ಜನ ಕೆಲಸ ಇಲ್ಲ. ಸಂಪಾದನೆ ಇಲ್ಲ. ಸರಕಾರ ನಮ್ಮ ನೆರವಿಗೆ ಬರಬೇಕು. ನಮಗೆ ಅದು ಕೊಡಬೇಕು. ಇದು ಕೊಡಬೇಕು ಎಂದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡಬೇಕಾಗಿಲ್ಲ. ಅತೀ ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 30,000 ಸಂಪಾದನೆ ಮಾಡಬಹುದು.
- ಇದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಜಾನಕಲ್ ಸೇವನಗರ ಗ್ರಾಮದ ಪ್ರಿಯಾಂಕ್ ಎಂಬ 22 ವರ್ಷದ ಯುವಕ ಹೇಳುವ ಮಾತು.
- ಇವರು ಬಿ ಬಿ ಎಂ ವ್ಯಾಸಂಗ ಮಾಡುತ್ತಲೇ ಟಗರು ಸಾಕಣೆ ಮಾಡಿ ತಿಂಗಳಿಗೆ 30,000 ರೂ ಸಂಪಾದನೆ ಮಾಡುತ್ತಿದ್ದಾರೆ.
ಹೇಗೆ ಈ ಸಂಪಾದನೆ:
- ಇವರಲ್ಲಿ ಸುಮಾರು 30 ಟಗರುಗಳು ಇವೆ. ಇದನ್ನು ಕೊಟ್ಟಿಗೆ ಮಾಡಿ ಹುಲ್ಲು ಹಾಗೂ ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಹಾಕಿ ಹೊಟ್ಟೆ ತುಂಬಿಸುತ್ತಾರೆ.
- ಬಿಡುವಿದ್ದ ಸಮಯದಲ್ಲಿ ಅವುಗಳನ್ನು ½- 1 ಗಂಟೆ ಕಾಲ ಬಯಲಲ್ಲಿ ಮೇಯಲು ಬಿಡುತ್ತಾರೆ.
- ವ್ಯಾಸಂಗ ಮಾಡುತ್ತಿರುವ ಕಾರಣ ಇದನ್ನು ಹೊರಗೆ ಮೇಯಲು ಬಿಡಲು ಬಿಡುವು ಇರುವುದಿಲ್ಲ.
- ಇದಕ್ಕೆ ಇವರು ತೊಡಗಿಸಿದ ಮೂಲ ಬಂಡವಾಳ ಕೇವಲ 20,000 ಮಾತ್ರ.
- ಇವರು ಹೇಳುವಂತೆ ಇದರಷ್ಟು ಸುಲಭವಾಗಿ ಸಂಪಾದನೆ ಆಗುವ ವೃತ್ತಿ ಬೇರೆ ಇಲ್ಲ.
- ಪ್ರಾರಂಭದಲ್ಲಿ 4-5 ಸಂಖ್ಯೆಯಲ್ಲಿ ಸಾಕಿದರೆ ಮೂರು ತಿಂಗಳು ಬಿಟ್ಟರೆ 10 ಟಗರುಗಳನ್ನು ಹೊಂದಬಹುದು.
- ಪುನಹ 3 ತಿಂಗಳು ಸಾಕಿ ಮಾರಾಟ ಮಾಡಿದ ಲಾಭದಿಂದ 20 ಟಗರು ಕೊಳ್ಳಲು ಆಗುತ್ತದೆ.
- ಹೀಗೆ ಮುಂದುವರಿಸಬಹುದು. ಇದಕ್ಕೆ ರಿಸ್ಕ್ ಇಲ್ಲ.
- ಹಾಕಿದ ಬಂಡವಾಳ ಕೇವಲ 3 ತಿಂಗಳಲ್ಲಿ ದುಪ್ಪಟ್ಟಾಗುತ್ತದೆ.
- ಯಾವುದೇ ವ್ಯವಹಾರದಲ್ಲೂ ಇಷ್ಟು ನಿಯಮಿತ ಅವಧಿಯಲ್ಲಿ ಇಷ್ಟು ಪ್ರತಿಫಲ ಬರಲು ಸಾಧ್ಯವಿಲ್ಲ.
- ಇವರು ಕಳೆದ ಎರಡು ವರ್ಷಗಳಿಂದ ಇದನ್ನು ಮಾಡುತ್ತಿದ್ದು,
- ಇವರ ಸುತ್ತಮುತ್ತ ಕೆಲವು ಆಸಕ್ತರು ಇವರಿಂದ ಉಚಿತ ತರಬೇತಿ ಪಡೆದು ಇದನ್ನು ಮಾಡಲು ಮುಂದಾಗಿದ್ದಾರೆ.
ತಳಿ ಯಾವುದು:
- ಇವರು ಹೊಸ ಹೊಸ ತಳಿಯ ಟಗರಿನ ಹಿಂದೆ ಹೋಗಲಿಲ್ಲ.
- ಹಿಂದೆ ನಾರೀ ಸುವರ್ಣ ತಳಿಯನ್ನು ಸಾಕಿದ್ದರು.
- ಅದು ಹೆಚ್ಚು ಆಹಾರ ಬಯಸುತ್ತದೆ. ಖರ್ಚು ವೆಚ್ಚ ಕಡಿಮೆಯಾಗಲೆಂದು ನಾಟಿ ತಳಿಯ ಟಗರನ್ನೇ ಸಾಕಲು ಪ್ರಾರಂಭಿಸಿದ್ದಾರೆ.
- ಇದು ಹೆಚ್ಚು ಆಹಾರ ತಿನ್ನುವುದಿಲ್ಲ. ಭಾರೀ ತೂಕವೂ ಬರುವುದಿಲ್ಲ.
- ಮಾರುಕಟ್ಟೆಯಲ್ಲಿ ನಾಟೀ ಕೋಳಿಯಂತೆ ನಾಟೀ ಟಗರಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇರುವ ಕಾರಣ ನಷ್ಟ ಇಲ್ಲ.
- ಇದು ಸ್ಥಳೀಯ ವಾತಾವರಣಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ.
- ಯಾವುದೇ ರೋಗ ರುಜಿನಗಳು ಇರುವುದಿಲ್ಲ.
ಖರ್ಚು ವೆಚ್ಚಗಳು:
- ಒಂದು ಟಗರಿನ ಮರಿಗೆ 4500 ತನಕ ಬೆಲೆ ಇರುತ್ತದೆ.
- ಇದನ್ನು ನಾಲ್ಕು ತಿಂಗಳು ಸಾಕಿ ಮಾರಾಟ ಮಾಡುವಾಗ 9000 ರೂ. ದೊರೆಯುತ್ತದೆ.
- ಒಂದು ಟಗರಿಗೆ ಎಲ್ಲಾ ಖರ್ಚು ಕಳೆದು ತಿಂಗಳಿಗೆ 1000 ಉಳಿಯುತ್ತದೆಯಂತೆ.
- ಪ್ರತೀ ಟಗರಿಗೆ ಮೂರು ತಿಂಗಳಿಗೆ ಆಹಾರ ಮೇವು ಸೇರಿ 1500 ರೂ ಖರ್ಚು ಬರುತ್ತದೆ.
- ಮಾರಾಟದಿಂದ ಬರುವ 9000 ದಿಂದ 1500 ಕಳೆದರೆ ಬರುವ 3000 ನಿವ್ವಳ ಲಾಭ.
- ಟಗರು ಸಾಕಲು ಬರೇ ಸರಳ ಕೊಟ್ಟಿಗೆ ಸಾಕು.
- ಅಕ್ಕಪಕ್ಕದಲ್ಲಿ ಇರುವ ಯಾವುದೇ ಸೊಪ್ಪು ಸದೆಗಳನ್ನೂ ಇವು ತಿನ್ನುತ್ತವೆ.
ಟಗರು ಸಾಕುವುದು ಸುಲಭ:
- ಟಗರು ಸಾಕಲು ಹೆಚ್ಚು ನಿಗಾ ಬೇಕಾಗಿಲ್ಲ. ಹೆಣ್ಣು ಆದರೆ ಬ್ರೀಡಿಂಗ್ ಮಾಡಬೇಕು.
- ನಾವು ಅದರ ಬುಡದಲ್ಲೇ ಇರಬೇಕು. ಇದಕ್ಕೆ ಹಾಗೆ ಇಲ್ಲ. ಅದರಷ್ಟಕ್ಕೇ ಇರುತ್ತದೆ.
- ನಾವು ಕೊಟ್ಟ ಆಹಾರವನ್ನು ತಿನ್ನುತ್ತಾ ಬದುಕುತ್ತದೆ.ಬಿಡುವು ಇದ್ದಾಗ ಹೊಲದಲ್ಲಿ ಮೇಯಲು ಬಿಡಬಹುದು.
ಮೇವು:
- ಒಟ್ಟು 30 ಟಗರಿಗೆ ಬೆಳೆಗ್ಗೆ 2 ಹೊರೆ ಹುಲ್ಲು ತಂದು ಹಾಕುತ್ತಾರೆ.
- ಹೆಚ್ಚಾಗಿ ರಾಗಿ ಹುಲ್ಲನ್ನೇ ಹಾಕುವುದು. ಮತ್ತೆ 2-3 ಗಂಟೆ ಬಿಟ್ಟು ತೊಗರಿ ಹೊಟ್ಟನ್ನು ಕೊಡುತ್ತಾರೆ.
- ಸಂಜೆಗೆ ಕೈ ತಿಂಡಿಯಾಗಿ ಸುಮಾರು 100 ಗ್ರಾಂ ನಷ್ಟು ಮೆಕ್ಕೆ ಜೋಳದ ಹುಡಿ ಮತ್ತು ಶೇಂಗಾ ಹಿಂಡಿಯನ್ನು ಮಿಶ್ರಣ ಮಾಡಿ ಕೊಡಲಾಗುತ್ತದೆ.
- ಇದೇ ಆಹಾರ ಸಾಕಾಗುತ್ತದೆ. ಮರಿ ತರುವಾಗ 8 ರಿಂದ 12 ಕಿಲೋ ತನಕ ತೂಕ ಇರುತ್ತದೆ.
- ಮೂರು ತಿಂಗಳು ಸಾಕಿದ ನಂತರ ಅದರ ತೂಕ 20-25 ಕಿಲೋ ತನಕ ಬರುತ್ತದೆ.
- ಕೆಲವು ಉತ್ತಮವಾಗಿ ಬೆಳೆಯುತ್ತವೆ. ಒಂದೆರಡೂ ಹೆಚ್ಚು ತೂಕ ಬರಲಾರವು.
ಸ್ವಾವಲಂಭಿಯಾಗಿ ಬದುಕಬೇಕು. ಅದಕ್ಕೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಎಲ್ಲರೂ ಮಾಡಬಹುದಾದ ಸರಳ ವೃತ್ತಿ. ಇದನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಬಡತನ ಎಂಬುದು ದೂರವಾಗುತ್ತದೆ. ಕೆಲವು ಆಸಕ್ತ ನಿರುದ್ಯೋಗಿ ಯುವಕರಿಗೆ ಇವರು ಉಚಿತವಾಗಿ ಸಾಕುವ ತರಬೇತಿಯನ್ನೂ ನೀಡುತ್ತಾರೆ. 2-3 ಜನ ಯುವಕರು ಇದನ್ನು ನೋಡಿ ತಾವೂ ಇದನ್ನು ಮಾಡಲು ಮುಂದಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :9606878097.
end of the article:——————————————————————-
search words: Sheep rearing# self employment# Rural youth and employment# Local breed of sheep# income earning occupation# high income job#