ಬಿದಿರು ಬೆಳಸಬೇಕೆಂದಿರುವಿರೇ – ಇದನ್ನು ತಪ್ಪದೆ ಓದಿ.

ಬಿದಿರು ಬೆಳೆಸುವವರು  ಬೀಜದಿಂದ ಮಾಡಿದ ಸಸಿಯನ್ನು ಬೆಳೆಸಿದರೆ ಮಾತ್ರ ಅದಕ್ಕೆ ಪೂರ್ಣ ಆಯುಸ್ಸು. ಒಂದು ವೇಳೆ ಅದು ಬೆಳೆದ ಬಿದಿರಿನ ಕಳಲೆ, ಅಥವಾ ಅದರಿಂದ ಮಾಡಿದ ಸಸಿಯೇ ಆಗಿದ್ದರೆ ಬೇಗ ಅದರಲ್ಲಿ ಹೂ ಬಿಡಬಹುದು.

planted bambo

  • ಬಿದಿರು ಬೆಳೆಸಿದರೆ ಅದರಿಂದ ತುಂಬಾ ಲಾಭವಿದೆ.
  • ಒಂದೊಂದು ಬಿದಿರ ಹಿಂಡು ವರ್ಷಕ್ಕೆ  ಏನಿಲ್ಲವೆಂದರೂ ಕಳಲೆಯ ಮೂಲಕ  300-500 ರೂ. ತನಕ ಆದಾಯ ಕೊಡುತ್ತದೆ.
  • ಅಲ್ಲದೆ ಬಿದಿರಿನ ಸೊಪ್ಪು ಗೊಬ್ಬರ. ಬಿದಿರನ್ನು ಬೇರೆ ಬೇರೆ ಬಳಕೆಗೆ ಉಪಯೋಗಿಸಬಹುದು.

ಸಸಿಗೆ ಬೀಜವೇ ಸೂಕ್ತ:

bamboo seed
ಬಿದಿರಿನ ಬೀಜ
  • ಕಳೆದ ಕೆಲವು ವರ್ಷಗಳಿಂದ ಅಲ್ಲಲ್ಲಿ ಭಿದಿರು ಮೆಳೆಗಳು ಹೂವು ಬಿಡುತ್ತಿದೆ.
  • ಬಿದಿರು ಹೂ ಬಿಟ್ಟು ಬೀಜಗಳಾಗಿ ತಮ್ಮ ಬೀಜವನ್ನು  ಸುತ್ತಲೂ ಪಸರಿಸಿ ನಂತರ ಸಾಯುತ್ತವೆ.
  • ಬಿದ್ದ ಬೀಜಗಳು ಮೊಳೆತು ಮತ್ತೆ ಬಿದಿರಿನ ವಂಶಾಭಿವೃದ್ದಿಯಾಗುವುದು ಪ್ರಕೃತಿ ನಿಯಮ.
  • ಬಿದಿರಿನ ಬೀಜ ಬಿದ್ದಲ್ಲಿ ಹುಟ್ಟಿದ ಸಸ್ಯಗಳನ್ನು  ತಂದು ಬಿದಿರ ಹಿಂಡನ್ನು ಬೆಳೆಸಿದರೆ ಅದು  50-60  ವರ್ಷ ತನಕ ಹೂ ಬಿಡುವುದಿಲ್ಲ. ಕಳಲೆ ಕೃಷಿಯನ್ನೂ ಮಾಡಬಹುದು.

ಸಸಿ ಆಯ್ಕೆ ಹೇಗೆ:

Seed propagated plant
ಬೀಜದ ಸಸಿಗಳು
  • ಈಗಾಗಲೇ ಮಳೆ ಬಂದು ಭೂಮಿ ತೇವವಾಗಿದೆ.
  • ಬಿದಿರು ಸಸ್ಯ ಬೆಳೆಸಬೇಕೆಂಬ ಆಸಕ್ತಿ ಉಳ್ಳವರಿಗೆ ಹೂ ಬಿಟ್ಟ ಬಿದಿರು ಮೆಳೆಗಳ ಬುಡದಲ್ಲಿ ಸಾಕಷ್ಟು  ನೆಡಲು ಸೂಕ್ತವಾದ ಸಸಿಗಳು ಲಭ್ಯ.
  • ಇದನ್ನು ಬೇರು ಸಮೇತ  ಕಿತ್ತು ತಂದು ಅವರರವ ಹೊಲದಲ್ಲಿ ನೆಟ್ಟು ಬೆಳೆಸಿದರೆ ಅದನ್ನು  ಬೇಕಾದ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದು.
  • ಬೇರು ಇರುವ ಕಾರಣ  ಚೆನ್ನಾಗಿ ಬದುಕಿಕೊಳ್ಳುತ್ತದೆ.
bamboo flower containing seeds
ಬಿದಿರಿನ ಹೂವು

ಬಿದಿರಿನ ಕಳಲೆಗೆ ಭಾರೀ ಬೇಡಿಕೆ:

  • ಬಿದಿರು ಸಸ್ಯದ ಮೊಳಕೆಯನ್ನು  ಕಳಲೆ ಎಂಬ ಹೆಸರಿನಿಂದ ಕರೆಯುತ್ತಾರೆ.
  • ಇದು ಕರಾವಳಿ ಮಲೆನಾಡಿನಲ್ಲಿ ಬೇರೆ ಅಡುಗೆಗೆ ಬಳಕೆಯಾಗುತ್ತದೆ.
  • ಉತ್ತಮ ಬೇಡಿಕೆಯೂ ಇದ್ದು  ಬೆಲೆಯೂ ಇದೆ.
  • ಕಳಲೆಗಾಗಿಯೇ ಬಿದಿರು ಬೆಳೆಸಿದರೂ ಲಾಭವಿದೆ.
  • ಕಾಡಿನ, ಇಲ್ಲವೇ ಸಾರ್ವಜನಿಕ ಸ್ಥಳದ ಬಿದಿರು ಮೆಳೆಗಳ ಕಳಲೆ ತೆಗೆದು ಸಾರ್ವಜನಿಕವಾಗಿ  ಸಾಗಾಟ ಮತ್ತು  ಮಾರಾಟ ಮಾಡುವುದು ಅಫರಾಧ ಎಂದು ಕೆಲವರು ಅಂಜುತ್ತಾರೆ.
TENDER BAMBOO SHHOTS
ಬರ್ಮಾ ಬಿದಿರಿನ ಕಳಲೆ
  • ಅದೇ ರೀತಿ ಬಿದಿರನ್ನೂ  ಕಡಿಯುವುದೂ  ಕಾನೂನಿನ ಪ್ರಕಾರ  ತಪ್ಪು ಎಂಬ ಭಾವನೆ ಇದೆ.
  • ನಾವೇ ನೆಟ್ಟು ಬೆಳೆಸಿದ ಮೆಳೆಗಳ  ಮೊಳಕೆ, ಬಿದಿರನ್ನು ಕಾನೂನಿನ ತೊಡಕಿಲ್ಲದೇ ಬಳಕೆ ಮಾಡಿಕೊಳ್ಳಬಹುದು.
  • ಆದ ಕಾರಣ, ಬಿದಿರಿಗಾಗಿ ಇಲ್ಲವೇ   ಕಳಲೆಗಾಗಿಯೇ ಬಿದಿರು ಬಳಸಬೇಕಾದರೆ  ನಾವೇ ನೆಟ್ಟು  ಬೆಳೆಸುವುದು ಸೂಕ್ತ

ಬಿದಿರು ಕಾಡು ಸಸ್ಯ ವಲ್ಲ:

  • ಬಿದಿರನ್ನು ಹಿಂದಿನಿಂದಲೂ  ದೈತ್ಯ ಹುಲ್ಲು ಎಂದು ಕರೆಯಲಾಗುತ್ತದೆ .
  • ಆದರೆ ಅದು ಅರಣ್ಯ ಸಸ್ಯವಾದ ಕಾರಣ ಅದನ್ನು ಮನಬಂದಂತೆ ಕಡಿಯುವಂತಿಲ್ಲ.
  • ಈಗ ಅದನ್ನು ಕಾಡು ಸಸ್ಯದಿಂದ ಬೇರ್ಪಡಿಸಿ  ಹುಲ್ಲು ಎಂದು ಪರಿಗಣಿಸಲಾಗಿದೆ.
  • ಭಾರತ ಸರಕಾರ ಬಾಂಬೋ ಮಿಷನ್ ಎಂಬ ಯೋಜನೆ ಬಿದಿರು ಅಭಿವೃದ್ದಿಗಾಗಿಯೇ  ಹಾಕಿಕೊಂಡಿದೆ.
  • ಆದರೆ ಸಾರ್ವಜನಿಕ ಸ್ಥಳದ ಬಿದಿರನ್ನು ಕಡಿಯುವುದಕ್ಕಲ್ಲ. ಸ್ವಂತ ಬೆಳೆಸಿದ ಬಿದಿರಿಗೆ ಮಾತ್ರ ಅದು ಅನ್ವಯ.

ಬಿದಿರು ಹೂ ಬಿಡುವಿಕೆ: 

Flowered bamboo
ಕೊಕ್ಕೆ (ಶಮೆ) ಬಿದಿರಿನ ಹೂವು
  • ಬಿದಿರಿನ ಸಸ್ಯಗಳು 60 ವರ್ಷಗಳಿಗೊಮ್ಮೆ  ಹೂ ಬಿಡುವುದು ವಾಡಿಕೆ.
  • ಇದನ್ನು ಕರಾವಳಿಯ  ಭಾಷೆಯಲ್ಲಿ  ರಾಜಾನು ಹೋಗುವುದು ಎನ್ನುತ್ತಾರೆ.
  • 60 ವರ್ಷಗಳ ಆಸುಪಾಸಿನಲ್ಲಿ  ದಕ್ಷಿಣ ಭಾರತದಲ್ಲಿ ಬೆಳೆಸಲ್ಪಡುವ ಬಿದಿರುಗಳೆಲ್ಲಾ ಹೂ ಬಿಡುತ್ತವೆಯಂತೆ.
  • ಇದಕ್ಕೆ  ಅಪವಾದ ಹಳದಿ ಬಿದಿರು (bambusa vulgaris) ಮತ್ತು ಅಂಬೋಲಿ ಘಾಟಿನ ಸುತ್ತಮುತ್ತ ಬೆಳೆಯುವ ಸಾಕ್ಸಿಸಿ { Dendrocalamus stocksii(Munro) ಜಾತಿಯ ಬಿದಿರು.
Bamboo with out hole
ಈ ಬಿದಿರಿಗೆ ತೂತು ಇಲ್ಲ. ಇದು ಹೂ ಬಿಡುವುದಿಲ್ಲ. ಇದನ್ನು ಬೆಳಗಾವಿ- ಮಹಾರಾಷ್ಟ್ರ ಗಡಿಯ ಘಾಟಿ ಪ್ರದೇಶದಲ್ಲಿ ಕಾಣಬಹುದು
  • ಬಿದಿರು ಸಸ್ಯವು ತಮ್ಮ ವಂಶಾಭಿವೃದ್ದಿಗಾಗಿಯೇ  ಹೂ ಬಿಡುತ್ತವೆ ಎಂದರೂ ತಪ್ಪಾಗಲಾರದು.
  • ಒಂದು ಬಿದಿರು ಮೆಳೆ ಲಕ್ಷಾಂತರ  ಬೀಜಗಳನ್ನು ನೆಲಕ್ಕೆ ಚೆಲ್ಲುತ್ತದೆ.
  • ಇದನ್ನು ದಂಶಕಗಳು ಭಕ್ಷಿಸಿ ಅಳಿದುಳಿದ ಬೀಜಗಳು ಮೊಳೆಯುತ್ತವೆ.
  • ಅವುಗಳನ್ನು ಮಳೆಗಾಲದಲ್ಲಿ ಕಿತ್ತು ತಂದು ನಾಟಿ ಮಾಡಿದರೆ ಮತ್ತೆ ಬಿದಿರು ಮಳೆಗಳು ಅಭಿವೃದ್ದಿಯಾಗುತ್ತವೆ

 ಕಳಲೆಗೆ ಸೂಕ್ತ ಬಿದಿರು:

ಬಿದಿರಿನ ಮೊಳಕೆ ನೆಟ್ಟರೆ ಅದರ ಆಯುಷ್ಯ ಮುಗಿಯುವ ಸಮಯಕ್ಕೆ ಹೂ ಬಂದೇ ಬರುತ್ತದೆ.
  • ಹೆಚ್ಚಿನ ಕಡೆ ನೈಸರ್ಗಿಕವಾಗಿ ಬೆಳೆಯುವ ಬಿದಿರುಗಳಲ್ಲಿ ಮುಳ್ಳಿರುವ ಬಿದಿರು(( Indian thorny bamboo)  ಸಾಮಾನ್ಯ.
  • ತೆಳ್ಳಗೆ, ಉದ್ದಕ್ಕೆ ಬೆಳೆಯುವ  ಕೂಕ್ಕೆಗೆ ಬಳಕೆಯಾಗುವ , ಹೊಳೆ ದಂಡೆಗಳು ದಟ್ಟ ಕಾಡುಗಳಲ್ಲಿ ಬೆಳೆಯುವ ಸಾಮಾನ್ಯ ಎತ್ತರದ ತೆಳು ದಿಂಡಿನ ಬಿದಿರುಗಳು ಇವೆ.
  • ಇವುಗಳಲ್ಲಿ ದೆಂಡ್ರೋಕ್ಯಾಲಮಸ್ ಸ್ಟ್ರಿಕ್ಟಸ್ ಎಂಬ ಹೆಸರಿನ ಮುಳ್ಳು ಬಿದಿರು ಗಟ್ಟಿ ಮತ್ತು ದಪ್ಪ.
  • ಆದರೆ ಬೆಳವಣಿಗೆ ನಿಧಾನ.
  • ಇದರಲ್ಲಿ  ಮಳೆಗಾಗ ಬರುವಾಗ ಮೂಡುವ  ಮೊಳಕೆಗಳನ್ನು  ಅನಾದಿ ಕಾಲದಿಂದಲೂ ಬೇರೆ ಬೇರೆ ಅಡುಗೆಗೆ ಬಳಕೆ ಮಾಡುತ್ತಿದ್ದರು
  • ಬಿದಿರುಗಳಲ್ಲದೆ ವಿದೇಶಗಳಿಂದ ತಂದ ಬರ್ಮಾ ಬಿದಿರು, Dendrocalamus brandisisi)  ಗುವಾ ಡುವಾ ಬಿದಿರು (Guadua angustifolia) ಹೀಗೆ ಕೆಲವೊಂದು ಉತ್ತಮ ಗುಣಮಟ್ಟದ ಮುಳ್ಳು ರಹಿತ , ಬೇಗ ಬೆಳೆಯುವ ಬಿದಿರುಗಳಿವೆ.
  • ವುಗಳೂ ಸಹ 60 ವರ್ಷಗಳ  ಆಸು ಪಾಸಿನಲ್ಲಿ ಹೂ ಬಿಡುವವುಗಳು.
  • ನೆಲಕ್ಕೆ ಬಿದ್ದು ಉಳಿಯುವ ಇದರ ಬೀಜಗಳೂ ಮೊಳೆತು ಸಸ್ಯವಾಗುತ್ತವೆ.
  • ಇಂಥಃ ಮುಳ್ಳು ರಹಿತ ಬಿದಿರ ಮೆಳೆಗಳು ಇರುವುದನ್ನು ಎಲ್ಲಿಯಾದರೂ  ಕಂಡರೆ , ಅದು ಹೂ ಬಿಟ್ಟಿದ್ದರೆ ಅದರ ಬುಡದಲ್ಲಿ ಸ್ವಲ್ಪ ತಡಕಾಡಿ.
  • ಒಂದಷ್ಟು ಗಿಡ ಹುಟ್ಟಿರುವುದು ಕಂಡು ಬರುತ್ತದೆ.
  • ಅದನ್ನು ಈಗಲೇ ಬೇರು ಸಹಿತ ಕಿತ್ತು ತಂದು ನಿಮ್ಮ ಹೊಲದಲ್ಲಿ ನಾಟೀ ಮಾಡಿ.
  • ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಇದರಲ್ಲಿ ನಿಮ್ಮ ಬಳಕೆಗೂ ಮಾರಾಟಕ್ಕೂ  ಬೇಕಾಗುವಷ್ಟು ಕಳಲೆ ದೊರೆಯುತ್ತದೆ.
  • ಬಿದಿರಿನ ಕಳಲೆಗೂ ನಮ್ಮ ಸ್ಥಳೀಯ ಮುಳ್ಳು ಬಿದಿರಿನ ಕಳಲೆಗೂ ರುಚಿಯಲ್ಲಿ ವೆತ್ಯಾಸವಿಲ್ಲ.
  • ಇದರ  ಕಳಲೆ  ಹೆಚ್ಚು ಮೃದುವಾಗಿದ್ದು , ಮುಳ್ಳು ಇಲ್ಲದ ಕಾರಣ ತೆಗೆಯುವುದು ಸುಲಭ.

ಬಿದಿರಿನಿಂದ ಹಲವಾರು ಉಪಯೋಗಗಳಿವೆಯಾದರೂ ಅದನ್ನು  ಮೌಲ್ಯವರ್ಧನೆ ಮಾಡಿದಾಗ ಮಾತ್ರ. ಆದರೆ ಕಳಲೆ ಹಾಗಲ್ಲ. ವರ್ಷದಲ್ಲಿ  ಮಳೆಗಾಲದ ಸೀಸನ್ನಲ್ಲಿ ಮೊಳಕೆ ಬರುತ್ತದೆ. ಇದನ್ನು ಎಳೆಯದಿರುವಾಗ ತೆಗೆದು ಸ್ವ ಬಳಕೆ ಇಲ್ಲವೇ ಮಾರಾಟಕ್ಕೆ ಬಳಸಬಹುದುಕಳಲೆಯನ್ನು  ಬೇರೆ ಬೇರೆ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಉತ್ತಮ ಬೇಡಿಕೆ ಇದೆ.
ಬಿದಿರು ಸಸ್ಯ ಬೀಜದಿಂದ ಮಾಡಿದ್ದಾದರೆ ಅದು 60 ವರ್ಷ ತನಕ ಬದುಕಿರುತ್ತದೆ. ಇತರ ಯಾವುದೇ ವಿಧಾನದಲ್ಲಿ   ಸಸ್ಯಾಭಿವೃದ್ಧಿ  ಮಾಡಿದರೂ    ಅದರ ಮಾತೃ ಸಸ್ಯಕ್ಕೆ 60 ವರ್ಷ ಪೂರ್ಣವಾದಾಗ   ಅದೂ ಹೂ ಬಿಟ್ಟು ಅಂತ್ಯ ಕಾಣುತ್ತದೆ.!
 

Leave a Reply

Your email address will not be published. Required fields are marked *

error: Content is protected !!