ತೆಂಗಿನೆಣ್ಣೆ-ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೆಂಗಿನೆಣ್ಣೆಯೂ ವೈರಸ್ ವಿರುದ್ಧ ಕೆಲಸ ಮಾಡುತ್ತದೆ. ಇದು ಕೊರೋನಾ ವೈರಸ್ ಗೆ ಔಷಧಿ ,ತೆಂಗಿನೆಣ್ಣೆ ತಿನ್ನಿ ಎನ್ನುತ್ತಿದ್ದಾರೆ.  ಇದು ಸುಮ್ಮನೆ ಹೇಳಿದ ವಿಚಾರ ಅಲ್ಲ. ಈ ಬಗ್ಗೆ ಕೆಲವು ಅಧ್ಯಯನಗಳು ನಡೆಯುತ್ತಿವೆ.ಇತ್ತೀಚೆಗೆ ಕೆಲವರು ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಲಾರಂಭಿಸಿದ್ದಾರೆ.

  • ಶುದ್ಧ ತೆಂಗಿನೆಣ್ಣೆ ಎಂಬುದು ಅನಾದಿ ಕಾಲದಿಂದಲೂ ಪರಮೌಷಧಿ ಎಂದೇ ಪರಿಗಣಿಸಲ್ಪಟ್ಟಿದೆ. 
  • ಕ್ಕೊಬ್ಬರಿ ಎಣ್ಣೆಯನ್ನು ತಲೆಗೆ ಹಾಕಿದರೆ ಕೂದಲು ಬೆಳೆಯುತ್ತದೆ. 
  • ತುಟಿ ಒಡೆದರೆ ತೆಂಗಿನೆಣ್ಣೆ. ಗಾಯವಾದರೆ ತೆಂಗಿನೆಣ್ಣೆ.
  • ಅಲರ್ಜಿ ಇಂದ ಕಣ್ಣು ಉರಿ, ಮೈ ಉರಿ ಬಂದರೆ ತೆಂಗಿನೆಣ್ಣೆ, ತುರಿಕೆ ಹುಣ್ಣು, ಏನೇ ಇದ್ದರೂ ಪ್ರಥಮ ಚಿಕಿತ್ಸೆ ಎಂದರೆ ತೆಂಗಿನೆಣ್ಣೆ.
  • ಇದು ನಾವೆಲ್ಲಾ ಬಳಸಿ ಫಲಿತಾಂಶ ಕಂಡ ಸತ್ಯ ಸಂಗತಿ.
ಇದನ್ನು ಒಣಗಿಸಿ ಎಣ್ಣೆ ತೆಗೆಯಲಾಗುತ್ತದೆ.

ಈ ಹಿಂದೆ ಏಡ್ಸ್ ರೋಗ ಪ್ರವೇಶ ಆದ ಸಮಯದಲ್ಲಿ ವೈರಾಣು ರೋಗಗಳನ್ನೂ ತೆಂಗಿನೆಣ್ಣೆ ತಡೆಯಬಲ್ಲುದು ಎಂಬ ಬಗ್ಗೆ ಕೆಲವು ಸಂಶೋಧನಾ ಪ್ರಕಟಣೆಗಳು ಹರಿದಾಡಿವೆ. ಈಗ ಮತ್ತೆ ಕೋವಿಡ್ 19  ಅಟ್ಟ ಹಾಸ ಮೆರೆಯುತ್ತಿರುವಾಗ  ಮತ್ತೆ ತೆಂಗಿನೆಣ್ಣೆಗೆ ಮಹತ್ವ ಬರಲಾರಂಭಿಸಿದೆ.

  • ಫಿಲಿಫೈನ್ಸ್ ನ  council of health research and development  of Department of Science and technology  ಇವರು ತೆಂಗಿನೆ ಎಣ್ಣೆಯು ಕೋರೋನಾ  ವೈರಾಣು ಸೋಂಕನ್ನು ತಡೆಯುವಲ್ಲಿ  ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
  •  ಓದುಗರು Coconut and COVID-19 Philppines study  ಇಲ್ಲಿ ಮಾಹಿತಿ ಪಡೆಯಬಹುದು,
  • ಇದೇನೂ ಹೊಸದಲ್ಲ. ನಮ್ಮ ಪರಂಪರಾಗತ ನಾಟೀ ಚಿಕಿತ್ಸೆಗಳು ಇದನ್ನು ಯಾವಾಗಲೋ ಕಂಡುಕೊಂಡಾಗಿದೆ.
ಬೆಳೆದ ಕಾಯಿ ಒಡೆದು ಒಣಗಿಸಿಯೂ ಎಣ್ಣೆ ತೆಗೆಯಲಾಗುತ್ತದೆ.

ತೆಂಗಿನೆಣ್ಣೆಯಲ್ಲಿ ಏನಿದೆ?

  • ತೆಂಗಿನೆಣ್ಣೆ ಎಂಬುದು 91%  ಸಂತೃಪ್ತ ಕೊಬ್ಬಿನಾಮ್ಲ ಇದೆ.
  • ಅದರಲ್ಲಿ ಮಧ್ಯಮ ಸರಪಳಿ ಕೊಬ್ಬಿನ ಅಂಶ (ಮೀಡಿಯಂ ಚೈನ್ ಫ್ಯಾಟೀ ಅಸಿಡ್) ಪ್ರಭಲವಾಗಿರುತ್ತದೆ.
  • ಇದು ಮಾನವ ಶರೀರಲ್ಲಿ ಎಲ್ಲಿಯೂ ಕೊಬ್ಬಾಗಿ ಶೇಖರಣೆಯಾಗುವುದಿಲ್ಲ
  • ಸಂಪೂರ್ಣವಾಗಿ ದೇಹದಲ್ಲಿ ಜೀರ್ಣವಾಗಿ ರಕ್ತಕ್ಕೆ  ಸೇರಿಕೊಳ್ಳುತ್ತದೆ. 
  • ರಕ್ತಕ್ಕೆ ಸೇರಿ ಶಕ್ತಿಯಾಗಿ ಮಾರ್ಪಡುತ್ತದೆ. 
  • ಕೊಲೆಸ್ಟ್ರಾಲ್ ಇರುವುದಿಲ್ಲ.  ಇದರಲ್ಲಿ ವಿಟಮಿನ್ E ಹೇರಳವಾಗಿದೆ.
  • ಕ್ಯಾನ್ಸರ್  ಕಾರಕಗಳ ವಿರುದ್ಧ ಕೆಲಸ ಮಾಡುತ್ತದೆ. ವಂಶವಾಹೀ ನಂಜುಕಾರಕಗಳ ವಿರುದ್ಧ ಪರಿಣಾಮಕಾರಿ. ಕ್ಯಾಲ್ಸಿಯಂ ಹೀರುವಿಕೆಯನ್ನು ಉತ್ತಮಪಡಿಸಿ ಮೂಳೆ ಮತ್ತು ಹಲ್ಲುಗಳನ್ನು ಸಧೃಢಗೊಳಿಸುತ್ತದೆ. 
  • ಚರ್ಮವನ್ನು ತಂಪಾಗಿರಿಸುತ್ತದೆ. ಚರ್ಮದ ಮೇಲೆ ಹಚ್ಚಿದಾಗ ಬೇರೆ ವಸ್ತುವನ್ನು ಒಳ ಸೇರದಂತೆ ತಡೆಯುತ್ತದೆ.
  • ಕೀಟನಾಶಕದ ವಿಷ ಶರೀರದ ರೋಮ ನಾಳಗಳ ಮೂಲಕ ಒಳಸೇರದಂತೆ ತಡೆಯಬಲ್ಲದು. 
  • ಇದಕ್ಕೆ ಕ್ಯಾನ್ಸರ್ ಮತ್ತು ಏಡ್ಸ್ ತಡೆಗಟ್ಟುವ ಗುಣ, ಅಲ್ಜಮೈರ್ ರೋಗ ತಡೆಗಟ್ಟುವ ಶಕ್ತಿ  ಇದೆ ಎಂಬುದಾಗಿ ಹೇಳಲಾಗುತ್ತಿದೆ. ( Coconut Development Board)
  • ಇದನ್ನು ಬಳಕೆ ಮಾಡಿದರೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಬಹುದು ಎಂಬುದಂತೂ ಸತ್ಯ.
ಕೊಬ್ಬರಿ ಸ್ವಚ್ಚವಾಗಿದ್ದರೆ ಮಾತ್ರ ಎಣ್ಣೆಯೂ ಶುದ್ಧವಾಗಿರಬಲ್ಲುದು.

ಯಾವುದು ಶುದ್ಧ ತೆಂಗಿನೆಣ್ಣೆ:

  • ತೆಂಗಿನ ಕಾಯಿಯ ಒಳ ತಿರುಳು ( ಕೊಬ್ಬರಿ) ಒಣಗಿ ಸಿ ಪಡೆಯುವ  ಎಣ್ಣೆ. 
  • ತೇವಾಂಶ  ಆರಿದ  ನಂತರ (ಶೇ. 6) ಅದನ್ನು ಗಾಣ ಅಥವಾ ಅರೆಯುವ ಯಂತ್ರದಲ್ಲಿ ಹಾಕಿ ಕೊಬ್ಬರಿಯಲ್ಲಿ ಉಳಿದಿರುವ ಎಣ್ಣೆಯನ್ನು ಹಿಂಡಲಾಗುತ್ತದೆ.
  • ಇದು ಶುದ್ಧ ತೆಂಗಿನ ಎಣ್ಣೆ.
  • ಇಲ್ಲಿ ಬಳಕೆ ಮಾಡುವ ಕೊಬ್ಬರಿ ಕಡ್ದಾಯವಾಗಿ 94% ತೇವಾಂಶವನ್ನು ಕಳೆದುಕೊಂಡಿರಬೇಕು.
  • ಕೊಬ್ಬರಿಯು ಯಾವುದೇ ರೀತಿಯಲ್ಲಿ ಹಾಳಾಗಿರಬಾರದು.
  • ಆಗ ಮಾತ್ರ ಅದರ ಎಣ್ಣೆ ಶುದ್ಧವಾಗಿರುತ್ತದೆ.
  • ಶುದ್ಧ ನೀರಿನ ಅಂಶ ಇಲ್ಲದ ಎಣ್ಣೆಯಲ್ಲಿ ಯಾವುದೇ ಸೂಕ್ಷ್ಮಾಣು ಜೀವಿ ಬೆಳೆಯುವುದಿಲ್ಲ.
  • ಸ್ವಲ್ಪ ತೇವಾಂಶ ಉಳಿದಿದ್ದರೂ ಅದರಲ್ಲಿ ಬೇರೆ ಜೀವಾಣು ಬೆಳೆಯುತ್ತದೆ.
  • ಈ ತೆಂಗಿನ ಎಣ್ಣೆಯನ್ನು ಹಿಂಡಿ ಅದನ್ನು ಒಂದೆರಡು ದಿನ ಪಾತ್ರೆಯಲ್ಲಿ ಹಾಕಿಟ್ಟು, ಅದರಲ್ಲಿರುವ ಕೆಲವು ಜಿಡ್ಡು ಗಳು ತಂಗುವಂತೆ ಮಾಡಿ ಪಡೆದ ಸೋಸಿದ ಎಣ್ಣೆ  ವರ್ಷವಾದರೂ ಕೆಡದು.
  • ಇದು ತುಪ್ಪಕ್ಕೆ ಸಮನಾದ ಒಂದು ಖಾದ್ಯ  ಎಣ್ಣೆ. ಇದಕ್ಕೆ  ಮಾತ್ರ  ರೋಗ ನಿರೋಧಕ ಶಕ್ತಿ ಇರುತ್ತದೆ.

ಎಚ್ಚರಿಕೆ:

  • ಮಾರುಕಟ್ಟೆಯಲ್ಲಿ ಅಸಲಿ ತೆಂಗಿನೆಣ್ಣೆ ಎಂಬ ಹೆಸರಿನಲ್ಲಿ ಲಭ್ಯವಾಗುವ ಬಹುತೇಕ ತೆಂಗಿನೆಣ್ಣೆ ಕಲಬೆರಕೆಯಿಂದ ಕೂಡಿದೆ.
  • ಪೆಟ್ರೋಲಿಯಂ ಮೂಲದ ಬಿಳಿ ಎಣ್ಣೆಯನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
  • ನಂಬಿಗಸ್ತ ಮೂಲದಿಂದ ಖರೀದಿಸಿದ ಅಥವಾ ತಾವೇ ಕೊಬ್ಬರಿ ಕೊಟ್ಟು ಮಾಡಿಸಿದ ತೆಂಗಿನೆಣ್ಣೆಯೇ ತಾಜಾ ಆಗಿರುತ್ತದೆ.

ಇಲ್ಲಿ ನೇರವಾಗಿ ತೆಂಗಿನ ಎಣ್ಣೆಯನ್ನು ಔಷಧಿ ಎಂದು ಹೇಳಲಾಗಿಲ್ಲ. ಕಳೆದ ಕೆಲವು ವರ್ಷಗಳಿಂದ  ತೆಂಗಿನೆಣ್ಣೆಯಲ್ಲೂ ಉಚ್ಚ– ಮತ್ತು ಮಧ್ಯಮ ಎಂಬ ಎರಡು ವಿಭಾಗಗಳಾಗಿದ್ದು, ಉಚ್ಚ ಸ್ಥಾನವು  ವರ್ಜಿನ್ ಕೊಕಾನೆಟ್ ಆಯಿಲ್ ( ತೆಂಗಿನ ಕಾಯಿಯ  ಎಣ್ಣೆ) ಬಂದಿದೆ.ಇದನ್ನು ಬಳಕೆ ಮಾಡಿದರೆ  ಉತ್ತಮ ಎನ್ನಲಾಗುತ್ತಿದೆ.

ಆರೋಗ್ಯ ಗುಣ ಇರುವುದು ಶುದ್ಧ  ತೆಂಗಿನ ಎಣ್ಣೆಗೆ ಮಾತ್ರ ಎಂಬುದನ್ನು ಎಲ್ಲರೂ ಗಮನಿಸಬೇಕು.  ತಾವು ಖಾದ್ಯ ಎಣ್ಣೆಯನ್ನು ಎಲ್ಲೆಲ್ಲಿ ಬಳಸುತ್ತೇವೋ ಅಲ್ಲೆಲ್ಲಾ ತೆಂಗಿನ ಎಣ್ಣೆ ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.

  • ವರ್ಜಿನ್ ಕೋಕಾನೆಟ್ ಆಯಿಲ್ ಬಗ್ಗೆ  ಮುಂದೆ ತಿಳಿಸುತ್ತೇವೆ

 

Leave a Reply

Your email address will not be published. Required fields are marked *

error: Content is protected !!