ಕೆಂಪಡಿಕೆ ಚೇತರಿಕೆ- ಚಾಲಿ ಅಡಿಕೆಗೆ ಮಬ್ಬು. 21-01-2022 ರಂದು ಧಾರಣೆ.

ಚೇತರಿಕೆಯತ್ತ ಕೆಂಪಡಿಕೆ

ನಿರೀಕ್ಷೆಯಂತೆ ಕೆಂಪಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಖರೀದಿಯಲ್ಲಿ ಉತ್ಸಾಹ (Force) ಇದೆ ಎಂಬುದಾಗಿ ವರ್ತಕರು ಹೇಳುತ್ತಿದ್ದಾರೆ. ಯಾವಾಗಲೂ ಸರಾಸರಿ ದರ ಮತ್ತು ಗರಿಷ್ಟ ದರಗಳ ಅಂತರ ಹತ್ತಿರವಾದರೆ ಖರೀದಿಯಲ್ಲಿ ಆಸಕ್ತಿ ಹೆಚ್ಚು ಎನ್ನಲಾಗುತ್ತದೆ. ಇದು ಈಗ ಪ್ರಾರಂಭವಾಗಿದೆ. ಚಾಲಿ ಮಾತ್ರ ಸ್ವಲ್ಪ ಮಬ್ಬು. ದಿನಾಂಕ 21-01-2022 ರಂದು ರಾಜ್ಯದೆಲ್ಲೆಡೆ ಧಾರಣೆ.

ಕರಾವಳಿಯ ಚಾಲಿ ಅಡಿಕೆ ಈ ವರ್ಷ ಗುಣಮಟ್ಟ ಇಲ್ಲ. ಯಾವಾಗಲೂ ಕರಾವಳಿಯ ಚಾಲಿ ಅಡಿಕೆ ಎಂದರೆ ಅದಕ್ಕೆ  ವಿಶೇಷ ಸ್ಥಾನಮಾನ ಇತ್ತು. ಈ ವರ್ಷದ ಪ್ರತಿಕೂಲ ಹವಾಮಾನದ ಕಾರಣದಿಂದ ಸುಮಾರು 30% ಕ್ಕೂ ಹೆಚ್ಚಿನ ಅಡಿಕೆ ಗುಣಮಟ್ಟ ಕಳೆದುಕೊಂಡಿದೆ. ಆಕರ್ಷಕ ನೋಟ ಇಲ್ಲ. ಒಳಗೆ ಶಿಲೀಂದ್ರ ಬೆಳೆದಿದೆ. ಕಣ್ಣು ತೂತು ಆಗಿದೆ.  ಇಂತಹ ಅಡಿಕೆಯೇ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿದ್ದು, ಇದನ್ನು ಉತ್ತರ ಭಾರತಕ್ಕೆ ಕಳುಹಿಸಿ, ಕೆಲವು ವ್ಯಾಪಾರಿಗಳು ಸೋತಿದ್ದಾರೆ. ಅಲ್ಲಿ ಅದು ತಿರಸ್ಕರಿಸಲ್ಪಟ್ಟು ವಾಪಾಸು ಬಂದಿದೆ ಎಂಬುದಾಗಿ ಕೆಲವು  ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಳೆ ಕಾರಣದಿಂದ ಒದ್ದೆಯಾಗಿ ಹೀಗಾದದ್ದು ಅಲ್ಲದೆ ಈ ವರ್ಷ ಸ್ವಲ್ಪ ಬೇಗ ಹಣ್ಣಾದ ಕಾರಣ ಅಪಕ್ವ ಬೆಳವಣಿಗೆ ಉಂಟಾಗಿದೆ. ಹಾಗಾಗಿ ಕೊಯಿಲಿನ ಅಡಿಕೆಯಲ್ಲೂ ಗುಣಮಟ್ಟ ಇಲ್ಲ.

ಈ ವರ್ಷ ಅಡಿಕೆ ಸಿಪ್ಪೆ ತೆಗೆಯುವ ಕೆಲಸದವರ ಸಮಸ್ಯೆ ಹೆಚ್ಚಾಗಿದೆ.  ಹೊಸ ಜನ ಅಡಿಕೆ ಸುಲಿಯಲು ಸಿಗುತ್ತಿಲ್ಲ. ಬೆನ್ನು ನೋವು, ಕೈಕಾಲು ಗಂಟು ನೋವು ಮುಂತಾದ ಸಮಸ್ಯೆಗಳಿಗಾಗಿ ಜನ ಈ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೂಲಿ ಕೆಲಸಕ್ಕೂ ಈಗ ದಿನ ಮಜೂರಿ 600 ರೂ. ಆಗಿದ್ದು,ಜನ ಆರಾಮದ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಕೆಲಸದವರು ಗುಂಪು ಮಾಡಿಕೊಂಡೇ ಕೆಲಸಕ್ಕೆ ಬರುವುದು ವಾಡಿಕೆ. ಒಬ್ಬ ಕೆಲಸಗಾರರನ್ನು ಪೂರೈಸುವವನ ಅಡಿಯಲ್ಲಿ 10-20 ಜನ ಇರುತ್ತಾರೆ. ಸ್ಥಳೀಯರು ಕೆಲಸಕ್ಕೆ ಕಡಿಮೆ. ಎಲ್ಲಾ ಉತ್ತರ ಭಾರತದ ಜನ. ಯಾರಿಗೆ ಅಗತ್ಯ ಇದೆಯೋ ಅವರು ಅಟೋ ಅಥವಾ ಇನ್ಯಾವುದೋ ವಾಹನದಲ್ಲಿ ಕರೆದುಕೊಂಡು ಹೋಗಿ, ಊಟ ಉಪಹಾರ ವ್ಯವಸ್ಥೆ ಮಾಡಿ ಮತ್ತೆ ಸ್ವಸ್ಥಾನಕ್ಕೆ ಬಿಡುವ ವ್ಯವಸ್ಥೆ  ಇರುವ ಕಾರಣ ಈ ವ್ಯವಸ್ಥೆ  ಜನರಿಗೆ ಹಿಡಿಸಿದೆ. ಕಷ್ಟದ ಕೆಲಸಕ್ಕೆ ಹಿಂದೇಟು ಹಾಕುವಂತಾಗಿದೆ.  ಇದರಿಂದಾಗಿ ಅಡಿಕೆ ಸುಲಿಯುವ ಬಾಡಿಗೆ ಯಂತ್ರಗಳು ಹೆಚ್ಚಾಗುತ್ತಿವೆ. ಸರಿಯಾದ ಸಮಯದಲ್ಲಿ ಅಡಿಕೆ ಹೆಕ್ಕದೆ ಮೊಳಕೆ ಬರುವಂತಾಗಿದೆ. ಇದೆಲ್ಲಾ ಗುಣಮಟ್ಟವನ್ನು ತಗ್ಗಿಸಿವೆ.

ಚಾಲಿ ಅಡಿಕೆ ಮೊದಲ ವರ್ಗ

ಕೆಂಪಡಿಕೆ ಸಿಪ್ಪೆ ತೆಗೆದು ಬೇಯಿಸಿದ ಕಾರಣ ಒಣಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಜೊತೆಗೆ ಚಾಲಿಯಂತೆ ಇದರಲ್ಲಿ ಒಡೆದ ಅಡಿಕೆ, ಕೆಂಪು ಗೋಟು, ಸಿಪ್ಪೆ ಗೋಟು ಬರುವುದು ಕಡಿಮೆ. ಅಡಿಕೆ ಮಿಲ್ ಗಳು ಬಂದು ಈ ಸಮಸ್ಯೆ ಕಡಿಮೆಯಾಗಿದೆ. ಹಾಗಾಗಿ ಕೆಂಪಡಿಕೆ ತನ್ನದೇ ಆದ ಗುಣಮಟ್ಟವನ್ನು ಉಳಿಸಿಕೊಂಡಿದೆ. ಈ ವರ್ಷ ಕೆಂಪಡಿಕೆ ಉತ್ಪಾದನೆ ಕಡಿಮೆ ಇರುವ ವದಂತಿಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಕಾರಣ ದರ ಏರಿಕೆ ಆಗುವ ಸಾದ್ಯತೆ ಇಲ್ಲದಿಲ್ಲ. ಈದಿನ ಯಲ್ಲಾಪುರದಲ್ಲಿ ರಾಶಿ ಸರಾಸರಿ 49,500 ಗರಿಷ್ಟ  52900 ತನಕ  ಹೋಗಿದೆ. ಶಿರಸಿ ಸಿದ್ದಾಪುರದಲ್ಲೂ ಸರಾಸರಿ ದರಕ್ಕೂ  ಗರಿಷ್ಟ ದರಕ್ಕೂ ಅಂತರ ಕಡಿಮೆಯಾಗಿದೆ. ಹಾಗಾಗಿ ಇನ್ನು ಒಂದೆರಡು ತಿಂಗಳಲ್ಲಿ ಕೆಂಪಡಿಕೆ ಧಾರಣೆ ಮತ್ತೆ ಏರಿಕೆ ಆಗಬಹುದು ಎಂಬ ದಟ್ಟ ವದಂತಿಗಳು ಇವೆ.

ಚಾಲಿ ಅಡಿಕೆ ಬಿದ್ದದ್ದು, ಒದ್ದೆಯಾದದ್ದು ಮುಗಿಯುವ ತನಕ ದರ ಏರಿಕೆ ಆಗಲಾರದು. ಉತ್ತರ ಪ್ರದೇಶದ ಚುನಾವಣೆಯಿಂದಾಗಿ ಹವಾಲಾ ಹಣದ ಚಲಾವಣೆಗೆ ಅಡ್ದಿ, ಅಡಿಕೆ ಧಾರಣೆಯ ಮೇಲೆ ಪರಿಣಾಮ ಬೀರಿದೆ.

ಗುಣಮಟ್ಟ ರಹಿತ ಅಡಿಕೆ
ಈ ವರ್ಷ ಇಂತಹ ಅಡಿಕೆ ಹೆಚ್ಚು.

ಇಂದು ಧಾರಣೆ:

 • ಬಂಟ್ವಾಳ- 21/01/2022, ಕೋಕಾ  12500, 25000, 22500
 • ಬಂಟ್ವಾಳ-21/01/2022, ಹೊಸ ಅಡಿಕೆ, 27500, 45000, 42000
 • ಬಂಟ್ವಾಳ-21/01/2022, ಹಳೆ ಅಡಿಕೆ  46000, 53000, 50000
 • ಬೆಳ್ತಂಗಡಿ- 21/01/2022, ಹೊಸ ಅಡಿಕೆ, 28000, 44000, 35000
 • ಬೆಳ್ತಂಗಡಿ-, 21/01/2022, ಇತರ  30500, 31500, 31000
 • ಬೆಳ್ತಂಗಡಿ-21/01/2022, ಹಳೆ ಅಡಿಕೆ, 43600, 53000, 48000
 • ಬೆಳ್ತಂಗಡಿ-, 21/01/2022, ಕೋಕಾ  24500, 26000, 25000
 • ಕಾರ್ಕಳ- 21/01/2022, ಹೊಸ ಅಡಿಕೆ, 40000, 45000, 43000
 • ಕಾರ್ಕಳ- 21/01/2022, ಹಳೆ ಅಡಿಕೆ,  46000, 53000, 50000
 • ಮಾಂಗಳೂರು- 21/01/2022, ಕೋಕಾ, 25000, 31500, 29000
 • ಪುತ್ತೂರು: 21/01/2022, ಕೋಕಾ  11000, 26000, 18500
 • ಪುತ್ತುರು -21/01/2022, ಹೊಸ ಅಡಿಕೆ,  27500, 45000, 36250
 • ಸುಳ್ಯ- 21/01/2022, ಹೊಸ ಅಡಿಕೆ,  27500, 45000, 33500
 • ಕುಂದಾಪುರ- 21/01/2022, ಹಳೆ ಚಾಲಿ, 51500, 52500, 52000
 • ಕುಂದಾಪುರ- 21/01/2022, ಹಳೆ ಅಡಿಕೆ, 43500, 44500, 44000
 • ಪಟೋರಾ: ಹಳತು:39000-45000
 • ಪಟೋರಾ ಹೊಸತು:25,000-38000
 • ಉಳ್ಳಿ ಗಡ್ಡೆ ಹಳತು:25000-30500
 • ಉಳ್ಳಿಗಡ್ಡೆ ಹೊಸತು:20000-25000
 • ಕರಿ ಕೋಕಾ ಹಳತು:25000-29000
 • ಕರಿಕೊಕಾ ಹೊಸತು:20000-26000
 • ಬಧ್ರಾವತಿ- 21/01/2022, ರಾಶಿ, 44599, 45699, 45199
 • ಚೆನ್ನಗಿರಿ- 21/01/2022, ರಾಶಿ, 44099, 46700, 46292
 • ಚಿತ್ರದುರ್ಗ- 21/01/2022, ಆಪಿ, 45229, 45689, 45379
 • ಚಿತ್ರದುರ್ಗ- 21/01/2022, ಬೆಟ್ಟೆ,  37219, 37699, 37449
 • ಚಿತ್ರದುರ್ಗ- 21/01/2022, ಕೆಂಪು ಗೋಟು, 31600, 32000, 31800
 • ಚಿತ್ರದುರ್ಗ- 21/01/2022, ರಾಶಿ   44739, 45169, 44959
 • ಹೊಲಲ್ಕೆರೆ- 21/01/2022, ರಾಶಿ. 46099, 47800, 47373
 • ಹೊನ್ನಾಳಿ- 21/01/2022, ರಾಶಿ  44900, 44900, 44900
 • ಕುಮ್ಟಾ- 21/01/2022, ಚಿಪ್ಪು  24609, 33569, 32489
 • ಕುಮ್ಟಾ- 21/01/2022, ಕೊಕಾ, 21209, 27779, 27189
 • ಕುಮ್ಟಾ- 21/01/2022, ಫ್ಯಾಕ್ಟರಿ, 13169, 18399, 17819
 • ಕುಮ್ಟಾ- 21/01/2022, ಹಳೆ ಚಾಲಿ, , 47999, 50149, 49869
 • ಕುಮ್ಟಾ- 21/01/2022, ಹೊಸ ಚಾಲಿ, , 37869, 41500, 40749
 • ಮಡಿಕೇರಿ- 21/01/2022, ಕಚ್ಚಾ,  48532, 48532, 48532
 • ಸಾಗರ- 20/01/2022, ಬಿಳೆ ಗೋಟು, 12099, 25399, 24009
 • ಸಾಗರ- 20/01/2022, ಚಾಲಿ., 30144, 45189, 38999
 • ಸಾಗರ- 20/01/2022, ಕೋಕಾ, , 11899, 30299, 28299
 • ಸಾಗರ- 20/01/2022, ಕೆಂಪು ಗೋಟು, 19129, 38199, 37689
 • ಸಾಗರ- 20/01/2022, ರಾಶಿ, 35009, 47550, 46299
 • ಶಿವಮೊಗ್ಗ- 20/01/2022, ಸಿಪ್ಪು ಗೋಟು, , 6786, 19289, 18299
 • ಶಿವಮೊಗ್ಗ- 21/01/2022, ಬೆಟ್ಟೆ,  47109, 53219, 51309
 • ಶಿವಮೊಗ್ಗ- 21/01/2022, ಗೊರಬಲು,  17009, 34698, 34069
 • ಶಿವಮೊಗ್ಗ- 21/01/2022, ರಾಶಿ, 44099, 46698, 46100
 • ಶಿವಮೊಗ್ಗ- 21/01/2022, ಸರಕು, 51000, 74996, 68000
 • ಸಿದ್ದಾಪುರ- 21/01/2022, ಬಿಳೇಗೋಟು,  23399, 33699, 26699
 • ಸಿದ್ದಾಪುರ-  21/01/2022, ಚಾಲಿ, 44099, 49639, 47811
 • ಸಿದ್ದಾಪುರ-  21/01/2022, ಕೋಕಾ, , 22699, 33689, 27812
 • ಸಿದ್ದಾಪುರ- 21/01/2022, ಹೊಸ ಚಾಲಿ,  32199, 40919, 38899
 • ಸಿದ್ದಾಪುರ-  21/01/2022, ಕೆಂಪು ಗೋಟು, 26689, 33889, 33389
 • ಸಿದ್ದಾಪುರ-  21/01/2022, ರಾಶಿ  44589, 47709, 47399
 • ಸಿದ್ದಾಪುರ-  21/01/2022, ತೆಟ್ಟೆ ಬೆಟ್ಟೆ, 38489, 44099, 42309
 • ಶಿರ್ಸಿ- 21/01/2022, ಬೆಟ್ಟೆ,  28696, 46689, 42177
 • ಸಿರ್ಸಿ- 21/01/2022, ಬಿಳೇ ಗೋಟು,  23602, 42103, 29311
 • ಸಿರ್ಸಿ-  21/01/2022, ಚಾಲಿ,  34899, 49612, 48617
 • ಸಿರ್ಸಿ-  21/01/2022, ರಾಶಿ,  45108, 48109, 46897
 • ತೀರ್ಥಹಳ್ಳಿ- 19/01/2022, ಬೆಟ್ಟೆ, 46199, 52589, 50089
 • ತೀರ್ಥಹಳ್ಳಿ-  19/01/2022, ಇಡಿ,  40199, 46599, 46399
 • ತೀರ್ಥಹಳ್ಳಿ-  19/01/2022, ಗೊರಬಲು, 25009, 34699, 34109
 • ತೀರ್ಥಹಳ್ಳಿ-  19/01/2022, ರಾಶಿ,  39199, 46699, 46499
 • ತೀರ್ಥಹಳ್ಳಿ-  19/01/2022, ಸರಕು,  47199, 75000, 68599
 • ತುಮಕೂರು- 21/01/2022, ರಾಶಿ,  45100, 46800, 46100
 • ಯಲ್ಲಾಪುರ- 21/01/2022, ಅಪಿ .53299, 55235, 53469
 • ಯಲ್ಲಾಪುರ-21/01/2022, ಬಿಳೇ ಗೋಟು, 26899, 32619, 29819
 • ಯಲ್ಲಾಪುರ- 21/01/2022, ಕೋಕಾ, 22099, 31561, 28169
 • ಯಲ್ಲಾಪುರ- 21/01/2022, ಹಳೇ ಚಾಲಿ, 45699, 49077, 47599
 • ಯಲ್ಲಾಪುರ- 21/01/2022, ಹೊಸ ಚಾಲಿ, 35069, 41619, 39511
 • ಯಲ್ಲಾಪುರ- 21/01/2022, ಕೆಂಪು ಗೋಟು, 29610, 37699, 35009
 • ಯಲ್ಲಾಪುರ- 21/01/2022, ರಾಶಿ, 43800, 52960, 49499
 • ಯಲ್ಲಾಪುರ-21/01/2022, ತಟ್ಟೆ ಬೆಟ್ಟೆ, 40299, 42800, 41519
 • ಯಲ್ಲಾಪುರ- 21/01/2022, ಚಾಲಿ, 36899, 48897, 46119

ಕರಿಮೆಣಸು ಧಾರಣೆ:

ಕಪ್ಪು ಮೆಣಸು

ಕರಿಮೆಣಸು ಮಾರುಕಟ್ಟೆಗೆ ಈಗ ಸ್ವಲ್ಪ ಹಿನ್ನಡೆ. ಕಾರಣ ಕೊಯಿಲಿನ ಸಮಯ. ಕೊಚ್ಚಿ ಮಾರುಕಟ್ಟೆಯಲ್ಲಿ ಸ್ವಲ್ಪ ಹಿಂಜರಿತ ಉಂಟಾದ ಕಾರಣ ಇಲ್ಲಿ ದರ ಇಳಿಕೆಯಾಗಿದೆ. ಹಾಗೆಂದು ಮಾರುಕಟ್ಟೆ ಹಿಂದೆ ಬರುವ ಸಾಧ್ಯತೆ ಇಲ್ಲ.  ಕೊಯಿಲು ಪೂರ್ತಿ ಮುಗಿದ ತರುವಾಯ ಮತ್ತೆ ಏರಿಕೆ ಆಗಬಹುದು. ಈ ವರ್ಷ ಜೂನ್ ಜುಲೈ ಸಮಯಕ್ಕೆ ಕಿಲೋ ಮೆಣಸಿಗೆ 600 ರೂ. ಆಗಬಹುದು ಎಂಬುದಾಗಿ ಹೇಳುತ್ತಿದ್ದಾರೆ. ಎಲ್ಲೆಡೆಯೂ ಇಳುವರಿ ಕಡಿಮೆ ಇದೆ.

 • ಕಾರ್ಕಳ: ಕಾಮಧೇನು, UnG,  485.00 
 • ಪುತ್ತೂರು , ದೇವಣ್ಣ ಕಿಣಿ: UnG,  487.00 -500.00
 • ಮಂಗಳೂರು:PB Abdul-7204032229, UnG,  480.00 
 • ಮಂಗಳೂರು, The Campco Ltd, UnG,  500.00
 • ಸಕಲೇಶಪುರ-Royal Traders, UnGarbaled,  500.00 
 • ಸಕಲೇಶಪುರ r-Gain Coffee TR-9448155668, UnGarbaled,  490.00 
 • ಸಕಲೇಶಪುರ Sathya Murthy, Garbled,  500.00
 • ಸಕಲೇಶಪುರ -Sathya Murthy, UnG,  480.00 
 • ಸಕಲೇಶಪುರ -S.K Traders, UnG.  500.00 
 • ಸಕಲೇಶಪುರ -H.K.G & Bros-9844043907, UnG,  500.00
 • ಸಕಲೇಶಪುರ -Nasir Traders 807359, UnG,  500.00 
 • ಸಕಲೇಶಪುರ -Sainath New,  490.00 
 • ಸಕಲೇಶಪುರ -Sainath UnG,  500.00 
 • ಬಾಳೂಪೇಟೆ-Geetha Coffee Trading, UnG,  490.00 
 • ಬಾಳೂಪೇಟೆ -Coffee Age-9448047079, UnG,  500.00 
 • ಮೂಡಿಗೆರೆ -Sha.M.Khimraj, UnG,  500.00 
 • ಮೂಡಿಗೆರೆ -Bhavarlal Jain, UnG,  500.00 
 • ಮೂಡಿಗೆರೆ -A1 Traders, UnG,  490.00 
 • ಮೂಡಿಗೆರೆ -Harshika Traders-9448328846, UnG,  495.00
 • ಮೂಡಿಗೆರೆ -A.M Traders-9880649375, UnG,  495.00 
 • ಮೂಡಿಗೆರೆ -Hadhi Coffee, UnG,  495.00 
 • ಚಿಕ್ಕಮಗಳೂರು-Arihant Coffee, UnG,  495.00 
 • ಚಿಕ್ಕಮಗಳೂರು -Nirmal Commodities, UnG,  480.00
 • ತೀರ್ಥಹಳ್ಳಿ-ಸಹ್ಯಾದ್ರಿ UnG,  505.00 
 • ಚಿಕ್ಕಮಗಳೂರು -Kiran, UnG,  490.00 
 • ಮಡಿಕೇರಿ-Spice N Spice-9448121045, UnG,  495.00 
 • ಗೊಣಿಕೊಪ್ಪ-Sri Maruthi, UnG,  495.00 
 • ಕಳಸ – PIB Traders, UnG,  480.00 
 • ಕಳಸ – CAMPCO, UnG,  500.00 
 • ಶಿರ್ಸಿ-Apmc, UnG,  501.00 
 • ಯಲ್ಲಾಪುರ:APMC 480.00-505.00
 • ಕೊಚ್ಚಿನ್, New,  490.00  -, UnG,  500.00,  Garble,  520.00 

ಕೊಬ್ಬರಿ ದಾರಣೆ:

ಎಣ್ಣೆ ಕೊಬ್ಬರಿ

ಕೊಬ್ಬರಿ ಧಾರಣೆ ತುಸು ಇಳಿಕೆ. ಬಿಸಿಲು ಚೆನ್ನಾಗಿರುವ ಕಾರಣ ಕೊಬ್ಬರಿ ಯತೇಚ್ಚ ಬರುತ್ತಿದ್ದು, ಆ ಕಾರಣದಿಂದ ದರ ಇಳಿಕೆಯಾಗಿದೆ. ಮುಂದಿಅ ವಾರದಿಂದ ಸ್ವಲ್ಪ ಚೇತರಿಕೆ ಆಗಬಹುದು ಎನ್ನಲಾಗುತ್ತಿದೆ.

 • ಉಂಡೆ ಅಥವಾ ಖಾದ್ಯ ಕೊಬ್ಬರಿಗೆ ಅರಸೀಕೆರೆ, ತಿಪಟೂರುಗಳಲ್ಲಿ ಸರಾಸರಿ 17,000 ಮತ್ತು ಗರಿಷ್ಟ 17,500 ದರ ಇತ್ತು.
 • ಎಣ್ಣೆ ಕೊಬ್ಬರಿಗೆ ಮಂಗಳೂರು 9000-10500 ತನಕ, ಚನ್ನರಾಯಪಟ್ನ ಕಡೆಯಲ್ಲಿ 8000-9600 ತನಕ ಇತ್ತು.
 • ತೆಂಗಿನೆಣ್ಣೆ ದರ ಸ್ವಲ್ಪ ಕಡಿಮೆಯಾಗಿದ್ದು, ರೂ.200 ಕ್ಕೆ ಇಳಿದಿದೆ.
 • ಹಸಿ ಕಾಯಿ ದರ ಕಿಲೋ 30-31 ನಡೆಯುತ್ತಿದೆ.

ಶುಂಠಿ ದರ:

 • ಬೇಲೂರು: ಹಸಿ, 1000, 1000, 1000
 • ಹಾಸನ: ಹಸಿ, 990, 1200, 1050
 • ಶಿವಮೊಗ್ಗ: ಹಸಿ, 1400, 1600, 1500
 • ಸೊರಬ ಹಸಿ, 1000, 1200, 1100
 • ಸಾಗರ: ಹಸಿ 900-1100-1050

ರಬ್ಬರ್ ದರ:

ರಬ್ಬರ್ ದರ ತುಸು ಏರಿಕೆಯಾಗಿದೆ.ಈಗ ಚಳಿ ಹೆಚ್ಚಾಗಿದ್ದು,ಟ್ಯಾಪಿಂಗ್ ನಲ್ಲಿ  ಹೆಚ್ಚು ಹಾಲು ಸಿಗುತ್ತದೆ. ಅಂತರ ರಾಷ್ಟ್ರೀಯ ಮಾರುಕಟ್ಟೆ ದರಕ್ಕನುಗುಣವಾಗಿ ದರ ಏರಿಕೆ ಇಳಿಕೆ.

 • Grade: 172.00
 • RSS 4 159.00
 • RSS 5 152.00
 • RSS 3 159.50
 • Lot: 149.00
 • Scrap:97.00-105.00

ಕಾಫೀ ಧಾರಣೆ:

ಈ ವರ್ಷ ಕಾಫೀ ಧಾರಣೆ ಏರಿಕೆಯಾಗಿದ್ದು, ಬೆಳೆ  ಹಾಳಾಗಿ 25-50 % ನಷ್ಟ, ಕೆಲಸದವರ ಮಜೂರಿ 25% ಹೆಚ್ಚಾಗಿದೆ.ಗೊಬ್ಬರದ ಬೆಲೆಯೂ 25% ಕ್ಕೂ ಮಿಕ್ಕಿ ಏರಿಕೆಯಾದ ಕಾರಣ ಬೆಳೆಗಾರರಿಗೆ ಮಾಮೂಲಿಗಿಂತಲೂ ವರಮಾನ ಕಡಿಮೆಯೇ.

 • ಅರೇಬಿಕಾ ಪಾರ್ಚ್ ಮೆಂಟ್:15,000-15700
 • ಅರೇಬಿಕಾ ಚೆರಿ:5750-7300
 • ರೋಬಸ್ಟಾ ಪಾರ್ಚ್ ಮೆಂಟ್:6600-6900
 • ರೋಬಸ್ಟಾ ಚೆರಿ:3900-4150.

ಅಡಿಕೆ ಬೆಳೆಗಾರರು ಗುಣಮಟ್ಟ ಇಲ್ಲದ ಅಡಿಕೆಯನ್ನು ಸಾದ್ಯವಾದಷ್ಟು ಬೇಗ ಮಾರಾಟ ಮಾಡಿ. ಉತ್ತಮ ಕೊಯಿಲಿನ ಅಡಿಕೆ ಮಾತ್ರ ದಾಸ್ತಾನು ಇಡಿ. ಹಳೆಯ ಅಡಿಕೆ ಮಾರಾಟ ಮಾಡುವುದು ಸೂಕ್ತ. ಈ ವರ್ಷ ಆಮದು ಅಗುವ ಸಾಧ್ಯತೆ ಇದೆ. ಕೆಂಪಡಿಕೆ ಬೆಳೆಗಾರರು ಏರಿಕೆ ಅದಂತೆ ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ. ಶುಂಠಿ ದರ ಈ ವರ್ಷ ಏರಿಕೆ ಆಗಲಾರದು.  ರಬ್ಬರ್ ಧಾರಣೆ ಸ್ವಲ್ಪ ಏರಬಹುದು.

Leave a Reply

Your email address will not be published. Required fields are marked *

error: Content is protected !!