್ಟೆ ದರದ 60 % ದೊರೆತರೆ ಮಾತ್ರ ಅದು ಲಾಭದಾಯಾವಾಗುತ್ತದೆ.
- ಅಮೆರಿಕಾದವರಿಗೆ 41 % ದೊರೆತರೂ ಲಾಭದಾಯಕವಾಗುತ್ತದೆ.
- ನಮ್ಮಲ್ಲಿ ಪ್ರತೀಯೊಬ್ಬನಿಗೆ 2 ದನದ ಪ್ರಕಾರ ಇದ್ದರೆ ಅಮೆರಿಕಾದಲ್ಲಿ0.04 ಹೈನೋದ್ದಿಮೆ ಮಾಡುವವರು ಪ್ರತೀ ವ್ಯಕ್ತಿಗೆ 241 ಹಸುಗಳಂತೆ ಸಾಕುತ್ತಾರೆ.
- ಅಮೆರಿಕಾದಲ್ಲಿ ಒಂದು ದನ ಈಯತ್ತೆಯಲ್ಲಿ 10,500 ಲೀ. ಹಾಲು ಕೊಟ್ಟರೆ ನಮ್ಮ ದೇಶದಲ್ಲಿ ಒಂದು ದನ 1,715 ಲೀ. ಹಾಲು ಕೊಡುತ್ತದೆ.
- ಅಮೆರಿಕಾ ದೇಶದವರು ಜಾಗತಿಕ ಮಾರುಕಟ್ಟೆ ಬೆಲೆಗಿಂತ 16% ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡಿದರೂ ಲಾಭ ಪಡೆಯುತ್ತಾರೆ.
ನಮಗೆ ನಮ್ಮ ಹಸುಗಳು ಅತೀ ಕಡಿಮೆ ಹಾಲು ಉತ್ಪಾದನೆ ಮಾಡುವುದರಿಂದ ಅವರೊಂದಿಗೆ ಸ್ಪರ್ಧಿಸಲು ಆಗುವುದಿಲ್ಲ.ನಮ್ಮ ದೇಶದ ಮೂಲ ಸೌಕರ್ಯಗಳು ಮತ್ತು ಇತಿ ಮಿತಿಗಳಲ್ಲಿ ರೈತರು ಸ್ಪರ್ಧೆ ಮಾಡುವಂತೆಯೇ ಇಲ್ಲ. ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಅಮೆರಿಕಾ ದೇಶದ ಹಾಲಿನ ಉತ್ಪನ್ನಗಳು ದೊರೆಯುವಂತಾದರೆ ನಾವು ಸೋಲನ್ನು ಕಾಣಲೇ ಬೇಕಾಗಬಹುದು.
- ಸಹಜವಾಗಿ ಇಲ್ಲಿ ಹಾಲಿನ ಬೆಲೆ ಕಡಿಮೆಯಾಗಿ ಲಕ್ಷಾಂತರ ಹಾಲು ಉತ್ಪಾದಾರಿಗೆ ಡೈರಿ ಉದ್ದಿಮೆ ಲಾಭದಾಯಕವಾಗದೆ ಬಿಡಬೇಕಾದ ಪರಿಸ್ಥಿತಿ ಉಂಟಾಗಬಹುದು.
ಈ ಒಪ್ಪಂದವೇನಾದರೂ ಜ್ಯಾರಿಯಾದರೆ 2022 ಕ್ಕೆ ಭಾರತದ ರೈತನ ಆದಾಯ ದ್ವಿಗುಣಗೊಳ್ಳುವ ಕನಸಿನ ಗೋಪುರ ಕುಸಿಯಲಿದೆ ಎನ್ನಲಾಗುತ್ತಿದೆ.