2022 ನೇ ವರ್ಷದ ಜನವರಿ ತಿಂಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಸ್ಥಿತ್ಯಂತರ ಆಗದೆ, ಸ್ವಲ್ಪ ಅನುಮಾನದಲ್ಲೇ ಮುಂದುವರಿದಿದೆ. ಖಾಸಗಿ ವ್ಯಾಪಾರಿಳು ಸಾಂಸ್ಥಿಕ ವ್ಯಾಪಾರಿಗಳ ಜೊತೆಗೆ ಸ್ಪರ್ಧೆಗೆ ಇಳಿಯಲೇ ಇಲ್ಲ. ಸಾಂಸ್ಥಿಕ ವ್ಯಾಪಾರಿಗಳು ತಮ್ಮ ದರಪಟ್ಟಿಯಲ್ಲಿ ವ್ಯತ್ಯಾಸ ಮಾಡದೆ ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧರಿಸಿ ಅಡಿಕೆ ಖರೀದಿ ನಡೆಸುತ್ತಿದ್ದರು. ಜನವರಿ ತಿಂಗಳ ಕೊನೆ ಮಾರುಕಟ್ಟೆ ದಿನವಾದ ದಿನಾಂಕ 31-01-2022 ರಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಕೊಬ್ಬರಿ, ಕರಿಮೆಣಸು, ರಬ್ಬರ್ ಕಾಫೀ ಧಾರಣೆ ಹೇಗಿತ್ತು ಗಮನಿಸಿ.
ಅಡಿಕೆ ಮರುಕಟ್ಟೆ ಎಂದರೆ ಅದು ಸಣ್ಣ ವಿಷಯವಲ್ಲ. ಅತೀ ದುಬಾರಿ ಬೆಲೆಯ ಕೇಸರಿ ಮಾರುಕಟ್ಟೆಯನ್ನಾದರೂ ಸಹಿಸಿಕೊಳ್ಳಬಹುದು. ಯಾಕೆಂದರೆ ಅದರ ಉತ್ಪತ್ತಿಗೆ ಮಿತಿ ಇದೆ. ಆದರೆ ನಾವು ಬೆಳೆಯುವ ಅಡಿಕೆಗೆ ಅದು ಇಲ್ಲ. ಹೊಸ ಹೊಸ ತೋಟ ಆಗುತ್ತಾ ಇದೆ. ಹಳೆಯ ತೋಟಗಾರರೂ ಅಧಿಕ ಇಳುವರಿಗಾಗಿ ಅಗತ್ಯವಾದ ಬೇಸಾಯ ಕ್ರಮವನ್ನು ಅನುಸರಿಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಈಗಿನ ಅಡಿಕೆ ಉತ್ಪಾದನೆಯ ನಿಖರ ಲೆಕ್ಕ ಸರಿಯಾಗಿ ಸಿಗದೆ ಇರುವ ಕಾರಣ ಅಡಿಕೆ ಮಾರುಕಟ್ಟೆ ಎಂಬುದು ಯಾವಾಗಲೂ ಅಸ್ಥಿರವಾಗಿಯೇ ಉಳಿದಿದೆ. ಉದಾಹರಣೆಗೆ ಮಂಗಳೂರು ಮಾರುಕಟ್ಟೆಯಲ್ಲಿ ಈ ತನಕ ಕೋಕಾ ಹೊರತಾಗಿ ಬೇರೆ ತರಾವಳಿಯ ಅಡಿಕೆ ವ್ಯವಹಾರ ಆದ ದಾಖಲೆಯೇ ಇಲ್ಲ. ಹಾಗಾದರೆ ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳಪೆ ಕೋಕಾ ಅಡಿಕೆ ಬಿಟ್ಟು ಬೇರೆ ಬರುವುದಿಲ್ಲವೇ? ಸಾಕಷ್ಟು ಬರುತ್ತದೆ. ದಿನಾ ಉತ್ತರ ಭಾರತಕ್ಕೆ ಇಲ್ಲಿಂದ ಟ್ರಕ್ ಗಟ್ಟಲೆ ಅಡಿಕೆ ರವಾನೆಯಾಗುತ್ತದೆ. ಬಹುಷಃ ಹೆಚ್ಚಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಂಡರ್ ಬಿಲ್ಲಿಂಗ್ ಮಾಡಿ ಅಡಿಕೆ ವ್ಯವಹಾರ ಆಗುತ್ತಿರಬಹುದು. ಕೆಲವು ಯಾವ ದಾಖಲೆಯೂ ಇಲ್ಲದೆ ದೋ ನಂಬರ್ ವ್ಯವಹಾರದಲ್ಲೇ ಮಾರಾಟವಾಗುತ್ತದೆ. ಹೀಗಿರುವಾಗ ಬೆಳೆ ಮತ್ತು ಉತ್ಪತ್ತಿಯ ಲೆಕ್ಕಾಚಾರ ಸಿಗುವುದಾದರೂ ಹೇಗೆ?
ಅಡಿಕೆ ಬೆಳೆಗೆ- ಯಾವಾಗಲೂ ಆತಂಕ:
- ಜನ ಈಗ ದರ ಇದೆ. ಇನ್ನೂ ಒಂದು ಎರಡು ವರ್ಷ ಹೀಗೆ ಮುಂದುವರಿಯಬಹುದು.
- 2024 ರ ನಂತರ ಅಡಿಕೆ ಮಾರುಕಟ್ಟೆ ನೆಲಕಚ್ಚಲಿದೆ ಎಂಬುದಾಗಿ ಮಾತಾಡಿಕೊಳ್ಳುತ್ತಿದ್ದಾರೆ.
- ಈ ಹಿಂದೆಯೂ ಹೀಗೆಯೇ ಹೇಳಿದ್ದರು. ಆದರೆ ಬೆಲೆ ಒಮ್ಮೆ ಬಿದ್ದರೂ ಮತ್ತೆ ಚೇತರಿಸಿಕೊಂಡಿದೆ.
- ಬಹುಷಃ ಕಳೆದ ಎರಡು ಮೂರು ವರ್ಷಗಳಲ್ಲಿ ಅಡಿಕೆ ಬೆಳೆ ಪ್ರದೇಶ ವಿಸ್ತರಣೆ ಆದಷ್ಟು ದೇಶದಲ್ಲಿ ಯಾವುದೇ ಬೆಳೆಯೂ ವಿಸ್ತರಣೆ ಆಗಿಲ್ಲ.
- 2014 ರ ವರೆಗೆ ಬೇಡಿಕೆಗಿಂತ ಉತ್ಪಾದನೆ ಕಡಿಮೆ ಇತ್ತು ನಿಜ.
- ಆದರೆ 2016 ರ ತರುವಾಯ ಬೆಳೆ ವಿಸ್ತರಣೆ ಆಗಿ ಈಗ ಉತ್ಪಾದನೆ ಹೆಚ್ಚು, ಬಳಕೆ ಕಡಿಮೆ ಆಗಿದೆ ಎಂಬ ಲೆಕ್ಕಾಚಾರಗಳು ಇವೆ.
- ಆದರೆ ಯಾಕೆ ಈ ರೀತಿ ದರ ಏರಿಕೆ ಆಗುತ್ತದೆ ಎಂಬುದೇ ರಹಸ್ಯವಾಗಿದೆ.
- ಭಾರತದ ಜನಸಂಖ್ಯೆಯ 20-22% ಜನ ಅಡಿಕೆಯನ್ನು ಬಳಕೆ ಮಾಡುತ್ತಾರೆ ಎಂಬ ಲೆಕ್ಕಾಚಾರ ಇದ್ದು, ದಿನವೊಂದಕ್ಕೆ ಸರಾಸರಿ 20 ಗ್ರಾಂ ಅಡಿಕೆ ಒಬ್ಬ ತಿಂದರೂ 5 ಲಕ್ಷ ಟನ್ ನಷ್ಟು ಅಡಿಕೆ ಬೇಕಾಗುತ್ತದೆ.
- ಆದರೆ ಈಗ ನಮ್ಮಲ್ಲಿ ಉತ್ಪಾದನೆ 7-10 ಲಕ್ಷ ಟನ್ ನಷ್ಟು ಉತ್ಪಾದನೆ ಆಗಿದೆ ಎಂಬ ಅಂದಾಜು ಲೆಕ್ಕಾಚಾರ ಸಿಗುತ್ತದೆ.
- ಈಗ ನಾಟಿ ಮಾಡಲ್ಪಟ್ಟು ವಿಸ್ತರಣೆಯಾಗುತ್ತಿರುವ ಪ್ರದೇಶಗಳು ಇಳುವರಿ ಕೊಡುವ ಹಂತಕ್ಕೆ ಬಂದರೆ ಇನ್ನೂ ಉತ್ಪಾದನೆ ಹೆಚ್ಚಾಗಬಹುದು.
- ಆಗ ಅಡಿಕೆ ಬಳಕೆದಾರರು ಹೆಚ್ಚಳವಾಗದಿದ್ದರೆ ಬೇಡಿಕೆ ಕುಸಿಯದೆ ಇರದು.
- ಬಹಳಷ್ಟು ಜನ ಉಳಿದೆಲ್ಲಾ ಬೆಳೆಗಳಿಗಿಂತ ಅಡಿಕೆ ಆಗಬಹುದು ಎಂದು ಒಪ್ಪ ಓರಣವಾಗಿ ತೋಟಮಾಡಿದ್ದಾರೆ.
- ಅವರಿಗೆಲ್ಲಾ ನಿರಾಶೆಯಾಗದಿರಲಿ ಎಂದು ಆಶಿಸೋಣ.
ವ್ಯವಹಾರಕ್ಕೆ ಹಣಕಾಸಿನ ಅಡಚಣೆ:
ಪಂಚ ರಾಜ್ಯಗಳಲ್ಲಿ Punjab, Uttar Pradesh, Uttarakhand, Goa and Manipur ಚುನಾವಣೆ ಘೋಷಣೆಯಾಗಿದ್ದು. ಹಣ ಚಲಾವಣೆಗೆ ಕಷ್ಟವಾಗಿದೆ.ಕಳೆದ ಎರಡು ವರ್ಷಗಳಿಂದ ಉತ್ತರ ಪ್ರದೇಶದಿಂದಲೇ ಅಡಿಕೆಗೆ ಅಧಿಕ ಬೇಡಿಕೆ ಬರುತ್ತಿದ್ದು, ಅಲ್ಲಿ ಚುನಾವಣೆ ಘೋಷಣೆಯಾಗಿ ಸ್ವಲ್ಪ ವ್ಯವಹಾರ ಕಷ್ಟವಾಗಿದೆ. ಚುನಾವಣೆ ಬಳಿಕ ಎಲ್ಲವೂ ಸರಿಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆ:
ಚಾಲಿ ಅಡಿಕೆಗೆ ಕ್ಯಾಂಪ್ಕೋ ದರ ಇಳಿಸಿಲ್ಲ. ಖಾಸಗಿಯವರು ದರ ಇಳಿಕೆ ಮಾಡಿದ್ದಾರೆ. ಇಂದು ಶಿರಸಿ, ಸಿದ್ದಾಪುರದ ಚಾಲಿ ಧಾರಣೆ ಗಮನಿಸಿದರೆ ದರ ಸ್ವಲ್ಪ ಏರಿಕೆ ಆದರೂ ಆಗಬಹುದು, ಅಥವಾ ಇಳಿಕೆ ಅಗದೆ ಹೀಗೇ ಸ್ಥಿರವಾಗಿ ಉಳಿಯಬಹುದು ಎನ್ನಿಸುತ್ತದೆ.ಗುಣಮಟ್ಟದ ಅಡಿಕೆ ಇನ್ನೂ ಮಾರಾಟಕ್ಕೆ ಬರಲಿಲ್ಲ. ಅದು ಬಂದಾಗ ದರ ಏರಬಹುದು.
- ಬಂಟ್ವಾಳ: ಹೊಸ ಚಾಲಿ, 27500, 45000, 42000
- ಬಂಟ್ವಾಳ: ಹಳೆ ಚಾಲಿ 46000, 53000, 50000
- ಬೆಳ್ತಂಗಡಿ: ಹೊಸ ಚಾಲಿ: 27600, 44000, 38000
- ಬೆಳ್ತಂಗಡಿ ಹಳೆ ಚಾಲಿ: 43000, 53000, 48000
- ಕುಂದಾಪುರ: ಹಳೆ ಚಾಲಿ: 51500, 52500, 52000
- ಕುಂದಾಪುರ: ಹೊಸ ಚಾಲಿ: 43500, 44500, 44000
- ಕಾರ್ಕಳ: ಹೊಸ ಚಾಲಿ: 40000, 45000, 43000
- ಕಾರ್ಕಳ: ಹಳೆ ಚಾಲಿ: 46000, 53000, 50000
- ಮಂಗಳೂರು ಹಳೆ ಚಾಲಿ: 46000, 53000, 50000
- ಮಂಗಳೂರು: ಹೊಸ ಚಾಲಿ: 40000, 45000, 43000
- ಪುತ್ತೂರು: ಹೊಸ ಚಾಲಿ: 11000, 26000, 18500
- ಪುತ್ತೂರು: ಹಳೆ ಚಾಲಿ: 27500, 45000, 36250
- ಸುಳ್ಯ: ಹಳೆ ಚಾಲಿ: 46000, 53000, 50000
- ಸುಳ್ಯ ಹೊಸ ಚಾಲಿ: 40000, 45000, 43000
- ಪಟೋರಾ ಹಳತು:40000 45000
- ಪಟೋರಾ ಹೊಸತು: 30000-34000
- ಉಳ್ಳಿಗಡ್ಡೆ ಹಳತು: 25000-27000
- ಉಳ್ಳಿಗಡ್ಡೆ ಹೊಸತು:20000-21000
- ಕರಿ ಕೋಕಾ:ಹೊಸತು:25000-26500
- ಕರಿಕೋಕಾ ಹಳತು: 25000-29000
ಕೆಂಪಡಿಕೆ ಮಾರುಕಟ್ಟೆ:
ಕರಾವಳಿಯಲ್ಲಿ ಕರಿಗೋಟಿಗೆ ಬೇಡಿಕೆ ಉಂಟಾಗಿದೆ. ಸಾಗರ, ಶಿವಮೊಗ್ಗ, ಶಿರಸಿ ಯಲ್ಲಾಪುರ ಮಾರುಕಟ್ಟೆಯಲ್ಲಿ ಖರೀದಿಗೆ ಆಸಕ್ತಿ ಹೆಚ್ಚಿದೆ. ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ವ್ಯತ್ಯಾಸ ಅಂತರ ತುಂಬಾ ಕಡಿಮೆ ಇರುವ ಕಾರಣ ಇನ್ನು ಒಂದು ತಿಂಗಳು ಕಳೆಯುವುದರೊಳಗೆ ಕ್ವಿಂಟಾಲ್ ರಾಶಿ ಅಡಿಕೆಗೆ 1000 ದಿಂದ 2000 ತನಕ ಏರಿಕೆ ಆಗಬಹುದು. ನಿನ್ನೆ ತೀರ್ಥಹಳ್ಳಿಯ ಮಾರುಕಟ್ಟೆಗೆ 2118 ಚೀಲ ಹಾಗೂ ಇಂದು ಶಿವಮೊಗ್ಗ ಮಾರುಕಟ್ಟೆಗೆ 5870 ಚೀಲ ಅವಕವಾಗಿದ್ದರೂ ಬೆಲೆಯಲ್ಲಿ ವ್ಯತ್ಯಾಸ ಆಗದ ಕಾರಣ ಬೇಡಿಕೆ ಚೆನ್ನಾಗಿದೆ.
- ಭದ್ರಾವತಿ: ರಾಶಿ 44399, 45899, 45409
- ಚೆನ್ನಗಿರಿ: ರಾಶಿ 44722, 46299, 45457
- ದಾವಣಗೆರೆ: ರಾಶಿ 26569, 46282, 45660
- ಹೊನ್ನಾಳಿ: ರಾಶಿ, 46500, 46500, 46500
- ಕುಮ್ಟಾ: ಚಿಪ್ಪು, 24869, 31019, 30619
- ಕುಮ್ಟಾ: ಕೋಕಾ, 20109, 27009, 26489
- ಕುಮ್ಟಾ: ಪ್ಯಾಕ್ಟರಿ. 13019, 19170, 18669
- ಕುಮ್ಟಾ: ಹಳೇ ಚಾಲಿ, 47699, 49399, 48769
- ಕುಮ್ಟಾ: ಹೊಸ ಚಾಲಿ, 37869, 40799, 30989
- ಸಾಗರ: ಬಿಳೇ ಗೋಟು, 18099, 28589, 26299
- ಸಾಗರ : ಚಾಲಿ, 33009, 41599, 37299
- ಸಾಗರ : ಕೋಕಾ, 20569, 30599, 26830
- ಸಾಗರ: ಕೆಂಪು ಗೋಟು, 25569, 38399, 35669
- ಸಾಗರ : ರಾಶಿ, 36009, 47399, 46189
- ಸಾಗರ: ಸಿಪ್ಪೆಗೊಟು, 7515, 24960, 19189
- ಶಿಕಾರೀಪುರ: ಕೆಂಪು, 44700, 47900, 46000
- ಶಿವಮೊಗ್ಗ: ಬೆಟ್ಟೆ, 49000, 51569, 50500
- ಶಿವಮೊಗ್ಗ: ಗೊರಬಲು, 18009, 34700, 33800
- ಶಿವಮೊಗ್ಗ: ರಾಶಿ, 43700, 46000, 45600
- ಶಿವಮೊಗ್ಗ: ಸರಕು, 51000, 75996, 66000
- ಸಿದ್ದಾಪುರ: ಬಿಳೇ ಗೋಟು, 21799, 29099, 26899
- ಸಿದ್ದಾಪುರ: ಚಾಲಿ, 47199, 47599, 46809
- ಸಿದ್ದಾಪುರ: ಕೋಕಾ, 20689, 30412, 26500
- ಸಿದ್ದಾಪುರ: ಹೊಸ ಚಾಲಿ, 33699, 41099, 37700
- ಸಿದ್ದಾಪುರ: ಕೆಂಪು ಗೋಟು, 32089, 33919, 32609
- ಸಿದ್ದಾಪುರ: ರಾಸಿ, 43899, 47599, 46600
- ಸಿದ್ದಾಪುರ: ತಟ್ಟೆ ಬೆಟ್ಟೆ, 38899, 46609, 39000
- ಸಿರ್ಸಿ: ಬೆಟ್ಟೆ, 32496, 45600, 41400
- ಸಿರ್ಸಿ: ಬಿಳೇ ಗೋಟು, 22099, 32099, 27200
- ಸಿರ್ಸಿ: ಚಾಲಿ: 33819, 41000, 38088
- ಸಿರ್ಸಿ ರಾಸಿ: 41399, 48000, 46800
- ತುಮಕೂರು: ರಾಸಿ, 45100, 46600, 45800
- ತುಮಕೂರು: ಇತರ, 45200, 46800, 45800
- ತೀರ್ಥಹಳ್ಳಿ: ಬೆಟ್ಟೆ 46099 52472 49299
- ತೀರ್ಥಹಳ್ಳಿ: ಇಡಿ: 34188 46299 45709
- ತೀರ್ಥಹಳ್ಳಿ : ಗೊರಬಲು :26199 35625 34869
- ತೀರ್ಥಹಳ್ಳಿ: ರಾಶಿ: 37009 46221 45999
- ತೀರ್ಥಹಳ್ಳಿ: ಸರಕು: 47199 75140 70589
- ಯಲ್ಲಾಪುರ: ಅಪಿ 54369, 54369, 54369
- ಯಲ್ಲಾಪುರ: ಬಿಳೇಗೋಟು 26899, 32399, 29500
- ಯಲ್ಲಾಪುರ: ಕೋಕಾ, 21669, 28199, 26399
- ಯಲ್ಲಾಪುರ: ಹಳೇ ಚಾಲಿ, 44200, 48211, 47250
- ಯಲ್ಲಾಪುರ:ಹೊಸ ಚಾಲಿ, 36899, 41099, 40159
- ಯಲ್ಲಾಪುರ: ಕೆಂಪು ಗೋಟು, 30599, 37310, 38100
- ಯಲ್ಲಾಪುರ: ರಾಸಿ, 44389, 52869, 49600
- ಯಲ್ಲಾಪುರ :ತಟ್ಟೆ ಬೆಟ್ಟೆ, 38299, 43860, 40650
ಶುಂಠಿ ಮಾರುಕಟ್ಟೆ: ಕ್ವಿಂಟಾಲು.
ಹಸಿ ಶುಂಠಿ ದರ ಇನ್ನು ಈ ವರ್ಷ ಏರಿಕೆ ಆಗುವ ಸಾಧ್ಯತೆ ಕಡಿಮೆ. ಉತ್ತರ ಭಾರತದಲ್ಲಿನ ಒಣ ಶುಂಠಿ ಬೇಡಿಕೆ ಕಡಿಮೆ ಎನ್ನುತ್ತಾರೆ. ಕಳೆದ ವರ್ಷದ ದಾಸ್ತಾನು ಹಾಳಾಗಿದ್ದು, ಶುಂಠಿ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ ಎಂಬ ಸುದ್ದಿ ಇದೆ.ಈ ವರ್ಷದ ನಷ್ಟದಿಂದಾಗಿ ಹೊಸತಾಗಿ ಶುಂಠಿ ಹಾಕುವವರೂ ಕಡಿಮೆಯಾದ ಕಾರಣ ಬಿತ್ತನೆ ಶುಂಠಿಗೂ ಬೇಡಿಕೆ ಕಡಿಮೆಯಾಗಿದೆ. ಮುಂದಿನ ವರ್ಷ ಶುಂಠಿಗೆ ಬೆಲೆ ಬರಲಿದೆ.
- ಅರಸೀಕೆರೆ : ಹಸಿ ಶುಂಠಿ, 1200, 1200, 1200
- ಬೇಲೂರು: ಹಸಿ ಶುಂಠಿ, 1000, 1000, 1000
- ಕೋಲಾರ: ಹಸಿ ಶುಂಠಿ, 1500, 2000, 1700
- ಮಂಡ್ಯ: ಹಸಿ ಶುಂಠಿ, 1400, 1600, 1500
- ಮೈಸೂರು: ಹಸಿ ಶುಂಠಿ, 1800, 2000, 1900
- ಶಿವಮೊಗ್ಗ : ಹಸಿ ಶುಂಠಿ, 1400, 1600, 1500
- ಸಾಗರ: ಹಸಿ ಶುಂಠಿ, 1500, 1500, 1500
ಕೊಬ್ಬರಿ ದಾರಣೆ:ಕ್ವಿಂಟಾಲು.
- ಚೆನ್ನರಾಯಪಟ್ನ: ಬಾಲ್ ಕೊಬ್ಬರಿ, 17400, 17400, 17400
- ಚೆನ್ನರಾಯಪಟ್ನ: ಎಣ್ಣೆ ಕೊಬ್ಬರಿ,, 10, 8700, 8700, 8700
- ಕೆ ಆರ್ ಪೇಟೆ: ಇತರ, 8774, 8774, 8774
- ಪುತ್ತೂರು ಎಣ್ಣೆ, 4000, 10500, 7250
- ತಿಪ್ಟೂರು ಖಾದ್ಯ: 16800, 17350, 17000
- ತುಮಕೂರು :ಎಣ್ಣೆ. 10300, 12600, 11200
- ತುರುವೇಕೆರೆ: ಬಾಲ್, 16900, 17150, 16900
- ಅರಸೀಕೆರೆ: ಬಾಲ್, 17000-17200
ಕರಿಮೆಣಸು ಧಾರಣೆ:
ಕರಿಮೆಣಸು ಆಮದು ಆಗಿದೆ ಎಂಬ ಸುದ್ದಿ ಇದೆ. ಈ ಕಾರಣಕ್ಕೆ ದೇಶೀಯ ಮೆಣಸಿನ ಬೆಲೆ ಕುಸಿತ ಕಂಡಿದೆ. ಸಕಾಲಿಕವಾಗಿ ಈಗ ಕೊಯಿಲಿನ ಸಮಯವೂ ಇರುವುದರಿಂದ ಸಹಜವಾಗಿ ದರ ಇಳಿಕೆ ಆಗುತ್ತದೆ. ಆಮದು ಪ್ರಮಾಣ ಮತ್ತು ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕರಿಗೆ ಯಾವ ಮಾಹಿತಿಗಳೂ ಲಭ್ಯವಾಗುವುದಿಲ್ಲ. ಎಲ್ಲದಕ್ಕೂ ವದಂತಿಗಳೇ ಮೂಲ. ಸ್ಥಳೀಯ ಮೆಣಸಿನ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20-25 ಕಡಿಮೆ ಇದೆ ಎಂಬ ಮಾಹಿತಿ ಇದೆ. ಹಾಗಾಗಿ ಜೂನ್ – ಜುಲೈ ಸುಮಾರಿಗೆ ದರ ಮತ್ತೆ ಏರಿಕೆ ಆಗಬಹುದೇನೋ.
ಕರಿಮೆಣಸಿಗೆ ಖರೀದಿದಾರರಿಂದ ಬೇಡಿಕೆ ಕಡಿಮೆ. ಸ್ಥಳೀಯ ವ್ಯಾಪಾರಿಗಳು ದಾಸ್ತಾನು ಉದ್ದೇಶಕ್ಕೆ ಮಾತ್ರ ಖರೀದಿ ಮಾಡುತ್ತಿದ್ದಾರೆ. ಯಾವಾಗಿ ಸ್ಥಳೀಯ ವ್ಯಾಪಾರಿಗಳಿಗೆ ವಿಚಾರಣೆ ಬರುತ್ತದೆಯೋ ಆಗ ದರ ಏರಿಕೆ ಆಗುತ್ತದೆ.
ಇಂದಿನ ಧಾರಣೆ: ಕಿಲೋ.
- ಬಂಟ್ವಾಳ: 300.00, 480.00, 420.00
- ಬೆಳ್ತಂಗಡಿ: 300.00, 470.00, 390.00
- ಚೆನ್ನಗಿರಿ:, 451.19, 470.10, 465.17
- ಕಾರ್ಕಳ: 440.00, 475.00, 470.00
- ಮಂಗಳೂರು: 35000, 480.00, 450.00
- ಪುತ್ತೂರು: 215.00, 480.00, 365.50
- ಸಾಗರ: 453.09, 445.29, 453.09
- ಸಿದ್ದಾಪುರ: 452.09, 475.39, 460.39
- ಸಿರ್ಸಿ: 455.00, 480.00, 461.06
- ಯಲ್ಲಾಪುರ: 411.11, 462.09, 453.10
- ಸಕಲೇಶಪುರ;480.00-490.00
- ಮೂಡಿಗೆರೆ:475.00-485.00
- ಕಳಸ:350.00-480.00
- ತೀರ್ಥಹಳ್ಳಿ:400.00-485.00
- ಚಿಕ್ಕಮಗಳೂರು:490.00-500.00
- ಮಡಿಕೇರಿ: 380.00-485.00
- ಹಾಸನ: ಬಾಳ್ಳುಪೇಟೆ. 410.00-470.00
ರಬ್ಬರ್ ಧಾರಣೆ: ಕಿಲೊ.
ರಬ್ಬರ್ ಮತ್ತೆ ಸ್ವಲ್ಪ ಚೇತರಿಕೆ ಕಂಡಿದೆ. ಬಹುಶಃ ಮುಂದಿನ ದಿನಗಳಲ್ಲಿ ದರ ಇದೇ ರೀತಿ ಮುಂದುವರಿಯಬಹುದು ಎನ್ನುತ್ತಾರೆ. ಉತ್ಪಾದನಾ ಕ್ಷೇತ್ರಗಳಿಗಳಿಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆ ಇರುವ ಕಾರಣ ರಬ್ಬರ್ ಗೆ ಇದು ಅನುಕೂಲವಾಗಲಿದೆ.
- GRADE: 1X.174.50
- RSS 4:161.00
- RSS 5:154.00
- RSS 3:161.50
- LOT :151.00
- SCRAP:100.00-108.00
- LATEX:129.00
ಕಾಫೀ ಧಾರಣೆ: 50 ಕಿಲೋ.
- ಅರೇಬಿಕಾ ಪಾರ್ಚ್ ಮೆಂಟ್: 15,000-15,500
- ಅರೇಬಿಕಾ ಚೆರಿ: 7000-7100
- ರೋಬಸ್ಟಾ ಪಾರ್ಚ್ ಮೆಂಟ್: 6800-7200
- ರೋಬಾಸ್ಟಾ ಚೆರಿ: 3900-4000
ಜಾಯೀ ಸಾಂಬಾರ: ಕಿಲೋ.
- ಜಾಯೀ ಕಾಯಿ:200.00- 210.00
- ಜಾಯೀ ಪತ್ರೆ: 800.00- 1100.00
ಹಳೆ ಅಡಿಕೆ ದಾಸ್ತಾನು ಇಡಬೇಡಿ. ಈಗಿರುವ ದರಕ್ಕೆ ಮಾರಾಟ ಮಾಡಿ. ಈಗಾಗಲೇ ಜಾರ್ಖಡ್ ನ ಸಂಸದರು ಅಡಿಕೆ ಬ್ಯಾನ್ ಮಾಡಬೇಕು ಎಂದು ಪ್ರಧಾನಿಗಳಿಗೆ ಪತ್ರ ಬರೆದ ವಿಷಯವು ಇನ್ನೂ ಜೀವಂತವಿದ್ದು, ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ FSSAI (Food Safety and Standards Authority of India) ಸೂಚಿಸಲಾಗಿದ್ದು. ಅಲ್ಲಿ ಏನಾದರೂ ತೊಂದರೆಗಳಾದರೆ ದರ ಬೀಳಬಹುದು. ಹಾಗೆಯೇ ಮೆಣಸನ್ನು ದಾಸ್ತಾನು ಇಡಿ. ಬೆಲೆ ಬರಬಹುದು.