ಹೈಬ್ರೀಡ್ ತಳಿಗಳು ಎಂದರೆ ಎರಡು ಉತ್ತಮ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ಹೊಸ ತಳಿ. ಹೈಬ್ರೀಡ್ ಎಂದರೆ ಖಾತ್ರಿಯಾಗಿ ಅಧಿಕ ಇಳುವರಿ ನೀಡಬಲ್ಲ ತಳಿಗಳು. ಹೈಬ್ರೀಡ್ ಬೆಳೆದರೆ ಬೇಗ ಇಳುವರಿ ಪ್ರಾರಂಭವಾಗಿ, ಕೊಯಿಲು ಸುಲಭವಾಗುತ್ತದೆ.
- ನಮ್ಮ ಸುತ್ತಮುತ್ತ ಇರುವ ಬಹುತೇಕ ತಳಿಗಳು ಎತ್ತರದ ತಳಿಗಳು.
- ಇದರಲ್ಲಿ ಫಸಲು ಪ್ರಾರಂಭವಾಗಲು 5-7 ವರ್ಷ ಬೇಕು.
- ಹಾಗೆಯೇ ನಮ್ಮಲ್ಲಿ ಕೆಲವು ಹತ್ತಿರದ ಗಂಟಿನ ಗಿಡ್ಡ ತಳಿಗಳಾದ ಗೆಂದಾಳಿ(COD, CYD) ಹಸಿರು (CGD Gangabondam) ತಳಿಗಳು ಇವೆ.
- ಗಿಡ್ಡ ತಳಿಯ ಗುಣವನ್ನು ಎತ್ತರದ ತಳಿಯೊಂದಿಗೆ ಪರಾಗಸ್ಪರ್ಶದ ಮೂಲಕ ಕ್ರಾಸಿಂಗ್ ಮಾಡಿದರೆ ಅದು ಹೊಸ ಗುಣದ ತಳಿಯಾಗುತ್ತದೆ.
- ಹೀಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು ಈ ತಾಂತ್ರಿಕತೆಯನ್ನು ಬಳಸಿ ಗಿಡ್ಡ ಮತ್ತು ಎತ್ತರ, ಎತ್ತರ ಮತ್ತು ಗಿಡ್ಡ ತಳಿಗಳ ಕ್ರಾಸಿಂಗ್ ಮಾಡಿ ಬೇರೆ ಬೇರೆ ಹೈಬ್ರೀಡ್ ತಳಿಗಳನ್ನು ಪರಿಚಯಿಸಿದೆ.
- ಕ್ರಾಸಿಂಗ್ ಮಾಡುವಾಗ ಬೇರೆ ಬೇರೆ ಮೂಲದ ಗಂಡು ತಳಿ ಮತ್ತು ಹೆಣ್ಣು ತಳಿಯನ್ನು ಬಳಸಿದ ಕಾರಣ ಅದಕ್ಕೆ ಬೇರೆ ಬೇರೆ ಹೆಸರು ಕೊಡಲಾಗಿದೆ. ಅವುಗಳು.
ಚಂದ್ರ ಸಂಕರ:
- ಇದು ಗಿಡ್ದ ತಳಿ (ಚೌಘಾಟ್ ಆರೆಂಜ್ ದ್ವಾರ್ಫ್ ) ಮತ್ತು ಎತ್ತರದ ತಳಿ ಪಶ್ಚಿಮ ಕರಾವಳಿ ಸ್ಥಳೀಯಗಳ ಮಧ್ಯೆ(DXT) ಸಂಕರಣ ಮಾಡಿ ಪಡೆಯಲಾದ ತಳಿ.
- ಇದು ಎಳನೀರಿನ ಉದ್ದೇಶಕ್ಕೆ ಮತ್ತು ಕೊಬ್ಬರಿ ಉದ್ದೇಶಕ್ಕೂ ಬಳಸಬಹುದಾದ ತಳಿಯಾಗಿದೆ.
- ಮರವೊಂದರ ಸರಾಸರಿ 110 ಕಾಯಿಗಳ ಇಳುವರಿ ನೀಡಬಲ್ಲುದು.
- ನೀರಿನ ಒತ್ತಾಯವನ್ನು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳುತ್ತದೆ.
- ಹಳದಿ ಮಿಶ್ರ ಹಸುರು ಬಣ್ಣದ ತಳಿ.
- ಕೇರಳ ಕರ್ನಾಟಕ ಮತ್ತು ತಮಿಳುನಾಡಿಗೆ ಹೊಂದಿಕೆಯಾಗುವಂತದ್ದು.
- ಉತ್ತಮ ಕೊಬ್ಬರಿ ಇಳುವರಿಯನ್ನು (160-230 ಗ್ರಾಂ ಕಾಯಿಗೆ) ನೀಡಬಲ್ಲ ತಳಿ.
- 4 ವರ್ಷಕ್ಕೆ ಇಳುವರಿಗೆ ಪ್ರಾರಂಭ.
ಕೇರ ಸಂಕರ:
- ಇದು ಲಕ್ಷದ್ವೀಪ ಸ್ಥಳೀಯ ಎತ್ತರದ ತಳಿ ಮತ್ತು ಗಂಗಬೊಂಡ ತಳಿಯ ಜೊತೆಗೆ ಸಂಕರಣ ಮಾಡಿ ಪಡೆಯಲಾದ ತಳಿ.
- ಮರವೊಂದರ ಸರಾಸರಿ 106 ಕಾಯಿಗಳ ಇಳುವರಿ ನೀಡಬಲ್ಲುದು.
- ಕೊಬ್ಬರಿ ಮತ್ತು ಎಣ್ಣೆ ಪ್ರಮಾಣ ಉತ್ತಮವಾಗಿಯೇ ಇದೆ. ಕೇರಳ, ಕರ್ನಾಟಕ, ಆಂದ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೂಕ್ತವಾದ ತಳಿ.
- ಹಳದಿ ಮಿಶ್ರ ಹಸುರು ಬಣ್ಣದ ತಳಿ. 4 ವರ್ಷಕ್ಕೆ ಇಳುವರಿಗೆ ಪ್ರಾರಂಭ.
ಚಂದ್ರ ಲಕ್ಷ:
- ಇದು ಲಕ್ಷ ದ್ವೀಪ ಎತ್ತರದ ತಳಿ ಮತ್ತು ಚೌಘಾಟ್ ಓರೆಂಜ್ ಡ್ವಾರ್ಪ್ ಜೊತೆಗೆ ಸಂಕರಣ ಮಾಡಿ ಪಡೆಯಲಾದ ತಳಿ.
- ಮರವೊಂದರ ಸರಾಸರಿ 109 ಕಾಯಿಗಳ ಇಳುವರಿ ನೀಡಬಲ್ಲುದು.
- ಕೊಬ್ಬರಿ ಮತ್ತು ಎಣ್ಣೆ ಪ್ರಮಾಣ ಉತ್ತಮವಾಗಿಯೇ ಇದೆ.
- ಕೇರಳ, ಕರ್ನಾಟಕ, ರಾಜ್ಯಗಳಿಗೆ ಸೂಕ್ತವಾದ ತಳಿ.
- 4-5 ವರ್ಷಕ್ಕೆ ಇಳುವರಿಗೆ ಪ್ರಾರಂಭ.
- ಹಳದಿ ಮಿಶ್ರ ಹಸುರು ಬಣ್ಣದ ತಳಿ.
- 1 ಕಾಯಿಗೆ 150-210 ಗ್ರಾಂ ಕೊಬ್ಬರಿ ತೂಕ.
ಕಲ್ಪ ಸಂಮೃದ್ಧಿ:
- ಇದು ಮಲಯನ್ ಹಳದಿ ಡ್ವಾರ್ಫ್ ಹಾಗೂ ಪಶ್ಚಿಮಕರಾವಳಿಯ ಗಿಡ್ದ ಮತ್ತು ಎತ್ತರದ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ತಳಿ.
- ಇದು ಮರವೊಂದರ ಸರಾಸರಿ 117 ಕಾಯಿಯ ಇಳುವರಿಯನ್ನು ನೀಡಬಲ್ಲುದು.
- ಕೊಬ್ಬರಿ ಮತ್ತು ಎಣ್ಣೆ ಅಂಶ ಚೆನ್ನಾಗಿದೆ.
- ಎಳನೀರಿಗೆ ಸೂಕ್ತವಾದ ತಳಿ.
- ಕೇರಳ ಮತ್ತು ಅಸ್ಸಾಂಗಳಿಗೆ ಸೂಕ್ತವಾಗಿದೆ.
- ತಿಳಿ ಹಸುರು ಬಣ್ಣದಲ್ಲಿರುತ್ತದೆ.
ಕಲ್ಪ ಸಂಕರ :
- ಇದನ್ನು ಪಶ್ಚಿಮ ಕರಾವಳಿಯ ಎತ್ತರದ ತಳಿ ಮತ್ತು ಚೌಘಾಟ್ ಗ್ರೀನ್ ಡ್ವಾರ್ಫ್ ಜೊತೆ ಸಂಕರಣ ಮಾಡಿ ಪಡೆಯಲಾಗಿದೆ.
- ಇದು ಸುಮಾರು 84 ಕಾಯಿಯ ಇಳುವರಿ ನಿಡಬಲ್ಲುದು.
- ಬೇರು ಸೊರಗುರೋಗ ಇರುವ ಪ್ರದೇಶಗಳಿಗೆ ಸೂಕ್ತವಾದ ತಳಿ.
- ತಿನ್ನುವ ಕೊಬ್ಬರಿಗೆ ಉತ್ತಮ. ಎಣ್ಣೆಯ ಇಳುವರಿ ಕಡಿಮೆ.
- ಎಳನೀರಿಗೆ ಹೊಂದಿಕೆಯಾಗುತ್ತದೆ.
- ಹಚ್ಚ ಹಸುರು ಬಣ್ಣದ ತಳಿ.
ಕಲ್ಪ ಶ್ರೇಷ್ಟ:
- ಇದನ್ನು ಮಲಯನ್ ಹಳದಿ ಡ್ವಾರ್ಫ್ ಮತ್ತು ತಿಪಟೂರು ಟಾಲ್ ತಳಿಗಳ ಮಧ್ಯೆ ಸಂಕರಣ ಮಾಡಿ ಪಡೆಯಲಾಗಿದೆ.
- ಇದರಲ್ಲಿ ಕೊಬ್ಬರಿ ಪ್ರಮಾಣ ಮತ್ತು ಎಣ್ಣೆ ಪ್ರಮಾಣ ಅತ್ಯುತ್ತಮವಾಗಿದೆ.
- ತಿಳಿ ಹಸುರು ಬಣ್ಣದ ತಳಿ.
- ಹೆಚ್ಚು ನೀರು ಮತ್ತು ಸಿಹಿಯಾದ ನೀರು ಇರುವ ಕಾರಣ ಎಳನೀರಿಗೂ ಸೂಕ್ತವಾದ ತಳಿ.
ಇದು ಸಿ ಪಿ ಸಿ ಆರ್ ಐ ಕೇಂದ್ರದಿಂದ ಬಿಡುಗಡೆಯಾದ ಹೈಬ್ರೀಡ್ ತಳಿಗಳು. ಇಲ್ಲಿ ಯಾವ ಯಾವ ಯಾವ ಪ್ರದೇಶಕ್ಕೆ ಯಾವ ತಳಿ ಸೂಕ್ತವೋ ಆ ತಳಿಗಳಿಗೆ ಒತ್ತು ನೀಡಲಾಗಿದೆ. ಇದೆಲ್ಲವನ್ನೂ ಇಲ್ಲಿ ಪ್ರಾಯೋಗಿಕವಾಗಿ ಅಭ್ಯಸಿಸಿಯೇ ಬಿಡುಗಡೆ ಮಾಡಲಾಗುತ್ತದೆ. ಇದಲ್ಲದೆ ಖಾಸಗಿಯ ಕೆಲವು ಬೀಜೋತ್ಪಾದಕ ಕೇಂದ್ರಗಳೂ ಹೈಬ್ರೀಡ್ ಬೀಜೋತ್ಪಾದನೆ ಮಾಡುತ್ತಿದ್ದಾರೆ.
ಇನ್ನು ಮುಂದೆ ತೆಂಗು ಬೆಳೆಸುವವರು ನಿಖಾರ ಇಳುವರಿ ಕೊಡಬಲ್ಲ ಬಹು ಉದ್ದೇಶಿತ ತೆಂಗು ಹೈಬ್ರೀಡ್ ಬೆಳೆದರೆ ಉತ್ತಮ.