ಒಂದು ಲೀ. ಹಾಲು ರೂ.100 ಆದರೆ…

ಒಂದು ಲೀ. ಹಾಲಿಗೆ 100 ರೂ.

ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಹಾಲು ಲೀಟರೊಂದರ ರೂ. 100 ರೂ. ಸಿಗಬೇಕು. ಅಷ್ಟು  ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈನುಗಾರಿಕೆ ಅಥವಾ ಹಸು ಸಾಕಣೆ ಮಾಡುತ್ತಿದ್ದ ರೈತರು ಅದನ್ನು ಈಗ ಬಿಟ್ಟಿದ್ದರೆ ಅದಕ್ಕೆ ಕಾರಣ ಲಾಭ ನಷ್ಟದ ಲೆಕ್ಕಾಚಾರ. ಲಾಭವಾಗುವುದಾರರೆ ಹಸು ಸಾಕಣೆ ಬೇಕು. ಲಾಭ ಇಲ್ಲವಾದರೆ ಬೇಡ.

ಹಸು ಸಾಕಾಣಿಕೆ ಲಾಭವಲ್ಲ ಎಂಬುದು ನಿಜ. ಆದರೆ ನಮ್ಮ ಇತರ ವ್ಯವಹಾರದಲ್ಲಿ ಆಗುವ ನಷ್ಟ ನಮಗೆ ಗಮನಕ್ಕೆ ಬರುವುದಿಲ್ಲ. ಸಾಮಾನ್ಯವಾಗಿ ಬಹಳಷ್ಟು ಜನರ ಮನೋಸ್ಥಿತಿ ಹೇಗಿದೆ ಎಂದರೆ “ಇರುವೆ  ಹೋಗುವುದು ಕಾಣಿಸುತ್ತದೆ. ಆನೆ ಹೋದದ್ದು ಗೊತ್ತೇ ಆಗುವುದಿಲ್ಲ” ಎಂಬಂತಿದೆ.

ಹೈನುಗಾರಿಕೆ ಎಂಬುದು ವ್ಯಾವಹಾರಿಕ ವೃತ್ತಿ ಆದದ್ದು ಕಳೆದ 30-40 ವರ್ಷಗಳಿಂದೀಚೆಗೆ. ಅದಕ್ಕೂ ಹಿಂದೆ ಹಸು, ಎಮ್ಮೆ ಸಾಕಣೆ ಎಂಬ ಹೆಸರು ಇತ್ತು. ಮಾನವರಾದ ನಾವು ಸಾಕು ಪ್ರಾಣಿಗಳನ್ನು ಸಾಕಬೇಕಾದ ಅನಿವಾರ್ಯತೆ ಇದೆ ಎಂಬ ಕಾರಣಕ್ಕೆ ಕೊಟ್ಟಷ್ಟು ಹಾಲು, ತಿಂದು ಹೊರಹಾಕಿದ ಗೊಬ್ಬರವನ್ನು ಬಳಸಿಕೊಂಡು  ಕೃಷಿಯೊಂದಿಗೆ ಈ ಕಸುಬನ್ನು ಮಾಡುತ್ತಿದ್ದೆವು. ವ್ಯಾವಹಾರಿಕತೆ ಬಂದ ನಂತರ ಹಸು ಹಾಲು ಹೆಚ್ಚು ಕೊಡಬೇಕು ಎನ್ನಿಸಿತು. ಅದಕ್ಕಾಗಿ ಆಹಾರ – ಮೇವು ಕೊಡಬೇಕೆನಿಸಿತು. ಲಾಭ ನಷ್ಟ ಎಂಬ ಲೆಕ್ಕಾಚಾರ ಬಂತು. ವಾಸ್ತವವಾಗಿ ಹಸು ಸಾಕಣೆಯಲ್ಲಿ ಅದರಲ್ಲೂ ಕೃಷಿಕರು ಲಾಭ ನಷ್ಟದ ಲೆಕ್ಕಾಚಾರ ಹಾಕುವುದು, ತೀರಾ ಜಿಪುಣತನ ತೋರುವುದು ಸೂಕ್ತವಲ್ಲ ಎನ್ನಿಸುತ್ತದೆ.

ಹಸು ಸಾಕಣೆ ಲಾಭದ್ದಲ್ಲ ಎನ್ನುವವರಿಗಾಗಿ:

  • 100 ರೂ. ಗಳಿಗೆ ಹಾಲು ಕೊಳ್ಳುವ ವ್ಯವಸ್ಥೆ ಆದರೆ ನಾನು ಹಸು ಸಾಕುತ್ತೇನೆ ಎನ್ನುವವರು ನೆರೆಹೊರೆಯವರಿಂದ ಅಥವಾ ಹಾಲಿನ ಡೈರಿಯಿಂದ ತಮ್ಮ ಮನೆಗೆ ಬೇಕಾದ ಹಾಲನ್ನು 44-45 ರೂ. ಗಳಿಗೆ ಖರೀದಿ ಮಾಡುತ್ತಾರೆ.
  • ಇವರೇನೂ ಹಸು ಸಾಕುವವರು ಕಷ್ಟಪಡುವುದನ್ನು ಗಣನೆಗೆ ತೆಗೆದುಕೊಂಡು ಅವರಿಗೆ 100 ರೂ. ಕೊಡಲು ಸಿದ್ದರಿಲ್ಲ.
  • ನಾನ್ಯಾಕೆ 100 ರೂ. ಕೊಡಲಿ. ನನಗೆ ಈಗ ಸಿಗುವ ಹಾಲಿನ ದರವೇ ದುಬಾರಿ ಎನ್ನಿಸುತ್ತದೆ ಎನ್ನುತ್ತಾರೆ.
  • ಹಾಗಾದರೆ ವ್ಯಾವಹಾರಿಕತನದಲ್ಲಿ ಈ ವ್ಯತ್ಯಾಸವೇಕೆ? ನನಗೆ ಸಿಗಬೇಕಾದರೆ ಇತರರಿಗೂ ಸಿಗಬೇಕಲ್ಲವೇ? ಇದನ್ನು ಯೋಚಿಸುವವರು ಯಾರೂ ಇಲ್ಲ.
ವ್ಯಾವಹಾರಿಕವಲ್ಲದ ಮನೆ ಬಳಕೆಯ ಹಾಲು ಉತ್ಪಾದನೆಗೆಗಾಗಿ  ಹಸು ಸಾಕಣೆ
ವ್ಯಾವಹಾರಿಕವಲ್ಲದ ಮನೆ ಬಳಕೆಯ ಹಾಲು ಉತ್ಪಾದನೆಗೆಗಾಗಿ ಹಸು ಸಾಕಣೆ

ಹಸು ಸಾಕಣೆಯಲ್ಲಿ ಹಾಲು ಮಾರುವುದು ಹೆಚ್ಚುವರಿ ಲಾಭ:

  • ಹಸು ಸಾಕಣೆ ಎಂಬುದು ಲಾಭಕ್ಕಾಗಿ ಮಾಡುವ ವ್ಯವಹಾರ ಅಲ್ಲ.
  • ಇದರಲ್ಲಿ ನಾವು ಸಾಧ್ಯವಿದ್ದರೆ ಲಾಭ ಮಾಡಿಕೊಳ್ಳಬಹುದು.
  • ಅದು ಸಾಧ್ಯವಾಗದಿದ್ದರೆ ಅದರ ಬಗ್ಗೆ ಮಾತಾಡಬಾರದು.
  • ಹಸುವೊಂದು ದಿನಕ್ಕೆ ಏನಿಲ್ಲವೆಂದರೂ 10 ಕಿಲೋ ಸಗಣಿಯನ್ನು ಕೊಡುತ್ತದೆ.
  • ಅಷ್ಟು ಸಗಣಿ ಆಗಬೇಕಿದ್ದರೆ ಅದು ಸುಮಾರು 5 ಸೆಂಟ್ಸ್ ಜಾಗದ ಹುಲ್ಲನ್ನು ಸೇವಿಸಬೇಕಾಗುತ್ತದೆ.
  • ಆ ಹುಲ್ಲು ಒಂದೇ ದಿನದಲ್ಲಿ ಗೊಬ್ಬರವಾಗಿ ಸಿಗುವ ವ್ಯವಸ್ಥೆ ಇದ್ದರೆ ಅದು ಹಸುಗಳ ಶರೀರದಲ್ಲಿ ಹೋಗಿ ಹೊರ ಬಂದಾಗ ಮಾತ್ರ.
  • ಅಷ್ಟು ಜಾಗದ ಕಳೆ ನಿಯಂತ್ರಣ ಸುರಕ್ಷಿತ ವಿಧಾನದಲ್ಲಿ ಆಗುತ್ತದೆ.
  • ಅಲ್ಲಿ ಕಳೆಯನ್ನು ಕೀಳಿಸಲು ಬೇಕಾಗುವ ಮಜೂರಿ ಮತ್ತು ಗೊಬ್ಬರ ಇವೆರಡು ಲಾಭವಲ್ಲವೇ?
  • ಹುಲ್ಲು ಕೀಳಿಸಲು ಜನಕ್ಕೆ ಮಜೂರಿ ಕೊಡಬೇಡವೇ? ಕೊಡಬೇಕು.
  • ಹುಲ್ಲನ್ನು ನಾಶಮಾಡಲು ಅಥವಾ ಕಳೆ ನಿಯಂತ್ರಣ ಮಾಡಲು ಸಹ ಮಜೂರಿ ಆಗುತ್ತದೆ. 
  • ಹಸುಗಳಿಗೆ ಪಶು ಆಹಾರ ಕೊಡಬೇಕಲ್ಲವೇ? ಹೌದು ಕೊಡಬೇಕು.
  • ನಾವು ಕೊಡುವ ಪಶು ಆಹಾರ ಹಸು/ಎಮ್ಮೆಗಳು ಸುಮಾರು 70% ಮಾತ್ರ ತಮ್ಮ ದೇಹ ಪೊಷಣೆಗೆ ಬಳಸಿಕೊಳ್ಳುತ್ತವೆ.
  • ಉಳಿದದ್ದನ್ನು  ಅವು ಸಗಣಿ ಮತ್ತು ಮೂತ್ರದ ಮೂಲಕ ವಾಪಾಸು ಕೊಡುತ್ತವೆ.
  • ಇದನ್ನು ಗೊಬ್ಬರವಾಗಿ ಬಳಸಿದಾಗ ಬೆಳೆಗಳಲ್ಲಿ ಇಳುವರಿ ಹೆಚ್ಚಳವಾಗುತ್ತದೆ.
  • ಈಗ ಜೀವಾಮೃತ ಇತ್ಯಾದಿ ತಯಾರಿಕೆ ಮಾಡುವ ಬಗ್ಗೆ ಜಾಗೃತಿ ಮೂಡುತ್ತಿದೆ.
  • ಇದು ಕಡಿಮೆ ಸಗಣಿಯನ್ನು  ವ್ಯವಸ್ಥಿತವಾಗಿ ಬಳಕೆ ಮಾಡುವ ವಿಧಾನ.
  • ಒಂದು ದನದ ಒಂದು ದಿನದ, ಸಗಣಿಯನ್ನು ಹಾಗೆಯೇ ಕಚ್ಚಾ ರೂಪದಲ್ಲಿ ಒಂದು ತೆಂಗಿನ ಮರಕ್ಕೆ ಹಾಕುವುದಾದರೆ ಅದು ಕನಿಶ್ಟ ಪ್ರಮಾಣದ್ದಾಗುತ್ತದೆ.
  • ಅದನ್ನು ದ್ರವೀಕರಿಸಿ ಎಣ್ಣೆ ಹಿಂಡಿಯಾದ ಶೇಂಗಾ ಹಿಂಡಿ, ಹರಳು ಹಿಂಡಿ, ತೆಂಗಿನ ಹಿಂಡಿ, ಬೇವಿನ ಹಿಂಡಿ ಜೊತೆ ಮಿಶ್ರಣ ಮಾಡಿ  ಕನಿಷ್ಟ 10 ತೆಂಗಿನ ಗಿಡಗಳಿಗೆ ಬಳಕೆ ಮಾಡಿದರೆ  ಹೆಚ್ಚಿನ ಫಲ ಸಿಗುತ್ತದೆ.
  • ಹೀಗೆ ಹಂಚಿಕೊಂಡು ಹಾಕುವ ವಿಧಾನವೇ ಜೀವಾಮೃತ  (Enriched cow manure) ಎಂಬ ತಯಾರಿಕೆ.
  • ಇದನ್ನು ಅಪಹಾಸ್ಯ ಮಾಡಬೇಕಾಗಿಲ್ಲ. ತಯಾರಿಸಿ ಬಳಸಿದರೆ ನಷ್ಟ ಅಂತೂ ಇಲ್ಲವೇ ಇಲ್ಲ.
  • ಮನೆ ಬಳಕೆಯ ಹಾಲಿಗಾಗಿ ಹಸು ಸಾಕಣೆ ಮಾಡಿದರೆ ತುಪ್ಪ ಮಾರಾಟ ಮಾಡಿ ಹಾಲಿಗಿಂತ ಹೆಚ್ಚಿನ ಆದಾಯ ಪಡೆಯಬಹುದು. 
  • ಮನುಷ್ಯ ಶರೀರಕ್ಕೆ ರೋಗ ನಿರೋಧಕ ಶಕ್ತಿಗೆ ಲ್ಯಾಕ್ಟೋ ಬ್ಯಾಸಿಲಸ್ ಬ್ಯಾಕ್ಟೀರಿಯಾದ (Lactobacillus ) ಕೊಡುಗೆ ಅಪಾರ. ಇದನ್ನು ಆರೋಗ್ಯ ರಕ್ಷಕ ಶಸ್ತ್ರ ಎಂದೇ ಕರೆಯಲಾಗಿದೆ.
  • ಇದನ್ನು ಹಾಲು, ಮೊಸರು, ಮಜ್ಜಿಗೆ ನೈಸರ್ಗಿಕವಾಗಿ ಒದಗಿಸುತ್ತದೆ. Many bacteria and other organisms live in our bodies normally. “Friendly” bacteria such as Lactobacillus can help us break down food, absorb nutrients, and fight off “unfriendly” organisms that might cause diseases such as diarrhea.
  • ಅದೂ ನಾವೇ ಸಾಕಿದ ಯಾವುದೇ ಕಲಬೆರಕೆ ರಹಿತವಾದ ಆಹಾರ ಸೇವಿಸಿದ ಹಸುವಿನ/ ಎಮ್ಮೆಯ ಹಾಲಿನಲ್ಲಿ ಉತ್ತಮ ಗುಣಮಟ್ಟದಲ್ಲಿರುತ್ತದೆ. 
  • ಮಜ್ಜಿಗೆ – ಮೊಸರು ನಲ್ಲಿ ಇದನ್ನು ಸೇವಿಸದೆ ಇದ್ದರೆ ಅದನ್ನು ಮಾತ್ರೆಗಳ ಮೂಲಕ ಸೇವಿಸುವ ಪರಿಸ್ಥಿತಿ ಬರುತ್ತದೆ.
  • ಹಾಗಾಗಿ ಔಷಧಿಗಾಗಿ ಮಾಡುವ ಖರ್ಚು ಆನೆ ಹೋದಷ್ಟೇ ನಷ್ಟವಾಗುತ್ತದೆ.
ಮನುಷ್ಯರನ್ನು ಕಂಡರೆ ಹಸುಗಳು ಭಯಪಡುತ್ತವೆ- ಎಲ್ಲಿ ಕಟುಕರಿಗೆ ಮಾರಿಬಿಡುತ್ತಾರೆಯೋ ಎಂದು.
ಮನುಷ್ಯರನ್ನು ಕಂಡರೆ ಹಸುಗಳು ಭಯಪಡುತ್ತವೆ- ಎಲ್ಲಿ ಕಟುಕರಿಗೆ ಮಾರಿಬಿಡುತ್ತಾರೆಯೋ ಎಂದು.

ಹಸು ಸಾಕಿದವರು ದಾನ ಧರ್ಮ ಮಾಡಬೇಕಾಗಿಲ್ಲ:

  • ಹಸು ಸಾಕಣೆ ಎಂದರೆ ಅದು ಒಂದು ಪರೋಪಕಾರ. ಸಾಕು ಪ್ರಾಣಿಗಳನ್ನು ಸಾಕಿ ಮಾನವೀಯತೆ ಮೆರೆಯುವುದು.
  • ಇದು ಒಂದು ಸೇವೆ ಎಂದೇ ಹೇಳಬಹುದು. ಇದಕ್ಕಿಂತ ಮಿಗಿಲಾದ ಸೇವೆ ಬೇರೆ ಇಲ್ಲ.
  • ಆ ಕಾರಣ ಹಸು ಸಾಕುವವರು ಆ ದೇವಸ್ಥಾನ. ಈ ದೇವಸ್ಥಾನ, ಅನಾಥಾಶ್ರಮ, ಇತ್ಯಾದಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ದಾನ ನೀಡಿ ಕೃತಾರ್ಥರಾಗಬೇಕಾಗಿಲ್ಲ.
  • ಇದೇ ಒಂದು ಮಹಾದಾನವಾಗಿರುತ್ತದೆ.
  • ಯಾರೇ ಯಾವುದೇ ವಿಷಯಕ್ಕೆ ದಾನ ರೂಪದಲ್ಲಿ ದೇಣಿಗೆ ಕೇಳಿದರೂ  ಹಸು/ ಎಮ್ಮೆ ಸಾಕುವವರು ದಾನ ಕೊಡದಿದ್ದರೆ  ಪುಣ್ಯತಪ್ಪುತ್ತದೆ ಎಂದು  ಬಾವಿಸಬೇಕಾಗಿಲ್ಲ.
  • ನೀವು ಆಗಲೇ ಪುಣ್ಯದ ಮೂಟೆಯನ್ನೇ ಸಂಪಾದಿಸಿದ್ದೀರಿ. ಹಸು ಸಾಕಣೆ ಒಂದು ಪುಣ್ಯದ ಕೆಲಸ ಎಂದು ಹಿರಿಯರು ಸಾಕಷ್ಟು ತಿಳಿದೇ ಹೇಳಿದ್ದಾರೆ.
  • ನಮ್ಮ ಹಿರಿಯರು ಇತರ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳಿಗೆ ಪೂಜ್ಯ ಸ್ಥಾನ ನೀಡಿಲ್ಲ.

ಹಸುಗಳ ಬಗ್ಗೆ ಹಗುರದ ಮಾತಾಡುವುದು, ತಾವು ಹಸು ಸಾಕದೆ  ಹಸುಗಳನ್ನು ವಧಿಸುವವರ ಬಗ್ಗೆ ಮಾತಾಡುವುದು ನ್ಯಾಯೋಚಿತವಲ್ಲ. ನಮ್ಮ ಜೀವನದಲ್ಲಿ ಪರೋಪಕಾರ ಎಂಬುದನ್ನು ಮಾಡುವುದು ಮಾನಸಿಕ ತೃಪ್ತಿ. ಇದನ್ನು ಈ ಕಾಲದಲ್ಲಿ ಪರರಿಗೆ ದಾನ ನೀಡಿ ಪಡೆಯುವುದು ಉಚಿತವಲ್ಲ. ಬಹುಶಃ ಇಂದಿನ ಮುಂದುವರಿದ ಜಗತ್ತಿನಲ್ಲಿ ಯಾರೂ ಯಾರಿಂದಲೂ ಬಯಸುವುದನ್ನು ಇಚ್ಚೆ ಪಡುವುದಿಲ್ಲ. ಎಲ್ಲರೂ ಸ್ವಾವಲಂಭಿಗಳು. ಹಾಗಿರುವಾಗ ಪರಾವಲಂಭಿಯಾದ ಹಸು, ಎಮ್ಮೆಗಳನ್ನು ನಮ್ಮ ಕೃಷಿ ವೃತ್ತಿಯಲ್ಲಿ ಲಾಭಕ್ಕಲ್ಲದಿದ್ದರೂ ಮಾನವೀಯತೆ ದೃಷ್ಟಿಯಿಂದ ಸಾಕಿ. ಹಸುವಿನ ಹಾಲು ಮಾರಿ ಲೀಟರಿಗೆ 100 ರೂ ಪಡೆಯುವುದಕ್ಕಿಂತ ಹಸು ಸಾಕಿ ಅದರ ಹಾಲು, ಮಜ್ಜಿಗೆ, ತುಪ್ಪ ಸೇವಿಸಿ 1000 ರೂ. ಗಳ ಪ್ರಯೋಜನ ಪಡೆಯಿರಿ. ನಿಮ್ಮ ನೆರೆಹೊರೆಯವರಿಗೆ ಹಸು ಸಾಕಣೆಯ ಮಹತ್ವ ತಿಳಿಸಿ ಅವರನ್ನೂ ಸಾಕುವಂತೆ  ಮಾಡಿ.

Leave a Reply

Your email address will not be published. Required fields are marked *

error: Content is protected !!